Vaman Acharya

Romance Classics Others

4  

Vaman Acharya

Romance Classics Others

ಪ್ರೇಮಿಗಳು ಒಂದಾದರು

ಪ್ರೇಮಿಗಳು ಒಂದಾದರು

2 mins
239


ಪ್ರೇಮಿಗಳ ಮಧ್ಯ ಬಿರುಕು   


  ಸಮಯ ಬೆಳಗಿನ  ಆರು ಗಂಟೆ ಮೂವತ್ತು ನಿಮಿಷ. ಪವನಪೂರದ ಶ್ರೀನಿವಾಸ ಕಲ್ಯಾಣ ಮಂಟಪ ತಳಿರು ತೋರಣಗಗಳಿಂದ ಶೃಂಗಾರ ಆಗಿತ್ತು. ಮೈಕ್ ನಲ್ಲಿ ಸಂಸ್ಕೃತ ಮಂತ್ರಗಳು ನಡೆದಿದ್ದವು. ಮದುವೆ ಕಾರ್ಯಕ್ರಮ ನಡೆದಿತ್ತು. ಅಕ್ಷತೆ ಕಾರ್ಯಕ್ರಮ ಆಗುವ ಐದು ನಿಮಿಷಗಳ ಮೊದಲು ಒಮ್ಮಿಂದೊಮ್ಮೇಲೆ ವಿದ್ಯುತ್ ಸರಬರಾಜು ನಿಂತು ಹೋಯಿತು. ಒಂದು ನಿಮಿಷದ ನಂತರ ಮತ್ತೆ ಕರೆಂಟ್ ಬಂದಮೇಲೆ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಈ ಒಂದು ನಿಮಿಷದಲ್ಲಿ ಮದುವೆ ಆಗುವ ಕನ್ಯೆ ಮಂಜುಳ ಇಲ್ಲದಿರುವದು ಎಲ್ಲರನ್ನೂ ಚಕಿತ ಗೊಳಿಸಿತು. ಮದುವೆ ಆಗುವ ಗಂಡು ಕಾರ್ತಿಕ್ ದಂಗು ಬಡಿದವರಂತೆ ತಲೆಯ ಮೇಲೆ ಕೈ ಇಟ್ಟುಕೊಂಡು ಕುಳಿತ. 

ಮಂಜುಳ ತಂದೆ ತಾಯಿ ಗೆ ದಿಗ್ಭ್ರಮೆ ಆಯಿತು. ಸಮೀಪದ ಪೋಲಿಸ ಸ್ಟೇಶನ್ ನಲ್ಲಿ ಅವರು ದೂರು ಕೊಡಲು ಹೋದರು. ಆಗಲೇ ಮಂಜುಳ ಮಿತ್ರ ಅಭಿಷೇಕ್ ಅಲ್ಲಿಯೇ ಇದ್ದ. ಪೋಲಿಸ್ ಇನಸ್ಪೆಕ್ಟರ ಸಂಪತ್ ಕುಮಾರ್ ಸಂದಿಗ್ಧತೆಯಲ್ಲಿ ಬಂದರು. ಅಭಿಷೇಕ್, ಮಂಜುಳ  ಮದುವೆ ಆಗುತ್ತಿರುವ ಕಾರ್ತಿಕ್ ವಿರುದ್ಧ ದೂರು ಕೊಟ್ಟರೆ ಜಯರಾಜ್ ಮಗಳು ಕಾಣೆ ಆದ ಬಗ್ಗೆ.  ಕಲ್ಯಾಣ ಮಂಟಪದಲ್ಲಿ ಪರಿಸ್ಥಿತಿ ಗಂಭೀರ. ಅಲ್ಲಿರುವ ಜನರು ತಮ್ಮ ತಮ್ಮೊಳಗೆ ಗುಸು ಗುಸು ನಡೆದಿತ್ತು. ಮದುವೆ ಮಾಡಿಸುವ ಪುರೋಹಿತರು ಶುಭ ಮುಹೂರ್ತ ಮುಗಿಯುತ್ತಿದೆ ಮದು ಮಗಳು ಎಲ್ಲಿ? ಎಂದು ಪದೇ ಪದೇ ಕೇಳಿ ಸುಸ್ತಾದರು. 

ಮಂಜುಳ  ಹಾಗೂ ಅಭಿಷೇಕ್ ಲಾ ಕಾಲೇಜ್ ನಲ್ಲಿ ಕ್ಲಾಸ್ ಮೇಟ್ಸ. ಇಬ್ಬರೂ ಎರಡು ವರ್ಷಗಳ ಹಿಂದೆ ಲಾ ಡಿಗ್ರಿ ಮುಗಿಸಿದರು. ಪ್ರಾಕ್ಟೀಸ್ ಕೂಡಾ ಒಟ್ಟಿಗೆ ಶುರು ಮಾಡಿದರು. ಅವರಿಬ್ಬರಲ್ಲಿ ಪ್ರೇಮ ಅಂಕುರಿಸಿತು. 

********

ಪವನಪೂರದ ಪ್ರತಿಷ್ಟಿತ ವ್ಯಕ್ತಿ ರಾಮ ಕುಮಾರ್ ಅವರ ಏಕೈಕ ಪುತ್ರ ಕಾರ್ತಿಕ.  ಹತ್ತನೆ ತರಗತಿ ವರೆಗೆ ಓದಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಕೂಟ್ಟ. ತಾಯಿ ಇಲ್ಲದ ಮಗ ಎಂದು  ಪ್ರೀತಿಯಿಂದ ಬೆಳೆದ.  ದೊಡ್ಡವನಾದ ಮೇಲೆ 'ಸರ್ವಗುಣ ಸಂಪನ್ನ ಅವಗುಣ ಪರಿಪೂರ್ಣ' ಆದ. ಅವನು ಅಂದುಕೊಂಡದ್ದು ಆಗಲೇ ಬೇಕು ಎನ್ನುವ ಹಠ. ಮಂಜುಳ ಆಗಲೇ ಅಭಿಷೇಕ್ ನನ್ನು ಪ್ರೀತಿಸುತ್ತಿರುವದು  ಗೊತ್ತಿದ್ದರೂ ಆಕೆಯನ್ನು  ಮದುವೆ ಆಗುವ ಹಠ. ಅಭಿಷೇಕ್ ಬಗ್ಗೆ ಸುಳ್ಳು ಮಾಹಿತಿ ತಂದೆ ರಾಮಕುಮಾರ್ ಮೂಲಕ  ಆಕೆ ತಂದೆ ತಾಯಿ ಮೇಲೆ ಒತ್ತಡ ಹಾಕಿದ.  ಕೊನೆಗೆ ಮಂಜುಳ ತಂದೆ ತಾಯಿ ಒಪ್ಪಿದರು. ಇದಕ್ಕೆ  ಮಂಜುಳ ವಿರೋಧ ಮಾಡಿದರೂ  ಕಾರ್ತಿಕನನ್ನು ಒಪ್ಪುವಂತಹ ಸನ್ನಿವೇಶಗಳು ಸೃಷ್ಟಿ ಆದವು. 

ಮದುವೆ ಮಂಟಪದಲ್ಲಿ ಆದ ಒಂದು ನಿಮಿಷದ ಘಟನೆಯಲ್ಲಿ ಮಂಜುಳಾ ತಮ್ಮ ಎಂಟು ವರ್ಷದ ಪುಟ್ಟ ಕಿಲಾಡಿ ಕಿಟ್ಟು ಅಕ್ಕನನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದ. ಅಭಿಷೇಕ್  ಆಗಲೇ ಕಾರ್ತಿಕ ನ ದುರ್ಗುಣಗಳನ್ನು ಸಾಬೀತು ಪಡಿಸುವ ಮಾಹಿತಿ ಹಾಗೂ ಫೋಟೋಗಳನ್ನು ಸಂಗ್ರಹ ಮಾಡಿದ. ಅವುಗಳನ್ನು ನೋಡಿದ ಮಂಜುಳ ತಂದೆ ಗೆ ಜ್ಞಾನೋದಯ ವಾಯಿತು. ಆತ ಪೋಲಿಸ್ ಸ್ಟೇಷನ್ ನಲ್ಲಿ ದೂರು ವಾಪಸ್ ಪಡೆದ. ಅಭಿಷೇಕ್ ನ ದೂರು ಆಧಾರದಮೇಲೆ ಕಾರ್ತಿಕನನ್ನು ವಿಚಾರಣೆಗೆ ಒಳಪಡಿಸಿದರು. 

ಅದೇ ಕಲ್ಯಾಣ ಮಂಟಪದಲ್ಲಿ ಮಂಜುಳ ಅಭಿಷೇಕ್  ಮದುವೆ ಆಗಿ ಸುಖಾಂತ್ಯವಾಗುವದಕ್ಕೆ ಹಿಡಿದ ಸಮಯ ಕೇವಲ ಮೂರು ಗಂಟೆ. 

"ಅಭಿಷೇಕ್, ನೀನು ಸಾಮಾನ್ಯನಲ್ಲ. ನಾವು ಒಂದಾಗಲು ನಿನ್ನ ಬುದ್ಧಿಮತ್ತೆ ಜೊತೆಗೆ ಛಲ ಕಾರಣ."

"ನಿನ್ನನ್ನು ಬಾಳ ಸಂಗಾತಿ ಮಾಡಿಕೊಳ್ಳಲು ಇದೆಲ್ಲ ಅನಿವಾರ್ಯ.

"ಪ್ರೇಮಿಗಳ ಮಧ್ಯ ಬಿರುಕು ತಂದವನ ಗತಿ ಏನಾಯಿತು?"

"ಕಂಬಿ ಎಣಿಸುವ ಅಧೋಗತಿ ಬಂದಿತು."

"ಪುಟ್ಟ ಕಿಟ್ಟುನ ಕೆಲಸ ಎಲ್ಲರ ಮೆಚ್ಚುಗೆ ಆಯಿತು."

ನವ ದಂಪತಿ ಹಾಸ್ಯದಲ್ಲಿ ಪುಟ್ಟ ಕಿಟ್ಟು ಬಿದ್ದು ಬಿದ್ದು ನಕ್ಕ.


Rate this content
Log in

Similar kannada story from Romance