ಶ್ಯಾಮಲೆಯ ಶ್ಯಾಮ
ಶ್ಯಾಮಲೆಯ ಶ್ಯಾಮ
ಶ್ಯಾಮಲೆಯ ಶ್ಯಾಮ
(ವಿಭಿನ್ನ ಪ್ರೇಮ ಕಥೆ ಬರೆಯುವ ಒಂದು ಪ್ರಯತ್ನ)
ಲೇಖಕರು ವಾಮನಾಚಾರ್ಯ
ರಸ್ತೆಯ ಮೇಲೆ ಒಮ್ಮಿ0ದೊಮ್ಮೆಲೆ ಓರ್ವ ಯುವತಿ 'ಸಹಾಯ ಮಾಡಿ ಸಹಾಯ ಮಾಡಿ' ಎನ್ನುವ ಜೋರಾದ ಧ್ವನಿ ಕೇಳಿ ಹಿಂದೆ ಬರುತ್ತಿರುವ ಜೀಪ್ ನಿಲ್ಲಿಸಿದ ಯುವಕ ಆಕೆಗೆ ಏಕೆ ಕೂಗಿದೆ ಎಂದು ಕೇಳಿದ.
ಆ ಯುವತಿ,
"ಇಬ್ಬರು ಬಾಲಕರ ಜೊತೆಗೆ ಗುಡ್ಡದೂರು ಗ್ರಾಮದಿಂದ ಬೆಳಗಿನ ಒಂಭತ್ತು ಗಂಟೆಗೆ ಬಿಟ್ಟು ರಾಘವಪುರ ಕಡೆಗೆ ನಡೆದು ಬರುತ್ತಿದ್ದೆ. ಬಿಸಿಲಿನ ತಾಪ ತಾಳ ಲಾರದೆ ಒಬ್ಬ ಬಾಲಕ ನೆಲದ ಮೇಲೆ ಕುಸಿದು ಬಿದ್ದು ಮೂರ್ಛೆ ಹೋದ. ನನ್ನಲ್ಲಿ ಇರುವ ಬಾಟಲಿ ನೀರಿನಿಂದ ಉಪಶಮನ ಮಾಡಿದೆ. ಕಣ್ಣು ತೆಗೆಯುತ್ತ ಇಲ್ಲ. ನನಗೆ ತುಂಬಾ ಗಾಬರಿ ಆಗಿದೆ," ಎಂದಳು.
ಆ ಯುವಕ,
"ಮ್ಯಾಡಮ್, ಎಲ್ಲರೂ ಜೀಪ್ ನಲ್ಲಿ ಕುಳಿತು ಕೊಳ್ಳಿ" ಎಂದ.
ಹಾಗೆ ಎಲ್ಲರೂ ಕುಳಿತರು. ಹತ್ತು ನಿಮಿಷದಲ್ಲಿ ರಾಘುವಪುರದ ಆಸ್ಪತ್ರೆಗೆ ತಲುಪಿದರು. ಮೂರ್ಛೆ ಹೋದ ಬಾಲಕ ನನ್ನು ಆ ಯುವಕ ಆಸ್ಪತ್ರೆ ಸೇರಿಸಿ ಡಾಕ್ಟರ್ ಗೆ ಹೇಳಿ ಹೋದ.
ಸಹಾಯ ಮಾಡಿದ ಆ ಯುವಕ ಯಾರು?
ಬಾಲಕರನ್ನು ಕರೆದುಕೊಂಡು ಬಂದ ಯುವತಿ ಯಾರು?
ಯುವತಿ ಆ ಯುವಕನಿಗೆ ಧನ್ಯವಾದ ಹೇಳಬೇಕು ಎಂದು ಎಲ್ಲ ಕಡೆ ನೋಡಿದರೆ ಅವನು ಅಲ್ಲಿ ಇರಲಿಲ್ಲ. ಅರ್ಧ ಗಂಟೆಯಲ್ಲಿ ಬಾಲಕ ಚೇತರಸಿ ಕೊಂಡ. ಆ ಯುವತಿಗೆ ಇನ್ನೊಂದು ಆಶ್ಚರ್ಯ. ಡಾಕ್ಟರ್ ಗೆ ಫೀಸ್ ಕೇಳಲು ಹೋದರೆ ಆಗಲೇ ಕೊಟ್ಟಿದೆ ಎಂದರು. ಅದಕ್ಕೆ ಆ ಯುವತಿ,
"ಡಾಕ್ಟರ್ ಸಾಹೇಬರೇ, ನಮಗೆ ಸಹಾಯ ಮಾಡಿದ ಯುವಕ ಯಾರು?"
"ಅವನು ರಾಘವಪುರ ನಗರದ ಕಟ್ಟಡ ಸಾಮಗ್ರಿಗಳ ಸಗಟು ವ್ಯಾಪಾರಿ ಘನ ಶ್ಯಾಮ ಪೋದ್ದಾರ್. ಈ ರುಕ್ಮಿಣಿ ಶ್ರೀಕೃಷ್ಣ ಮೆಮೋರಿಯಲ್ ಆಸ್ಪತ್ರೆಗೆ ಅವನೇ ಯಜಮಾನ. ನಾನು ಅವನ ಅಣ್ಣ ಹೃದಯ ರೋಗ ತಜ್ಞ ಡಾ.ರಾಧಾಕೃಷ್ಣ ಪೋದ್ದಾರ್. ಅವನು ಬಡವರು, ದೀನ ದಲಿತರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವನು. ನೀನು ಯಾರಮ್ಮ," ಎಂದು ಕೇಳಿದರು ಡಾಕ್ಟರ್.
"ಸರ್, ನನ್ನ ಹೆಸರು ಸುವರ್ಣ ನವಿಲೂರು. ರಾಘವ್ ಪುರ ದಿಂದ ನಾಲ್ಕು ಕಿಲೋಮೀಟರ್ ದೂರ ಇರುವದು ಗುಡ್ಡದೂರು. ನಾನು ಹುಟ್ಟಿ ಬೆಳೆದ ಪುಟ್ಟ ಹಳ್ಳಿ ಗುಡ್ಡದೂರು. ಅನಾಥೆ ಇರುವದರಿಂದ ಎಸ್ ಎಸ್ ಎಲ್ ಸಿ ಆದ ನನಗೆ ನೀಲಾ0ಬಿಕಾ ವಿವಿಧೋದ್ದೇಶ ಪ್ರಾಢ ಶಾಲೆ, ರಾಘವಪುರ್ ದಲ್ಲಿ ಎರಡನೇ ದರ್ಜೆ ಕ್ಲರ್ಕ್ ಎಂದು ತಾತ್ಕಾಲಿಕ ಕೆಲಸ ಕೊಟ್ಟಿರುವರು. ಗುಡ್ಡದೂರು ಗ್ರಾಮದಿಂದ ಬಹಳ ಮಕ್ಕಳು ಇಲ್ಲಿಗೆ ಓದಲು ಬರುವರು. ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಇಲ್ಲಿಂದ ರಾಘವಪುರ ಕ್ಕೆ ಹೋಗುವದು ಹಾಗೂ ಬರುವದು ಒಂದೇ ಒಂದು. ಅದು ತಪ್ಪಿದರೆ ನಾಲ್ಕು ಕಿಲೋಮೀಟರ್ ದೂರ ನಡೆದು ಕೊಂಡು ಬರಬೇಕು. ರಸ್ತೆ ಗತಿ ಅಧೋಗತಿ. ಮಳೆಗಾಲದಲ್ಲಿ ಆಗುವ ಪರದಾಟ ಯಾರೂ ಕೇಳುವವರು ಇಲ್ಲ. ನಾನು ಕೂಡ ನಡೆದು ಕೊಂಡು ಬರುವೆ. ಇಂದು ಶಾಲೆಗೆ ಹೋಗುವ ಎರಡು ಮಕ್ಕಳು ನನ್ನ ಜೊತೆಗೆ ಬಂದರು. ನಿಮ್ಮ ತಮ್ಮನನ್ನು ಭೇಟಿ ಆಗಬೇಕು. ಅವರು ಎಲ್ಲಿ ಸಿಗುವರು."
ಅವಳ ಪರಿಸ್ಥಿತಿ ಅರಿತು ಡಾಕ್ಟರ್ ಹೇಳಿದರು,
"ಅವನು ಈ ಸಮಯದಲ್ಲಿ ನಮ್ಮ 'ಭುವನೇಶ್ವರಿ ಎಂಟರ್ ಪ್ರೈಸೆಸ್' ನಲ್ಲಿ ಸಿಗುವನು."
ಇಬ್ಬರು ಮಕ್ಕಳಿಗೆ ಕ್ಲಾಸ್ ಗೆ ಕಳಿಸಿ ಶಾಲೆಯ ಮುಖ್ಯ್ಯೊಪಾಧ್ಯಾಯ ಪುರುಷೋತ್ತಮ್ ಅವರಿಗೆ ಹೊರಗೆ ಹೋಗಲು ಅನುಮತಿ ತೆಗೆದು ಕೊಳ್ಳಲು ಹೋದರೆ ತಡವಾಗಿ ಶಾಲೆಗೆ ಬಂದಿರುವದಕ್ಕೆ ಕಾರಣ ಕೇಳಿದರು. ಆಗಿರುವದು ಹೇಳಿದಮೇಲೆ ಅನುಮತಿ ಕೊಟ್ಟರು.
ಶಾಲೆ ಎದುರುಗಡೆ ಇರುವ ಭುವನೇಶ್ವರಿ ಎಂಟರ್ಪ್ರೈಸಸ್ ಅಂಗಡಿ ಒಳಗೆ ಹೋಗಿ ವಿಚಾರಿಸಿದ ವ್ಯಕ್ತಿಯೇ ಘನಶ್ಯಾಮ್ ಎಂದು ತಿಳಿಯಿತು. ಗ್ರಾಹಕರನ್ನು ನೋಡಲು ಬೇರೆ ಅವರಿಗೆ ಹೇಳಿ ಆಕೆಯನ್ನು ಒಳಗೆ ಕರೆದರು.
"ಹೇಳಿ, ಸುವರ್ಣ ಅವರೇ.ಅಣ್ಣ ಈಗಾಗಲೇ ನೀವು ಬರುವದನ್ನು ತಿಳಿಸಿದ."
"ಸರ್, ನಿಮಗೆ ಧನ್ಯವಾದ ಹೇಳಲು ಬಂದೆ. ನಿಮ್ಮ ಹಾಗೆ ಕರುಣೆ, ಅನುಕಂಪ ಹಾಗೂ ಪರೋಪಕಾರ ಇರುವ ಜನ ತುಂಬಾ ವಿರಳ. ಒಂದುವೇಳೆ ನೀವು ಬಾಲಕನಿಗೆ ಸಮಯಕ್ಕೆ ಸರಿಯಾಗಿ ಸಹಾಯ ಮಾಡದೇ ಇದ್ದರೇ ಅವನು ಬದುಕಿ ಉಳಿಯುವದು ಕಷ್ಟ ವಾಗುತ್ತಿತ್ತು. ದೇವರ ಹಾಗೆ ಬಂದು ಬಾಲಕನ ಜೀವ ಉಳಿಸಿದ ಪುಣ್ಯಾತ್ಮ. ನಿಮ್ಮ ಉಪಕಾರ ಎಷ್ಟು ಸಲ ಹೇಳಿದರೂ ಅದು ಕಡಿಮೆ. ನಿಮ್ಮ ಬಗ್ಗೆ ನಿಮ್ಮ ಅಣ್ಣನ ಮೂಲಕ ತಿಳಿದುಕೊಂಡೆ. ಅಂದಹಾಗೆ ನಿಮ್ಮ ಇತರ ವ್ಯಾಪಾರ ವ್ಯವಹಾರ ಉತ್ತಮ ಅಭಿವೃದ್ಧಿ ಆಗಲಿ ಎಂದು ಹಾರೈಸುವೆ."
ಆಕೆ ಮಾತು ಅಷ್ಟಕ್ಕೇ ನಿಲ್ಲಿಸುವ ದಿಲ್ಲ ಎಂದು ಘನಶ್ಯಾಮ ಕೈ ಮಾಡಿದ. ಆಕೆಯ ನಿರರ್ಗಳ ವಾಗಿ ಮಾತನಾಡುವದನ್ನು ಗಮನಿಸಿದ ಆತನಿಗೆ ಗೆ ತುಂಬಾ ಪ್ರಭಾವ ಬೀರಿತು. ಮೊದಲು ಸಲ ಆಕೆಯನ್ನು ನೋಡಿದಾಗ ಆಕೆ ಮೇಲೆ ಪ್ರೀತಿ ಅಂಕುರ ವಾಗಿತ್ತು. ಕಾರಣ ಆಕೆಯ ರೂಪ, ಲಾವಣ್ಯ,ಮುಖದ ಮೇಲೆ ಇರುವ ಗಾಂಭಿರ್ಯ ಅವನಿಗೆ ಆಕರ್ಷಣೆ ಆಗಿರುವದು ವಿಶೇಷ. ಸುವರ್ಣ ತನ್ನ ಬಾಳ ಸಂಗಾತಿ ಆಗಲು ಯೋಗ್ಯಳು ಎಂದು ಅಂದುಕೊಂಡ. ಈಗಾಗಲೇ ಘನಶ್ಯಾಮ್ ನಿಗೆ ವರ ಮಾಲೆ ಹಾಕಲು ಕನ್ಯಾಮಣಿಗಳು ಸಾಲು ಸಾಲಾಗಿ ನಿಂತಿರುವರು. ಅವರೆಲ್ಲರನ್ನು ಬಿಟ್ಟು ಸುವರ್ಣಾ ಗೆ ಏಕೆ ಆಯ್ಕೆ ಮಾಡಿದ? ಸುವರ್ಣ ಒಪ್ಪಿಗೆಯೂ ಅವಶ್ಯ ಎಂದು ಅಂದುಕೊಂಡು ಅದಕ್ಕಾಗಿ ಆಕೆ ತನ್ನ ಕಣ್ಣ ಮುಂದೆ ಇರಬೇಕು ಎಂದು ಒಂದು ಐಡಿಯಾ ಮಾಡಿದ.
"ಸುವರ್ಣಾ ನಿಮ್ಮಂಥ ಬುದ್ಧಿವಂತರು ನಮ್ಮ ವ್ಯವಹಾರದಲ್ಲಿ ಬೇಕಾಗಿದೆ. ನೀವು ಸಮ್ಮತಿ ಕೊಟ್ಟರೆ ನಿಮಗೆ ಒಂದು ಜವಾಬ್ದಾರಿ ಕೆಲಸ ವಹಿಸುತ್ತೇನೆ. ಉತ್ತಮ ಸಂಬಳ, ಇರಲು ಬಾಡಿಗೆ ಇಲ್ಲದ ಮನೆ ಕೊಡುತ್ತೇನೆ."
ಇದನ್ನು ಕೇಳಿದ ಸುವರ್ಣ ಗೆ ಖುಷಿ ಏನೋ ಆಯಿತು. ಸಧ್ಯದ ಕೆಲಸ ತಾತ್ಕಾಲಿಕ ಇದ್ದು ಯಾವಾಗ ಕೆಲಸದಿಂದ ತೆಗೆಯುವರೋ ಗೊತ್ತಿಲ್ಲ. ಒಬ್ಬ ಅಪರಿಚಿತ ಹುಡುಗಿಗೆ ಕೇಳದೇ ಇಷ್ಟೆಲ್ಲಾ ಕೊಡುವದು ಅನುಮಾನಕ್ಕೆ ಆಸ್ಪದ ಎನ್ನುವ ಅನುಮಾನ ಕೂಡಾ ಬಂದಿತು.
"ಸರ್, ವಿಚಾರ ಮಾಡಲು ನನಗೆ ಒಂದು ವಾರ ಸಮಯ ಕೊಡಿ."
ಅದಕ್ಕೆ ಘನ ಶ್ಯಾಮ್ ಆಯಿತು ಎಂದರು.
ಇದರ ಬಗ್ಗೆ ಯಾರ ಜೊತೆಗೆ ಮಾತನಾಡಿದರೆ ಸರಿಯಾದ ಸಲಹೆ ಕೊಡುವರು? ಎನ್ನುವದು ಆಕೆಗೆ ಚಿಂತೆ ಆಯಿತು. ಹಿರಿಯರಾದ ಹೆಡ್ ಮಾಸ್ತರ ಪುರುಷೋತ್ತಮ್ ಅವರ ಸಲಹೆ ಕೇಳಲು ಹೋದಳು. ಶಾಲೆಯಲ್ಲಿ ಅವರು ತಮ್ಮ ಕೋಣೆಯಲ್ಲಿ ಒಬ್ಬರೇ ಇದ್ದಾಗ ಒಳಗೆ ಹೋದಳು.
ಆಕೆಯನ್ನು ನೋಡಿ ಅವರು,
"ಸುವರ್ಣಾ, ಘನಶ್ಯಾಮ್ ಭೇಟಿ ಆಯಿತೇ?"
"ಆಯಿತು ಸರ್ ಆದರೆ ಒಂದು ಸಮಸ್ಯೆ."
"ಅದೇನಮ್ಮ ಹೇಳು."
ಆಗಿರುವದೆಲ್ಲ ಹೇಳಿದಳು.
ಅದಕ್ಕೆ ಹೆಡ್ ಮಾಸ್ಟರ್,
"ಸುವರ್ಣಾ ಈ ಬಂದ ಅವಕಾಶ ಬಿಡ ಬೇಡ. ಘನಶ್ಯಾಮ್ ನನ್ನ ವಿದ್ಯಾರ್ಥಿ. ಚಿಕ್ಕವನು ಇದ್ದಾಗಿನಿಂದ ಅವನು ತುಂಟ, ಉಡಾಳ ಇದ್ದ. ಅವನು ಎಂ ಬಿ ಎ ಅಂತಿಮ ವರ್ಷದಲ್ಲಿ ಓದುತ್ತಿರುವಾಗ ಅಕಸ್ಮಾತ್ ಮೊದಲು ಅವನ ತಂದೆ ನಂತರ ತಾಯಿ ಅಪಘಾದಲ್ಲಿ ಮರಣ ಹೊಂದಿದರು. ಅವನ ಅಣ್ಣ ರಾಧಾಕೃಷ್ಣ ಅದೇ ತಾನೇ ಎಂ ಡಿ ಮುಗಿಸಿದ್ದ. ಎಲ್ಲಾ ಜವಾಬ್ದಾರಿ ಅಣ್ಣನ ಮೇಲೆ ಬಿದ್ದಿತು. ಮೂರು ತಲೆಮಾರಿನ ವ್ಯಾಪಾರವನ್ನು ತಮ್ಮನಿಗೆ ವಹಿಸಿದ. ಐದು ವರ್ಷಗಳಲ್ಲಿ ವ್ಯಾಪಾರ ಉತ್ತುಂಗಕ್ಕೆ ಏರಿತು. ತಂದೆ ತಾಯಿ ಸ್ಮರಣಾರ್ಥ ನೂರು ಹಾಸಿಗೆ ಇರುವ ಆಸ್ಪತ್ರೆ ಕಳೆದ ವರ್ಷ ಉದ್ಘಾಟನೆ ಆಯಿತು. ಅಣ್ಣ ಆಸ್ಪತ್ರೆ ನೋಡಿಕೊಂಡರೆ ತಮ್ಮ ವ್ಯಾಪಾರ. ಸಧ್ಯ ನೀನು ಕೆಲಸಕ್ಕೆ ಸೇರು. ನಿನಗೆ ಒಳ್ಳೇಯದು ಆಗಲಿ," ಎಂದರು.
ಒಂದು ವಾರದ ನಂತರ ಸುವರ್ಣ ತನ್ನ ನಿರ್ಧಾರವನ್ನು ಘನಶ್ಯಾಮ್ ಹೇಳುವ ಮೊದಲು ಒಂದು ಪ್ರಶ್ನೆ ಕೇಳಿದಳು.
"ಸರ್, ನಾನು ನಿಮ್ಮ ನಿರೀಕ್ಷೆಗಳನ್ನು ಪೂರೈಸುತ್ತೇನೆ ಎಂದು ಹೇಗೆ ಭಾವಿಸಿದ್ದೀರಿ?"
ಘನಶ್ಯಾಮ್ ಅವರಿಗೆ ಆಶ್ಚರ್ಯದ ಜೊತೆಗೆ ಉತ್ತರ ಕೊಡಲು ಕಠಿಣ ವಾಯಿತು.
"Face is the index of a man. ಇದೇ ನನ್ನ ಉತ್ತರ," ಎಂದು ನಗುತ್ತಾ ಹೇಳಿದ.
ಸುವರ್ಣ ಅವರ ಪರ್ಸನಲ್ ಸೆಕ್ರೆಟರಿ ಆದಳು. ಅವರಿಬ್ಬರೂ ಸನಿಹಕ್ಕೆ ಬಂದು ಪ್ರೇಮಿಗಳು ಆಗುವದಕ್ಕೆ ತಡವಾಗಲಿಲ್ಲ. ಈ ಮಧ್ಯ ಸುವರ್ಣ ಳ ದೂರ ಸಂಭಂದಿ ಅದೇ ಶಾಲೆಯಲ್ಲಿ ಶಿಕ್ಷಕ ಎಂದು ಕೆಲಸ ಮಾಡುತ್ತಿದ್ದ ಧನಂಜಯ ರಾಜಾಪುರ ಆಕೆಯ ಜೊತೆಗೆ ಮದುವೆ ಆಗಲು ಬಹಳ ದಿವಸ ದಿಂದ ಕೇಳುತ್ತಿದ್ದ. ಪ್ರಸ್ತುತ ಸುವರ್ಣ ಸಾಹುಕಾರ ಘನಶ್ಯಾಮ್ ಅವರಲ್ಲಿ ಕೆಲಸ ಮಾಡುವದು ಹಾಗೂ ಅವರ ಜೊತೆಗೆ ಲವ್ವಿ ಡವ್ವಿ ಮಾಡುವದು ತಿಳಿದು ಕೋಪ ಬಂದಿತು. ಒಂದು ದಿವಸ ಸುವರ್ಣ ಶಾಲೆಗೆ ಕೆಲಸಕ್ಕೆ ರಾಜೀನಾಮೆ ಕೊಡಲು ಬಂದಾಗ ಆಕೆಯನ್ನು ಕೇಳಿಯೇ ಬಿಟ್ಟ.
"ಇದೇನು ಸುವರ್ಣ, ನಾನು ನಿನಗೆ ಪ್ರೀತಿಸಿ ಮದುವೆ ಮದುವೆ ಆಗುವ ಆಕಾಂಕ್ಷೆ ಇತ್ತು. ನಾನು ಬಡವ ನೀನು ಬಡವಿ ಒಲವೇ ನಮ್ಮ ಬದುಕು ಮಾಡು ವದನ್ನು ಬಿಟ್ಟು ಸಾಹುಕಾರನ ಕೈ ಹಿಡಿಯಲು ನಿರ್ಧಾರ ಮಾಡಿದ್ದಿ. ದುಡುಕ ಬೇಡ ಇನ್ನೂ ಸಮಯ ಮಿಂಚಿಲ್ಲ," ಎಂದ.
ಸುವರ್ಣ ಸಿಟ್ಟಿನಿಂದ, "ನನ್ನ ಅಮ್ಮನಿಗೆ ಅಪ್ಪ ನಿಗೆ
ಅನಾ ರೋಗ್ಯದಿಂದ ಹಾಸಿಗೆ ಹಿಡಿದ ಸಮಯ ದಲ್ಲಿ ಹಣದ ಸಹಾಯ ಮಾಡಲು ಅಂಗಲಾಚಿ ಬೇಡಿ ಕೊಂಡೆ. ನೀನು ಸಹಾಯ ಮಾಡುವದು ದೂರ ಉಳಿಯಿತು, ಆಪ್ಪ ಅಮ್ಮ ಬದುಕಿದ್ದಾರೋ ಇಲ್ಲ ಎಂದು ಕೇಳಲು ಬರದ ನೀನು ಈಗ ಪ್ರೀತಿಯ ನಾಟಕ ಮಾಡಲು ನಾಚಿಕೆ ಆಗಲ್ವೆ," ಎಂದು ಅವನ ಮುಖ್ಯಕ್ಕೆ ಚಾಟಿ ಹೊಡೆದಂತೆ ಹೇಳಿ ಹೋಗಿಯೇ ಬಿಟ್ಟಳು.
ಆಕೆಯ ಪ್ರಾಮಾಣಿಕತೆ ಹಾಗೂ ಬುದ್ಧಿಮತ್ತೆಯಿಂದ ವ್ಯಾಪಾರ ದಿನೇ ದಿನೇ ವೃದ್ಧಿ ಆಯಿತು. ಆರು ತಿಂಗಳು ಆದಮೇಲೆ ಒಂದು ದಿವಸ ಸಮಯ ನೋಡಿಕೊಂಡು ಘನಶ್ಯಾಮ್ ತನ್ನ ಇಂಗಿತ ಆಕೆಗೆ ಹೇಳಿಯೇ ಬಿಟ್ಟ. ಸುವರ್ಣಗೆ ಆನಂದವಾಗಿ ಮದುವೆಗೆ ಒಪ್ಪಿಗೆ ಕೊಟ್ಟೇ ಬಿಟ್ಟಳು. ಶುಭ ಮುಹೂರ್ತ ದಂದು ಇಬ್ಬರ ಮದುವೆ ವಿಜೃಂಭಣೆಯಿಂದ ನೆರವೇರಿಸಿದರು. ಸುವರ್ಣ ಹೆಸರು ಬದಲಾಗಿ ಶ್ಯಾಮಲಾ ಆಯಿತು.
"ಈಗ ನೀನು ಶ್ಯಾಮ ನ ಶ್ಯಾಮಲೆ," ಎಂದ ಘನಶ್ಯಾಮ್ ಪ್ರೀತಿಯಿಂದ.
"ಅಲ್ಲ, ಶ್ಯಾಮಲೆಯ ಶ್ಯಾಮ," ಎಂದಳು.
ಇಬ್ಬರ ನಗು ಆಕಾಶ ಮುಟ್ಟಿತು.

