STORYMIRROR

Vijaya Bharathi.A.S.

Classics Inspirational Others

4  

Vijaya Bharathi.A.S.

Classics Inspirational Others

ಕರುನಾಡು

ಕರುನಾಡು

1 min
580


ಎಂತ ಸೊಬಗಿನ ನಾಡು

ಸೊಬಗು ಸೂಸುವ ನಾಡು

ನನ್ನೊಲುಮೆಯಾ ನಾಡು ಕರ್ನಾಟಕ

ಶೂರ ಧೀರರ ನಾಡು

ಸಿರಿಗಂಧದಾ ಬೀಡು

ಸಕಲ ಸಂಪದಗಳಾ ನಾಡು ಕರ್ನಾಟಕ

ಹಾಲ ಸವಿ ಜೇನ ಸಿಹಿ

ನನ್ನ ತಾಯಿಯ ನುಡಿಯು

ಮೃದು ಮಧುರ ಕವಿ ವಾಣಿ ಕರ್ನಾಟಕ

ಕೃಷ್ಣ ಶರಾವತಿ ತುಂಗೆಯರು

ಕಾವೇರಿ ಕಪಿಲಾ ಭಧ್ರೆಯರು

ಜೀವ ನದಿಗಳಾ ನಾಡು ಕರ್ನಾಟಕ

ಹಳದಿ ಕೆಂಪಿನ ಧ್ವಜವು

ನಿನ್ನ ಮುಡಿಗಲಂಕೃತವು

ಶಾಂತಿ ಸೌಹಾರ್ದಗಳ ನಾಡು ಕರ್ನಾಟಕ

ನವರಸಾಲಂಕಾರಗಳು

ನಿನ್ನ ನುಡಿ ಮುತ್ತುಗಳು

ಷಟ್ಪದಿ ವಿಭೂಷಿತ ಖ್ಯಾತ ಕರ್ನಾಟಕ

ಜಯತು ಕನ್ನಡ ತಾಯಿ

ಜಯತು ಮಂಗಳ ಮಾತೆ

ಜಯ ಜಯತು ಜಯ ನಿನಗೆ ಕರ್ನಾಟಕ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics