KvKàsthûrï Ràm

Tragedy Inspirational

3.8  

KvKàsthûrï Ràm

Tragedy Inspirational

"ಪ್ರಾದಾತ"

"ಪ್ರಾದಾತ"

2 mins
23.6K


"ವೈದ್ಯೋ ನಾರಾಯಣೋ ಹರಿಃ"

ಇಂದು ವಿಶ್ವಕ್ಕಂಟಿರುವ ಸೋಂಕನ್ನು ತೊಳೆಯುತ್ತಿರುವ ಎಲ್ಲ ವೈದ್ಯರು, ದಾದಿಯರಿಗೆ ಸಾಷ್ಟಾಂಗ ನಮಸ್ಕಾರಗಳು...


ವೈದ್ಯರು ಇಂದು ಮಾನಸಿಕ, ಶಾರೀರಕ ಖಾಯಿಲೆಗಳಿಂದ ಜನರನ್ನು ಕಾಪಾಡಿಕೊಂಡು ಬಂದಿದ್ದಾರೆ....

ಆದ್ದರಿಂದಲೆ, ಅವರಿಗೆ ದೇವರ ಸ್ಥಾನ .....

ಹಾಗೆ ಮಾನಸಿಕ, ಶಾರೀರಕ ಖಾಯಿಲೆಗಳಿಂದ ಉಪಶಮನವನ್ನು ನೀಡಬೇಕಾದರೆ ಒಬ್ಬ ವೈದ್ಯ ’ ತಾಯಿ ’, ’ ತಂದೆ ’, ’ ಗುರು ’ ಪಾತ್ರಗಳಲ್ಲಿ ತಪ್ಪದೇ ಜೀವಿಸಬೇಕು. ಹಾಗೆ ಜೀವಿಸಿದಾಗಲೇ “ವೈದ್ಯೋ ನಾರಾಯಣೋ ಹರಿ” ಎಂಬುವ ಪದಪ್ರಯೋಗ ಆ ವೈದ್ಯನಿಗೆ ಅನ್ವಯಿಸುತ್ತದೆ.

ಇಂದಿನ ಪರಿಸ್ಥಿತಿಯಲ್ಲಿ ತಾಯಿಯಾಗಿ, ತಂದೆಯಾಗಿ, ಗುರುವಾಗಿ ತಮ್ಮ ಮನೆ, ಸಂಸಾರಗಳನ್ನು ತೊರೆದು ದೇಶ ಸೇವೆ ಮಾಡುತ್ತಿರುವ ಎಲ್ಲರೂ ವಂದನಾರ್ಹರು....

ಇಂದು ವೈದ್ಯರು, ದಾದಿಯರು ಸಮಚಿತ್ತವೃತ್ತಿಯುಳ್ಳವರಾಗಿ ಮೇಲು-ಕೀಳು, ಬಡವ-ಬಲ್ಲಿದ, ಸ್ತ್ರೀ-ಪುರುಷ, 

ಒಳ್ಳೆಯವ-ಕೆಟ್ಟವ ಎನ್ನುವ ಯಾವುದೇ ಬೇಧ - ಭಾವವಿಲ್ಲದೆ 

ಸಕಲರನ್ನೂ ಸಮಾನವಾಗಿ ಕಾಪಾಡುತ್ತಿರುವವರಾದ್ದರಿಂದ ಅವರೆಲ್ಲರೂ ನಾರಾಯಣ ಸ್ವರೂಪರೇ....

ಈ ಮಹಾಮಾರಿಯ ಶುಶ್ರೂಷೆಯ ಸಮಯದಲ್ಲಿ ತಮ್ಮ ಪ್ರಾಣಗಳನ್ನು ಪಣವಾಗಿಟ್ಟು ಬಲಿಯಾಗಿ ಹೋದ ವೈದ್ಯರಿಗೆ ಅಶ್ರುಗಳ ಅಂಜಲಿ.....


ವಿಶ್ವದ ಮೊದಲ ವೈದ್ಯೆ ಅಮ್ಮನೇ....

ಈಗ ಅಮ್ಮನಾಗಿದ್ದ ಆಗಿನ ಕಾಲಕ್ಕೇ ನರ್ಸ ಕೆಲಸ ಅದರಲ್ಲೂ ಪ್ರಸೂತಿಯಲ್ಲಿ ಪಳಗಿದ ಕೈ ಅವರದಾಗಿತ್ತು...

ಮದುವೆಯ ನಂತರ ತನ್ನ ಗಂಡ ಹಾಗೂ ಅವರ ಮನೆಯವರ ಒತ್ತಾಯದ ಮೇರೆಗೆ ಕೆಲಸ ನಿಲ್ಲಿಸಿದ್ದಾಗಿತ್ತು....

ಆದರೆ ಕಲಿತ ಕೆಲಸ ಅಷ್ಟು ಸುಲಭವಾಗಿ ಮರೆಯಲಾಗುವುದಿಲ್ಲ ಅಲ್ವ ಹಾಗಾಗಿ ಆ ಊರಿನ ಎಲ್ಲ ಗರ್ಭಿಣಿಯರು ಸಲಹೆಗಳಿಗಾಗಿ ಇವರ ಬಳಿಯೇ ಬರುತ್ತಿದ್ದಿದ್ದು....

ರಾತ್ರಿ ಯಾವುದೇ ಸಮಯದಲ್ಲಿ ಬಂದು ಕರೆದರೂ ಕಸಿವಿಸಿಗೊಳ್ಳದೆ ಹೋಗಿ ಪ್ರಸೂತಿ ಮಾಡಿ ಬರುತ್ತಿದ್ದರು...

ಒಂದು ದಿನ ತನ್ನ ಎದುರು ಮನೆಯ ಫಿಲೋಮಿನ ತನ್ನ ಮಹಡಿಯ ಮೇಲೆ ನಿಂತು ಅಳುತ್ತಿದ್ದಿದ್ದು ಕಂಡಿತ್ತು...

ಅವಳಿಗಾಗಲೇ ಒಂಭತ್ತು ತಿಂಗಳ ತುಂಬು ಗರ್ಭಿಣಿ...

ಆದರೆ ಅವಳ ಅತ್ತೆಗೂ ತನ್ನ ಅತ್ತೆಗೂ ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಅವರೊಂದಿಗೆ ಯಾವುದೇ ರೀತಿಯ ಮಾತು ಕತೆ ಮಾಡಬಾರದೆಂದು ಕಟ್ಟುನಿಟ್ಟಾಗಿ ಹೇಳಿದ್ದರು....

ಆದರೆ ಫಿಲೋಮಿನಳ ಗಂಡ ದುಬೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಹೋಗಿದ್ದವನ ಸಂಬಳ ಬರುವುದು ಕೊಂಚ ತಡವಾದರೆ ಅವಳ ಅತ್ತೆ ಫಿಲೋಮಿನಳಿಗೆ ಕಿರುಕುಳ ಕೊಡುವುದು ಸಾಮಾನ್ಯವಾಗಿತ್ತು....

ಅವಳ ಮುಖವನ್ನು ನೋಡುತ್ತಿದ್ದರೆ ಅವಳಿಗೆ ಪ್ರಸವ ವೇದನೆ ಬಂದಂತೆ ಖಾತ್ರಿಯಾಗಿತ್ತು....

ಹಾಗೇ ನೋಡ ನೋಡುತ್ತಿದ್ದಂತೆ ಅವಳು ತನ್ನ ಮಹಡಿಯಿಂದ ಜಿಗಿಯಲು ಪ್ರಯತ್ನಿಸುವುದು ಕಂಡು ತನಗೆ ಮನೆಯಲ್ಲಿ ಕೈ ಕಟ್ಟಿ ಕೂರಲಾಗಲಿಲ್ಲ.... ಕೆಳಗಿನಿಂದಲೇ ಫಿಲೋಮಿನಳನ್ನು ಜೋರಾಗಿ ಗದರಿಕೊಂಡು ಧಾವಿಸಿದ್ದರು ಅವರ ಮಹಡಿಯ ಮೇಲಕ್ಕೆ....

ಹಿಂದಿನಿಂದ ತನ್ನ ಅತ್ತೆಯ ಕರೆಯನ್ನೂ ಲೆಕ್ಕಿಸದೆ ಓಡಿದ್ದರು....

ಹೋದವರೇ ಫಿಲೋಮಿನಳ ಅತ್ತೆಗೆ ಒಂದು ಶುದ್ಧವಾದ ಕತ್ತರಿ ಹಾಗೂ ಬಿಸಿ ನೀರು ತೆಗೆದುಕೊಂಡು ಬರಲು ಹೇಳಿದ್ದರು ಗಡುಸಾಗೇ...

ತನ್ನ ದನಿಗೆ ಭಯಗೊಂಡಂತೆ ಅವರು ಒಳಗೆ ಹೋಗಿದ್ದರು...

ಮೇಲೆ ಹೋಗಿ ಫಿಲೋಮಿನಳ ನಾಡಿ ಹಿಡಿದು ನೋಡಿ ಅವಳನ್ನು ಕರೆತಂದು ಚಾಪೆಯ ಮೇಲೆ ಕಾಲು ಮಡಿಸಿ ಮಲಗುವಂತೆ ಹೇಳಿದ್ದರು....

ತನಗೆ ಪ್ರಸವದ ನೋವಿಗಳು ಆರಂಭವಾಗಿದೆ ಎಂದು ಹೇಳಿದ್ದಳು ತನ್ನ ಅತ್ತೆಗೆ ಫಿಲೋಮಿನ....

ಆದರೆ ಅವರು ತಮ್ಮ ಬಳಿ ಹಣವಿಲ್ಲ ನಿನ್ನ ಗಂಡ ಹಣ ಕಳಿಸಿದ ಮೇಲೆ ಕರೆದುಕೊಂಡು ಹೋಗುವೆ ಎಂದು ಕಡ್ಡಿ ತುಂಡು ಮಾಡಿದಂತೆ ಒದರಿಕೊಂಡಿದ್ದರು....

ನೋವು ತಡೆಯಲಾರದೆ ಫಿಲೋಮಿನ ಮೇಲಿಂದ ಬೀಳುವ x ಮಾಡಿದ್ದಳು....

ಆದರೆ ಅವಳ ಮತ್ತು ಅವಳ ಮಗುವಿನ ಆಯಸ್ಸು ಗಟ್ಟಿಯಾಗಿದ್ದಿದ್ದರಿಂದ ಈ ತಾಯಿಯ ಕಣ್ಣಿಗೆ ಬಿದ್ದಿದ್ದಳು...

ಬಿಸಿ ನೀರು ಕತ್ತರಿ ಹಿಡಿದು ಬಂದ ಫಿಲೋಮಿನಳ ಅತ್ತೆಯನ್ನು ಬಂದು ಒಳಗೆ ಕೂರುವಂತೆ ಹೇಳಿ ಫಿಲೋಮಿನಳಿಗೆ ಪ್ರಸೂತಿಯನ್ನು ಮಾಡಿದ್ದರು....

ಫಿಲೋಮಿನಳ ನೋವು ಅವಳ ಅತ್ತೆಯ ಹೃದಯವನ್ನು ಕರಗಿಸಿತ್ತು....

ಅವರಿಗೇ ಅರಿವಿಲ್ಲದಂತೆ ಬಂದು ಫಿಲೋಮಿನಳ ತಲೆಯ ಹತ್ತಿರ ಕುಳಿತು ಅವಳಿಗೆ ಧೈರ್ಯವನ್ನು ಹೇಳಲಾರಂಭಿಸಿದ್ದರು....

ಕೊಂಚ ಸಮಯದಲ್ಲೇ ಗಂಡು ಮಗುವೊಂದು ಭೂಮಿಗೆ ಬಂದಿತ್ತು....

ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದ ನಂತರ ಮಗುವನ್ನು ಬಿಸಿನೀರಿನಲ್ಲಿ ಒರೆಸಿ ಕಸವನ್ನೆಲ್ಲ ತೆಗೆದು ತನ್ನ ಮನೆಗೆ ಹೋಗುವಾಗ ಫಿಲೋಮಿನ ಆ ತಾಯಿಯ ಕಾಲುಗಳಿಗೆ ವಂದಿಸಿದ್ದಳು....

ಇವೆಲ್ಲ ಮಾಡ್ಬಾರದು ಎಂದು ಪ್ರೀತಿಯಿಂದ ಗದರಿಕೊಂಡು ಫಿಲೋಮಿನಳ ಅತ್ತೆಗೆ ಸ್ವಲ್ಪ ಚನ್ನಾಗಿ ನೋಡ್ಕೋಮ್ಮ ಎಂದು ಹೇಳಿ ಬಾಗಿಲ ಬಳಿಗೆ ಹೋಗುವಷ್ಟರಲ್ಲಿ....

ಅಮ್ಮ ನನ್ನ ಮಗನಿಗೆ ನಿಮ್ಮ ಹೆಸರೇ ಇಡ್ತೀನಿ ಎಂದಿದ್ದಳು ಫಿಲೋಮಿನ....

ಅಚ್ಚರಿಯಿಂದ ಹಿಂದೆ ತಿರುಗಿ ಒಮ್ಮೆ ನೋಡಿ ಮುಂದೆ ನಡೆದಿದ್ದರು....

ಫಿಲೋಮಿನಳ ಮಗ ಕೃಷ್ಣನಾಗಿ ಬೆಳೆದಿದ್ದ...

ಇಷ್ಟಕ್ಕೂ ಆ ತಾಯಿಯ ಹೆಸರು ಕ್ರಿಷ್ಣಮ್ಮ.....



Rate this content
Log in

More kannada story from KvKàsthûrï Ràm

Similar kannada story from Tragedy