STORYMIRROR

JAISHREE HALLUR

Action Classics Inspirational

4  

JAISHREE HALLUR

Action Classics Inspirational

**ತೂತು ಕೊಡ**

**ತೂತು ಕೊಡ**

1 min
272


   ಒಂದು ಗ್ರಾಮದಲ್ಲಿ ಒಬ್ಬಳು ಅಜ್ಜಿ ವಾಸವಾಗಿದ್ದಳು. ಪ್ರತಿದಿನ ಆಕೆ ಕೆರೆಯಿಂದ ಎರಡು ಕೊಡಗಳಲ್ಲಿ ನೀರನ್ನು ತುಂಬಿ ಮನೆಯಲ್ಲಿ ಶೇಖರಿಸುತ್ತಿದ್ದಳು.

   ಆದರೆ, ಆ ಎರಡು ಕೊಡಗಳಲ್ಲಿ ಒಂದು ತೂತಾದ ಕೊಡವಾಗಿತ್ತು. ಮನೆ ತಲುಪುತ್ತಿದ್ದಂತೆ ಆ ಕೊಡದ ನೀರು ಅರ್ಧವಾಗಿ ಕಡಿಮೆಯಾಗಿರುತ್ತಿತ್ತು. 

   ಸುಮಾರು ಒಂದು ವರ್ಷ ಕಳೆಯಿತು. ತೂತಾದ ಕೊಡಕ್ಕೆ ತನ್ನ ಬಗ್ಗೆ ನೆನೆದು ನಾಚಿಕೆ ಅನಿಸತೊಡಗಿತು.

ಒಳ್ಳೆಯ ಕೊಡ ಕೂಡಾ ತೂತಾದ ಕೊಡವನ್ನು ಹಿಯ್ಯಾಳಿಸತೊಡಗಿತು. ಗೇಲಿ ಮಾತುಗಳು ಮತ್ತು ಅವಮಾನದಿಂದ ತೂತಾದ ಕೊಡಕ್ಕೆ ತುಂಬಾ ಬೇಸರವಾಯಿತು. ನನ್ನಿಂದ ಯಾರಿಗೂ ಉಪಯೋಗವಿಲ್ಲ ಅಂತ ಕೊರಗುತ್ತಾ ತನ್ನನ್ನು ತಾನೇ ದ್ವೇಷಿಸತೊಡಗಿತ್ತು.

    ಕೊನೆಗೆ ಆ ಕೊಡವು ಅಜ್ಜಿಯತ್ರ ಹೇಳಿತ್ತು - ಯಾರಿಗೂ ಬೇಡವಾದ, ಉಪಯೋಗ ಆಗದ ನನ್ನನ್ನು ನಾಶಮಾಡಿಬಿಡಿ.

    ಅದಕ್ಕೆ ಅಜ್ಜಿಯು ಮುಗುಳ್ನಗುತ್ತಾ ಹೇಳುತ್ತಾರೆ - ನಾನು ನಿನ್ನನ್ನು ಕೊಂಡೊಯ್ಯುವಾಗ ನೀರು ತುಂಬಿ ಎತ್ತಿಕೊಂಡು ಹೋಗುವ ಬದಿಯನ್ನು ನೋಡು.

    ಕೊಡವು ಆ ಕಡೆ ನೋಡಿದಾಗ ಹಚ್ಚ ಹಸಿರಾಗಿ ಬೆಳೆದು ನಿಂತ ಹೂಗಿಡಗಳು ಮತ್ತು ಸುವಾಸನೆ ಬೀರುತ್ತಾ ಅರಳಿ ನಿಂತಿರುವ ಹೂಗಳು.....!!!!!

    ಅಜ್ಜಿ ಮುಂದುವರಿಸುತ್ತಾ - ನಿನಗೆ ತೂತಾಗಿದ್ದುದು ನನಗೆ ಮೊದಲೇ ಗೊತ್ತಿತ್ತು. ಆದ್ದರಿಂದಲೇ ನಿನ್ನನ್ನು ಎತ್ತಿಕೊಂಡು ಹೋಗುವ ಬದಿಯಲ್ಲಿ ಹೂಗಿಡಗಳನ್ನು ನೆಟ್ಟದ್ದು. ಆ ಸುಂದರವಾದ ಹೂ ಗಿಡಗಳಿಗೆ ಕಾರಣಕರ್ತ ನೀನೇ ...

    ಅಜ್ಜಿಯ ಮಾತನ್ನು ಕೇಳಿದ ತೂತಾದ ಕೊಡಕ್ಕೆ ತನ್ನ ಬೆಲೆ ಏನು ಅಂತ ಅರಿವಾಯಿತು.


    ಹಲವುಬಾರಿ ಈ ತೂತಾದ ಕೊಡದ ಅನುಭವ ನಮಗೆಲ್ಲರಿಗೂ ಆಗಿರಬಹುದಲ್ಲವೇ????

    ನನಗೆ ಸೌಂದರ್ಯ ಇಲ್ಲ, ನಾನು ಗಿಡ್ಡವಾಗಿದ್ದೇನೆ, ನಾನು ದಪ್ಪವಾಗಿದ್ದೇನೆ, ನನ್ನತ್ರ ಸಂಪತ್ತು ಕಡಿಮೆ ಇದೆ, ನಾನು ನೆನೆದು ಕೊಂಡಂತಹ ಬಾಳಸಂಗಾಂತಿ ಸಿಕ್ಕಿಲ್ಲ, ನಾನು ಬಯಸಿದ ಕೆಲಸ ನನಗೆ ಸಿಕ್ಕಿಲ್ಲ, ನನ್ನ ಮನೆ ತುಂಬಾ ಚಿಕ್ಕದಾಗಿದೆ ..... ಹೀಗೇ ಹತ್ತಾರು ಕೊರತೆಗಳನ್ನು ನೆನೆದು ಕೊರಗುವಾಗ, - ಈ ಕೊರತೆಗಳೆಲ್ಲದಕ್ಕೂ ಪೊಸಿಟೀವ್ ಆದ ಒಳ್ಳೆಯ ಇನ್ನೊಂದು ಮುಖ ಇದೆ ಎಂಬುದನ್ನು ನೆನಪಿಡಿ ಸ್ನೇಹಿತರೆ.



Rate this content
Log in

Similar kannada story from Action