STORYMIRROR

Gireesh pm Giree

Abstract

1  

Gireesh pm Giree

Abstract

ಸಂಸಾರ ಸಾಗರ

ಸಂಸಾರ ಸಾಗರ

1 min
121

ಅಳುವಿದೆ ನಗುವಿದೆ ಈ ಸಂಸಾರ ಸಾಗರದೊಳಗೆ

ಸಂಘರ್ಷವು ಶಾಂತಿಯು ನೋವು-ನಲಿವಿನ ಘಳಿಗೆ

ಎಲ್ಲವೂ ಇದೆ ಸಕಲವೂ ಇದೆ ಬಂಧನದೊಳಗೆ

ಅನುಭವಗಳ ಸಾರವೇ ತುಂಬಿಕೊಂಡಿರುವ ಸಂಸಾರದ ಮಳಿಗೆ


ರಕ್ತಸಂಬಂಧ ಒಡನಾಟಗಳ ಸಮ್ಮಿಳನ

ಪ್ರೀತಿ ಹೊರಟ್ಟಿ ಭರಾಟೆಗಳ ಸುಗಂಧದ ಸಿಂಚನ

ಸುಖದುಃಖಗಳ ಸಮ್ಮಿಶ್ರಣ ಪಯಣದ ಬಂಧನ

ಒಬ್ಬರ ಇನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಜೀವನ


ಸಂಸಾರ ಸಾಗರದೊಳಗೆ ತೇಲುವ ನಾವಿಗೆ

ಸಣ್ಣ ತೂತಾದರೊ ಬೀಳುವುದು ನೀರಡಿಗೆ

ಇಲ್ಲಿ ಮುಂದಿಡಬೇಕು ಹೆಜ್ಜೆ ಜೊತೆಗೆ

ಎದುರಾದ ಸಮಸ್ಯೆ ಎದುರಿಸಬೇಕು ಜೊತೆಜೊತೆಗೆ


ಏಳುಬೀಳಿನ ಕಥೆಗಳ ಜೀವನದ ಯಶೋಗಾಥೆ

ಪ್ರತಿ ಸಂಚಿಕೆಯೂ ಕೂಡ ಸುಂದರ ರೋಚಕ ಕಥೆ

ಎದುರಾಗುವುದಿಲ್ಲಿ ಪ್ರತಿಕ್ಷಣವೂ ಹಲವು ವ್ಯಥೆ

ಇದುವೇ ನಿಜವಾದ ಜೀವನದ ಸಂಸಾರದ ಕಥೆ


Rate this content
Log in

Similar kannada poem from Abstract