Ashritha Kiran ✍️ಆಕೆ

Classics Inspirational Others

4  

Ashritha Kiran ✍️ಆಕೆ

Classics Inspirational Others

ಮೌನವೇ ನನಗೆ ಶಾಪವಾಗಿದೆ...!

ಮೌನವೇ ನನಗೆ ಶಾಪವಾಗಿದೆ...!

2 mins
373



ಒಂದು ಕಾಲವಿತ್ತು ನನ್ನನ್ನು ಕಂಡರೆ ಅದೆಷ್ಟು ಗೌರವ ಇತ್ತು ಅಂತ ಗೊತ್ತಾ ..??ಕಾಲು ತೊಳೆದು ಪೂಜೆ ಮಾಡಿ ಹಾಲು ಕರೆಯುತ್ತಿದ್ದರು.. ನನಗೆ ಕೊಡುವ ಆಹಾರದ ವಿಚಾರದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಅಷ್ಟು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದರು... ಮನೆಯಲ್ಲಿ ಅದ್ಯಾವುದೇ ಪೂಜೆ ಇರಲಿ ಮೊದಲು ನನಗಾಗಿ ಎತ್ತಿಡುತ್ತಿದ್ದರು.. ನಾ ತಿಂದ ಮೇಲೆ ಮನೆಯಲ್ಲಿ ಬಾಳದೆಲೆಯನ್ನು ಹಾಕಿ ಬಡಿಸಲಾಗುತ್ತಿತ್ತು.. ಅದೆಷ್ಟು ಭಯ ,ಅದೆಷ್ಟು ಭಕ್ತಿ.. ನಾನಂತೂ ನಾನೇ ಪುಣ್ಯವಂತೆ ಎಂದು ಭಾವಿಸಿದ್ದೆ... ನನ್ನ ಕರುವಿಗೆ ಮೀಸಲಾಗಿದ್ದ ಹಾಲನ್ನು ಕೆಚ್ಚಲಿಗೆ ಕೈ ಹಾಕಿ ಎಳೆದೊಯ್ಯುವಾಗ ಮನದಲ್ಲಿ ಸಂಕಟವಾಗುತ್ತಿತ್ತು.. ಆದರೆ ನನ್ನ ಮಗುವಿಗೆ ಹೊಟ್ಟೆ ತುಂಬಾ ಬೇರೆ ಏನನ್ನಾದರೂ ಆರೋಗ್ಯಯುತವಾದುದನ್ನು ಹಾಕುತ್ತಾರೆ ಎಂದು ನೆಮ್ಮದಿಯ ನಿಟ್ಟುಸಿರನ್ನು ಬಿಡುತ್ತಿದ್ದೆ...


ಮಧ್ಯದಲ್ಲಿ ಅದೇನಾಯ್ತೋ ಕಾಣೆ.. ಪ್ರಾರಂಭದಲ್ಲಿ ನಾನು ಹಾಲು ಕೊಡದಿದ್ದರೂ ಮನೆಯಲ್ಲಿ ಉಳಿಸಿಕೊಳ್ಳುತ್ತಿದ್ದರು ತದನಂತರದಲ್ಲಿ ನನಗೆ ವಯಸ್ಸಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಹುಟ್ಟಿ ಬೆಳೆದ ಮನೆಯಿಂದ ನನ್ನನ್ನು ಕಂಡು ಕಾಣದ ಊರಿಗೆ ಕೇಳರಿಯದ ವ್ಯಕ್ತಿಯೊಂದಿಗೆ ಕಳುಹಿಸಿಕೊಡುತ್ತಿದ್ದರು... ನನ್ನವರನ್ನು ನನ್ನ ಕರುಳ ಕುಡಿಗಳನ್ನು ಬಿಟ್ಟು ಹೋಗುವ ಸಂಕಟ ನನಗಲ್ಲದೆ ಇನ್ನಾರಿಗೂ ಅರಿಯುತ್ತಿರಲಿಲ್ಲ ..ಬಾಯಿ ಬಿಟ್ಟು ಹೇಳಲು ನನಗೆ ಅವರಂತೆ ಮಾತನಾಡಲು ಬರುತ್ತಿರಲಿಲ್ಲ... ಆದರೂ ಹೇಳಲು ಪ್ರಯತ್ನ ಪಡುತ್ತಿದ್ದೆ.. ನನ್ನ ಮಾತು ಅವರಿಗೆ ಅರ್ಥವಾದರೂ ಅರ್ಥವಾಗದವರಂತೆ ಸುಮ್ಮನಿದ್ದು ಬಿಡುತ್ತಿದ್ದರು...


ಇತ್ತೀಚಿಗಂತೂ ನನ್ನ ಮೇಲೆ ಯಾವುದೇ ಗೌರವವಾಗಲಿ ಭಯ-ಭಕ್ತಿಯಾಗಲಿ ಇಲ್ಲ.. ಹೊಟ್ಟೆ ತುಂಬಾ ತಿನ್ನಲು ಆರೋಗ್ಯಯುತವಾದದ್ದು ಯಾವುದು ಸಿಗುತ್ತಿಲ್ಲ.. ಎಲ್ಲವೂ ಕಲಬೆರಿಕೆ.. ಅವರು ತಿನ್ನುವುದೇ ಕಲಬೆರಿಕೆ.. ನನಗೆ ಬಡಿಸುತ್ತಿರುವುದು ಕಲಬೆರಿಕೆ..ಹೀಗಿರುವಾಗ ಶುದ್ಧ ಹಾಲನ್ನು ನಾನು ಹೇಗೆ ಕೊಡಲು ಸಾಧ್ಯ. ಹಾಲು ಕೂಡ ಕಲಬೆರಿಕೆಯಾಗಿಯೇ ಹೋಗಿದೆ... ಮೊದಲು ಮನೆಗೆ ಬರಲಿಲ್ಲವೆಂದರೆ ಹುಡುಕಿಕೊಂಡು ಬಂದು ನಮ್ಮನ್ನು ಮನೆಗೆ ಕರೆದು ತಂದು ಕಟ್ಟುತ್ತಿದ್ದರು..ಈಗ ಬೀದಿ ಬೀದಿಗಳಲ್ಲಿ ಬಿಟ್ಟು ಬಿಡುತ್ತಾರೆ..ಯಾರು ಕೊಂಡೋದರು ಮನೆಯವರಿಗೆ ಗೊತ್ತೇ ಆಗಲ್ಲ..


ಒಂದು ಕಾಲದಲ್ಲಿ ಹುಟ್ಟಲು ಪುಣ್ಯ ಮಾಡಿದ್ದೇ ಎಂದು ಬೀಗುತ್ತಿದ್ದೆ..ಈಗ ಯಾಕಾದರು ಹುಟ್ಟಿದೆನೋ ಎಂದು ಪಶ್ಚಾತಾಪ ಕಾಡುವಂತೆ ಮಾಡಿದ್ದಾರೆ..ನಾನು ಮೌನವಾಗಿರುವುದು ನನ್ನ ತಪ್ಪಾ..?? ಎಲ್ಲವನ್ನು ಸಹಿಸಿಕೊಂಡು ಸುಮ್ಮನಿರುವುದು ಬಹುಶಃ ನನ್ನ ಈ ಪರಿಸ್ಥಿತಿಗೆ ಕಾರಣ..ಆದರೆ ನಾನೇನು ಮಾಡಲು ಸಾಧ್ಯ.. ಮನುಷ್ಯರನ್ನೇ ಮನುಷ್ಯ ಕೊಂದು ತಿನ್ನುವಾಗ ನನ್ನಂತ ಮುಖ ಪ್ರಾಣಿಯನ್ನು ಬಿಡುತ್ತಾರ?? ಕಂಡಿತಾ ಇಲ್ಲ..ಎಲ್ಲ ಕೃಷ್ಣ ಪರಮಾತ್ಮನ ಆಟವೆಂದು ನಂಬಿ ಬದುಕುತ್ತೇನೆ..ಅರ್ಧಮ ಹೆಚ್ಚಾದಾಗ ಮತ್ತೆ ಬರುವೆ ಎಂದಿದ್ದಾನೆ..ಬಾರದೇ ಇರಲಾರ.. ತಾಳ್ಮೆಯಿಂದ ಕಾಯುವೆ...


ಬಹುಶಃ ಗೋಮಾತೆಗೆ ಮಾತು ಬಂದಿದ್ದರೇ ಇದಕ್ಕಿಂತ ಹೆಚ್ಚಾಗಿ ಹೇಳುತ್ತಿದ್ದಳೇನೋ ಅಲ್ಲವೇ...??


Rate this content
Log in

Similar kannada story from Classics