SIDDU GP

Tragedy Inspirational

1.4  

SIDDU GP

Tragedy Inspirational

ಸ್ನೇಹದ ದೋಣಿಯಲ್ಲಿ

ಸ್ನೇಹದ ದೋಣಿಯಲ್ಲಿ

6 mins
856


ಚಪ್ಪಾಳೆಯ ಸದ್ದು ನನ್ನ ಕಿವಿ ಮುಟ್ಟಿದರೂ, ನನ್ನ ಅಣ್ಣನ ದಾರಿಯತ್ತ ನನ್ನ ಕಣ್ಣು ನೆಟ್ಟಿತ್ತು. ಅವನು ಬಂದೇ ಬರುತ್ತಾನೇಯೆಂದು ನನಗೆ ಗೊತ್ತಿತ್ತು. ನನ್ನ ಬದುಕಿನಲ್ಲಿ ಭಾರವಾದ ಭಾವಗಳು ಮಿಂಚಿದರೂ, ನನ್ನ ಅಣ್ಣನ ಕಾಳಜಿ ಪ್ರೀತಿಯಲ್ಲಿ ನಾನು ಮಗುವಾಗಿದೆ. ಭಾವಗಳ ಮಳೆಯಲ್ಲಿ ನಾನು ಮಿಂದರೂ, ಆ ಚಪ್ಪಾಳೆ ಶಬ್ಧಗಳು ನನ್ನ ಮತ್ತೆ ಅವನ ಮನದತ್ತ ಸೆಳೆಯಿತ್ತು.


                         * * * *


ಎಲ್ಲೋ ಹುಟ್ಟಿ ಬೆಳೆದು ಸೇರಿದ್ದು ಬದುಕಿನ ದಾರಿಯಲ್ಲಿ, ಹೌದು, ಡಿಸೆಂಬರ ತಿಂಗಳು ಮಳೆಯ ದಿನಗಳು, ಅಂದು ಮೋಡಗಳು ಕಾಮೋಡವಾಗಿದವು, ದೂರದಲ್ಲಿ ಯಾರೋ ಒಬ್ಬರೂ ನಿಂತಿದನು ಸಮರ್ಥ ಗಮನಿಸಿದನು, ಮಳೆ ಬರುವ ಭರವಸೆಯಿತ್ತು ಆದರೆ ವಾತಾವರಣದ ಚಳಿಗೆ ಸಮರ್ಥ ಮಾತ್ರ ನಡುಗುತ್ತಿದ. ಗಾಳಿ ಜೋರಿತ್ತು, ಗುಡುಗು ಗುಡುಗಿಸುತ್ತಿತ್ತು. ಸಮರ್ಥ ನೋಡುನೋಡುತ್ತಿದಂತೆ, ದೂರದಲ್ಲಿದವನು ಮೂರ್ಛೇ ಹೋದದ್ದನ್ನು ಕಂಡ, ಸಿಡಿಲು ಮಳೆಯ ಅಬ್ಬರಕ್ಕೆ ನಾಂದಿ ಹಾಡಿತ್ತು. ಸಮರ್ಥ ಮಳೆಯ ಅಬ್ಬರವನ್ನು ಗಮನಿಸಿ ಅವನತ್ತ ಕಾಲಕಿತ್ತ. ಸಮರ್ಥ ಅವನ ಎಚ್ಚರಿಸಲು ಪ್ರಯತ್ನಿಸಿದ ಆದರೆ ಅವನಿಗೆ ಪ್ರಜ್ಞೆ ಬರಲಿಲ್ಲ. ಅವನನ್ನು ಎತ್ತಿಕೊಂಡು ಆಸ್ಪತ್ರೆಯತ್ತ ಹೊರಟ. ಆಸ್ಪತ್ರೆಯಲ್ಲಿ ಅವನಿಗೆ ಪ್ರಜ್ಞೆ ಬಂತು.

'ಯಾವ ದಾರಿ'ಯೆಂದು ಅವನು ತಳಮಳಿಸಿದ,

ಅವನು ಸಮರ್ಥ ದೂರದಲ್ಲಿ ನಿಂತಿದನು ಕಂಡನು, ಅವನೇ ತನಗೆ ಸಹಾಯ ಮಾಡಿದನೆಂದು ತಿಳಿದು ಅವನತ್ತ ಕೈ ಬೀಸಿದ, ಮುಗ್ದತೆಯ ಮುಖದ ಸಮರ್ಥನಿಗೆ ಅವನ ಕೈ ತೋರಿತ್ತು, ಅವನತ್ತ ಹೆಜ್ಜೆಹಾಕಿದ.

ಸಮರ್ಥ 'ತಾವು ಯಾರೆಂದು?' ಪ್ರಶ್ನಿಸಿದನು,

ಅವನ ಮುಖದಲ್ಲಿ ಶಾಂತಿ ಮಾತ್ರ ಎದ್ದು ತೋರುತ್ತಿತ್ತು. ಅವನು ಪ್ರಜ್ವಲಯೆಂದು ಗದ್ಗಿತನಾದನು.

ಸಮರ್ಥ ಮೌನಿಯಾದ, ಪ್ರಜ್ವಲ ದಣಿದರಿಂದ ನಿದ್ರೆಗೆ ಜಾರಿದನು.


ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಸಮರ್ಥನ ನಿದ್ದೆಗೆ ವಿದಾಯ ಹೇಳಿಸಿತ್ತು. ಸೂರ್ಯ ರಶ್ಮಿ ಭೂಮಿಯನ್ನ ತಲುಪುತ್ತಿದಂತೆ ಆಸ್ಪತ್ರೆಯ ಮೌನಭಾವ ಕಳೆದು, ಗದ್ದಲಗಳ ಗೂಡಾಯಿತು. ಪ್ರಜ್ವಲ ಮಾತ್ರ ನಿದ್ದೆಯ ಮಡಿಲಲ್ಲಿ ಮಗುವಾಗಿದನು. ಸಮರ್ಥ ಅವಸರ ಮಾಡಲಿಲ್ಲ. ನಿಧಾನವಾಗಿ ಪ್ರಜ್ವಲನ ತಲೆಗೆ ಕೈ ಹಚ್ಚಿದ, ನಿದ್ದೆಯ ಮಂಪರಿನಲ್ಲಿದ ಪ್ರಜ್ವಲ ತಕ್ಷಣ ಎಚ್ಚರಗೊಂಡನು, ಸಮರ್ಥ ಅವನ ಬಗ್ಗೆ ವಿಚಾರಿಸಲು ಕಾತುರನಾಗಿದನು. ಪ್ರಜ್ವಲನ ಮುಖದಲ್ಲಿ ಮುಗ್ದಭಾವವನ್ನು ಕಂಡಿದನು. ಪ್ರಜ್ಜಲ ಸಮರ್ಥನನ್ನು ಸರಿಯಾಗಿ ಗುರುತಿಸಿ ತಾನು ವಿದ್ಯಾಸಂಗಮ ಕಾಲೇಜಿನ ವಿದ್ಯಾರ್ಥಿಯೆಂದು ಹೇಳಿದನು.

ಸಮರ್ಥ 'ನಮ್ಮ ಕಾಲೇಜ'ಯೆಂದು ಪ್ರಶ್ನಿಸಿದನು

ಆದರೆ ತುಂಬಾ ದಿನಗಳಿಂದ ಕಾಲೇಜಿಗೆ ಹೋಗದ ಸಮರ್ಥನಿಗೆ ಪ್ರಜ್ವಲನ ಪರಿಚಯವಿರಲಿಲ್ಲ.

ಹೇಗೋ ಅವರ ಭೇಟೆ ಸ್ನೇಹವಾಯಿತ್ತು. ಆಸ್ಪತ್ರೆಯು ಅವರಿಗೆ ವಿದಾಯ ಹೇಳಿತ್ತು, ಪ್ರಜ್ವಲ ಮತ್ತು ಸಮರ್ಥ ಹಾಸ್ಟೆಲ ಹಾದಿಯತ್ತ ಹೆಜ್ಜೆಹಾಕಿದರು.


ವಿದ್ಯಾಸಂಗಮ ಹೆಸರಿಗೆ ತಕ್ಕಂತೆ ಅದ್ಬುತ ಪ್ರತಿಭೆಗಳನ್ನ ಕೊಟ್ಟ ಕಾಲೇಜ, ಸಮರ್ಥ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ, ಪ್ರಜ್ವಲ ಸಹ ಪ್ರತಿಭೆಗಳನ್ನೇ ಕೊಡುಗೆಯಾಗಿ ಪಡೆದವನು. ಅವರ ಸ್ನೇಹ ಅವರ ಕಲೆಗಳಿಂದಾಗಿ ಮತ್ತಷ್ಟು ಗಟ್ಟಿಯಾಯಿತ್ತು.


ಪದವಿ ಕಾಲೇಜಿನ ಆ ಮಸ್ತಿಗಳಲ್ಲಿ ಸಮರ್ಥ ಮತ್ತು ಪ್ರಜ್ವಲನ ನಡುವೆ ಮುನಿಸು ಶುರುವಾಯಿತ್ತು. ಸಮರ್ಥನ ಕ್ಷಮೆಯನ್ನು ಸಹ ಕಸದಂತೆ ವರ್ತಿಸಿ ಪ್ರಜ್ವಲ ಹೋಗಿಬಿಟ್ಟನು, ಕೋಪ, ಜಗಳಗಳು ಸಾವಿರವಾದರೂ ನಿಜವಾದ ಸ್ನೇಹಕ್ಕೆ ಯಾವುದು ಅಡ್ಡಿಯಾಗಲಾರದು.


ಕೆಲವು ತಿಂಗಳ ನಂತರ ಸಮರ್ಥ ತನ್ನ ಅಜ್ಜಿಯನ್ನ ಕಳೆದುಕೊಂಡ ಆ ದುಃಖದಲ್ಲಿಯೇ ನಿಜವಾದ ಸ್ನೇಹ ಅವನ ಕೈ ಹಿಡಿಯಿತ್ತು. ಅಜ್ಜಿಯ ಅಂತ್ಯಕ್ರಿಯೆಗೆ ಬಂದ ಪ್ರಜ್ವಲನಿಗೆ ನಿಜವಾದ ಸ್ನೇಹದ ಮಹತ್ವ ಅರಿವಾಗಿತ್ತು.


ಬದುಕು ಮತ್ತೊಂದು ಅವಕಾಶದೊಂದಿಗೆ ತಿರುಗಿತ್ತು. ಪದವಿಯಲ್ಲಿ ಸಮರ್ಥನಿಗೆ ಬರವಣಿಗೆಯೊಂದಿಗೆ ಸಂಬಂಧ ಬೆಳೆದು, ಅದರತ್ತ ತನ್ನ ಗುರಿಯನ್ನ ನೆಟ್ಟನು. ಪ್ರಜ್ವಲ ವಿಧ್ಯಾಬ್ಯಾಸದೊಂದಿಗೆ ತನ್ನ ಪಯಣ ಬೆಳೆಸಿದನು, ಅವರ ಸ್ನೇಹ ಕಾಳಜಿಯು ಪವಿತ್ರತೆಯ ರೂಪವಾಗಿತ್ತು. ಪದವಿ ಶಿಕ್ಷಣದ ಕೊನೆಯ ಹಂತಗಳಲ್ಲಿ ಇಬ್ಬರ ದಾರಿಗಳು ಗಟ್ಟಿಯಾಗಿದವು. ಇಬ್ಬರೂ ಸಹ ಒಂದು ಹಂತದಲ್ಲಿ ಬಂದು ನಿಂತಿದರು. ಅವರ ಅನುಭವಗಳು ಜಗತ್ತಿನ ನಿಜಸತ್ಯವನ್ನು ತಿಳಿಸಿದವು. ಇಬ್ಬರೂ ಬೇರೆ ದಾರಿಯತ್ತ ಹೆಜ್ಜೆಯಿರಿಸಿ ಮುನ್ನಡೆದರೂ, ಅವರ ಭವಿಷ್ಯದ ವಿಚಾರಗಳು ಸಹ ಜೊತೆಯಾದವು.


ಪೋನ ರಿಂಗಾಯಿತು, ಅದು ಪ್ರಜ್ವಲ ಕರೆ ಆದರೆ ಅಸ್ಪಷ್ಟವಾದ ದ್ವನಿ ಗದ್ದಲ,

'ಹಲೋ, ಪ್ರಜ್ವಲರವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ'ಯೆಂಬ ಮಾತು,

ಸಮರ್ಥನ ಎದೆ ಒಂದು ಕ್ಷಣ ನಿಂತ ಹಾಗಾಯಿತ್ತು, ಅವನು ತಡ ಮಾಡದೆ, ಪ್ರಜ್ವಲನ ಲೋಕೆಶನ ಹುಡುಕಿ ಆಸ್ಪತ್ರೆಗೆ ಹೋದ.

ಅನಾಥ ಭಾವಗಳು ಸಮರ್ಥನ ಕಂಗಾಲು ಮಾಡಿದವು. ಸಮರ್ಥನಿಗೆ ಪ್ರಜ್ವಲನ ಮುಖ ನೋಡುವ ಕಾತುರವಿರಲಿಲ್ಲ.

ಡಾಕ್ಟರ ಸಮರ್ಥನ ಕಡೆ ಬರುತ್ತಿದನು ಗುರುತಿಸಿದನು,

ಡಾಕ್ಟರ "ಏನಾಗಿದೆ ಅವನಿಗೆ" ಸಮರ್ಥನ ಧ್ವನಿಯಲ್ಲಿ ದುಃಖವಿತ್ತು.

"ತಾವು" ಡಾಕ್ಟರ ಪ್ರಶ್ನಿಸಿದರು.

"ಪ್ರಜ್ವಲ, ನನ್ನ ಆಪ್ತಸ್ನೇಹಿತ"ನೆಂದು ಪರಿಚಯಿಸಿಕೊಂಡನು.

"ನಿಮ್ಮ ಮನಸ್ಸು ಗಟ್ಟಿ ಮಾಡಿಕೊಳ್ಳಿ" ಸಮರ್ಥ ಆ ಮಾತನ್ನ ನೀರಿಕ್ಷಿಸಿರಲಿಲ್ಲ. ಡಾಕ್ಟರ ಮುಂದೆ ಸಮರ್ಥನಿಗೆ ಮಾತೇ ಬರಲಿಲ್ಲ.

"ಹೌದು ಪ್ರಜ್ವಲರವರ ಎರಡು ಕಿಡ್ನಿಗಳು ವಿಫಲವಾಗಿವೆ" ಆದರೆ ಸಮರ್ಥನಿಗೆ ಮುಂದೆ ಮಾತು ಕೇಳಲು ಇಷ್ಟವಿರಲಿಲ್ಲ. ಸಮರ್ಥನ ಮಾತುಗಳು ಗದ್ದಗಿತವಾದವು, ಸಮರ್ಥನಿಗೆ ನೆಲ ಮಂಜಾಗಿ ಕಂಡಿತ್ತು.


ಅದೇ ಗದ್ದಲ, ಅದೇ ತಳಮಳ, ಸಮರ್ಥನಿಗೆ ಎಚ್ಚರವಾಯಿತ್ತು. ಅವನಿಗೆ ಎಲ್ಲವೂ ವಿಚಿತ್ರದಂತೆ ಕಂಡಿತ್ತು. ಅವನು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದನು. ಅವನ ಕಣ್ಣಗಳು ಏನೋ ಹುಡುಕುತ್ತಿದವು ಆದರೆ ಅವನ ಮನಸ್ಸು ಮಾತ್ರ ಶೂನ್ಯವಾಗಿತ್ತು. ಡಾಕ್ಟರ ಸಮರ್ಥನ ಹತ್ತಿರ ಬರುತ್ತಿದನು ಕಂಡ ಸಮರ್ಥ ಕೂಗಬೇಕೆಂದು ಬಯಸುತ್ತಿದ ಆದರೆ ಅವನ ಧ್ವನಿ ಮಾತ್ರ ಹೊರಗೆ ಬರದೆ ಒದ್ದಾಡುತ್ತಿದನು, ಅವನ ತಳಮಳ ಸ್ಪಷ್ಟವಾಗಿ ಗೋಚರಿಸುತ್ತಿತ್ತು.


ಡಾಕ್ಟರ "ಸಮರ್ಥರವರೇ ಈಗ ಹೇಗಿದ್ದಿರಾ",

ಸಮರ್ಥನ ಕಡೆ ಉತ್ತರವಿರಲಿಲ್ಲ ಆದರೆ

"ಅವನು" ಸಮರ್ಥನ ಕಾಳಜಿಗೆ ಡಾಕ್ಟರ ಮನಸೋತರು,

"ಸಮರ್ಥರವರೇ ಅಂಗದಾನದ ಮೂಲಕ ಅವರಿಗೆ ಯಾರಾದರೂ ಕಿಡ್ನಿ ಕೊಟ್ಟರೆ ಅವರ ಜೀವಾವಧಿಯನ್ನು ಹೆಚ್ಚಿಸಬಹುದು", ಸಮರ್ಥನ ಜೀವ ಸ್ವಲ್ಪ ಸಮಾಧಾನ ಪಡೆಯಿತ್ತು.

ಅವನು ಮತ್ತೊಂದು ಕ್ಷಣ ಯೋಚಿಸದೆ,

"ನಾನು ಅವನಿಗೆ ಕಿಡ್ನಿ ಕೊಡುತ್ತಿನಿ"ಯೆಂದು ಹೇಳಿದ, ಡಾಕ್ಟರ ಹತ್ತಿರ ಮತ್ತೊಂದು ಪ್ರಶ್ನೆಯಿರಲಿಲ್ಲ. ವಾತಾವರಣ ಕರಗಿ ಮಳೆಯನ್ನು ಸುರಿಸಿತು, ಮಳೆಗೆ ತಂಪು ಗಾಳಿ ತಗಲಿ, ಸಮರ್ಥನ ಮನಸ್ಸು ಎಲ್ಲದಕ್ಕೂ ಸಿದ್ದವಾಗಿತ್ತು, ಮಣ್ಣು ಸುವಾಸನೆ ಹಬ್ಬಿಸಿತ್ತು. ಹಕ್ಕಿಗಳು ಗೂಡು ಸೇರಿದವು. ಮಳೆ ಧಾರಾಕಾರವಾಗಿ ಸುರಿಯಿತ್ತು.


ಪ್ರಜ್ವಲ ಆಸ್ಪತ್ರೆಯ ಹಾಸಿಗೆಯು ಬೇಜಾರುಯೆಂದು ಸಮರ್ಥನಿಗೆ ಹೇಳುತ್ತಿದ, ಪ್ರಜ್ವಲನಿಗೆ ಅವನ ಯಾವ ವಿಷಯವೂ ಗೊತ್ತಿರಲಿಲ್ಲ ಮತ್ತು ಇದನ್ನ ಪ್ರಜ್ವಲಗೆ ಹೇಳುವ ಮನಸ್ಸುಯಿರಲಿಲ್ಲ. ಸಮರ್ಥನಿಗೆ ಸುಸ್ತುಯೆಂದು ಆಸ್ಪತ್ರೆಯ ಇನ್ನೊಂದು ಹಾಸಿಗೆಯತ್ತ ನಡೆದನು, ಪ್ರಜ್ವಲ ಸಮರ್ಥನ ನೋಡುತ್ತಿದನು. ಪ್ರಜ್ವಲನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿತ್ತು ಹಾಗೆ ಅವರ ಬದುಕು ಮತ್ತೊಂದು ಮಗ್ಗಲಿಗೆ ತಿರುಗಿತ್ತು.


ಬದುಕಲ್ಲಿ ನೂರು ದಾರಿ ಬಂದರೂ ಪ್ರಜ್ವಲನ ಸ್ನೇಹದಿಂದ ದೂರವಾಗದ ಸಮರ್ಥನಿಗೆ ದೊಡ್ಡ ಸವಾಲು ಎದುರಾಯಿತ್ತು, ಅದ್ಬುತ ಯೋಚನೆಗಳಿಂದ ಕೂಡಿದ ಸ್ನೇಹದಲ್ಲೊಂದು ಸಣ್ಣ ಬಿರುಕು ಸುಳಿಯಿತ್ತು. ಮತ್ತೆ ಮಳೆಯಾಯಿತ್ತು. ಗುಡುಗಿನ ಸದ್ದು ಜೋರಾಗಿತ್ತು. ಸಿಡಿಲು ಹೊಡೆದು, ಮಳೆಯು ರಭಸದಿಂದ ಭೂಮಿಗೆ ಸುರಿಯಿತ್ತು. ಅದು ಒಂದು ಪವಿತ್ರವಾದ ಸ್ನೇಹವನ್ನು ಕೊಚ್ಚಿಕೊಂಡು ಹೋಗುವ ಹಾಗೆ. ಕಾರಣ ಇಬ್ಬರಿಗೂ ಗೊತ್ತಿರಲಿಲ್ಲ, ಆದರೂ ಸ್ನೇಹದ ರಭಸದ ಹೊಡೆತಕ್ಕೆ ಒಬ್ಬರಿಗೆ ನಂಬಿಕೆಯ ಜೊತೆಗೆ ಇನ್ನೊಬ್ಬರ ಅಹಂಕಾರವು ಸಹ ಸಾಕ್ಷಿಯಾಗಿತ್ತು. ಬದುಕಿನ ಪಯಣ ಆಗಲೇ ತುಂಬಾನೇ ದೂರ ಸಾಗಿತ್ತು, ಅದು ಕೈಗೆ ಸಿಗದಷ್ಟು. ಒಬ್ಬರ ಪಯಣ ಮತ್ತೊಂದು ಹಾದಿ ಹಿಡಿದು, ಒಂದು ಪವಿತ್ರ ಸ್ನೇಹ ದಿಕ್ಕು ತೋಚದ ದೋಣಿಯ ತರಹ ದಡವನ್ನು ಹುಡುಕುತ್ತಿತ್ತು.


ಸಮರ್ಥನಿಗೆ ಬರೆಯುವಿಕೆಯು ಕೈ ಹಿಡಿಯಿತ್ತು. ಅವನ ಪ್ರತಿಭೆ ಕಥೆ ಕವಿತೆಗಳೊಂದಿಗೆ ಸಾಗಿ, ಅದರಲ್ಲಿ ಹೆಸರು ಗಳಿಸಿದ, ಅವನ "ಸ್ನೇಹದ ದೋಣಿಯಲ್ಲಿ" ಎಂಬ ಸಮಗ್ರ ಕಥೆಗೆ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂತು. ಪ್ರಜ್ವಲನ ಜೊತೆ ಕಳೆದ ಆ ಕ್ಷಣಗಳು, ಕಾಳಜಿ, ಯೋಚನೆಗಳು, ಬದುಕಿನ ಚಿಂತನೆಗಳು ಎಲ್ಲವೂ ಸಹ ಅಕ್ಷರಗಳಾಗಿ ಮುತ್ತಾಗಿ ಹೊರಹೊಮ್ಮಿದವು. ಅವನ ನಂಬಿಕೆಯು ಸಹ ಸುಳ್ಳಾಗಲಿಲ್ಲ. ಮೂಡಲ ಬಿಟ್ಟು ತನ್ನ ಕರ್ಮಭೂಮಿ ಅರಿಸಿ ಹೋಗಿದ ಸಮರ್ಥನಿಗೆ ದೇವರು ಕೈ ಹಿಡಿದು ನಡೆಸಿದನು ಆದರೆ ಸಮರ್ಥನ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗುತ್ತಿತ್ತು. ಪ್ರಜ್ವಲ ಎಲ್ಲೇಯಿದ್ದರೂ ಚೆನ್ನಾಗಿರುತ್ತಾನೆಯೆಂಬ ನಂಬಿಕೆ ಸಮರ್ಥನಲ್ಲಿಯಿತ್ತು.


ಸಮರ್ಥನ ಪೋನ ರಿಂಗಾಯಿತ್ತು. ಹೊಸ ನಂಬರ, ಹೊಸ ಧ್ವನಿ ಅದು ಮೂಡಲದಿಂದ ಬಂದ ಕಾಲ್, ಸಮರ್ಥನಿಗೆ ಖುಷಿಯಾಯಿತ್ತು, ಮೂಡಲದ ಕಾಲೇಜಿನ ಪೋನಕಾಲ್ ಅದು, ಕಾಲೇಜಿನಲ್ಲಿ 'ಸಮಾಗಮನ' ಎಂಬ ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಸಮರ್ಥನಿಗೆ ಕಾಲ್ ಬಂದಿತ್ತು. ಸಮರ್ಥ ಬರುವೆನೆಂದು ಆಶ್ವಾಸನೆ ನೀಡಿದನು.


ಡಿಸೆಂಬರಿನ ಮೂಡಲ ಮಳೆಯ ದಿನಗಳವು, ಆ ಹಾದಿ, ಆ ಹಸಿರು ನೆನೆಸಿಕೊಂಡು ಸಮರ್ಥ ರೋಮಾಂಚನಗೊಂಡನು. ಮತ್ತೆ ಅವನಿಗೆ ಪ್ರಜ್ವಲ ನೆನೆಪು ಸಹ ಮರೆಯಾಗಿರಲಿಲ್ಲ. ಅವನು ಚೆನ್ನಾಗಿರಲಿಯೆಂದು ದೇವರಲ್ಲಿ ಬೇಡಿಕೊಳ್ಳುತ್ತಾ ಸಮರ್ಥ ತನ್ನ ಔಷಧ ಚೀಲಕ್ಕೆ ಕೈ ಹಾಕಿದನು, ತನ್ನ ಬದುಕು ಅಲ್ಪವೆಂದು ಸಮರ್ಥನಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಅವನ ಜೀವ ಮಿಡಿಯುತ್ತಿತ್ತು, ಸರಿಯಾದ ಆಹಾರಕ್ರಮವಿಲ್ಲದೇಯಿದ್ದ ಒಂದು ಕಿಡ್ನಿಯು ಸಹ ಹಾಳಾಗಿ, ಅವನ ಆಯುಷ್ಯ ಸಹ ಅಂಚಿಗೆ ಬಂದು ನಿಂತಿತ್ತು. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡದನ್ನು ಸಾಧಿಸಿ ನಿಂತವನಿಗೆ ಈಗ ಎಲ್ಲವೂ ಶೂನ್ಯವಾಗುವ ಹಂತ ಶುರುವಾಗಿತ್ತು. ದೇವರ ಇಚ್ಚೆಯಂತೆ ಅವನ ಬದುಕು ನಿರ್ಧಾರವಾಗಿತ್ತು. ಸಮರ್ಥನಿಗೆ ಇದರ ಯಾವ ಕಾಳಜಿಯು ಇರದೆ ತನ್ನಲ್ಲಿ ಉಳಿದ ಕೆಲವು ದಿನಗಳನ್ನ ಚೆನ್ನಾಗಿ ಕಳೆಯಬೇಕೆಂದು ಯೋಚಿಸಿದನು. ದಿನಗಳು ಉರುಳುತ್ತಿದವು. ಉರುಳುತ್ತಿದ ದಿನಗಳಿಗೆ ಅಂತ್ಯವಿರಲಿಲ್ಲ.


ಮೂಡಲದ ಹಾದಿ ಶುಭ್ರವಾಗಿ ತೆರೆದುಕೊಂಡಿತ್ತು, ಭೂಮಿಯು ಹಸಿರಿನೊಂದಿಗೆ ಎಲ್ಲರ ಆಗಮನಕ್ಕೆ ಕಾದು ಕುಳಿತಿತ್ತು. ಸಮರ್ಥನ ಕಾರು ನಗರವನ್ನ ಬಿಟ್ಟು ದೂರ ಹೊರಟಂತೆ ಮೂಡಲ ಅವನಿಗಾಗಿ ಕಾಯುತ್ತಿತ್ತು. ಮಳೆ ಬರುವ ಭರವಸೆಯಿರಲಿಲ್ಲ ಆದರೂ ಮೋಡಗಳು ಕವಿಯುತ್ತಿದವು. ಮೂಡಲದ ಸೇತುವೆ ದಾಟುತ್ತಿದಂತೆ ಸಮರ್ಥನಿಗೆ ಹಳೆಯ ದಿನಗಳ ನೆನೆಪುಗಳು ಉಕ್ಕಿ ಬಂದವು ಆದರೆ ಅವನಿಗೆ ಖುಷಿ ಮಾತ್ರ ಉಳಿದಿತ್ತು. ವಿದ್ಯಾಸಂಗಮ ಕಾಲೇಜಿನ ಗೇಟ ತೋರಣದೊಂದಿಗೆ ಅವನಿಗಾಗಿ ಕಾಯುತ್ತಿತ್ತು.

"ಆಗಮದ ಹಾದಿಯು ತಮ್ಮಗಾಗಿ, ಮಗುವಾಗಿ, ನಲುವಾಗಿ, ಹೆಮ್ಮೆಯಾಗಿ ನಿಂತವರಿಗೆ ಖುಷಿಯ ಆಮಂತ್ರಣವೆಂಬ" ಮಾತುಗಳು ಕಿವಿ ಬಡಿಯುತ್ತಿದವು. ಸಮರ್ಥ ವೇದಿಕೆ ಏರಿದನು, ಚಪ್ಪಾಳೆ ಸದ್ದು ಜೋರಿತ್ತು, ಪುಟ್ಟ ಮಗುವಾಗಿ ಬಂದಾಗ ಈ ಕಾಲೇಜ ಸ್ವೀಕರಿಸಿ ಈಗ ನಾಡಿಗೆ ಹೆಮ್ಮೆಯಾಗಿ ಮಾಡಿ ಬೀಳ್ಗೊಟಿತ್ತು, ಈಗ ಅದೇ ವೇದಿಕೆ, ಅದೇ ಪ್ರೀತಿ, ಅದೇ ಮುದ್ದು ಮುಖಗಳು, ಆದರೆ ಈಗ ಆ ಕಾಲೇಜಿಗೆ ಅವರೆಲ್ಲರೂ ಒಂದು ಹೆಮ್ಮೆಯಾಗಿ ನಿಂತಿದರೂ. ಸಮರ್ಥನಿಗೆ ದೂರದಲ್ಲಿ ತುಂಬಾ ಹತ್ತಿರದವರಂತೆ ಕಂಡ ಮುಖವೊಂದು ಕಂಡಿತ್ತು, ಅವನಿಗೆ ಆ ಮುಖ ಸ್ಷಷ್ಟವಾಗಿ ಕಾಣಲಿಲ್ಲ. ಆ ಮುಖ ಹತ್ತಿರವಾಗುತ್ತಿತ್ತು ಸಮರ್ಥನ ಮೊಗದಲ್ಲೊಂದು ಕಿರುನಗೆ ಉಕ್ಕಿಬಂತು ಅದು ಪ್ರಜ್ವಲಯೆಂದು ಅವನ ಮನಸ್ಸು ಒತ್ತಿಹೇಳಿತ್ತು. ಅವನ ಕಣ್ಣು ಈಗ ಪ್ರಜ್ವಲನ ಗುರುತು ಹಿಡಿಯಿತ್ತು ಆದರೆ ಸಮರ್ಥನ ಕಣ್ಣು ಮಂಜಾಗುತ್ತಿದವು, ಅವನ ಗಂಟಲು ಒಣಗುತ್ತಿತ್ತು. ಅವನು ಕೂಗಬೇಕೆಂದು ಬಯಸುತ್ತಿದ ಆದರೆ ಅವನ ಜೀವ ಸಹಕರಿಸಲು ಹಿಂದೇಟು ಹಾಕಿತ್ತು. ಅವನ ಕಣ್ಣಿಗೆ ಎಲ್ಲವೂ ಒಂದು ಕ್ಷಣ ಕಪ್ಪಾಯಿತ್ತು. ಸಮರ್ಥನ ಪ್ರಜ್ಞೆ ಹೋಯಿತ್ತು. ವೇದಿಕೆಯ ಕುರ್ಚಿ ಅವನಿಗೆ ಆಧಾರವಾಯಿತ್ತು.

ಆ ಚಪ್ಪಾಳೆಯ ಸದ್ದು ಅವನ ಕಿವಿ ತುಂಬಿತ್ತು ಆದರೆ ಅವನ ಕಣ್ಣು ಮಾತ್ರ ಅವನ ಅಣ್ಣ ಪ್ರಜ್ವಲನನ್ನೇ ಹುಡುಕುತ್ತಿದವು. ಮಳೆಯ ಕಾಮೋಡಗಳು ಕರಗಿದವು, ಮಳೆಯು ರಭಸವಾಗದೆ ತುಂತುರಿನ ಪ್ರೀತಿಯನ್ನ ಮೂಡಲಕ್ಕೆ ಹಂಚುವ ಹಾಗೆ ನಲಿಯುತ್ತಾ ಬಂದ ಹಾಗಿತ್ತು.


                          * * * *


ಬದುಕು ಸುಂದರ ಕಾದಂಬರಿ ಇಲ್ಲಿಯ ಎಲ್ಲ ಪಾತ್ರಗಳು ಅಳಿಯಲೇಬೇಕು ಆದರೆ ನನಗೆ ಮಾತ್ರ ಬೇಗಯೆಂದು ಬಯಸಿರಲಿಲ್ಲ. ನಾನು ಕಣ್ಣು ತೆರೆದಾಗ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದೆ. ಪ್ರಜ್ವಲ ನನ್ನ ಹತ್ತಿರನೇ ನಿಂತಿದನು, ನನಗೆ ಗೊತ್ತಿತ್ತು ಅವನು ಏನು ಮಾತನಾಡಲ್ಲ ಅಂತಾ, ಅವನು ನನ್ನ ಗಮನಿಸುತ್ತಿದ ಆದರೆ ನನ್ನ ಧ್ವನಿ ಸಂಪೂರ್ಣವಾಗಿ ಕುಗ್ಗಿತ್ತು. ಡಾಕ್ಟರ ನನ್ನ ನಾಡಿ ಪರೀಕ್ಷೆ ಮಾಡುತ್ತಿರುವುದು ನನಗೆ ಗಮನವೇಯಿರಲಿಲ್ಲ. ನನ್ನ ಜೀವ ಸಂಪೂರ್ಣವಾಗಿ ಈಗ ಸಿದ್ದವಾಗಿತ್ತು, ಯಾವ ಕೋಪ ತಾಪವು ನನ್ನಲ್ಲಿ ಉಳಿದಿರಲಿಲ್ಲ ಯಾಕೆಂದರೆ ನನ್ನ ಕೊನೆಯ ದಿನಗಳನ್ನು ನಾನು ಅರಿತಿದೆ. ಆಕಸ್ಮಿಕವಾದ ಭೇಟಿ ಸ್ನೇಹವಾಗಿ, ಎಲ್ಲವನ್ನು ಕೊಟ್ಟು, ದೂರವಾಗಿ ಕೊನೆಯ ದಿನಗಳಲ್ಲಿ ಮತ್ತೆ ಅದೇ ಪವಿತ್ರತೆಯನ್ನು ಪಡೆದು ಸೇರುವುದು ತುಂಬಾ ಅಪರೂಪ ಆದರೆ ನನಗೆ ನಂಬಿಕೆಯಿತ್ತು ಮತ್ತು ಅದು ಸುಳ್ಳಾಗಲಿಲ್ಲ ಅಷ್ಟೇ. ನನ್ನ ತಲೆಯಲ್ಲಿ ವಿಚಾರಗಳ ಮನೆ ಮಾಡಿದವು ಅತ್ತ ಪ್ರಜ್ವಲ ಮತ್ತು ಡಾಕ್ಟರ ಮಾತನಾಡುತ್ತಿದನ್ನು ನಾನು ಗಮನಿಸಿರಲಿಲ್ಲ, ಮೊದಲೇ ಪ್ರಜ್ವಲ ಕೋಪದ ಮನುಷ್ಯ, ಡಾಕ್ಟರ ಹೊರಟಂತೆ, ಪ್ರಜ್ವಲ ಕೋಪದಿಂದ ರಕ್ತ ಕಾರುವಂತೆ ನನ್ನ ಗುರಾಯಿಸುತ್ತಿದ, ನಾನು ಶಾಂತಚಿತ್ತದಿಂದ ಅವನತ್ತ ಮುಗಳ ನಕ್ಕೆ. ಆ ನಗುವಿಗೆ ಅವನ ಕೋಪ ಕಡಿಮೆಯಾಗಲಿಲ್ಲ. ಅವನು ರೋಷದಿಂದ ನನ್ನ ಕಡೆ ಬರುತ್ತಿದ, ನಾನು ಸಮಾಧಾನದಿಂದ ಅವನನ್ನೇ ನೋಡುತ್ತಿದೆ. ಪ್ರಜ್ವಲ ಬಂದು ತಬ್ಬಿಕೊಂಡ ಅವನ ಕಣ್ಣಂಚಿನಲ್ಲಿ ಸಣ್ಣ ಕಣ್ಣೀರ ಹನಿಯೊಂದು ಮನೆಮಾಡಿದನ್ನು ನಾನು ತುಂಬಾ ಹತ್ತಿರದಿಂದ ಗಮನಿಸಿದೆ, ನನ್ನಲ್ಲಿ ಯಾವ ಉತ್ತರವೂಯಿರಲಿಲ್ಲ, "ಏನಾಯಿತು"ಯೆಂದು ನಾನು ನಗುತ್ತಾನೆ ಕೇಳಿದೆ, ಅವನು ಕೋಪದಿಂದ ಗುರಾಯಿಸಿದ, ನಾನು ನಕ್ಕೆ, ಮೌನ ಇಬ್ಬರಲ್ಲೂ ಮನೆಮಾಡಿತ್ತು ಆದರೆ ನಿಜವಾದ ಸ್ನೇಹ ಈಗ ಮಾತಾಗುವ ಸಂದರ್ಭ ಬಂದಿತ್ತು. ನಾನು ಪ್ರಜ್ವಲನಿಗೆ ಯಾವ ಪ್ರಶ್ನೆಯನ್ನು ಸಹ ಮಾಡಲಿಲ್ಲ. ನಾನು ಗಮನಿಸಿದೆ ಪ್ರಜ್ವಲನಿಗೆ ಎಲ್ಲ ವಿಷಯವೂ ಗೊತ್ತಾಗಿದೆಯೆಂದು. ಆದರೆ ನಾನು ಯಾವುದನ್ನು ಹೇಳಲು ಶಕ್ತನಾಗಿರಲಿಲ್ಲ. ಇಬ್ಬರ ಮೌನದ ನಡುವೆ ಸೂರ್ಯ ಕಳೆದು ಹೋದನು. ನನ್ನಲ್ಲಿ ಹಸಿವುಯಿರಲಿಲ್ಲ, ನನ್ನ ಕಣ್ಣುಗಳು ಮಾತ್ರ ಮುಚ್ಚಿದವು, ವಿಚಾರಗಳು ಸಾವಿರವಾಗಿ ತೇಲುತ್ತಿದವು.


ಪ್ರಜ್ವಲ ಟೀ ಹಿಡಿದುಕೊಂಡು ನಿಂತಿದನು, ನಾನು ನಿಧಾನವಾಗಿ ಟೀ ಕುಡಿದೆ, ಪ್ರಜ್ವಲನಿಗೆ ಸ್ನೇಹದ ದೋಣಿಯಲ್ಲಿ ಪುಸ್ತಕವನ್ನ ಕೈಗೆಯಿಟ್ಟೆ.

ಅವನ ಕೈ ಹಿಡಿದು ಕೊನೆಯದಾಗಿ ನಾನು ಒಂದು ಮಾತು ಹೇಳಲು ಬಯಸಿದೆ

"ಈ ಕೈ ಕೊನೆಯದಾಗಿ ನನ್ನ ಚಟ್ಟಕ್ಕೂ ಜೊತೆಯಾಗಲಿ"ಯೆಂದು ಕೇಳಿದೆ.

ಅವನಲ್ಲಿ ಉತ್ತರವಿರಲಿಲ್ಲ, ನನ್ನ ಜೀವ ಖುಷಿಯಾಯಿತ್ತು, ಕೊನೆಗೂ ಸ್ನೇಹದ ದೋಣಿಯಲ್ಲಿ ಪುಸ್ತಕ ಅವನ ಕೈ ಸೇರಿತ್ತು, ನನ್ನ ಸಾವಿನ ನಂತರ ಪ್ರಜ್ವಲ ಪುಸ್ತಕ ಓದುವಾಗ ಅದರಲ್ಲಿನ ಆಸ್ತಿ ಪತ್ರ ಅವನಿಗೆ ಸೇರುವಂತಾಯಿತು.

ನಾನು ಪ್ರಜ್ವಲಗೆ ಹೊರಗೆ ಹೋಗಿ ಬರುತ್ತಿನಿ ಅಂತಾ ಹೇಳಿ ಹೊರಗೆ ಹೊರಟೆ. ನನಗೆ ಅವನ ಮುಂದೆ ನನ್ನ ಯಾವ ನೋವು ಹೊರೆಯಾಗಬಾರದೆಂದು ನನ್ನ ಸಾವನ್ನೇ ಅವನ ಮುಂದಿನಿಂದ ಹೊರ ತೆಗೆದುಕೊಂಡು ಬಂದೆ. ನನ್ನ ಮನಸ್ಸು, ಜೀವ, ಆತ್ಮ ಎಲ್ಲವೂ ಸಂಪೂರ್ಣವಾಗಿತ್ತು, ನಾನು ನಿಧಾನವಾಗಿ ಗಿಡಕ್ಕೆ ಒರಗಿದೆ. ನಾನು ಯಾವುದನ್ನು ಮರೆಯದೆ ಮುಂದಿನ ಜನ್ಮದಲ್ಲಿ ಅದೇ ಸ್ನೇಹವನ್ನು ಪಡೆಯಬೇಕೆಂದು ಬಯಸುತ್ತಿದೆ.


ನನಗೆ ಉಸಿರು ಕಟ್ಟಿದ ಹಾಗಾಯಿತ್ತು, ಮೈ ತಣ್ಣಗಾದ ಅನುಭವವಾಯಿತ್ತು. ಅಣ್ಣಾಯೆಂದು ಒದರಬೇಕೆಂದುಕೊಂಡೆ ಆದರೆ ಎಲ್ಲವೂ ನಶ್ವರವೆಂದು ಆ ಮಾತನ್ನ ಮತ್ತು ಸತ್ಯವನ್ನ ನುಂಗಿಕೊಂಡೆ ಆ ಸಾವನ್ನು ಸಹ ಯಾಕೆಂದರೆ ಸ್ನೇಹವೆಂದರೆ ಪವಿತ್ರ ಮಾತ್ರವಲ್ಲ, ಅದು ನಿಜವಾದ ಕುಟುಂಬವೂ ಸಹ. ಪ್ರಜ್ವಲ ದೂರದಲ್ಲಿ ನನಗೆ ಕಂಡ. ನನ್ನ ಅಣ್ಣನ ಮುಖದಲ್ಲಿ ನಗುವಿರಲಿಯೆಂದು ಬಯಸಿದೆ. ನನ್ನ ಕಣ್ಣಗಳು ಮುಚ್ಚಿಕೊಂಡವು, ಪ್ರಜ್ವಲ ಜೋರಾಗಿ ಒದರಿದ ಆದರೆ ನಾನು ಮಾತ್ರ ಮುಗಳ ನಕ್ಕೆ ಕೊನೆಯದಾಗಿ ಅವನ ನಗು ನೋಡಬೇಕೆಂದು...Rate this content
Log in

Similar kannada story from Tragedy