Vaman Acharya

Romance Classics Others

4  

Vaman Acharya

Romance Classics Others

ಪಾರೋ ನಿನ್ನ ಜೀವನ್ ಸಾಥಿ ಯಾರೋ…..?

ಪಾರೋ ನಿನ್ನ ಜೀವನ್ ಸಾಥಿ ಯಾರೋ…..?

5 mins
448


ಪಾರೋ ನಿನ್ನ ಜೀವನ್ ಸಾಥಿ ಯಾರೋ…..?

ರಾಘವಪುರ ನಗರದ ಜನ ನಿಬಿಡವಾದ ಮಹಾತ್ಮಾ ಗಾಂಧಿ ಮುಖ್ಯ ರಸ್ತೆಯಲ್ಲಿ ಅಂದು ಬಿಕೋ ಎನ್ನುವದಕ್ಕೆ ಕಾರಣ ಬೆಳಗ್ಗೆ ಆರು ಗಂಟೆ ಯಿಂದ ಸಾಯಂಕಾಲ ಆರು ಗಂಟೆ ವರೆಗೆ ಕೋವಿಡ್ ಲಾಕ್ ಡೌನ್ ಸಲುವಾಗಿ ಕರ್ಫು ಜಾರಿ ಮಾಡಿದ್ದರು. ಬೆಳಗ್ಗೆ ಸುಮಾರು ಹತ್ತು ಗಂಟೆಗೆ ಒಬ್ಬ ಯುವಕ ಸಾಯಿಕಲ್ ಮೇಲೆ ವೇಗವಾಗಿ ರಸ್ತೆಯ ಮೇಲೆ ಹೋಗುತ್ತಿರುವದನ್ನು ನೋಡಿದ ಕರ್ತವ್ಯ ನಿರತನಾದ ಪೊಲೀಸ್ ಅಧಿಕಾರಿ ಅವನನ್ನು ನಿಲ್ಲಿಸಿದ. ಇನ್ನೇನು ಆ ಯುವಕನಿಗೆ ಲಾಠಿ ಪ್ರಹಾರ ಮಾಡಬೇಕು ಎನ್ನುವ ದರಲ್ಲಿ ಅಲ್ಲಿಯೇ ಅವನ ದಾರಿ ಕಾಯುತಿದ್ದ ಹರಕು ಸೀರೆ ಉಟ್ಟ, ಬಾಚದೆ ಇರುವ ತಲೆ ಕೂದಲು ಇರುವ, ಬರಿಕಾಲಿನಲ್ಲಿ ಓಡುತ್ತಿರುವ ನೋಡಲು ಕೂಲಿ ಕೆಲಸದವಳು ಹಾಗೆ ಇರುವ ಹುಡುಗಿ ಬಂದು ಪೊಲೀಸ್ ಅಧಿಕಾರಿಯನ್ನು ತಡೆದಳು. 

"ಏನ್ರಿ, ಪೊಲೀಸ್ ಸಾಹೇಬರೇ, ಈ ಯುವಕನ ಹೆಸರು ಶಿವು ಕೂಲಿ ಕಾರ್ಮಿಕ. ಎದುರಿಗೆ ಕಾಣುತ್ತಿರುವ ಬೊರ್ಡ್ ವಿಶಾಲ್ ಕಟ್ಟಡ ನಿರ್ಮಾಣ ಕಂಪನಿ ಯವರು ಕಟ್ಟುತ್ತಿರುವ ಬಹು ಮಹಡಿ ಕಟ್ಟಡದಲ್ಲಿ ಇವನು ಗಾರೆ ಕೆಲಸ ಮಾಡುವನು. ಇವನ ತಾಯಿ ತೀವ್ರ ಶೀತ ಜ್ವರ ದಿಂದ ಸೈಟ್ ನ ತಾತ್ಕಾಲಿಕ ಶೆಡ್ ನಲ್ಲಿ ಮಲಗಿದ್ದಾಳೆ. ಆಕೆಗೆ ಮೆಡಿಕಲ್ ಸ್ಟೋರ್ ನಲ್ಲಿ ಮಾತ್ರೆ ತೆಗೆದುಕೊಂಡು ಅವಸರದಲ್ಲಿ ಬರುವಾಗ ನೀವು ಅವನನ್ನು ನಿಲ್ಲಿಸಿದಿರಿ. ಕಾನೂನು ಉಲ್ಲಂಘನೆ ಮಾಡಿರುವದರಿಂದ ಅವನು ತಪ್ಪಿತಸ್ತ. ಅವನ ಪರಿಸ್ಥಿತಿ ಅರಿತು ದಯಮಾಡಿ ಅವನಿಗೆ ಬಿಟ್ಟು ಬಿಡಿ," ಎಂದು ಕೈಜೋಡಿಸಿ ಬೇಡಿಕೊಂಡಳು.

ಆಗ ಪೊಲೀಸ್ ಅಧಿಕಾರಿಗೆ ಕೂಲಿ ಕೆಲಸ ಮಾಡುವ ಈ ಹುಡುಗಿ ಇಷ್ಟೆಲ್ಲ ಧೈರ್ಯದಿಂದ ಸ್ಪಷ್ಟವಾಗಿ ವಿದ್ಯಾವಂತರ ಹಾಗೆ ಮಾತನಾಡುವುದು ನೋಡಿ ಆಶ್ಚರ್ಯ ಹಾಗೂ ಕನಿಕರ ಬಂದರೂ,

"ಇಷ್ಟು ದೊಡ್ಡ ದೊಡ್ಡ ಮಾತಾಡುತ್ತಿ, ನೀನೂ ಕೂಡಾ ಹೊರಗೆ ಬಂದು ಕಾನೂನು ಉಲ್ಲಂಘನೆ ಮಾಡಿದ್ದಿ. ಇಬ್ಬರಿಗೂ ಶಿಕ್ಷೆ ಆಗಲೇಬೇಕು."

"ಹೌದು ಸರ್, ನನಗೆ ಶಿಕ್ಷೆ ಕೊಡಿ. ಆದರೆ ಇವನನ್ನು ಬಿಟ್ಟು ಬಿಡಿ. ಪಾಪ! ಅವನ ಅಮ್ಮನ ಸ್ಥಿತಿ ಗಂಭೀರ ವಾಗಿದೆ."

ಆಗ ಪೊಲೀಸ್ ಅಧಿಕಾರಿ ಇಬ್ಬರಿಗೂ ವಾರ್ನ್ ಮಾಡಿ ಬಿಟ್ಟರು.

ಪಾರೋ ಗೆ ತಂದೆ ತಾಯಿ ಇಟ್ಟ ಹೆಸರು ಪಾರ್ವತಿ.

 ಪಾರೂ ಮತ್ತು ಶಿವು ಇಬ್ಬರೂ ಸೈಟ್ ಗೆ ಹೋದರು ಮಗ ಬರುವ ಮೊದಲೇ ತಾಯಿ ಇಹಲೋಕ ತ್ಯಜಿಸಿದ್ದಳು. ಶಿವು ಗೆ ಅತೀವ ದುಃಖವಾಗಿ ಒಂದೇ ಸಮನೆ ಅಳುತ್ತ ನೆಲದಮೇಲೆ ಎಚ್ಚರ ತಪ್ಪಿ ಕುಸಿದು ಬಿದ್ದ. ಪಾರು ತುಂಬಾ ಗಾಬರಿ ಆದಳು. ಆದರೂ ಧೈರ್ಯ ತಂದುಕೊಂಡು ಶಿವು ಗೆ ಸಾಂತ್ವನ ಹೇಳಿದಳು. ಗುತ್ತೇದಾರ ಬಂದು ಕೂಲಿ ಕಾರರ ಸಹಾಯದಿಂದ ಶವದ ಅಂತ್ಯ ಸಂಸ್ಕಾರ ಮುಗಿಸಿ  ಎಲ್ಲಾ ಖರ್ಚು ಅವನೇ ಕೊಟ್ಟ. ಪಾರು ಮತ್ತು ಶಿವು ಈ ದುಃಖಕರ ಘಟನೆ ನಂತರ ಮೇಲಿಂದ ಮೇಲೆ ಭೇಟಿ ಆಗುವದರಿಂದ ಅವರಿಬ್ಬರಲ್ಲಿ ಅನ್ಯೋನ್ನತೆ ಜೊತೆಗೆ ಪ್ರೀತಿ ಹೆಚ್ಚಿಗೆ ಆಯಿತು. ಶಿವು ಬಿಹಾರ್ ದಿಂದ ಬಂದರೆ ಪಾರೋ ಪಶ್ಚಿಮ ಬಂಗಾಲದಿಂದ ಬಂದವಳು. 

ಪಾರು ಕೂಡಾ ಸಮೀಪದ ಇನ್ನೊಂದು ಸೈಟ್ ನಲ್ಲಿ ಕಟ್ಟಡ ನಿರ್ಮಾಣ ನಡೆಯುತ್ತಿರುವ ಪ್ರಭಾತ ಗುತ್ತೇದಾರ ಅವರ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುವ ಹುಡುಗಿ. ಶಿವು ಹಾಗೂ ಪಾರು ಇಬ್ಬರೂ ಕೇವಲ ಹದಿನೈದು ದಿವಸಗಳ ಹಿಂದೆ ಅಪರಿಚಿತರು. ಒಂದು ವಾರದ ಹಿಂದೆ ವಿಶಿಷ್ಟ ಸಂದರ್ಭದಲ್ಲಿ ಪರಿಚಿತರು ಆದರು. ಕೇವಲ ಪರಿಚಯ ಅಷ್ಟೇ ಅಲ್ಲ ಪ್ರೀತಿ, ಪ್ರೇಮ ಮಾತುಗಳು ನಡೆದವು. 

ಅಂತಹ ವಿಶಿಷ್ಟ ಸಂದರ್ಭ ಯಾವುದು?

ಮೂರು ದಿವಸಗಳ ಹಿಂದೆ ಪಾರೂ ಕೆಲಸ ಮಾಡುವ ಸೈಟ್ ನಲ್ಲಿ ಮಧ್ಯಾನ್ಹ ಹನ್ನೆರಡು ಗಂಟೆಗೆ ಆರು ತಿಂಗಳು ಪುಟ್ಟ ಕಂದಮ್ಮ ತಾತ್ಕಾಲಿಕ ಶೆಡ್ ನಲ್ಲಿ ಒಂದೇ ಸಮನೆ ಅಳುತ್ತ ಇತ್ತು. ಮಗು ನ ತಾಯಿ ಅಲ್ಲಿರಲಿಲ್ಲ. ಅದೇ ಸಮಯಕ್ಕೆ ಪಾರೂ ಹಾಗೂ ಒಬ್ಬ ಯುವಕ  ಆ ಕಡೆಯಿಂದ ಹೋಗುತ್ತಿದ್ದರು. ಪಾರೂ ಗೆ ಮಗುವಿನ ಆಕ್ರಂದನ ಸಹಿಸಲಾಗದೆ ಆ ಮಗು ಹತ್ತಿರ ಹೋದಳು. ಆ ಯುವಕ ಆಕೆಯನ್ನು ಹಿಂಬಾಲಿ ಸಿದ. ಮಗು ಎತ್ತಿಕೊಂಡು ಅದಕ್ಕೆ ಸಮಾಧಾನ ಮಾಡಲು ಹೋದ ಪಾರೂಗೆ ನಿರಾಸೆ ಆಯಿತು. ಕಾರಣ ಮಗು ಆಕೆ ಹತ್ತಿರ ಬರದೇ ಇನ್ನು ಜೋರಾಗಿ ಅಳ ತೊಡಗಿತು. ಯಾರ ಮಗು ಎಂದು ಬೇಗನೆ ಆಕೆಗೆ ಗೊತ್ತಾಗಲಿಲ್ಲ.  ಹಿಂದೆ ಇದ್ದ ಆ ಯುವಕ ಮಗು ವನ್ನು ಎತ್ತಿಕೊಂಡಾಗ ಮಗು ಅಳುವದ ನ್ನು ಬಿಟ್ಟು ಅದರ ಮುಖದ ಮೇಲೆ ಮಂದಹಾಸ ವಾಗಿ ನಗ ತೊಡಗಿತು. ಮುಗ್ದ ಮಗುವಿನ ನಗು ಕಂಡು ಇಬ್ಬರಿಗೂ ಅಲ್ಲಿಂದ ಹೋಗಲು ಮನಸ್ಸು ಆಗಲಿಲ್ಲ.  ಆ ಸಮಯ ದಲ್ಲಿ ಇಬ್ಬರೂ ಪರಿಚಯ ಮಾಡಿ ಕೊಂಡರು. ಆ ಯುವಕ ಶಿವು ಎಂದು ತಿಳಿಯಿತು. ಅವನಿಗೆ ತಾನು ಪಾರೋ ಎಂದು ಹೇಳಿದಳು. ಪಾರೋ ಗ  ಶಿವು ನ ಮೇಲೆ ಪ್ರೀತಿ ಅಂಕುರ ವಾಯಿತು. ಆದರೆ ಹೇಗೆ ಹೇಳಬೇಕು ಎನ್ನುವ ಪ್ರಶ್ನೆ ಆಕೆಯನ್ನು ಕಾಡಿತು. ಅದರಂತೆ ಅವನಿಗೂ ಆಯಿತು. ಅವನಿಗೆ ತಡೆಯಲು ಆಗದೇ, 

"ಪಾರೋ ನಿನ್ನ ಜೀವನ್ ಸಾಥಿ ಯಾರೋ?" ಎಂದ.

"ಸರಿಯಾದ ಸಮಯ, ಸರಿಯಾದ ಸ್ಥಳದಲ್ಲಿ ಹೇಳುವೆ," ಎಂದಳು 

ಅಷ್ಟರಲ್ಲಿ ಮಗುವಿನ ತಾಯಿ ಬಂದು ಇಬ್ಬರನ್ನೂ ನೋಡಿ ಪಾರೂ ಎಂದು ಗೊತ್ತಿದ್ದರೂ,  "ಮಗು ಕಳ್ಳರು, ಮಗು ಕಳ್ಳರು. ನನ್ನ ಮಗುವನ್ನು ಎತ್ತಿಕೊಂಡು ಹೋಗುವರು.  ಇವರನ್ನು ಬೇಗನೆ ಹಿಡಿದು ಕೊಂಡು ಪೊಲೀಸ್ ರಿಗೆ ಒಪ್ಪಿಸಿ ಎಂದು ಎದೆ ಬಡಿದು ಕೊಂಡು ಅಳುತ್ತ ಜೋರಾಗಿ ಕೂಗುವ ನಾಟಕ ಮಾಡಿದಳು. ಸಮೀಪದಲ್ಲಿ ಇರುವ ಜನ ಬಂದು ಮಗುವನ್ನು ತಾಯಿಗೆ ಕೊಟ್ಟು ಅವರಿಬ್ಬರನ್ನು ಸಮೀಪದ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋದರು. ಅಲ್ಲಿ ಪೊಲೀಸ್ ಅಧಿಕಾರಿಗೆ ಆ ಹುಡುಗಿ ಯಾರು ಎಂದು ನೆನಪು ಮಾಡಿಕೊಂಡರು. ಈ ಮೊದಲು ಅವರಿಗೆ ಆಕೆಯನ್ನು ನೋಡಿದ ನೆನಪು. ಆದರೆ ಎಲ್ಲಿ ಎಂದು ಗೊತ್ತಾಗಲಿಲ್ಲ.

ಅಪರಾಧಿ ಸ್ಥಾನದಲ್ಲಿ ಇರುವವರನ್ನು ನೆಲದ ಮೇಲೆ ಕೂಡಲು ಹೇಳಿದರು. ದೂರು ಕೊಟ್ಟ ತಾಯಿ ಭದ್ರಮ್ಮ ಎಂದು ಎಫ್ ಐ ಆರ್ ನಲ್ಲಿ ಬರೆದು ಕೊಂಡರು. ಭದ್ರಮ್ಮ ಜೊತೆಗೆ ಆಕೆಯ ಸೋದರ ಶಂಭು ಬಂದಿದ್ದ. ಇಬ್ಬರೂ ಅಲ್ಲಿಯೇ ಕೆಳಗೆ ಕುಳಿತಳು.

ಇನ್ಸ್ಪೆಕ್ಟರ್ ಮೊದಲು ಪಾರೂ ಗೆ ಕೇಳಿದರು.

" ಪಾರೋ ಮಗು ಕಳ್ಳತನ ಮಾಡುವ ಪ್ರಯತ್ನ ಏಕೆ ಮಾಡಿದೆ. ನಿನ್ನ ಜೊತೆಗೆ ಇರುವ ಇವನು ಯಾರು?"

"ಸರ್, ಮಗು ಕಳ್ಳಿ ನಾನಲ್ಲ. ಅಳುತ್ತಿರುವ ಮಗುವನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದೆ. ಇದು ಅಪರಾಧಿ ಎಂದರೆ ನಾನು ಯಾವ ಶಿಕ್ಷೆಗೂ ಸಿದ್ಧ. ಆದರೆ ಅದಕ್ಕಿಂತ ಮೊದಲು ಈ ಭದ್ರಮ್ಮ ಬಗ್ಗೆ ಹೇಳುವೆ. ನಾನು ಕೆಲಸ ಮಾಡುವ ಸೈಟ್ ನಲ್ಲಿ ಶಂಭು ಎನ್ನುವ ಭದ್ರಮ್ಮ ನ ಒಡ ಹುಟ್ಟಿದ ಕಿರಿಯ ಸೋದರ ಪೇ0ಟರ್ ಎಂದು ಕೆಲಸ ಮಾಡುವನು. ಇವನನ್ನು ಮದುವೆ ಮಾಡಿಕೊ ಎಂದು ಭದ್ರಮ್ಮ ನನಗೆ ಬಹಳ ಸಲ ಕೇಳಿದಳು. ಶಿವು ಅಥವಾ ಶಂಭು ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರದಲ್ಲಿ ಇದ್ದೆ. ಒತ್ತಾಯ ಮಾಡಬೇಡ ಎಂದು ಭದ್ರಮ್ಮ ಗೆ ಅನೇಕ ಸಲ ಹೇಳಿದೆ. ಶಂಭು ಬಂದು ನನಗೆ ದುಂಬಾಲು ಬಿದ್ದ. ಕೊನೆಗೆ ಅಕ್ಕ, ತಮ್ಮ ಬಂದು ನನಗೆ ಜೀವ ಬೆದರಿಕೆ ಹಾಕಿದರು. ಇಲ್ಲಿ ನೋಡಿ ಭದ್ರಮ್ಮ ನನ್ನ ಬಲ ಕೈಗೆ ಬಡಿಗೆ ಯಿಂದ ಹೊಡೆದ ಗಾಯ. ಆ ಸಮಯ  ದಲ್ಲಿ ಶಂಭು ಹಾಗೂ ಶಿವು ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಬಗ್ಗೆ ವಿಚಾರ ಮಾಡಿದೆ. ಶಂಭು ನಲ್ಲಿ ಇರುವ ದುರ್ಗುಣಗಳು, ಶಿವು ನಲ್ಲಿ ಇರುವ ಸುಗುಣ ಗಳು ನೋಡಿ ಕೊನೆಗೆ ಆಯ್ಕೆ ಶಿವು ಜೊತೆಗೆ ಎಂದು ನಿರ್ಧಾರ ಮಾಡಿದೆ. ಇವನನ್ನು ನೋಡಿದ ಮೊದಲನೇ ಸಲ ಪ್ರೀತಿ ಅಂಕುರಿಸಿತು. ಅವನೇ ನನಗೆ ಯೋಗ್ಯ ಪತಿ ಎಂದು ನನ್ನ ಅಂತರಾಳ ಹೇಳಿತು. ಹಾಗೆ ಮಾಡಿದೆ. ಸರ್,ಅಪರಾಧಿ ಯಾರು ನೀವೇ ಹೇಳಿ."

ಇದನ್ನು ಕೇಳಿದ ಶಿವುಗೆ ಖುಷಿ ಆದರೆ ಶಂಭು ಗೆ ದುಃಖ.

ಪಾರೋ ಕೊಟ್ಟ ದೀರ್ಘ ಸ್ಟೇಟ್ ಮೆಂಟ್ ಗೆ ಬೆರಗಾದ ಇನ್ಸ್ಪೆಕ್ಟರ್,

"ಭದ್ರಮ್ಮ, ಪಾರೋ ಹೇಳಿಕೆ ನೀನು ಒಪ್ಪುತ್ತಿಯಾ ಇಲ್ಲವೇ ಸುಳ್ಳು ಎನ್ನುತ್ತಿಯಾ?"

ಆಕೆ ಮೊದಲು ತಪ್ಪು ಒಪ್ಪಿಕೊಳ್ಳಲು ನಿರಾಕರಿಸಿದಳು.

ಅಲ್ಲಿಯೇ ನಿಂತಿರುವ ಇನ್ನೊಬ್ಬ ವಯಸ್ಸಾದ ಕೂಲಿಕಾರ ಚಂದ್ರಪ್ಪ,

"ಸಾರ್, ಭದ್ರಮ್ಮ ಸುಳ್ಳು ಹೇಳುತ್ತಿದ್ದಾಳೆ. ನಾನು ಸ್ವತಃ ಅವಳು ಪಾರೋ ಗೆ ಹೊಡೆಯುವದನ್ನು ಹಾಗೂ ಜೀವ ಬೆದರಿಕೆ ಹಾಕಿರುವದನ್ನು ನೋಡದಿದ್ದೇನೆ. ಈಗ ಭದ್ರಮ್ಮ,  ಪಾರೋ ಗೆ ಮಕ್ಕಳ ಕಳ್ಳಿ ಎನ್ನುತ್ತಿದ್ದಾಳೆ. ಅಕ್ಕ ತಮ್ಮ ಏನು ಮಾಡುವದಕ್ಕೂ ಹೇಸುವದಿಲ್ಲ. ಇವರಿಗೆ ಶಿಕ್ಷೆ ಆಗಲೇ ಬೇಕು. ನಾನು ಈ ಬಗ್ಗೆ ಸಾಕ್ಷಿ ಆಗಲು ಸಿದ್ದ," ಎಂದ. 

ಇದನ್ನು ಗಮನಿಸುತ್ತಿದ್ದ ಅಕ್ಕ ತಮ್ಮ ಪರಾರಿ ಆಗಲು ಪ್ರಯತ್ನ ಮಾಡುವದನ್ನು ತಡೆದರು. ಸುಳ್ಳು ದೂರು ಕೊಟ್ಟಿರುವ ಅವರಿಗೆ ಮುಂದಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿ ಇಟ್ಟರು.

ಪಾರೋ ಬರೆಯುವದು, ಓದುವದು ಹಾಗೂ ನಿರರ್ಗಳ ವಾಗಿ ಮಾತನಾಡುವದು ಆಕೆಯಲ್ಲಿ ಇರುವ ಅದ್ಭುತ ಜ್ಞಾನದ ಬಗ್ಗೆ ತಿಳಿದು ಕೊಂಡ ಶಿವು ಆಕೆಗೆ ನೇರವಾಗಿ ಹತ್ತನೇ ತರಗತಿ ಪರೀಕ್ಷೆ ಕೊಡುವ ಸಲಹೆ ಕೊಟ್ಟ. 

ಪಾರೋ ಹಾಗೂ ಶಿವು ಶುಭ ಮುಹೂರ್ತದಂದು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಶಾಸ್ತ್ರ ಮುಗಿಸಿ ಬಾಳ ಸಂಗಾತಿ ಆದರು.


Rate this content
Log in

Similar kannada story from Romance