STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಶ್ಯಾಮನ ಪ್ರೀತಿ

ಶ್ಯಾಮನ ಪ್ರೀತಿ

1 min
594

ನಾನ್ ಸ್ಟಾಪ್ ನವಂಬರ್ ಎಡಿಷನ್- ಆರಂಭಿಕ ಹಂತ:- ಪ್ರೀತಿ.


ಸಂಧ್ಯಾ ತುಂಬಾ ಬ್ರೇವ್ ಗರ್ಲ್. ಕಾಲೇಜಿನ ಪ್ರತಿಯೊಂದು ಚಟುವಟಿಕೆಯಲ್ಲಿ ಪಾಲ್ಗೊಂಡು , ತನ್ನ ವ್ಯಕ್ತಿತ್ವವನ್ನು ಆ ಮೂಲಕ ಗುರುತಿಸಿಕೊಳ್ಳುತ್ತಿದ್ದ ಹುಡುಗಿ. ಯಾರ ವಿಷಯಕ್ಕೂ ತಾನಾಗಿಯೇ ಮೂಗು ತೂರಿಸಿ ಹೋಗುತ್ತಿರಲಿಲ್ಲ. ಆದರೆ , ಯಾರಾದರೂ ಆಕೆಯ ವಿಷಯಕ್ಕೆ ಬಂದರೆ , ಆಕೆಗೆ ಅವಹೇಳನ ಮಾಡಿದರೆ ಯಾರನ್ನೂ ಸುಮ್ಮನೆಯಂತು ಬಿಡುತ್ತಿರಲಿಲ್ಲ. ಈ ಪ್ರೀತಿ ಪ್ರೇಮ ಯಾವುದನ್ನು ನಂಬುತ್ತಿರಲಿಲ್ಲ. ಅವಳಿಗೆ ಗೊತ್ತಿರುವುದು ಒಂದೇ , ಅದು ಅಪ್ಪ ಅಮ್ಮ , ಹಿರಿಯರಿಗೆ ಗೌರವ ಕೊಡುವುದು ಜೊತೆಗೆ ತನ್ನ ಓದಿಗೆ ಒತ್ತು ನೀಡುವುದು ಅಷ್ಟೇ.


ಹೀಗಿರುವ ಹುಡುಗಿಗೆ ಶ್ಯಾಮ್ ಎನ್ನುವ ಸುಂದರ , ಸ್ಪುರದ್ರೂಪಿ ಹುಡುಗ , ಆಕೆಯ ಬುದ್ಧಿಶಕ್ತಿಗೆ ಮರುಳಾಗಿ , ಆಕೆಯ ಅಂದಕ್ಕೆ ಮನಸೋತು ಹಿಂದಿಂದೆ ಅಲೆಯುತ್ತಾನೆ. ಆದರೆ ಸಂಧ್ಯಾ ಆತನ ಅಲೆದಾಟಕ್ಕೆ ಬೆಲೆ ಕೊಡುವುದೇ ಇಲ್ಲ. ಕರೆದು ಬೈಯ್ದು ಬುದ್ದಿ ಹೇಳಿ ಕಳುಹಿಸುತ್ತಾಳೆ. ಆದರೆ ಆತ ಯಾವುದನ್ನು ತಲೆಗೆ ಹಸಕಿಕೊಳ್ಳುವುದೇ ಇಲ್ಲ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಆಕೆಗೆ ದುಂಬಾಲು ಬೀಳುತ್ತಾನೆ. ಆಕೆ ಸುತಾರಾಂ ಒಪ್ಪುವುದೇ ಇಲ್ಲ. ಆಕೆ ಅಪ್ಪ ಅಮ್ಮ ತೋರಿಸಿದ ಹುಡುಗನನ್ನು ಮದುವೆ ಆಗುವುದಾಗಿ ಹೇಳಿ, ಇದು ಪ್ರೀತಿ ಮಾಡುವ ಸಮಯವೂ ಅಲ್ಲ, ವಯಸ್ಸು ಅಲ್ಲ . ಈಗ ತಾನೇ ಪಿ.ಯು.ಸಿ. ಗೆ ಬಂದಿದೀವಿ. ಮೊದಲು ಓದೋಣ , ಆಮೇಲೆ ಪ್ರೀತಿ ಮದುವೆ ಎಲ್ಲವೂ ಎಂದು ಹೇಳಿ ಕಳುಹಿಸುತ್ತಾಳೆ. 


ಆದರೆ ಶ್ಯಾಮ್ ಮಾತ್ರ ಸಂಧ್ಯಾಳ ಗುಂಗಿನಿಂದ ಹೊರ ಬರುವುದೇ ಇಲ್ಲ. ಮತ್ತೆ ಮತ್ತೆ ಅವಳ ಹತ್ತಿರ ಹೋಗಿ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕಾಡುತ್ತಾನೆ. 


ಈ ವಿಷಯ ಇಬ್ಬರ ಮನೆಯವರಿಗೂ ಹೋಗಿ ಮುಟ್ಟುತ್ತದೆ. ಆಗ ಎರಡು ಮನೆಯ ಪಾಲಕರು ಕುಳಿತು ಇಬ್ಬರಿಗೂ ತಿಳಿಸಿ ಹೇಳುತ್ತಾರೆ. ಇಬ್ಬರ ಮನೆಯವರಿಗೂ ಹುಡುಗ ಹುಡುಗಿ ಇಷ್ಟ ಆಗಿದ್ದು , ಒಬ್ಬರಿಗೊಬ್ಬರು ಬೇಡ ಎಂದು ಹೇಳಲು ಮನಸ್ಸಿಲ್ಲದೆ ಯೋಚನೆಗೆ ಬೀಳುವರು. ಆಗ ಸಂಧ್ಯಾಳ ಅಪ್ಪ ತಾನೇ ಮುಂದುವರೆದು , ಇಬ್ಬರ ಓದು ಮುಗಿಯಲಿ ಮುಂದೆ ನೋಡೋಣ ಎಂದು ಹೇಳಿದರು. 


ಆಗ ಶ್ಯಾಮ್ ತುಂಬಾನೇ ಖುಷಿಯಾಗುತ್ತಾನೆ. ತನ್ನ ಪ್ರೀತಿ ತನಗೆ ಸಿಗುತ್ತದೆ ಎಂದು ಖುಷಿಯಿಂದ ತನ್ನ ಓದು ಮುಂದುವರೆಸಿದನು.ಸಂಧ್ಯಾಳು ಸಹ ಆತನ ಪ್ರೀತಿಗೆ ತನ್ನ ಒಪ್ಪಿಗೆಯನ್ನಿತ್ತಳು.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics