ನನ್ನ ದೇಶ
ನನ್ನ ದೇಶ
ನನ್ನ ದೇಶ ಭಾರತ ಸಂಸ್ಕೃತಿಯ ನಾಡು ಸುಂದರ ತಾಣಗಳನ್ನು ಒಳಗೊಂಡಿರುವ ಭವ್ಯದ ನಾಡು ನೋಡಲು ಎರಡು ಕಣ್ಣು ಸಾಲದು,ವರ್ಣಿಸಲು ಪದಗಳು ಸಾಲದು.ಆಕಡೆ ಉತ್ತರ ಭಾರತಕ್ಕೆ ಹೋದರೆ ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರ ಮಂಜುಗಡ್ಡೆಯಿಂದ ಮುಸುಕಿದ ತಣ್ಣನೆಯ ವಾತಾವರಣ ಕಿನ್ನೌರ ಕೈಲಾಶ್ ಅತಿ ಸುಂದರವಾಗಿ ಕಂಗೊಳಿಸುವದು.ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿಯ ದೇವಸ್ಥಾನ ದೆಹಲಿಯ ಇಂಡಿಯಾ ಗೇಟ್ ರಾಜಸ್ಥಾನದ ಥಾರ್ ಮರುಭೂಮಿ ಪಂಜಾಬ್ ನ ಗೋಲ್ಡನ್ ಟೆಂಪಲ್ ಉತ್ತರ ಕಾಂಡ್ ನಲ್ಲಿ ಬರುವ ಹರಿದ್ವಾರ್ ಹಿಗೆ ಹಲವಾರು ವಿಶೇಷತೆಗಳನ್ನೊಳಗೊಂಡ ಕ್ಷೇತ್ರಗಳು ನೊಡುಗರ ಮನದುಂಬಿಸುತ್ತವೆ.ಉತ್ತರ ಭಾರತದ ಪ್ರಸಿದ್ಧಿ ಪಡೆದ ಐತಿಹಾಸಿಕ ತಾಣಗಳಾದ ತಾಜ್ ಮಹಲ್ ಮತ್ತು ಅಮರ್ ಕೊಟೆ ವಿಶ್ವ ವಿಖ್ಯಾತ ಪಡೆದಿವೆ.ಈಕಡೆ ದಕ್ಷಿಣಕ್ಕೆ ಬಂದರೆ ಕರ್ನಾಟಕದ ಜೋಗಜಲಪಾತ,ಊಟಿ ಮತ್ತು ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಮುರುಡೇಶ್ವರ, ಮಂತ್ರಾಲಯ ಇತ್ಯಾದಿ. ಕರ್ನಾಟಕದ ನೆಲ ವೀರ ವನಿತೆಯರು ಮೆಟ್ಟಿದ ನೆಲ ಎನ್ನುವರು.ಆಂಧ್ರಪ್ರದೇಶದ ತಿರುಪತಿ,ಶ್ರಿಶೈಲಂ ತಮಿಳುನಾಡಿನ ಕನ್ಯಾಕುಮಾರಿ ಪ್ರವಾಸಿಗರ ಮೈಮರೆಸುವ ತಾಣ ಕೇರಳದ ಇರವಿಕ್ಕುಲಮ್ ನ್ಯಾಷನಲ್ ಪಾರ್ಕ್,ಶಬರಿ ಮಲೆ ಪ್ರಸಿದ್ಧಿ ಸ್ಥಳಗಳು ದಕ್ಷಿಣ ಭಾರತದ ಐತಿಹಾಸಿಕ ತಾಣಗಳಾದ ಗೊಲಗುಮ್ಮಟ,ಚಾರಮಿನಾರ , ಬಾದಾಮಿ, ಐಹೊಳೆ ಪ್ರಖ್ಯಾತ ತಾಣಗಳೆಂದು ಗುರುತಿಸಿಕೊಂಡಿದೆ.ಶಿಲೆಗಳ ಕೆತ್ತನೆ ಅಚ್ಚರಿ ಮೂಡಿಸುತ್ತವೆ.ಇನ್ನೂ ಪೂರ್ವ ಪಶ್ಚಿಮ ಭಾರತವು ಬಂದರುಗಳಿಂದ ಕೂಡಿದೆ.ಪಾರ್ ದಿಪ್ ,ಎನ್ನೊರ್ ಗೋವಾ, ಮುಂಬಯಿ ಹಾಗೂ ಕೊಲ್ಕತ್ತದ ಸೂರ್ಯ ದೇವಾಲಯ ಹಾಗೂ ಬೀಚ್ ಗಳಿಂದ ವೈಭವಗೊಂಡಿದೆ.ನನ್ನ ದೇಶ ಬಹುಭಾಷಾಗಳಿಂದ ಕೂಡಿದೆ ಕೊಂಕಣಿ,ಹಿಂದಿ,ಕನ್ನಡ,ತಮಿಳು ಹಿಗೆ ಹಲವಾರು ಭಾಷೆಯ ಜನರಿಂದ ಹಲವಾರು ಪರಂಪರೆಗಳಿಂದ ಕೂಡಿದೆ.ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಅವರದ್ದೇ ಆದ ವಸ್ತ್ರ ಶೈಲಿ, ಆಚರಣೆಗಳು ಮತ್ತು ನೃತ್ಯಗಳಿಂದ ರೂಪುಗೊಂಡಿದೆ. ತಾಂತ್ರಿಕ ಜ್ಞಾನದ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹುಟ್ಟಿದ ದೇಶವಿದು.ಮಾನವಿಯತೆ ಏನೆಂದು ತೋರಿಸಿಕೊಟ್ಟ ಮಾನವ್ತಾವದಿ ಮದರ್ ತೆರೆಸಾ ಅವರು ಹುಟ್ಟಿದ ದೇಶವಿದು.ಗಣಿತದ ಶ್ರೇಷ್ಠ ಅಂಕಿ 0 ಶೂನ್ಯವನ್ನು ಕಂಡು ಹಿಡಿದ ಆರ್ಯಭಟ ಹುಟ್ಟಿದ ದೇಶವಿದು.ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಶೂರರ ಮತ್ತು ಸಮಾಜದ ಬೆಳವಣಿಗೆಗೆ ಕಾರಣರಾದ ಸಾಧಕರ ದೇಶವಿದು.ಕಬ್ಬು ,ಕಡಲೆ,ರಾಗಿ,ಗೊದಿ ಭತ್ತ,ಕಾಫಿ ಇತ್ಯಾದಿ ಮತ್ತು ವಜ್ರ,ಚಿನ್ನ ಉತ್ಪನ್ನವಾಗುವ ಸಿರಿವಂತ ದೇಶವಿದು.ವಿವಿಧ ಧರ್ಮ, ಭಾಷೆ,ಕಲೆ, ಸಾಹಿತ್ಯ, ನೃತ್ಯ,ಪರಂಪರೆ ಇದು ವೈವಿಧ್ಯತೆಯಿಂದ ಏಕತೆಗೊಂಡಿದೆ.ನಮ್ಮ ಭಾರತ ಅಥವಾ ಇಂಡಿಯಾ ಅಂತಾನೂ ಕರೆಯುತ್ತೆವೆ.
