STORYMIRROR

Vijaya Bharathi

Abstract Classics Others

3  

Vijaya Bharathi

Abstract Classics Others

ಇಪ್ಪತ್ತು ಇಪ್ಪತ್ತು

ಇಪ್ಪತ್ತು ಇಪ್ಪತ್ತು

1 min
225

೧.ಕಾಲಚಕ್ರ ಉರುಳಿತು

  ವರುಷವೊಂದು ಕಳೆಯಿತು

  ಇಪ್ಪತ್ತು ಇಪ್ಪತ್ತು ಮುಗಿಯಿತು

  ಕಹಿನೆನಪು ಉಳಿಯಿತು

          ಹೇ ವಿಶ್ವ ಚೇತನ

೨ ಕಾಣದಿಹ ಕೀಟಾಣು 

  ಕಾಡಿತ್ತು ಎಡೆಬಿಡದೆ

  ಕಾಣದಾಯಿತು ಹಾದಿ

  ಕರಪಿಡಿದು ಮುನ್ನಡೆಸು

        ಹೇ ವಿಶ್ವ ಚೇತನ

೩. ಕಮರಿಹೋದವು ಜೀವಿಗಳು

  ಕರುಣೆಯಿಲ್ಲದಾ ಕಾಲನಡಿ

  ಕಂಗೆಟ್ಟು ಹೋಯಿತು ಜಗವು

   ಕರುಣೆ ತೋರಿ ಮುನ್ನಡೆಸು

           ಹೇ ವಿಶ್ವ ಚೇತನ

೪. ಕಷ್ಟದಡವಿಯ ಕಳೆಯಿಸಿ

   ಕಾರ್ಗತ್ತಲು ಸರಿಯಿಸಿ

   ಕಾಯಗಳಿಗೆ ಶಕ್ತಿ ನೀಡಿ

    ಕೈಹಿಡಿದು ಕಾಪಾಡು


        ಹೇ ವಿಶ್ವ ಚೇತನ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract