STORYMIRROR

Shridevi Patil

Action Inspirational Others

4  

Shridevi Patil

Action Inspirational Others

ರಾಧಾ ಕೃಷ್ಣನ ಕನಸು

ರಾಧಾ ಕೃಷ್ಣನ ಕನಸು

1 min
394

ಮಕ್ಕಳಿಗೆ ಪರೀಕ್ಷೆ ಎನ್ನುವುದು ಕೇವಲ ಆರುದಿನದ ಕೆಲಸವಷ್ಟೇ,

ಅದೇ, ಅಮ್ಮಂದಿರಿಗೆ ವರ್ಷವೀಡಿ ಒತ್ತಡ,ಭಯ ಇರುತ್ತದೆ. ಓದಿ ಓದಿ ಎನ್ನುವ ಘೋಷವಾಕ್ಯದೊಂದಿಗೆ ಬೆಳಗಾಗಿ ಕತ್ತಲಾಗಿರುತ್ತದೆ. ಇದೆಲ್ಲದರಿಂದ ಆ ಅಮ್ಮಂದಿರು ಫಲಿತಾಂಶ ಬಂದಮೇಲೆ ಸ್ವಲ್ಪ ನಿರಾಳರಾಗುತ್ತಾರೆ. 


ಸಿಂಧು ಒಬ್ಬಳೇ ಮಗಳಾಗಿದ್ದರಿಂದ ರಾಧಾ ಮತ್ತು ಕೃಷ್ಣ ದಂಪತಿಗಳು ಬಹಳ ಮುದ್ದಿನಿಂದ ಸಾಕಿ ಸಲುಹಿ ಬೆಳೆಸಿದ್ದರು. ರಾಧಾ ಮತ್ತು ಕೃಷ್ಣ ತಮ್ಮ ಎಂತಹದೇ ಕಷ್ಟದ,ಒತ್ತಡದ ಬದುಕಿದ್ದರೂ ಮಗಳಿಗೆ ಒಂಚೂರೂ ಕಷ್ಟ ಬರದಿರೋ ಹಾಗೆ ಬೆಳೆಸಿದ್ದರು. ಅವರ ಆಸೆ ಒಂದೇ, ತಮ್ಮ ಮಗಳು ಓದಿ ವಿದ್ಯಾವಂತಳಾಗಿ, ಸಮಾಜಕ್ಕೆ ಮಾದರಿಯಾಗಿ, ಮನೆಗೂ ಊರಿಗೂ ಕೀರ್ತಿ ತಂದು ತಮ್ಮ ಭುಜದ ಮೇಲಿನ ಹೊರೆಯನ್ನು ಇಳಿಸುವುದಾಗಿತ್ತು. 


ಆದರೆ ಮಗಳ ನೀರಸ ಓದಿನ ಕಾರಣ ತುಸು ಚಿಂತಿತರಾಗಿದ್ದ ದಂಪತಿಗಳು ಎಷ್ಟೇ ತಿಳಿ ಹೇಳಿದರೂ ಸಹ ಮಗಳ ಶಿಕ್ಷಣ ಏರುಮಟ್ಟಕ್ಕೆ ಹೋಗುವ ಲಕ್ಷಣ ಕಾಣುತ್ತಿರಲಿಲ್ಲ. ಆದರೆ, ರಾಧಾಳ ಬುದ್ಧಿವಂತಿಕೆ ಮತ್ತು ಯುಕ್ತಿಯಿಂದಾಗಿ ಮಗಳನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾದರು.


ತಾವು ಕಂಡ ಕನಸನ್ನು ಮಗಳು ಸಾಕಾರಗೊಳಿಸುವಳು ಎನ್ನುವ ದೃಢವಾದ ನಂಬಿಕೆ ಸಿಂಧುವಿನ ಹತ್ತನೇ ಮತ್ತು ಹನ್ನೆರಡನೆಯ ತರಗತಿಯ ಫಲಿತಾಂಶದಲ್ಲಿ ಕಂಡಿತು. ಆಗ ತಂದೆ ತಾಯಿ ನಿರಾಳತೆಯ ಭಾವ ಹೊಂದಿ, ನಿಟ್ಟುಸಿರು ಬಿಟ್ಟರು.


Rate this content
Log in

Similar kannada story from Action