Gireesh pm Giree

Inspirational

3.8  

Gireesh pm Giree

Inspirational

ನಾಳೆ ಎಂದೂ ಕಾಯಬೇಡ

ನಾಳೆ ಎಂದೂ ಕಾಯಬೇಡ

2 mins
335


"ಮಗ ಸ್ವಲ್ಪ ಬ್ಯಾಂಕ್ಗೆ ಹೋಗಿ ಬರ್ತೀಯಾ ಹಣ ಕಟ್ಟಲಿಕ್ಕೆ ಇತ್ತು ಬರ್ತ ಹಾಗೆ ದಿನಸಿ ಸಾಮಾನುಗಳ ತೆಗೆದು ಬಾ , ಆಯ್ತಾ ಪುಟ್ಟ?" . ಛೇ ಶುರುವಾಯ್ತು ಅಮ್ಮನ ಈ ಹೊಸ ಕಿರಿಕಿರಿ ಏನಾದರೂ ಉಪಾಯ ಹುಡುಕಿ ತಪ್ಪಿಸಿಕೊಳ್ಳಬೇಕೆಂದು ನಿರ್ಧಾರ ಕೈಗೊಂಡೆ.


ಹಾಗೆ ಅಮ್ಮ ಇಂದು ಆನ್ ಲೈನ್ ನಲ್ಲಿ ಪರೀಕ್ಷೆ ಇದೆ ನಾಳೆ ಹೋಗುತ್ತೇನೆ ಎಂದು ಹೇಳಿದೆ . ನಾಳೆ ಹೋಗುತ್ತೇನೆ ಎಂದು ಎಷ್ಟು ಬಾರಿ ಹೇಳಿದ್ದುಂಟು.ಆ ದಿನ ಯಾವ ಪರೀಕ್ಷೆಯು ಇರಲಿಲ್ಲ. ಮುಗ್ಧ ಅಮ್ಮನಿಗೆ ಮಗ ಸತ್ಯದ ಮಾತು ಹೇಳುತ್ತಿದ್ದಾನೆ ಸುಮ್ಮನೆ ಯಾಕೆ ತೊಂದರೆ ಕೊಡುವುದು ಅವನಿಗೆ ಎಂದು ಸುಮ್ಮನಾದಳು. ಮುಂದಿನ ದಿನವೂ ಇದೇ ಸಂದರ್ಭ ನನ್ನ ಅದೇ ಆ ಕೆಲಸಕ್ಕೆ ಬಾರದ ಹಳೇ ಸುಳ್ಳು . ನಾಳೆ ಕಂಡಿತ್ತು ಹೋಗುತ್ತೇನೆ ಅಮ್ಮ ಎಂದು ಸತ್ಯವಲ್ಲದ ಮಾತು. ಹೀಗೇ ದಿನಗಳು ಕಳೆಯಿತು. ಇದೇ ಪ್ರಸಂಗ ಅಂದು ಅಮ್ಮ ನನ್ನ ಮಾತನ್ನು ಕೇಳುವ ತಾಳ್ಮೆಯಲ್ಲಿರಲ್ಲಿಲ. ಅವಳಿಗೆ ಬ್ಯಾಂಕ್ನ ದಾರಿ ತಿಳಿದರು ಅವಳು ಹೋಗಿರಲಿಲ್ಲ ಯಾಕೆಂದರೆ ಇವನಿಗೆ ವ್ಯವಹಾರದ ಕುರಿತು ಜ್ಞಾನ ಬೇಕೆಂದು ಹೊರ ಪ್ರಪಂಚದ ಅರಿವು ಮಾಡುವ ಸಲುವಾಗಿ.


ಕಂದ ಎಷ್ಟು ನಾಳೆಗಳು ಬಾಯಿಬಿಟ್ಟರೆ ನಾಳೆ ನಾಳೆ ತಿಳಿದಿರಲಿ ನಿನಗೆ ನಾಳೆಗಾಗಿ ಎಂದೂ ಕಾಯಬೇಡ ಕಾಯಕ ಮಾಡಲು ನಾಳೆ ಎಂದವನ ಮನೆ ಹಾಳು ಎಂಬ ಗಾದೆ ಮಾತು ನೀನು ಕೇಳಿಲ್ಲವೇ. ಇಂದಿನ ಈ ಸಮಯ ಕ್ಷಣ ಸಂದರ್ಭ ನಾಳೆ ಬರದಿದ್ದರೆ. ಮನುಷ್ಯನಾದವನಿಗೆ ಇಂದಿನ ಕೆಲಸವನ್ನು ಮುಗಿಸಬೇಕು. ಮುಂದೆ ಮಾಡುತ್ತೇನೆಂದು ಗಂಟುಮೂಟೆ ಕಟ್ಟಿ ಸುಮ್ಮನಾದರೆ ನಾಳೆ ಎಂಬ ದಿನವೂ ನಮ್ಮ ಜೀವನದಲ್ಲಿ ಬರಬೇಕೆಂದಿಲ್ಲ. ಈ ಮಾತನ್ನು ಕೇಳಿದ ನನ್ನ ಮನವು ಅವುದು ನಾಳೆ ನಾಳೆ ಎಂದು ಕಾದರೆ ಸಮಯ ವ್ಯರ್ಥ ಖಂಡಿತ ಯಾವುದೇ ಕಾರಣಕ್ಕೂ ನಡೆಯಬೇಕಾದ ಕಾರ್ಯವ ಮುಂದೆ ಹಾಕಬಾರದೆಂದು ನಿರ್ಧರಿಸಿದೆ.

ತಿಳಿಯಿರಿ ಗೆಳೆಯರೇ ಸಮಯವನ್ನು ನಾವು ಅಮೂಲ್ಯವೆಂದು ಪರಿಗಣಿಸಿದರೆ ಅದು ನಮ್ಮ ಮತ್ತು ನಮ್ಮ ಜೀವನವನ್ನು ಅಮೂಲ್ಯವಾಗಿಸುತ್ತದೆ. ಇಂದಿನ ಕಾರ್ಯವ ಹಿಂದೆ ಮಾಡಿ ಮುಗಿಸು ನಾಳೆಗೆಂದೂ ಕಾಯಬೇಡ . ಈ ವಿಚಾರವ ತಿಳಿದುಕೋ .


ಎಷ್ಟೋ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಸನಿಹ ಬಂದರು ಹೆಚ್ಚಿನವರು ಓದುವುದೇ ಇಲ್ಲ ನಾಳೆ ಓದಿದರೆ ಸಾಕು ನಾಡಿದ್ದು ತಾನೇ ಪರೀಕ್ಷೆ ಈಗ ಹಾಯಾಗಿರುತ್ತೇನೆ ಎಂದುಕೊಳ್ಳುವ ಮಿತ್ರರಿದ್ದಾರೆ.ಆದರೆ ಬರೆದ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ದೇವರ ಕೃಪೆ ಇದ್ದ ಸಮಯಕ್ಕೆ ಸಮಯವ ಸದುಪಯೋಗ ಮಾಡದೆ ದುರುಪಯೋಗಗೊಳಿಸುತ್ತಾರೆ.ತಿಳಿಯಿರಿ ನಾಳೆ ಎಂಬ ಅಂಧಕಾರದ ಕತ್ತಲೆಯಿಂದ ಹೊರ ಬನ್ನಿ. ಇಂದೇ ಕೆಲಸವ ಮಾಡುವೆ ಇಂದೇ ಓದುವೆ ಎಂದು ತಿಳಿಯಿರಿ. ನಾಳಿನ ಹಳ್ಳಿಯೆಂದು ಕಾದರೂ ಜೀವನದಲ್ಲಿ ಉತ್ಸಾಹ ಉಲ್ಲಾಸವೇ ಕಡಿಮೆಯಾಗುವುದು. ಸಮಯಪ್ರಜ್ಞೆ ಜೀವನದುದ್ದಕ್ಕೂ ರೂಡಿಸಿಕೊಳ್ಳಬೇಕು ಈ ವಿಚಾರ ನೆನಪಿರಲಿ.



Rate this content
Log in

Similar kannada story from Inspirational