ಒಂದು ಬಸ್ ಫಲಕದ ಕಥೆ
ಒಂದು ಬಸ್ ಫಲಕದ ಕಥೆ
ಯಾಕೋ ಏನೋ ಅಂದು ಅಲರಾಮ್ ಹೊಡೆಯಲಿಲ್ಲ. ಗಡಿಯಾರದ ಮುಳ್ಳು ನಾನು ಅಂದುಕೊಂಡದ್ದಕ್ಕಿಂತ ಮುಂದೆ ಇತ್ತು. ಹೇಗೋ ಗಡಿಬಿಡಿಯಿಂದ ಹೊರಡಿ ಬಸ್ ಸ್ಟ್ಯಾಂಡಿನತ್ತ ಹೆಜ್ಜೆ ಹಾಕಿದೆ. ಅದಾಗಲೇ ಒಂದು ಬಸ್ ಹೋಗಿತ್ತು. ಮುಂದೆ ಇಷ್ಟು ಹೊತ್ತಿಗೆ ಬಸ್ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದೆ. ಬಸ್ ಏನು ಬಂತು ನಾನು ಅದರ ಸಮೀಪ ಹೋದೆ ಆದರೆ ಅದನ್ನು ಇರುವ ಮನಸಾಗಲಿಲ್ಲ ಕಾರಣ ಅದರಲ್ಲಿ ಹಾಕಿದ ಸ್ಥಳ ನಾಮ ನನಗೆ ವಿಚಿತ್ರವಾಗಿ ಕಂಡಿತು ಸಾಧಾರಣವಾಗಿ ಕಾಸರಗೋಡು ಎಂಬ ಹೆಸರು ಅಲ್ಲಿ ಕಾಣುತ್ತಿತ್ತು ಆದರೆ ಅದು ಇಲ್ಲದೆ ನನ್ನನ್ನು ಅಲ್ಲೇ ನಿಲ್ಲುವಂತೆ ಮಾಡಿತು. ಬಸ್ ನನ್ನ ನೋಡಿ ಸ್ವಲ್ಪ ಹೊತ್ತು ಅಲ್ಲೇ ನಿಂತಿತ್ತು ಆದರೆ ನಾನು ಏರದೆ ಅದು ಸೀದ ಹೋಯಿತು. ಆ ನಾಮಫಲಕ ಮಲಯಾಳದಲ್ಲಿತ್ತು.
ಪಕ್ಕದಲ್ಲಿದ್ದ ಯಾರು ಅಪರಿಚಿತ ರಲ್ಲಿ ಮಾತನಾಡಲು ಶುರು ಮಾಡಿದೆ. ಇದು ಬೇರೆ ಯಾವುದೋ ಊರಿಗೆ ಹೋಗುವ ಬಸ್ ಕಾಣುತ್ತೆ ಅಲ್ವಾ ಕಾಸರಗೋಡಿಗೆ ಹೋಗುವ ಬಸ್ ಎಷ್ಟು ಹೊತ್ತಿಗೆ ಬರುತ್ತೆ ಎಂದದ್ದೇ ತಡ " ಯೇ ಚೇಟ ಅದ್ ಕಾಸರಗೋಡ್ ಪೋವು ಅದ್ ತಲಪಾಡಿ ಬೋರ್ಡ್ "ಇದನ್ನು ಕೇಳಿ ದೇವರೇ ಇಷ್ಟೊತ್ತು ಈ ಬಸ್ಸಿಗಾಗಿ ಕಾದಿರುವೆ ಸುಮ್ಮನೆ ಇಲ್ಲಿ ನಿಂತು ಬಿಟ್ಟೆ ಎನ್ನುತ್ತ ಕೊರಗಿದೆ . ಮುಂದೆ ಹೆಚ್ಚು ಕಡಿಮೆ 45 ನಿಮಿಷ ಆಗದೆ ಬಸ್ ಇಲ್ಲಿ ಬರದು ಈಗಾಗಲೇ ತಡ ಆಗಿದೆ ಕಾಲೇಜಿಗೆ ಹೋಗುವುದೇ ಕಷ್ಟ ಆದರೂ ಹೋಗುವುದು ಅನಿವಾರ್ಯ . ಆ ಕ್ಷಣವೇ ನನಗೊಂದು ಉಪಾಯ ಹೊಳೆಯಿತು. ಯಾರಾದ್ರೂ ಬೈಕ್ ಹತ್ತಿ ಬಸ್ ಹಿಡಿಯುವ ತವಕ ಹೆಚ್ಚಾಯಿತು. ಮಾರ್ಗದ ಬದಿಯಲ್ಲಿ ನಿಂತು ಕೈ ಕಾಣಿಸಿದೆ ಯಾರೊಬ್ಬರೂ ನಿಲ್ಲಿಸುವ ಗೋಜಿಗೂ ಹೋಗಿರಲಿಲ್ಲ. ಅಷ್ಟರಲ್ಲಿಯೇ ಕೆಲಸದ ನಿಮಿತ್ತ ತೆರಳುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ನನ್ನ ಪರಿಸ್ಥಿತಿ ಕಂಡು ಬೈಕ್ ನಿಲ್ಲಿಸಿ ನನ್ನನ್ನು ಹತ್ತಿಸಿದರು . ಅವರಲ್ಲಿ ನಡೆದ ಘಟನೆಯನ್ನು ಹೇಳಿದೆ ಆಗ ಅವರು ನಕ್ಕರು ಮಳೆಯಾಳಂ ಅಲ್ಪ-ಸ್ವಲ್ಪವಾದರೂ ಓದಲು ತಿಳಿದಿರಬೇಕೆಂಬ ಬುದ್ಧಿಮಾತು ಹೇಳಿದರು. ಬಸ್ ನಿಲ್ದಾಣವರೆಗೂ ನನ್ನನ್ನು ಜೋಪಾನವಾಗಿ ಬಿಟ್ಟರು. ನನಗೆ ಮಲಯಾಳಂ ಒದಲು ತಿಳಿದಿದ್ದರೆ ಈ ಪ್ರಸಂಗವೇ ಎದುರಾಗುತ್ತಿರಲಿಲ್ಲ.
