nagavara murali

Drama Classics Others

2  

nagavara murali

Drama Classics Others

ಯಾವ ಹೂವು ಯಾರ ಮುಡಿಗೋ

ಯಾವ ಹೂವು ಯಾರ ಮುಡಿಗೋ

4 mins
149



ರಮ್ಯಾ ಮತ್ತು ಮೋಹನ್ ಇಬ್ಬರೂ ಒಂದೇ ಆಫೀಸ್ ನಲ್ಲಿ ಕೆಲಸ ಮಾಡ್ತಾ ಇದ್ದಾರೆ . ಇಬ್ಬರೂ ಅವರವರ ಮನೆ ವಿಷಯಗಳನ್ನ ಸಮಯ ಸಿಕ್ಕಾಗ ಹಂಚಿಕೊಳ್ತಾ ಇದ್ದರು. ಇದು ಇಬ್ಬರನ್ನೂ ಹತ್ತಿರ ಮಾಡ್ತು. ಮನೆಯ ವರನ್ನ ಒಪ್ಪಿಸಲು ಕಷ್ಟವಾಗಲಿಲ್ಲ. ಮದುವೆ ಆದರು. ಎಂಟು ವರ್ಷಗಳಾದರೂ ಮಕ್ಕಳಾಗಲಿಲ್ಲ. ದೇವರು ಎಲ್ಲಾ ಕೊಟ್ಟು ಒಂದು ಮಗು ಕೊಡಲಿಲ್ಲ ಅನ್ನೋದೇ ಇಬ್ಬರಿಗೂ ಚಿಂತೆ. ಇವರ ಮನೆಯಲ್ಲಿ ಬಹಳ ನಂಬಿಕಸ್ತ ಹುಡುಗಿ ಸಾವಿತ್ರಿ ಇವರ ಮದುವೆ ಆದಾಗಿಂದಲೂ ಮನೆ ಕೆಲಸ ಮಾಡಿ ಕೊಂಡು ಇದ್ದಾಳೆ .ಅವಳನ್ನ ಇವರಿಬ್ಬರೂ ಕೆಲಸದ ವಳಂತೆ ಎಂದೂ ನೋಡದೆ ತಮ್ಮ ಮನೆಯ ಒಬ್ಬ ಸದಸ್ಯಳಂತೆಯೇ ಕಂಡಿದ್ದಾರೆ. ಎಷ್ಟೋ ದಿನ ಮನೆಯನ್ನ ಅವಳಿಗೇ ಒಪ್ಪಿಸಿ ಊರಿಗೆ ಹೋಗಿದ್ದೂ ಇದೆ ಅಷ್ಟು ನಂಬಿಕೆ ಅವಳ ಮೇಲೆ.


ಒಂದು ದಿನ ಸಾವಿತ್ರಿ ತಾನು ಒಬ್ಬ ಹುಡುಗನನ್ನ love ಮಾಡ್ತಿರೋ ವಿಷಯ ರಮ್ಯಳಿಗೆ ಗುಟ್ಟಾಗಿ ತಿಳಿಸಿ ,ನಮ್ಮ ಅಣ್ಣ ಅತ್ತಿಗೆ ನಮ್ಮ ಮದುವೇಗೆ ಒಪ್ಪೋದಿಲ್ಲ. ಹೇಳಿದರೆ ಏನು ಮಾಡ್ತಾರೋ ಅನ್ನೋ ಭಯ. ನೀವು ಸಹಾಯ ಮಾಡ್ತೀರಾ ಅಕ್ಕಾ ಅಂದಾಗ ಮೋಹನ್ ಬಂದ ಮೇಲೆ ಹೇಳಿ ನೋಡ್ತೀನಿ ಏನಂತಾರೆ ನೋಡೋಣ ಅಂದಳು.


ಹೀಗೇ ಒಂದು ವಾರ ಕಳೆದಿದೆ ಒಂದು ದಿನ ಬೆಳಗ್ಗೆ ಯಾರೋ ಗೇಟ್ ತೆಗೆದ ಹಾಗಾಯ್ತು ನೋಡಿದರೆ ಇಬ್ಬರೂ ಹಾರಹಾಕ್ಕೊಂಡು ಒಳಗೆ ಬರ್ತಾ ಇರೋದು ನೋಡಿ ಅರ್ಥ ಆಯ್ತು ಸಾವಿತ್ರಿ ನಮಗೆ ಕಾಯದೆ ಮದುವೆ ಮಾಡಿಕೊಂಡು ಬಂದಿದಾಳೆ ಅಂತ. ಇಬ್ಬರೂ ಕಾಲಿಗೆ ನಮಸ್ಕಾರ ಮಾಡಿ ನಮಗೆ ಆಶೀರ್ವಾದ ಮಾಡಿ ಅಂದಾಗ ನಿಮ್ಮ ಅಣ್ಣ ಅತ್ತಿಗೆ ಹಾಗಾದ್ರೆ ಒಪ್ಪಿದ್ರಾ ಇದಕ್ಕೆ ಅಂದಾಗ ಇಲ್ಲಾ ಅಕ್ಕ ಅವರನ್ನು ಕೇಳೋ ಧೈರ್ಯ ನನಗೆ ಇಲ್ಲ. ನೀವೇ ನಮ್ಮನ್ನು ಕಾಪಾಡಬೇಕು ಅಂದಳು ಸಾವಿತ್ರಿ.


ಆಗ ಮನೆಯಿಂದ ಹೊರಗೆ ಬಂದ ಮೋಹನ್ ಓಹ್ ಮದುವೆ ಮಾಡಿಕೊಂಡು ಬಂದಿದೀರಲ್ಲ ಒಳ್ಳೆಯದು ಆಯಿತು ಬಿಡಿ ಅಂದ. ಅವನ ಕಾಲಿಗೂ ಬಿದ್ದು ನಮ್ಮನ್ನು ನೀವೇ ಕಾಪಾಡಬೇಕು ನಿಮ್ಮ ತಂಗಿ ಅಂತ ತಿಳ್ಕೋಳಿ ಅಂದಾಗ ಆಯ್ತು ಈ ಹುಡುಗ ಯಾರು ನಿನಗೆ ಹೇಗೆ ಪರಿಚಯ . ಅವನೇ ಹೇಳಿದ ನನ್ನ ಹೆಸರು ಗೋಪಿ ನಾವಿಬ್ಬರೂ ಒಂದೇ ಊರು .ಆದರೂ ಮೊದಲು ಪರಿಚಯ ಇರಲಿಲ್ಲ. ಅಕಸ್ಮಾತ್ ಹೀಗೇ ಮಾತಾಡೋ ವಾಗ ಒಂದೇ ಊರು ಅಂತ ತಿಳೀತು. ಅವತ್ತಿನಿಂದ ಇಬ್ಬರೂ ಹತ್ತಿರ ಆಗಿ ಕೊನೇಗೆ ಮದುವೆ ಮಾಡಿಕೊ ಳ್ಳೋಣ ಅಂದಾಗ ಇವಳ ಅಣ್ಣ ಅತ್ತಿಗೆ ಒಪ್ಪೋದೇ ಇಲ್ಲ ಅಂತ ತಿಳಿದು ನಾವೇ ದೇವಸ್ಥಾನದಲ್ಲಿ ಮದುವೆ ಮಾ ಡ್ಕೊಂಡು ಬಂದಿದೀವಿ ಅಂತ ಹೇಳಿದ. ಒಳಗೆ ಬನ್ನಿ ಅಂತ ಕರೆದು ಅವರಿಗೆ ಸ್ವಲ್ಪ ಹಣ ಕೊಟ್ಟು ಮೊದಲು ಹೊಸ ಬಟ್ಟೆ ಹಾಕ್ಕೊಂಡು ಬನ್ನಿ ಅಂತ ಕಳಿಸಿದರು. ಬಂದ ನಂತ ರ ಅವನ ಕೆಲಸದ ಬಗ್ಗೆ ಕೇಳಿದರೆ ನಾನು ಕಾರ್ಪೆಂಟರ್ ಆದರೆ ಸಧ್ಯಕ್ಕೆಆರು ತಿಂಗಳಿಂದ ಎಲ್ಲೂ ಕೆಲಸ ಇಲ್ಲ. ಕೆಲಸ ಇದ್ದರೆ ದಿನಕ್ಕೆ ಎಂಟು ನೂರು ರೂಪಾಯಿ ಸಂಪಾ ದನೆ ಮಾಡ್ತೀನಿ ಸಾರ್ ಅಂದ. ಸ್ವಲ್ಪ ಸಮಾಧಾನ ಆಯ್ತು. ಮನೆ ಅಂತ ಕೇಳಿದಾಗ ನಾನು ಮತ್ತು ಇನ್ನೂ ಇಬ್ಬರೂ ಒಂದು ರೂಮ್ ನಲ್ಲಿ ಇರೋದು. ಈಗ ಬೇರೆ ಮನೆ ಮಾಡಬೇಕು ಅಂದ ಗೋಪಿ. ಮೋಹನ್ ಅವರ ಆಫೀಸ್ ನಲ್ಲಿ ಇರೋ ಜೋಸೆಫ್ ಗೆ ಫೋನ್ ಮಾಡಿ , ಜೋಸೆಫ್ ನೀನು ಬ್ರೋಕರ್ ಕೆಲಸ ಮಾಡ್ತಿ ಅಂತ ನನಗೆ ಗೊತ್ತು .ತಕ್ಷಣ ಒಂದು ರೂಮ್ ಕಿಚನ್ ಬಾತ್ ರೂಮ್ ಇರೋ ಸಣ್ಣ ಮನೆ ಅರ್ಜಂಟಾಗಿ ಬೇಕು. ಬಾಡಿಗೆ ಬಗ್ಗೆ ಯೋಚನೆ ಮಾಡಬೇಡ ಅಂತ ಹೇಳಿದರು. ಸಂಜೆ ಒಂದು ಮನೆ ಇದೆ ಅಂತ ಹೇಳಿದ . ಇಬ್ಬರೂ ಹೋದರು .ಮನೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮೂರುದಿನದಲ್ಲಿ ಮಾಡಿದರು ಮೋಹನ್ ಮತ್ತು ರಮ್ಯಾ. 


ಮೋಹನ್ ಜೊತೆ ಹೈಸ್ಕೂಲ್ ನಲ್ಲಿ ಓದುತ್ತಿದ್ದ ಪ್ರವೀಣ್ ಅಕಸ್ಮಾತ್ TV ಯ ಕಾರ್ಯಕ್ರಮ ಒಂದರಲ್ಲಿ ಕಾಣಿಸಿ ಕೊಂಡ .ರಮ್ಯಾ ಅಂತ ಕೂಗಿ ಹೇಳಿದ ಇವನು ಯಾವಾ ಗ ಡಾಕ್ಟರ್ ಆದ ಗೊತ್ತೇ ಇಲ್ಲ ನೋಡು ಇವನೂ ನಾನು ತುಮಕೂರಿನಲ್ಲಿ SSLC ವರೆಗೂ ಒಟ್ಟಿಗೆ ಓದಿದ್ದೇವೆ. ಅದಕ್ಕಿಂತಲೂ ಹೆಚ್ಚು ಇವನು ನಮ್ಮ ಮನೆಯಲ್ಲೇ ಊಟ ಮಾಡ್ತಿದ್ದ. ಆಗ ಅವರ ಮನೇಲಿ ಬಹಳ ಕಷ್ಟ . ಅವನ clinic ನ ಫೋನ್ ನಂಬರ್ ಕೊನೇಗೆ ತೋರಿಸಿದಾಗ Note ಮಾಡ್ಕೊಂಡು ಫೋನ್ ಮಾಡಿ ಪರಿಚಯ ಮಾಡ್ಕೊಂಡ. ಬಹಳ ವರ್ಷಗಳ ನಂತರ ಹಳೇ ಸ್ನೇಹಿತನನ್ನ ಕಾಣಲು ಮೈಸೂರಿನಿಂದ ಎಲ್ಲಾ ಕೆಲಸ ಬಿಟ್ಟು ಬಂದ .ಸಂಜೆಯವರೆಗೂ ಇದ್ದು ಒಟ್ಟಿಗೆ ಹೊರಡೋವಾಗ ಹೇಳಿದ ಮಕ್ಕಳಾಗಿಲ್ಲ ಅಂತ ಕೊರಗೋ ಕಾಲ ಅಲ್ಲ ಇದು .ಯಾರಾದರೂ ನಿನಗೆ ಬಹಳ ಬೇಕಾದ ಹೆಂಗಸು , ಮಗು ಹೆತ್ತು ಕೊಡಲು ಮುಂದೆ ಬಂದರೆ ಅವರ ಮೂಲಕ ನಿಮ್ಮದೇ ಮಗು ಪಡೆಯಬಹುದು. ಇದೇ ವಿಷಯ ಮೊನ್ನೆ ನಾನು TV ಕಾರ್ಯಕ್ರಮದಲ್ಲಿ ಮಾತಾಡಿದ್ದು .ಇಬ್ಬರೂ ಕೂತು ಒಂದು ನಿರ್ಧಾರ ತೋಗೋಳಿ. I am here to help you ಅಂತ ಹೇಳಿ ಹೊರಟ ಡಾಕ್ಟರ್ ಪ್ರವೀಣ್.


ಪ್ರವೀಣ್ ಹೊರಟ ನಂತರ ಇಬ್ಬರೂ ಅದೇ ವಿಷಯ ಮಾತನಾಡಿ ಅಂತಹ ಹೆಂಗಸನ್ನ ಹುಡುಕೋದು ಎಲ್ಲಿ 

ಅಂತ ಯೋಚನೆ ಮಾಡ್ತಿದ್ದಾಗ ರಮ್ಯಹೇಳಿದಳು ಮೋಹನ್ ನಮ್ಮ ಸಾವಿತ್ರಿ ಗಿಂತ ಒಳ್ಳೆಯವರು ಆರೋಗ್ಯ ವಾಗಿರೋರು ನಮ್ಮ ಮಾತು ಕೇಳೋರು ಯಾರು ಇದಾರೆ.ನಾವು ಏಕೆ ಅವಳ ಸಹಾಯ ಕೇಳಬಾರದು ಅಂದಾಗ ಆಯಿತು ಅಂತ ಒಪ್ಪಿ ಬೆಳಗ್ಗೆ ಸಾವಿತ್ರಿಗೆ ವಿಷಯ ತಿಳಿಸಿ ನಿನಗೆ ಒಂದು ಲಕ್ಷ ರೂಪಾಯಿ ಕೊಡ್ತೀನಿ .ನಮಗೆ ಸಹಾಯ ಮಾಡ್ತೀಯಾ .ಅದಕ್ಕೆ ಮೊದಲು ನಿನ್ನ ಗಂಡನ ಹತ್ತಿರ ಮಾತಾಡು. ಇದರಲ್ಲಿ ನಮ್ಮ ಬಲವಂತ ಇಲ್ಲ ಅಂದರು .


ಮನೆಗೆ ಹೋದವಳೇ ಗೋಪಿಗೆ ಈ ವಿಷಯ ಹೇಳಿದಳು ಮೊದಲು ಹೆದರಿದರೂ ಅವರು ಮಾಡಿರೋ ಸಹಾಯಕ್ಕೆ ನಾವು ಇದಕ್ಕಿಂತಲೂ ಏನು ಮಾಡಲು ಸಾಧ್ಯ ಅಂತ ಒಪ್ಪಿ ಕೊಂಡ. ಮೈಸೂರಿಗೆ ಹೋಗಿ ಪ್ರವೀಣ್ ನ ಕಂಡು 

ಎಲ್ಲಾ ತಪಾಸಣೆ ಮಾಡಿಸಿದ ಮೇಲೆ ಚಿಕಿತ್ಸೆಗಾಗಿ ಕೆಲವು ದಿನ ಅಲ್ಲೇ ಉಳಿದರು. ಅವರ ಆಸೆಯಂತೆ ಸಾವಿತ್ರಿಗೆ ಈಗ ನಾಲ್ಕು ತಿಂಗಳು .ಮಗುವಿನ ಆರೋಗ್ಯಕ್ಕಾಗಿ ಸಾವಿತ್ರಿಗೆ ಒಳ್ಳೆಯ ಆರೈಕೆ. ಇವಳು ಸಂತೋಷವಾಗಿ ರಲು ಕೇಳಿದ್ದೆಲ್ಲಾ ತಂದು ಕೊಟ್ಟರು.


ಒಂದು ದಿನ ಬೆಳಗಿನ ಜಾವ ರಮ್ಯಾ, ಮೋಹನ್ ನ ಕರೆದು ಏಕೋ ತಲೆ ಸುತ್ತುತ್ತಿದೆ. ವಾಂತಿ ಬೇರೇ ಆಯಿತು ಅಂದಾಗ ಹೆದರಿ ಪ್ರವೀಣ್ ಗೆ ಫೋನ್ ಮಾಡಿದ.ನಾನು ಬೆಂಗಳೂರಿನಲ್ಲೇ ಇದ್ದೇನೆ .ರಾತ್ರಿ ನಿಮ್ಮ ಮನೆಯಲ್ಲೇ ಹಾಲ್ಟ್ ಮಾಡೋಣ ಅಂತ ಇದ್ದೆ ಈಗಲೇ ಬರ್ತೀನಿ ಅಂತ ಹೇಳಿದ ಪ್ರವೀಣ್. ಬಂದವನೇ ನಾಡಿ ನೋಡಿ ಏನಪ್ಪಾ ಇದು ನೀನು ಒಂದೇ ಸಾರಿ ಎರಡೂ ಮಕ್ಕಳಿಗೆ ತಂದೆ ಆಗೋ ಹಾಗೆ ಕಾಣತ್ತೆ. ದೇವರು ಕೊಟ್ಟರೇ ಹೀಗೇ ನೋಡು ಅಂತ ಹೇಳಿ ಬೇರೆ ಎಲ್ಲಾ ತಪಾಸಣೆ ಮಾಡಿ  Yes it is confirmed ..congrats ಅಂದ. ಈಗ ಇವರಿಬ್ಬರಿಗೂ ಒಂದು ಕಡೆ ಸಂತೋಷ ಮತ್ತೊಂದು ಕಡೆ ಸಾವಿತ್ರಿ ಹೊಟ್ಟೆಯಲ್ಲಿ ಇರೋ ಮಗು ನಮಗೆ ಏಕೆ ಬೇಕು ಅನ್ನೋದು. 


ರಾತ್ರಿಯೆಲ್ಲಾ ಯೋಚನೆ ಮಾಡಿ ಬೆಳಗ್ಗೆ ಸಾವಿತ್ರಿ ಗೆ ಹೇಳಿದಳು .ನನಗೂ ಈಗ ಮಗು ಆಗೋ ಹಾಗಿದೆ ಡಾಕ್ಟರ್ ಬಂದು ಹೇಳಿದರು .ನಿನಗೆ ಒಂದು ತೊಂದರೆ ಕೊಡ್ತೀವಿ .ಏನಂದರೆ ನಿನಗೆ ಹುಟ್ಟುವ ಮಗೂನ ನೀನೇ ಸಾಕಬೇಕು. ಆಗಲ್ಲ ಕಷ್ಟ ಅಂದರೆ ತೆಗೆಸಲೂ ಬಹುದು. ಯೋಚನೆ ಮಾಡು.ಒಂದು ಲಕ್ಷ ಹೇಳಿದ್ದು ಈಗ ಈ ಕೆಲಸಕ್ಕೆ ಎರಡು ಲಕ್ಷ ಕೊಡ್ತೀವಿ. ನಿನಗೂ ಸಹಾಯ ಆಗತ್ತೆ. ಅಂದಾಗ ಸಾವಿತ್ರಿ ಅತ್ತು ಏನಕ್ಕ ತಗೆಸು ಇನ್ನೊಂ ದು ಲಕ್ಷ ಕೊಡ್ತೀನಿ ಅಂತೀರಲ್ಲ .ಇದೂ ನಿಮ್ಮದೇ ಮಗು ಅಂತ ಅನಿಸೋಲ್ವೆ ನಿಮಗೇ. ನಾನೇ ಸಾಕ್ತೀನಿ ಏನೇ ಕಷ್ಟ ಆಗಲಿ ಪರವಾಗಿಲ್ಲ. ಅಂತ ಅಳುತ್ತಾ ಹೊರಟು ಹೋದ ಳು. 


ಸಾವಿತ್ರಿ ಗೆ ಗಂಡು ಮಗು ಆಯ್ತು. ಇಬ್ಬರೂ ಬಂದು ನೋಡಿ ಸಂತೋಷ ಪಡ್ತಾರೆ ಅಂದು ಕೊಂಡಿದ್ದು ಸುಳ್ಳಾ ಯ್ತು. ಮಗೂಗೆ ಈಗ ನಾಲ್ಕು ವರ್ಷ. ಅಕಸ್ಮಾತ್ ಒಂದು ದಿನ ಸಾವಿತ್ರಿ ಜೊತೆ ಇದ್ದ ಮಗುವನ್ನ ಅವರಿಬ್ಬರೂ ನೋಡಿ ಇದು ನಮ್ಮ ಮಗು ಅಲ್ಲವೇ ಅಂದಾಗ ಹೌದು ಅಂದಳು.ನಮಗೇ ಕೊಡು ನಾವೇ ಸಾಕ್ತೀವಿ ಅಂದಾಗ ಅದು ಮಾತ್ರ ಸಾಧ್ಯವಿಲ್ಲ . ಡಾಕ್ಟರ್ ನನಗೆ ಇನ್ನು ಮುಂದೆ ಮಕ್ಕಳು ಆಗೋದು ಸಾಧ್ಯವಿಲ್ಲ ಅಂತ ಹೇಳಿದ್ದಾರೆ .ನಾನು ಇದನ್ನ ಮಾತ್ರ ಕೊಡೋದಿಲ್ಲ ಅಂದಳು. ನಮ್ಮ ತಪ್ಪಿಗೆ ಇದು ಸರಿಯಾದ ಶಿಕ್ಷೆ ಅಂತ ತಿಳಿದು ಅಲ್ಲಿಂದ ಇಬ್ಬರೂ ಹೊರಟು ಹೋದರು.


 




Rate this content
Log in

Similar kannada story from Drama