Surabhi Latha

Abstract Classics Inspirational

4  

Surabhi Latha

Abstract Classics Inspirational

ಫೇಸ್ ಬುಕ್ -- ಕಥೆ

ಫೇಸ್ ಬುಕ್ -- ಕಥೆ

1 min
713



ವಯಸ್ಸಾದ ಇಬ್ಬರು ಮುದುಕರು ಲ್ಯಾಪ್‌ಟಾಪ್ ಅಂಗಡಿಗೆ ಒಂದು ಹೊಸದಾದ ಲ್ಯಾಪ್‌ಟಾಪ್ ಕೊಂಡು ಕೊಳ್ಳಲು ಬಂದರು . 

ಲ್ಯಾಪ್‌ಟಾಪ್ ಖರೀದಿಸಿ ಅಲ್ಲೇ ಇಂಟರ್ನೆಟ್ ಕನೆಕ್ಷನ್ ಹಾಕಿಸಿಕೊಂಡು ಒಬ್ಬ ಹುಡುಗನ ಬಳಿ ಬಂದರು . 

ಅವನಲ್ಲಿ ಫೇಸ್ ಬುಕ್ ಅಕೌಂಟ್ ಮಾಡಿಕೊಡಲು ಕೇಳಿಕೊಂಡರು . ಹುಡುಗ ನಗುತ್ತಲೇ ಒಪ್ಪಿಕೊಂಡ . 


ಹುಡುಗ : ಹೇಳಿ ತಾತ ಯಾವ ಹೆಸರಲ್ಲಿ ಅಕೌಂಟ್ ಮಾಡಲಿ ?? 

ತಾತ :ಯಾವುದಾದರೂ ಒಂದು ಒಳ್ಳೆಯ ಹುಡುಗಿ ಹೆಸರು ಇಡು ಮಗು . 


ಹುಡುಗ : fake ಅಕೌಂಟಾ ?? 


ತಾತ : ಹೌದು, ಮಾಡು ಹೇಳುತ್ತೇನೆ .

ಹುಡುಗ : ಪ್ರೂಫೈಲ್ ನಲ್ಲಿ ಯಾವ ಫೋಟೋ ಹಾಕಲಿ ? 

ತಾತ ; ಒಳ್ಳೆಯ ಹೆಸರು ಮಾಡಿರುವ ಚೆನ್ನಾಗಿರುವ ಒಂದು ಹಿರೋಇನ್ ಫೋಟೋ ಹಾಕು .. 

ಈಗ ಒಳ್ಳೊಳ್ಳೆಯ ಗೆಳೆಯರಿಗೆ ಗೆಳೆತನದ ಕೋರಿಕೆ ಕಳಿಸು . ನಾನು ಹೇಳಿದ ಹೆಸರಿಗೂ ಕಳಿಸು 


ಹುಡುಗ ಹೇಳಿದಂತೆಲ್ಲಾ ಮಾಡಿದ. ಒಂದು ಫೇಕ್ ಫೇಸ್ ಬುಕ್ ಅಕೌಂಟ್ ರೆಡಿಯಾಯಿತು.


ಹುಡುಗ ; ಈಗ ಹೇಳಿ ತಾತ ಯಾಕೆ ಈ fake ಅಕೌಂಟ್ ?? 


ಆ ಮುದುಕರ ಕಣ್ಣಿನಿಂದ ಕಣ್ಣೀರು ಬರಲಾಯಿತು . 


ತಾತ : ನೋಡು ಕಂದ ನನಗೆ ಒಬ್ಬನೇ ಮಗ ಅವನಿಗೆ ಮದುವೆಯಾದೊಡನೆ ನಮ್ಮನ್ನು ದೂರ ಮಾಡಿದ. ಕೇಳಿದರೆ ಅವನ ಹೆಂಡತಿಗೆ "ನೀವೆಂದರೆ ಇಷ್ಟ ಇಲ್ಲ ಅವಳಿಗೆ ಸೇವೆ ಮಾಡಲು ಸಾದ್ಯವಿಲ್ಲ ನೀವು ಇದೇ ಮನೆಯಲ್ಲಿ ಇರಿ ಎಂದು ಇಲ್ಲೇ ನಮ್ಮನ್ನು ಬಿಟ್ಟು ಹೋದ . ಅವನಿಗೆ ಈಗ ಎರಡು ಮಕ್ಕಳು . ಒಂದು ಗಂಡು , ಹೆಣ್ಣು . ಆ ಮೊಮ್ಮಕ್ಕಳನ್ನು ನೋಡುವ ಆಸೆ ಆದರೆ ನಾವು ಹೋಗುವಂತೆ ಇಲ್ಲ. ಪೇಸ್ ಬುಕ್ ನಲ್ಲಿ ಎಲ್ಲರೂ ಅವರವರ  ಕುಟುಂಬ ಸದಸ್ಯರ  ಪಟಗಳನ್ನು ಹಾಕಿರುತ್ತಾರೆ ಎಂದು ಯಾರೋ ಹೇಳಿದರು.  ನಾವು  ಅಕೌಂಟ್  ತೆಗೆದರು ಯಾರು ನಮ್ಮನ್ನು friend ಮಾಡಿಕೊಳ್ಳುವುದಿಲ್ಲ . ಹಾಗಾಗಿ ಬೇರೆ ಹೆಸರಿನಲ್ಲಿ  ಮಾಡಿದರೆ ಮಗ ಮೊಮ್ಮಕ್ಕಳು friend ಮಾಡಿಕೊಳ್ಳುತ್ತಾರೆ . ಆಗ ಅವರ ಫೋಟೋ ನೋಡಿಯಾದರೂ ಸಂತಸ ಕೊಳ್ಳಬಹುದು  ಎಂದು ಅಷ್ಟೇ  ಮಗು . 

ಎಂದು ಕಣ್ಣೀರು ಸುರಿಸಿದರು ..

ಅವರ ನೋವು ನೋಡಿ ಆ ಹುಡುಗನ ಮನ  ಕರಗಿತು ತಾನು ಅವರಿಗೆ friend ಆದ .



Rate this content
Log in

Similar kannada story from Abstract