STORYMIRROR

Vaman Acharya

Romance Classics Others

4  

Vaman Acharya

Romance Classics Others

ನಯನ ಮನೋಹರ

ನಯನ ಮನೋಹರ

4 mins
363

(ವಿದ್ಯಾವಂತ ಯುವಕರಿಗೆ ನೀತಿ ಕಥೆ)


ಒಂದು ತಿಂಗಳು ಹಿಂದೆ ಪತಿ ಪತ್ನಿ ಆದ ನಯನ ಹಾಗೂ ಮನೋಹರ ಅವರ ತಮ್ಮ ಸ್ವಂತ ನೂತನ ಮನೆ ಮಾರುತಿ ಬಡಾವಣೆ, ಪವನಪುರದಲ್ಲಿ ಇರುವ 'ಚಂದಿರ' ದ ವಾಸ್ತು ಶಾಂತಿ ಅದ್ಧೂರಿಯಾಗಿ ಮುಗಿಸಿ ಅಲ್ಲಿಯೇ ವಾಸ ಮಾಡಿದರು. ಅಂದು ಭಾನುವಾರ ಬೆಳಗಿನ ಏಳು ಗಂಟೆ. ಅವರು ಕಾಫಿ ರುಚಿಯನ್ನು ಸವಿಯುತ್ತ ಸರಸ ಸಲ್ಲಾಪ ಮಾಡುತ್ತಿದ್ದ ಅಪರೂಪದ ಪ್ರಸಂಗ. 

"ಮನೋಹರ, ನಮ್ಮ ಮದುವೆ ಆಗಿ ಇಂದಿಗೆ ಒಂದು ತಿಂಗಳು ಆಯಿತು. ಹನಿಮೂನ್ ಹೋಗುವದನ್ನು ತಡ ಮಾಡಬೇಡ."


"ನಯನ, ನಿನಗೆ ಗೊತ್ತಿರುವಂತೆ ನಮ್ಮ ಪ್ರೊಗ್ರೆಸಿವ್ ಕಂಪ್ಯೂಟರ್ ಸೇಲ್ಸ ಅಂಡ್ ಸರ್ವೀಸ್ ಬಿಜಿನೆಸ್ ನಲ್ಲಿ ಹೊಸ ಹೊಸ ಸಮಸ್ಯೆಗಳು ಉದ್ಭವ ವಾಗುತ್ತ ಇದೆ."


" ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳು ಬರುವದು ಸಾಮಾನ್ಯ. ಬೇಗನೆ ಅವುಗಳ ಪರಿಹಾರ ಹುಡುಕು. ಇಲ್ಲದಿದ್ದರೆ ನಿನ್ನ ಶೇರ್ ತೆಗೆದುಕೊಂಡು ಹೊರಗೆ ಬಾ."


"ಮಾತನಾಡುವದು ಬಹಳ ಸುಲಭ. ಅದನ್ನು ಕೃತಿಯಲ್ಲಿ ತರುವುದು ತುಂಬಾ ಕಷ್ಟ. ಆದರೆ ಕೆಲವೊಂದು ಸಮಸ್ಯೆ ಗಳಿಗೆ ಪರಿಹಾರವೇ ಇಲ್ಲ."

ನಯನಗೆ ಕೆಲವೊಂದು ಸಮಸ್ಯ ಯಾವುದು ಎನ್ನುವದು ಅರ್ಥವಾದರೂ ಅದನ್ನು ಮುಂದುವರೆಸುವ ಸಹಾಸ ಮಾಡಲಿಲ್ಲ.


"ಅದೆಲ್ಲ ಇರಲಿ. ಈಗ ನಮಗೆ ಸಂತೋಷದ ಸಮಯ. ಈ ಕ್ಷಣ ಅದೆಲ್ಲ ವನ್ನು ಮರೆತುಬಿಡು. ಅಂದಹಾಗೆ ನಾವು ಬರುವ ಭಾನುವಾರ ಹನಿಮೂನ್ ಗೆ ಊಟಿಗೆ ಹೋಗುವ ನಿರ್ಧಾರ ಮಾಡು."


"ಆಯಿತು. ನಾನೇ ಹೇಳಬೇಕು ಎನ್ನುವಾಗ ನೀನೇ ಹೇಳಿದೆ." 


"ಖರ್ಚಿನ ಬಗ್ಗೆ ಚಿಂತೆ ಬೇಡ."


"ಆಗಲಿ."


ಇವರ ಸಂಭಾಷಣೆ ನಡೆದಾಗ ಒಂದೇ ಸಮನೆ ಬಾಗಿಲು ಬಡಿದ ಶಬ್ದ ಕೇಳಿ ನೂತನ ದಂಪತಿಗಳಿಗೆ ಕೆರಳಿಸಿತು. ಅದೇ ಸಮಯದಲ್ಲಿ ಮನೋಹರನಿಗೆ ಅಪರಿಚಿತ ವ್ಯಕ್ತಿಯಿಂದ ಮೊಬೈಲ್ ನಲ್ಲಿ ಸಂದೇಶ ಬಂದಿತು.


 "ನಿಮ್ಮ ಹಿಂದಿನ ಬಾಗಿಲಲ್ಲಿ ನನ್ನನ್ನು ತುರ್ತಾಗಿ ಭೇಟಿ ಮಾಡಿ. ಬಾಗಿಲು ಬಡೆಯುವರು ನಿಮ್ಮವರೇ ಇದ್ದರೂ ಜಾಗರೂಕರಾಗಿರಿ. ಚಿಂತೆ ಬೇಡ. ದೇವರು ನಿಮ್ಮಂಥ ಒಳ್ಳೆಯ ಜನರನ್ನು ಕಾಪಾಡುತ್ತಾನೆ."


ಸಂದೇಶ ಕಳಿಸಿದವರು ಅಪರಿಚಿತ ಇದ್ದರೆ ಬಾಗಿಲು ಬಡೆಯುವವರು ಯಾರು ಗೊತ್ತಿಲ್ಲ. ಏನು ಮಾಡಬೇಕು ಎಂಬ ಸಂದಿಗ್ಧ ಪರಿಸ್ಥಿತಿ ಇಬ್ಬರಿಗೂ ಆಯಿತು. ಅನಾವಶ್ಯಕ ಗೊಂದಲವನ್ನು ಯಾರಿಂದ ಸೃಷ್ಟಿಸಲಾಗಿದೆ ಎಂದು ತಿಳಿಯಲು ಸಾಧ್ಯವಾಗಲಿಲ್ಲ.


"ಮನೋಹರ, ಹಿಂಬದಿಯ ಸಣ್ಣ ಕಿಟಕಿಯಿಂದ ಸಂದೇಶ ಕಳುಹಿಸಿದ ವ್ಯಕ್ತಿಯನ್ನು ನೋಡುತ್ತೇನೆ. ನಾನು ಬರುವ ವರೆಗೆ ಮುಂದಿನ ಬಾಗಿಲು ತೆರೆಯಬೇಡ," ಎಂದು ನಯನ ಹೇಳಿ ಅಲ್ಲಿಗೆ ಹೋದಳು.

ಆಕೆ ಕಿಟಕಿಯಿಂದ ಇಣುಕಿ ನೋಡಿದಾಗ ಹೊರಗೆ ಒಬ್ಬ ಶುಭ್ರವಾದ ಬಿಳಿ ಬಣ್ಣದ ಲುಂಗಿ, ಹಾಫ ಶರ್ಟ್ ಧರಿಸಿ ಬಣ್ಣದ ಕನ್ನಡಕ ಹಾಕಿ ಅಂಚಿನ ಶಲ್ಯ ಹೆಗಲಮೇಲೆ ಹಾಕಿರುವ ಬೋಳು ತಲೆಯ ಮುದುಕ. ಅವರ ಹಣೆಯ ಮೇಲೆ ತಿಲಕ ಇದ್ದು ತನ್ನ ದ್ವಿಚಕ್ರ ವಾಹನದಮೇಲೆ ಕುಳಿತು ಯಾರದೋ ಜೊತೆಗೆ ಮೊಬೈಲ್ ನಲ್ಲಿ ಸಂಭಾಷಣೆಯಲ್ಲಿ ನಿರತ ನಾಗಿ ರುವದನ್ನು ನೋಡಿದಳು. ಅವರು ಬೇರೆ ಯಾರು ಆಗಿರದೇ ಆಕೆಯ ಚಿಕ್ಕಪ್ಪ ಹಿತಚಿಂತಕ ಮಂಗಳಮೂರ್ತಿ. ಆಕೆಗೆ ನಗು ತಡೆಯಲಾಗಲಿಲ್ಲ. ಕೈ ಮಾಡಿ ಅವರನ್ನು ಬರಲು ಹೇಳಿದರೆ ಬರಲಿಲ್ಲ. ಹಾಗೆ ಹಿಂತಿರುಗಿ ಬಂದಾಗ, ಅವಳಿಗೆ ದೊಡ್ಡ ಆಘಾತ ಕಾದಿತ್ತು. ಮನೋಹರ ತನ್ನ ವ್ಯಾಪಾರದ ಇಬ್ಬರು ಪಾಲು ದಾರ ರೊಂದಿಗೆ ವಾಗ್ವಾದದ ಅತಿರೇಕ ಹಂತದಲ್ಲಿ ಇದ್ದ. ಅವರಲ್ಲಿ ಒಬ್ಬ ಶಶಿಕಾಂತನನ್ನು ನೋಡಿ ಅವಳಿಗೆ ತುಂಬಾ ಕೋಪ ಬಂತು. ಅತಿಥಿಗಳಿಗೆ ವಿಶ್ ಮಾಡದೆ ಬೆಡ್ ರೂಂ ಗೆ ಹೋಗಿ ಹಾಸಿಗೆಯ ಮೇಲೆ ಮಲಗಿ ಒಂದೇ ಸಮನೆ ಕಣ್ಣೀರು ಹಾಕಿದಳು. ಆಕೆಗೆ ತನ್ನ ಸ್ಮೃತಿ ಪಟದ ಮೇಲೆ ಮದುವೆ ಆಗುವ ಮೊದಲು ಘಟಿಸಿದ ಘಟನೆ ಗಳು ಒಂದೊಂ ದಾಗಿ ನೆನಪು ಬಂದು ಆಕೆಯ ಮನಸ್ಸು ತುಂಬಾ ವಿಹ್ವಲ ಗೊಂಡಿತು. 


ಬಿ ಕಾಮ್ ಮುಗಿಸಿದ ನಯನಗೆ ಪ್ರೊಗ್ರೆಸಿವ್ ಕಂಪ್ಯೂಟರ್ ಸೇಲ್ಸ ಅಂಡ್ ಸರ್ವೀಸ್ ಆಫೀಸ್ ನಲ್ಲಿ ಅಕೌಂಟ್ಸ ನೋಡಿ ಕೊಳ್ಳುವ ಕೆಲಸಕ್ಕೆ ಸೇರಿ ಆರು ತಿಂಗಳು ಆಗಿತ್ತು. ಆಕೆ ಆಫೀಸಿನಲ್ಲಿ ಯಜಮಾನ ರಾದ ಮನೋಹರ, ಪ್ರಕಾಶ್ ಚಂದ್ರ ಹಾಗೂ ಶಶಿಕಾಂತ ಜೊತೆಗೆ ಕೆಲಸದ ಬಗ್ಗೆ ಬಿಟ್ಟು ಬೇರೆ ಮಾತು ಆಡುತ್ತಿರಲಿಲ್ಲ. ಒಂದು ದಿವಸ ನಯನ ಗೆ ಶಶಿಕಾಂತ ಭೇಟಿ ಆದದ್ದು ಪವನಪುರ ಗಾಂಧಿ ವೃತ್ತದ ಪಕ್ಕದಲ್ಲಿ ಇರುವ ಸುಜಾತ ಮೆಡಿಕಲ್ ಸ್ಟೋರ್ ಮುಂದೆ. ಇಬ್ಬರು ಸ್ವಲ್ಪ ಸಮಯ ಮಾತನಾಡಿದರು. ಆಗ ಶಶಿಕಾಂತನಿಗೆ ಆಕೆಯಲ್ಲಿ ಪ್ರೀತಿ ಅಂಕುರಿಸಿತು. ಹೇಗೆ ಹೇಳಬೇಕು ಎನ್ನುವುದು ಅವನ ಕೊರಗು. ತ್ರಿಮೂರ್ತಿಗಳು ವ್ಯಾಪಾರ ಆರಂಭಿಸಿ ಆಗಲೇ ಎರಡು ವರ್ಷ ಆರು ತಿಂಗಳು. ಒಂದು ದಿವಸ ಶಶಿಕಾಂತ ಧೈರ್ಯ ಮಾಡಿ ನಯನ ಇರುವ ಚಿಕ್ಕಪ್ಪ ಮಂಗಳಮೂರ್ತಿ ಮನೆಗೆ ಬಂದರು. ಅವರಿಗೆ ಭೇಟಿ ಆಗಿ ತನ್ನ ಇಂಗಿತ ಹೇಳಿದರು. ಇದನ್ನು ಕೇಳಿದ ಮಂಗಳ ಮೂರ್ತಿ ಯವರಿಗೆ ಸಂತೋಷವಾಗಿ ತಮ್ಶ ಪುತ್ರಿಗೆ ಮದುವೆ ಕಂಕಣ ಬಲ ಬಂದಿದೆ ಎಂದು ಶುಭಸ್ಯ ಶೀಘ್ರಂ ಎಂದರು. ಆದರೆ ನಯನಗೆ ತುಂಬಾ ಕಸವಿಸಿ ಆಗಿ ಅಲ್ಲಿಂದ ಎದ್ದು ಹೋದಳು. ಮಗಳು ಮನೆಗೆ ಬಂದಮೇಲೆ ಆಕೆಗೆ ಹಾಗೇಕೆ ಮಾಡಿದೆ ಎಂದು ಚಿಕ್ಕಪ್ಪ ಕೇಳಿದರು. ಆಗ ನಯನ, ಅವನು ಯಾರು? ಅವನ ಕುಲ ಗೋತ್ರ ತಿಳಿದು ಕೊಳ್ಳುವ ಗೋಜಿಗೆ ಹೋಗದೆ ಸಮ್ಮತಿ ಕೊಟ್ಟರೆ ನಾನೇನು ಮಾಡಲಿ ಎಂದಳು. ಮಗಳು ಅವರ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದರೂ ಹೀಗೇಕೆ ಮಾತಾಡಿದಳು ಎಂದು ಚಿಕ್ಕಪ್ಪನಿಗೆ ಅನಿಸಿದರೂ ಆಕೆಯ ಇಷ್ಟದಂತೆ ಅದೆಲ್ಲ ಮಾಹಿತಿ ಪಡೆದರು. ಎಲ್ಲವೂ ಸರಿಯಾಗಿ ಇದ್ದರೂ ನಯನ ಚಿಕ್ಕಪ್ಪನಿಗೆ ಅವಸರ ಬೇಡ ಎಂದಳು. ಮುಂದೆ ಚಿಕ್ಕಪ್ಪನಿಗೆ ಶಶಿಕಾಂತನ ಬಗ್ಗೆ ಅನುಮಾನ ಬಂದು ಅವನ ಜಾತಕ ಹುಡುಕಿದರು. 

ಆಗಲೇ ನಯನ, ಮನೋಹರನನ್ನು ಆಫೀಸಿನಲ್ಲಿ ಹಾಗೂ ಹೊರಗೆ ಅನೇಕ ಸಲ ಭೇಟಿ ಆಗಿದ್ದಳು. ಅವನಲ್ಲಿ ಇರುವ ಸರಳತೆ, ನಡೆದು ಕೊಳ್ಳುವ ರೀತಿ ಹಾಗೂ ಕರುಣೆ ಹಿಡಿಸಿತು. ಮನೋಹರ ತನಗೆ ಯೋಗ್ಯ ಪತಿ ಎಂದು ಅನಿಸಿ ಧೈರ್ಯ ಮಾಡಿ ಅವನ ಜೊತೆಗೆ ಮಾತನಾಡಿ ದಳು. ಮನೋಹರ ಕೂಡಾ ತನ್ನ ಸಮ್ಮತಿ ವ್ಯಕ್ತ ಪಡಿಸಿದ. ನಯನ ತನ್ನ ಚಿಕ್ಕಪ್ಪನಿಗೆ ಒಪ್ಪಿ ಸುವಲ್ಲಿ ಯಶಸ್ವಿ ಆದಳು. ಆಗಲೇ ಚಿಕ್ಕಪ್ಪ, ಶಶಿಕಾಂತನ ಮಾಹಿತಿ ಕಲೆ ಹಾಕಿ ನಯನಗೆ ಆ ಸಂಭಂಧ ಬೇಡ ಎಂದರು. ಶುಭ ಮುಹೂರ್ತ ದಿವಸ ನಯನ ಹಾಗೂ ಮನೋಹರ ಅವರಿಬ್ಬರ ಮದುವೆ ಆಯಿತು. ಶಶಿಕಾಂತ ಹಾಗೂ ಪ್ರಕಾಶ್ ಚಂದ್ರ ಅವರಿಗೆ ಆಮಂತ್ರಣ ಕೊಟ್ಟಿದ್ದರು. ಶಶಿಕಾಂತ ಮದುವೆಗೆ ಬರದೇ ತುಂಬಾ ಕೋಪ ಮಾಡಿಕೊಂಡ. ಬಾಲ್ಯ ಸ್ನೇಹಿತರಾದ ಮನೋಹರ ಮತ್ತು ಶಶಿಕಾಂತ ವೈರಿಗಳು ಆದರು. ಅವರ ಕೋಪ ಅವರ ವ್ಯಾಪಾರದ ಮೇಲೆ ಕೆಟ್ಟ ಪ್ರಭಾವ ಬೀರಿತು. ನಯನ ಮೊದಲು ತನ್ನ ಜೊತೆಗೆ ಮದುವೆ ಆಗಲಿ ಎಂದು ಹೇಳಿ ನಂತರ ಮನೋಹರ ನನ್ನು ವರಿಸಿದಳು ಎಂದು ಶಶಿಕಾಂತ ಎಲ್ಲರಿಗೂ ಹೇಳಿದ. ಆದರೆ ಇನ್ನೊಬ್ಬ ಪಾಲುದಾರ ಪ್ರಕಾಶ್ ಚಂದ್ರ ನಿಗೆ ಮನೋಹರನೂ ಬೇಕು ಹಾಗೂ ಶಶಿಕಾಂತನೂ ಬೇಕು. ಅವನು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವದರಲ್ಲಿ ವಿಫಲನಾದ. ವ್ಯಾಪಾರದಲ್ಲಿ ಪಾಲುದಾರರ ನಡುವೆ ಆಗಾಗ ಹಣಕಾಸು ಬಗ್ಗೆ ತಕರಾರು ನಡೆದಿತ್ತು. ಹಾಗೆ ನೋಡಿದರೆ ಮೂವರು ಬಾಲ್ಯ ಸ್ನೇಹಿತರು ಅಲ್ಲದೇ ಬಿ ಇ ಒಂದೇ ವರ್ಷ ಪಾಸಾಗಿದ್ದರು. ಮೂರು ವರ್ಷಗಳ ನಂತರ ಮನೋಹರನ ಮೇಲೆ ಶಶಿಕಾಂತ ಆಕ್ರೋಶ ವ್ಯಕ್ತ ಪಡಿಸಿದ. ವಾದ-ವಿವಾದಗಳ ನಡುವೆ, ವ್ಯಾಪಾರದಿಂದ ಕೈ ತೊಳೆದು ಕೊಳ್ಳುವ ನಿರ್ಧಾರ ಆಯಿತು. ಎಲ್ಲರೂ ವಕೀಲರನ್ನು ಭೇಟಿ ಮಾಡಲು ಹೊರಗೆ ಹೊರಟರು.

ನಯನ ತನ್ನ ನೆನಪು ಗಳಿಂದ ಹೊರಬಂದಾಗ ಎಲ್ಲರೂ ಹೋಗಿರುವುದು ನೋಡಿ ಆಕೆಗೆ ಗಾಬರಿ ಆಯಿತು.


ಮೂರು ಗಂಟೆ ಕಳೆದರೂ ಮನೋಹರ ಹಿಂತಿರುಗಲಿಲ್ಲ ಮತ್ತು ಪದೇ ಪದೇ ಫೋನ್ ಮಾಡಿದರೂ ಉತ್ತರಿಸಲಿಲ್ಲ. ನಯನ ತನ್ನ ಪತಿ ಮನೋಹರ ಅಪಾಯದಲ್ಲಿ ಸಿಕ್ಕಿ ಕೊಳ್ಳ ಬಾರದು ಎಂದು ಪೊಲೀಸರಿಗೆ ದೂರು ನೀಡಲು ಹೊರಗೆ ನಡೆದಳು. ಆಕೆ ಮನೆಯಿಂದ ಹೊರಡುವಾಗ ಕರಿ ಬೆಕ್ಕು ಹಾದು ಹೋಯಿತು. ಈ ಅಪಶಕುನ ನೋಡಿ ಆಕೆಗೆ ತುಂಬಾ ಹೆದರಿ ಸ್ವಲ್ಪ ಹೊತ್ತು ಕುಳಿತು ದೇವರಿಗೆ ನಮಸ್ಕಾರ ಮಾಡಿ ಪೊಲೀಸ್ ಠಾಣೆಗೆ ತೆರಳಿ ಪ್ರಥಮ ಮಾಹಿತಿ ವರದಿ ದಾಖಲಿಸಿದಳು. 

 ಮೂರು ವರ್ಷಗಳಕಾಲ ವ್ಯಾಪಾರ ಬೆಳೆಯುತ್ತಾ ಹೋಯಿತು. ಮನೋಹರ ಮತ್ತು ಶಶಿಕಾಂತ ಇವರ ಮಧ್ಯೆ ಆಗಿರುವ ಮನಸ್ತಾಪ ವ್ಯಾಪಾರ ನಿಲ್ಲಿಸುವವರೆಗೆ ಹೋಗಿರುವದು ದುರದೃಷ್ಟ. ಮುಂದೆ ಶಶಿಕಾಂತ ನಿಗೆ ಬರಬೇಕಾದ ಹಣ ಕೊಟ್ಟು ಮನೋಹರ ಮತ್ತು ಪ್ರಕಾಶ್ ಚಂದ್ರ ಅದೇ ವ್ಯಾಪಾರ ಮುಂದು ವರೆಸಿದರು. ಆಮೇಲೆ ಶಶಿಕಾಂತ ಎಲ್ಲಿಗೆ ಹೋದ ಯಾರಿಗೂ ಗೊತ್ತಾಗಲಿಲ್ಲ. ಅವನು ಹೋದಮೇಲೆ ಅವನ ಬಗ್ಗೆ ಗೊತ್ತಾದ ವಿಷಯ ಕೇಳಿ ಎಲ್ಲರಿಗೂ ಆಶ್ಚರ್ಯ ಚಕಿತ ರಾದರು. ಶಶಿಕಾಂತ ಅಗಲೇ ಕಾನೂನು ಬಾಹಿರ ಮದುವೆ ಆಗಿ ಒಂದು ವರ್ಷದ ಗಂಡು ಮಗು ಇರುವದು ಖಚಿತ ವಾಯಿತು. ಇದನ್ನು ಬಹಿರಂಗ ಪಡಿಸಿದ ಶ್ರೇಯ ನಯನಳ ಚಿಕ್ಕಪ್ಪ ಮಂಗಳಮೂರ್ತಿ ಅವರಿಗೆ ಹೋಗಬೇಕು. ನಯನ, ಮನೋಹರನನ್ನು ಬಾಳಸಂಗಾತಿ ಮಾಡಿಕೂಳ್ಳುವ ಮಹತ್ವದ ನಿರ್ಧಾರ ತೆಗೆದುಕೊಳ್ಳುವದರಲ್ಲಿ ಯಶಸ್ವಿ ಆದಳು.

ಶಶಿಕಾಂತ ತನ್ನಲ್ಲಿ ದುರ್ಗುಣಗಳು ಇದ್ದರೂ ಸುಳ್ಳು ಹೇಳಿ ಮದುವೆ ಆಗವ ದುಸ್ಸಹಾಸ ಮಾಡಿರುವದಕ್ಕೆ ಊರು ಬಿಟ್ಟು ದೂರದ ಊರಿಗೆ ಪಲಾಯನ ಮಾಡ ಬೇಕಾ ಯಿತು. ಮನೋಹರ ಸಜ್ಜನ ಇರುವದರಿಂದ ಅನಿರೀಕ್ಷಿತ ವಾಗಿ ಸ್ಫುರದ್ರೂಪಿ, ಸುಶೀಲೆ ಆದ ನಯನ ಅವನ ಕೈಹಿಡಿದಳು.






 





 


 















Rate this content
Log in

Similar kannada story from Romance