Vijaya Bharathi

Inspirational Others

2  

Vijaya Bharathi

Inspirational Others

ಮರಳಿ ಬಾ

ಮರಳಿ ಬಾ

3 mins
128


ತನ್ನ ರೂಂ ನ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತಿದ್ದ ಶಿಶಿರಳಿಗೆ ಪಕ್ಕದ ಮರವು ಬೋಳಾಗಿ ನಿಂತಿರುವುದು ಕಂಡಿತು. ಮರದಲ್ಲಿದ್ದ ಎಲೆಗಳೆಲ್ಲಾ ಉದುರಿ ನೆಲದ ಮೇಲೆ ರಾಶಿಯಾಗಿತ್ತು. ಬಹಳ ಸಮಯದವರೆಗೂ ಅದನ್ನೇ ದಿಟ್ಟಿಸುತ್ತಾ ಕುಳಿತಿದ್ದ ಶಿಶಿರಳಿಗೆ ಎಲೆಗಳಿಲ್ಲದೆ ಉದುರಿ ನಿಂತಿದ್ದ ಈ ಮರಕ್ಕೂ ನನ್ನ ಜೀವನಕ್ಕೂ ಯಾವ ವ್ಯತ್ಯಾಸವೂ ಇಲ್ಲ ಎಂದು ಕೊಳ್ಳುತ್ತಾ ನಿಟ್ಟುಸಿರು ಬಿಟ್ಟಳು. ಈ ಮರಗಳಿಗಾದರೂ ವಸಂತ ಋತು ಬಂದು ತಮ್ಮನ್ನು ಚಿಗುರಿಸುತ್ತಾನೆಂಬ ನಂಬಿಕೆ ಇದೆ. ಆದರೆ ತನ್ನ ಬಾಳಿನಲ್ಲಿ ಆ ವಸಂತ ಮತ್ತೆ ಬರುವನೆ? ಹತ್ತಿರ ಹತ್ತಿರ ಎರಡು ಮೂರು ವರ್ಷ ಗಳಿಂದ ತನ್ನ ಬಾಳೂ ಸಹ ಒಣಗಿದ ಮರವೇ ಆಗಿದೆ. ಇದು ಚಿಗುರೊಡೆದು ನಗಲು,ಮತ್ತೆ ವಸಂತನಾಗಮನ ವಾಗುವುದಾದರೆ ಮಾತ್ರ.ಆ ಕ್ಯಾಂಪಸ್ ನ ಎಲ್ಲಾ ಮರಗಳನ್ನೂ ನೋಡುತ್ತಾ ಕುಳಿತಳು. ಶಿಶಿರ ಋತುವಿನ ಭರದಿಂದ ಹಸಿರು ಎಲೆಗಳೆಲ್ಲವೂ ತರಗೆಲೆಗಳಾಗಿ ನೆಲ ಸೇರಿಹೋಗಿವೆ. ಮರಗಿಡಗಳು ಹಸಿರಿನ ಉಸಿರಿಂದ ತುಂಬಲು ಇನ್ನೂ ಒಂದೆರಡು ತಿಂಗಳು ಗಳು ಕಾಯಲೇ ಬೇಕು. ಆದರೆ ತನ್ನ ಬಾಳಿನ ಮರ ಹಸಿರಾಗುವುದೆಂತು? ನನ್ನ ವಸಂತ ನಾಗಮನ ಆಗುತ್ತದೆಯೇ? ಕಿಟಕಿಯಿಂದ ಹೊರಗೆ ಬೋಳು ಮರಗಳನ್ನು ನೋಡುತ್ತಾ ಇದ್ದ ಶಿಶಿರ ಹಾಗೇ ಮಂಚದ ಮೇಲೆ ಉರುಳಿಕೊಂಡಳು. ಅವಳ ಬಾಡಿದ ಮನೋಬಳ್ಳಿ ವಸಂತನಿಗಾಗಿ ಹಂಬಲಿಸಿತು.ಅವಳ ಮನಸ್ಸು ಪದೇ ಪದೇ ಪ್ರಶ್ನಿಸುತ್ತಿದೆ ತಪ್ಪು ಯಾರದು? ಈ ಪ್ರಶ್ನೆಗೆ ಉತ್ತರ ಹುಡುಕಿ ಹುಡುಕಿ ಅವಳಿಗೂ ಸಾಕಾಗಿದೆ.


ಮಾನಸಗಂಗೋತ್ರಿಯ ಲ್ಲಿ ಸ್ನಾತಕೋತ್ತರ ಪದವಿ ಓದುವಾಗ ಶಿಶಿರಳಿಗೆ ತನ್ನ ಕ್ಲಾಸ್ ಮೇಟ್ ವಸಂತ ನ ಪರಿಚಯವಾಯಿತು. ದಂತ ವರ್ಣದ ಕಪ್ಪು ಕಂಗಳ ಆರಡಿ ಎತ್ತರದ ಸುಂದರಾಂಗ ವಸಂತನನ್ನು ನೋಡುವಾಗಲೆಲ್ಲಾ ಶಿಶಿರಳಿಗೆ ಕಚಗುಳಿ ಯಿಡುವಂತಾಗುತ್ತಿತ್ತು. ಭೌತಶಾಸ್ತ್ರ ದ ಎಂ.ಎಸ್ಸಿ.ಯಲ್ಲಿ ಅಧ್ಯಯನ ಮಾಡುತ್ತಿದ್ದ ಅವರಿಬ್ಬರೂ ಕೆಲವೇ ಸಮಯದಲ್ಲಿ ಸ್ನೇಹಿತರಾದರು. ಸೌಮ್ಯ ಮೂರ್ತಿಯಂತಿದ್ದ ಶಿಶಿರ ನೋಡಲೂ ಸಹ ಆಕರ್ಷಕ ವಾಗಿದ್ದು ದ್ದರ ಜೊತೆಗೆ ಬುದ್ದಿವಂತೆಯೂ ಆಗಿದ್ದಳು. ವಸಂತ ಮತ್ತು ಶಿಶಿರ ಇಬ್ಬರೂ ಒಟ್ಟೊಟ್ಟಿಗೆ ಪ್ರಾಜೆಕ್ಟ್ ಪಾರ್ಟ್ನರ್ ಕೂಡ ಆಗಿರುತ್ತಿದ್ದರು. ಹೀಗೆ ಬೆಳೆದ ಅವರ ಸ್ನೇಹ ಮದುವೆಯಲ್ಲಿ ಕೊನೆಗೊಂಡಿತ್ತು. ಒಬ್ಬಳೇ ಮಗಳಾಗಿ ದ್ದ ಶಿಶಿರಳಿಗೆ ತನ್ನ ತಂದೆತಾಯಿಯರನ್ನು ಬಿಟ್ಟು ದೂರದೂರಿಗೆ ಹೋಗುವುದಕ್ಕೆ ಸಾಧ್ಯವಿಲ್ಲ ವಾಗಿದ್ದದ್ದರಿಂದ ಅವಳು ಮೈಸೂರಿನಲ್ಲೇ ಕಾಲೇಜೊಂದರಲ್ಲಿ ಉಪನ್ಯಾಸಕಿ ಯಾಗಿ ಸೇರಿಕೊಂಡಳು.ವಸಂತ ಮುಂದೆ ಸಂಶೋಧನೆ ಮಾಡುವ ಆಸೆಯಿಂದ ಮುಂಬಯಿ ಯ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಸೇರಿಕೊಂಡ.ಅವನಿಗೆ ಶಿಶಿರಳೂ ತನ್ನ ಜೊತೆ ಬಾಂಬೆಗೆ ಬಂದುಬಿಡಲಿ ಎಂಬ ಆಸೆ. ಆದರೆ ವಿಕಲಾಂಗರಾಗಿ ವೀಲ್ಚೇರ್ ನಲ್ಲಿ ಕುಳಿತು ಕೊಂಡಿರುವ ತನ್ನ ತಂದೆ, ಅಸಹಾಯಕ ಳಾದ ತಾಯಿ ತನ್ನ ಜವಾಬ್ದಾರಿ,ತಾನು ಅವರನನ್ನು ಬಿಟ್ಟು ಬಾಂಬೆಗೆ ಬರಲಾಗದು   ಆದ್ದರಿಂದ ತಾನು ತನ್ನ ತಂದೆ ತಾಯಿಯರೊಟ್ಟಿಗೆ ಮೈಸೂರಿನಲ್ಲೇ ಇರುತ್ತೇನೆ ಎಂಬುದು ಶಿಶಿರಳ ಸಮರ್ಥನೆ.


ಗಂಡ ಹೆಂಡತಿಯರ ಮಧ್ಯೆ ಈ ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಬಿರುಕುಂಟಾಯಿತು. ಶಿಶಿರ ಳ ತಂದೆ ಅವಳಿಗೆ ಬೇಕಾದ ರೀತಿಯಲ್ಲಿ ಬುದ್ದಿ ಹೇಳಿದರೂ ಪ್ರಯೋಜನವಾಗಗಲಿಲ್ಲ.ವಸಂತನೂ ಹಠಕ್ಕೆ ಬಿದ್ದ. ಇಬ್ಬರೂ ತಮ್ಮ ತಮ್ಮ ಈಗೋ ಗಳನ್ನೇ ಹೆಚ್ಚು ಮಾಡಿಕೊಂಡು ತಮ್ಮ ತಮ್ಮ ದಾರಿಯನ್ನು ಹಿಡಿದರು. ವಸಂತ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ ಸೇರಿಕೊಂಡು ಮೂರುವರ್ಷ ಗಳೇ ಕಳೆಯುತ್ತಾ ಬಂತು. ಶಿಶಿರ ಮೈಸೂರಿನಲ್ಲೇ ತನ್ನ ತಂದೆ ತಾಯಿಯ ಜೊತೆ ಇದ್ದಾಳೆ. ಶಿಶಿರಳ ಮೇಲೆ ಮುನಿಸಿಕೊಂಡು ಹೋದ ವಸಂತ ಮೂರು ವರ್ಷಗಳಿಂದ ಒಂದು ಫೋನ್ ಮಾಡಿಲ್ಲ ಮತ್ತು ಪತ್ರ ಬರೆದಿಲ್ಲ. ಇಲ್ಲಿಂದ ಶಿಶಿರ ಫೋನ್ ಮಾಡಿದರೂ ರಿಸೀವ್ ಮಾಡಲ್ಲ ಶಿಶಿರ ಳ ತಂದೆ ತಾಯಿ ಗೂ ಇವರಿಬ್ಬರ ನಡುವೆ ಗೋಡೆ ಏಳುತ್ತಿರುವುದಕ್ಕೆ ತಾವೇ ಕಾರಣವೆಂದು ಕೊರಗುತ್ತಿದ್ದಾರೆ.ಒಬ್ಬಳೇ ಮಗಳಾಗಿರುವ ಶಿಶಿರ ತಂದೆ ತಾಯಿಯ ಜವಾಬ್ದಾರಿ ತನ್ನದೂ ಎಂದು ನಿರೂಪಿಸುತ್ತಾಳೆ. ಅವಳ ತಂದೆ ತಾಯಿಯನ್ನು ಮುಂಬೈಗೆ ಕೆರೆದುಕೊಂಡು ಹೋಗೋಣವೆಂದರೆ, ಶಿಶಿರ ಅದಕ್ಕೆ ಸಿದ್ಧವಾಗಿಲ್ಲ. ಅ ವನಿಗೆ ಅವನ ಮನೆಯಲ್ಲಿ ಅವನ ತಂದೆ ತಾಯಿ ಇರಬೇಕು ಅಷ್ಟೇ. ಏನು ಮಾಡುವುದು?,. ಪ್ರತಿದಿನವೂ ವಸಂತನಿಗಾಗಿ ದಾರಿ ನೋಡುತ್ತಾ ಇರುವ‌ ಶಿಶಿರಳಿಗೆ ನಿರಾಸೆಯೇ .ಅವಳ ಬರಡಾದ ಬಾಳಿಗೆ ವಸಂತನಾಗಮನ ಬೇಕಾಗಿದೆ.ಅವನಿಗಾಗಿ ಕಾದು ಕುಳಿತಿದ್ದಾಳೆ.


ಮರಳಿ ಬಾರಯಾ ವಸಂತ?


ಮುಂದಿನ ತಿಂಗಳಲ್ಲಿ ಮಾನಸಗಂಗೋತ್ರಿಯ ಭೌತಶಾಸ್ತ್ರ ವಿಭಾಗದಲ್ಲಿ ಏರ್ಪಡಿಸಿರುವ ವಿಜ್ಞಾನ ಸಮ್ಮೇಳನ ಕ್ಕೆ

ಮುಂಬೈ ಟಾಟಾ ಇನ್ಸ್ಟಿಟ್ಯೂಟ್ ನಿಂದ ವಸಂತ ಬರುವ ವಿಷಯ ತಿಳಿದಾಗ,ಶಿಶಿರ ಳ ಬಾಡಿದ ಹೃದಯಕ್ಕೆ ಅಮೃತ ಸಿಂಚನ ವಾದಂತಾಯಿತು. ಅವನನ್ನು ನೋಡುವ‌ ಕಾತರ ಅವಳ ಕಣ್ಣಲ್ಲಿ ಇಣುಕುತ್ತಿತ್ತು. ಮನದಲ್ಲಿ ಹರ್ಷದ ಹೊನಲು ಹರಿಯುತ್ತಿತ್ತು. ತನ್ನ ಕಾಲೇಜಿನಿಂದ ತಾನೇ ಆ ಸಮ್ಮೇಳನ ಕ್ಕೆ ಹೋಗಲು ಪ್ರಿನ್ಸಿಪಾಲ್ ರಿಂದ ಅನುಮತಿ ಪಡೆದುಕೊಂಡಳು. ಸಮ್ಮೇಳನದ ಮೊದಲ ದಿನ ಶಿಶಿರ ತನ್ನ ಪ್ರಬಂಧವನ್ನು ಮಂಡಿಸಿದಳು. ವೇದಿಕೆಯಲ್ಲಿ ಅತಿಥಿಗಳ ಸೀಟ್ ನಲ್ಲಿ ದ್ದ‌ ವಸಂತ ,ಶಿಶಿರಳನ್ನೇ ಗಮನಿಸುತ್ತಿದ್ದ. ಅಂದಿನ ಕಾರ್ಯಕ್ರಮ ಮುಗಿದು ಎಲ್ಲರೂ ಹೊರಗೆ ಬಂದಾಗ ಶಿಶಿರ ಹೊರಗಡೆಯೇ ವಸಂತನಿಗಾಗಿ ಕಾದಿದ್ದು, ಅವನನ್ನು ಬಲವಂತವಾಗಿ ತನ್ನ ಮನೆಗೆ ಕರೆದುಕೊಂಡು ಹೋದಳು. ಹೆಂಡತಿ ಯಿಂದ ಮೂರುವರ್ಷ ಗಳು ದೂರವಾಗಿದ್ದ ವಸಂತ ,ಶಿಶಿರ ಳ ಬಲವಂತಕ್ಕೆ ಮಣಿಯಲೇ ಬೇಕಾಯಿತು.

ಅಂದು ರಾತ್ರಿ ಶಿಶಿರ ಮತ್ತು , ವಸಂತನೊಂದಿಗೆ ಮನಬಿಚ್ಚಿ ಮಾತನಾಡಿ ತಮ್ಮ ಸಮಸ್ಯೆ ಯನ್ನು ಬಗೆಹರಿಸಿಕೊಂಡರು. ಮದುವೆಯಾದ ನಂತರ ಗಂಡ ಮತ್ತು ಹೆಂಡತಿ ಇಬ್ಬರ ಪೋಷಕರ ಜವಾಬ್ದಾರಿ ಇಬ್ಬರಿಗೂ ಸೇರಿದ್ದು ವಿಷಯದಲ್ಲಿ ಯಾವುದೇ ತಾರತಮ್ಯ ಸಲ್ಲದು ಎಂದು ಶಿಶಿರ, ವಸಂತನಿಗೆ ತಿಳಿಸಿ ಹೇಳುವ ಪ್ರಯತ್ನದಲ್ಲಿ ಸಫಲಳಾದಳು. .


ಅಂದು ರಾತ್ರಿ ಶಿಶಿರ ಳ ಬರಡಾದ ಹೃದಯ ಮತ್ತೆ ಬಂದ ವಸಂತನಿಂದ ಹಸಿರಾಗಿ,ಬತ್ತಿಹೋದ ಭಾವ ಮತ್ತೆ ಸಲಿಲವಾಯಿತು. ಮುಂದೆ ಶಿಶಿರ ಮತ್ತು ವಸಂತ ಇಬ್ಬರೂ , ತಮ್ಮ ತಮ್ಮ ತಂದೆ ತಾಯಿಯರನ್ನು ತಮ್ಮ ಮನೆಯ ಹತ್ತಿರದಲ್ಲೇ ಬೇರೆ ಬೇರೆ ಮನೆಮಾಡಿಕೊಟ್ಟು , ಇಬ್ಬರನ್ನೂ ನೋಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡರು.


Rate this content
Log in

Similar kannada story from Inspirational