STORYMIRROR

shristi Jat

Classics Inspirational Others

3  

shristi Jat

Classics Inspirational Others

ಪುಸ್ತಕ

ಪುಸ್ತಕ

1 min
133

"ಪುಸ್ತಕ ಎಂಬ ಮೂರಕ್ಷರದ ಪದ ಆದರೆ ಬೆಳಗಿಸುವುದು ಜ್ಞಾನದ ಬೆಳಕು ಸದಾ"

ಪುಸ್ತಕಗಳು ನಮ್ಮ ಜೀವನಕ್ಕೆ ತುಂಬಾನೆ ಮಹತ್ವವಿವೆ.ಪುಸ್ತಕಗಳು ವಿದ್ಯೆ ಮತ್ತು ಜ್ಞಾನದ ದೇಗುಲ ಎಂದರೆ ತಪ್ಪಲ್ಲ ನಾವು ಹುಟ್ಟಿದ ಮೇಲೆ ಅಂಬೆಗಾಲಿನ ಆಸರೆ ತೆಗೆದುಕೊಂಡು ನಡೆಯುವುದನ್ನು ಕಲಿಯುತ್ತೆವೆ ಹಾಗೆಯೇ ಅಆಇಈ ಎಂಬ ಪುಸ್ತಕದಿಂದ ನಮ್ಮದೆ ಆದ ಗುರಿ ಮುಟ್ಟುವವರೆಗೂ ಪುಸ್ತಕದ ಮಹತ್ವವಿದೆ.ಉದಾಹರಣೆಗೆ ವೈದ್ಯ, ಇಂಜಿನಿಯರ್, ಲಾಯರ್, ಸಿಎ, ಸಿಇಓ ಇತ್ಯಾದಿ.ಒಂದು ಒಳ್ಳೆಯ ಪುಸ್ತಕ ನಮಗೆ ಒಬ್ಬ ಒಳ್ಳೆ ಸ್ನೆಹಿತ ಇದ್ದ ಹಾಗೆ "ಜ್ಞಾನವನ್ನು ಹೆಚ್ಚಿಸುವ ಜ್ಞಾನ ಭಂಡಾರ" ನಾವು ಮಾಡುವ ಕಾರ್ಯದಲ್ಲಿ ಏಳಿಗೆಗೆ ಪುಸ್ತಕಗಳು ಮಾದರಿಯಾಗಿವೆ.ಬುದ್ದಿಶಕ್ತಿಯನ್ನು ವೃದ್ಧಿಸಲು ಮಾರ್ಗದರ್ಶಿಯಾಗಿವೆ.ನಮ್ಮ ಜೀವನದ ಒಳಿತು ಕೆಡುಕುಗಳ ಬಗ್ಗೆ ಅರಿವು ಮೂಡಿಸುತ್ತದೆ.ಕಲಿಕೆಗೆ ಅನುಭವ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪುಸ್ತಕಗಳು ಮಾನವ ಮತ್ತು ಸಮಾಜದ ಬೆಳವಣಿಗೆಗೆ ಪೂರಕವಾಗಿವೆ.ನಮ್ಮ ಜೀವನದ ಅರ್ಧಭಾಗದ ಕಷ್ಟಗಳನ್ನು ಕಡಿಮೆ ಮಾಡುವ ಶಕ್ತಿ ಪುಸ್ತಕಕ್ಕಿದೆ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics