Vaman Acharya

Classics Inspirational Others

4  

Vaman Acharya

Classics Inspirational Others

ಕನಸಿನ ಸುಂದರಿ ನಿಜವಾದ ಸುಂದರಿ

ಕನಸಿನ ಸುಂದರಿ ನಿಜವಾದ ಸುಂದರಿ

2 mins
361


ಇಂಜಿನಿಯರಿಂಗ್ ಪದವಿ ಮುಗಿಸಿ ಅದೇ ತಾನೇ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಅರುಣ್ ಗೆ ನಸುಕಿನ ಆರು ಗಂಟೆಗೆ ಏಳುವ ಅಭ್ಯಾಸ ಇರುವ ಆತನು ಅಂದು ಏಳು ಗಂಟೆ ಆದರೂ ಏಳಲಿಲ್ಲ.  ಮಳೆಗಾಲ ಇರುವದರಿಂದ ಅಂದು ಆಕಾಶದಲ್ಲಿ ಮೋಡಗಳು ಕವಿದು ತಂಪಾದ ಹವಾಮಾನ. ಧಾರಾಕಾರ  ಮಳೆ ಆಗುವ ಎಲ್ಲ ಲಕ್ಷಣಗಳು ಕಂಡು ಬಂದವು. ಅವನ ತಾಯಿ ಮಗನಿಗೆ ಎಬ್ಬಿಸಲಿಲ್ಲ.ಕಾರಣ ಅಂದು ಭಾನುವಾರ. ಆ ಸಮಯದಲ್ಲಿ ಅವನು ಕನಸಿನ ಲೋಕದಲ್ಲಿ ವಿಹಾರ ಮಾಡಿದ.

ಪಾರ್ಕಿನಲ್ಲಿ ಬೆಳಗಿನ ವಾಯು ವಿಹಾರಕ್ಕೆ ಆಗಮಿಸಿದ ಬಹಳಷ್ಟು ಜನರು ಮಳೆ ಬರುವವರಿಗೆ ತಂಪಾದ ಹವಾಮಾನದ ಆನಂದ ಅನುಭವಿಸಿದರು. ಅರುಣ್ ನಸುಕಿನಲ್ಲಿ ನಿದ್ರೆಯಲ್ಲಿ ಇರುವಾಗ ಫೋನ್ ರಿಂಗ್ ಎರಡನೇ ಸಲ ಆದಮೇಲೆ ಮನಸ್ಸು ಇಲ್ಲದ ಮನಸ್ಸಿನಿಂದ ಫೋನ್ ಎತ್ತಿದ. ಆ ಕಡೆಯಿಂದ ಹುಡುಗಿಯ ಮಧುರ ಧ್ವನಿ.

"ಗುಡ್ ಮಾರ್ನಿಂಗ್ ಅರುಣ್, ಇನ್ನೂ ಮಲಗಿದ್ದಿಯಾ? ನಾನು ನಿನ್ನ ಡ್ರೀಮ್ ಗರ್ಲ್ ಪಾರ್ಕನಲ್ಲಿ  ಕಾಯುತ್ತಾ ಇದ್ದೇನೆ ಬೇಗ ಬಾ." 

ಅರುಣ್ ಕೊಡಲೇ  ಪಾರ್ಕಗೆ ಹೊರಟ. ಅವನಿಗೆ ಆ ಸುಂದರ ಹುಡುಗಿಯಯ ಭೇಟಿ ಆಗುವ ತವಕ.  ಪಾರ್ಕ ನ ಒಳಗೆ ಎಲ್ಲ ಕಡೆ ನೋಡಿದ. ಎಲ್ಲಿಯೂ ಆಕೆ ಕಾಣಲಿಲ್ಲ. ಪರಿಚಯ ಇರುವ ಕೆಲವರು ಹಾಯ್ ಎಂದರು. ಅದೇ ಸಮಯಕ್ಕೆ ಆರು ವರ್ಷದ ಪುಟ್ಟ ಹುಡುಗ ಬಂದು 'ಅಂಕಲ್, ನಿಮ್ಮ ವಾಚ್ ಎಷ್ಟು ಚೆನ್ನಾಗಿದೆ. ನೋಡಲು ಕೊಡಿ' ಎಂದ., ಪುಟ್ಟ ಹುಡುಗನ ದಿಟ್ಟ ಮಾತು ಕೇಳಿ ಕೈಯಿಂದ ವಾಚ್ ತೆಗೆದು ಕೊಟ್ಟು ತನ್ನ ಬ್ಯಾಗ್ ತೆಗೆದ. ಅದರಲ್ಲಿ ಡ್ರಾಯಿಂಗ್ ಪೇಪರ್, ಅನೇಕ ಬಣ್ಣದ ಪೆನ್ಸಿಲ್ ಗಳು, ಅಳಿಸಲು ರಬ್ಬರ್ ಹಾಗೂ ಇತರ ಸಲಕರಣೆ ಇದ್ದವು. ಡ್ರಿಮ್ ಗರ್ಲ್ ಚಿತ್ರ ತೆಗೆಯುವಾಗ ಪುಟ್ಟ ಹುಡುಗ ವಾಚ್ ಜೊತೆಗೆ ಆಟ ಆಡುತ್ತ ಮುಂದೆ ಹೋದ. ಕನಸಿನ ಸುಂದರಿ ಚಿತ್ರ ತೆಗೆಯುವಾಗ ಆಕೆಯ ತೆಳ್ಳಗಿನ ಮೈಕಟ್ಟು, ನೀಟಾಗಿ ಬಾಚಿದ ಕೂದಲು, ಹಣೆ ಮೇಲೇ ಇರುವ ಕುಂಕುಮ, ಕೊರಳಲ್ಲಿ  ಹಾಗೂ ಗುಲಾಬಿ ಬಣ್ಣದ ಡಿಜೈನ್ ರ್ ಡ್ರೆಸ್ ಎಲ್ಲವನ್ನೂ ಸಿದ್ಧ ಮಾಡುವದಕ್ಕೂ ಯಾರೋ ಬೆನ್ನು ತಟ್ಟಿ, ಹಾಯ್, ಅರುಣ್ ಎಂದು ಅವನ ಬೆನ್ನಿನ ಮೇಲೆ ಕೈ ಇಟ್ಟಳು. 

ಸ್ವಲ್ಪ ಹಿಂದೆ ಫೋನ್ ಮಾಡಿದ ಹುಡುಗಿಯ ಧ್ವನಿ ಗುರುತಿಸಿ  ಅರುಣ್ ಹಿಂದೆ ನೋಡಿದ. ಆಶ್ಚರ್ಯವೆಂದರೆ ತಾನು ತೆಗೆದ ಚಿತ್ರ ಹಾಗೂ ಆ ಸುಂದರಿ ಏನೂ ವ್ಯತ್ಯಾಸ ಇಲ್ಲ. ಆ ಚಿತ್ರ ಆಕೆಗೆ ತೋರಿಸಿದ. ಆಕೆ ಇದೇನು ಆಶ್ಚರ್ಯ ಎಂದಳು. ಇನ್ನೇನು ಆಕೆಗೆ ಹಸ್ತ ಲಾಘವ ಮಾಡಬೇಕು  ಎನ್ನುವಾಗ ನಿದ್ರೆಯಿಂದ ಎಚ್ಚರ ವಾಯಿತು. 

 ಹಾಸಿಗಯಿಂದ ಎದ್ದು ನೋಡಿದರೆ  ಹುಡುಗಿ ಇರದೇ ಅಮ್ಮ ಬೇಗ ಏಳು ಎಂದು ಬೆನ್ನು ತಟ್ಟಿದ್ದಳು. ಫೋನ್ ನಲ್ಲಿ ಮಾತಾಡಿದವಳು ನಿಜವಾದ ಹುಡುಗಿ ಅಲ್ಲ ಕನಸಿನ ಸುಂದರ ಹುಡುಗಿ ಎಂದು ತಿಳಿದು ಮನಸ್ಸಿನಲ್ಲಿ ಬೇಜಾರು ಮಾಡಿಕೊಂಡ. ಆತನ ಬೆಲೆಬಾಳುವ ವಾಚ್ ಅಲ್ಲಿಯೇ ಸ್ಟೂಲ್ ಮೇಲೆ ಇತ್ತು.

'ಯಾಕೋ ಅರುಣ್, ಇಂದು ಹಾಸಿಗೆಯಿಂದ ಏಳುವದಕ್ಕೆ ಒಂದು ಗಂಟೆ ತಡ ಏಕೆ ಮಾಡಿದೆ?'

ಅರುಣ್ ತನಗೆ ಆಗಿರುವ ಕನಸಿನ ವಿವರ ಹೇಳಿದ.

'ನಿನ್ನ ಕನಸಿನ ಸುಂದರಿಗಿಂತಲೂ ನಿಜವಾದ ಸುಂದರ ಹುಡುಗಿ ಇಂದು ಸಾಯಂಕಾಲ ಆರು ಗಂಟೆಗೆ ನಿನ್ನನ್ನು ನೋಡಲು ಬರುವಳು. ಎಲ್ಲಿಗೂ ಹೋಗಬೇಡ. ಆ ಸಮಯದಲ್ಲಿ ಒಳ್ಳೆ ಡ್ರೆಸ್ ಹಾಕಿಕೊಂಡು ರೆಡಿ ಆಗು.'

ಇದನ್ನು ಕೇಳಿದ ಅರುಣ್ ಸಂತೋಷದಿಂದ ಕುಣಿದಾಡಿ,

'ಅಮ್ಮ ಎಂದರೆ ನಿನ್ನ ಹಾಗೆ ಅಮ್ಮ ಇರಬೇಕು.' ಎಂದ.


Rate this content
Log in

Similar kannada story from Classics