Eshwar Hadapada

Tragedy

3.4  

Eshwar Hadapada

Tragedy

ಕೆಲವೊಮ್ಮೆ ಹಾಗೆ

ಕೆಲವೊಮ್ಮೆ ಹಾಗೆ

7 mins
177


ಕೆಲವೊಮ್ಮೆ ಹಾಗೆ, ನಾವೇನೋ ಬಯಸೋದು ಆದ್ರೆ ನಡೆಯೋದೆ ಬೇರೊಂದು. ಅದಕ್ಕೆ ಅನಿಸುತ್ತೆ ಭಟ್ರು ಹೇಳಿದ್ದು "ಪ್ರೀತ್ಸಿದೆ ಪಕ್ಕದಲ್ಲಿ ಇದ್ದಿದ್ರೆ ದೇವರಾಗ್ತಿದ್ದ ಮನುಷ್ಯ" ಎಂದು. ನನ್ನ ಕಥೆ ನಾಯಕ ಆಲಾಪನದ್ದು ಅದೇ ಸಮಸ್ಯೆ. ಅಂದುಕೊಂಡಂತೆ ಆಗಿದ್ರೆ ತುಂಬಾ ದೊಡ್ಡ ಹೆಸರು

ಅವನ ಕಂಪನಿಗೆ ಆದ್ರೆ ಆದದ್ದೇ ಬೇರೆ.

ಆಲಾಪ್, ಹೇಳಿದ್ನಲ್ಲ ನಮ್ಮ ನಾಯಕನೆಂದು. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಬೆಂಗಳೂರಿನಲ್ಲಿ. ಹೆತ್ತವರು ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡಿದ್ರು. ಬಡತನದ ಪರಿಚಯ ಇಲ್ಲದಿದ್ರೂ ಬಹಳಷ್ಟು ಶ್ರೀಮಂತರ ಮಕ್ಕಳತರ ಪಿತ್ರಾರ್ಜಿತ ಆಸ್ತಿಯಲ್ಲೇ ಜೀವನ ಸಾಗಿಸಬೇಕು ಅನ್ನೋ ಆಸೆ ಇರಲಿಲ್ಲ.ಹಾಗಂತ ಯಾವುದೆ ಜಾತ್ರೆಗಳಲ್ಲೂ ಸೇರದ ಜನರಸ್ಟು ಇರೋ ಕಂಪನಿಗೆ ಸೇರಿ ದುಡೀಬೇಕು ಅನ್ನೋ ಕನಸು ಇರಲಿಲ್ಲ. ನಮ್ಮ ಈ ೨೧ನೆ ಶತಮಾನದ ಅತ್ತ್ಯಮೂಲ್ಯವಾದ ಬದಲಾವಣೆ ಅಂದರೆ ಸಾಧಿಸಬೇಕು ಅನ್ನೋರಿಗೆ ಹೂಸ,ಹೂಸ ವ್ಯಾಪಾರಗಳ ಅವಕಾಶಗಳಿಗೆ ಏನು ಕಡಿಮೆಯಿಲ್ಲ. ಕಾರಂತರ ಚೋಮನ ಕನಸುಗಳನ್ನು ಕಟ್ಟಾಕಿದ ಸಮಾಜದ ಚೌಕಟ್ಟು ತುಂಬಾನೇ ವಿಶಾಲವಾಗಿ ದೊಡ್ಡದಾಗಿದೆ ಅನ್ನಬಹುದು.ವಿದ್ಯಾಭ್ಯಾಸ ಮುಗಿಸಿ ಆಲಾಪ್ ಎಲ್ಲವನ್ನು ಸರಿದೂಗಿಸಿ ಯೋಚಿಸಿದಾಗ ಅವನಿಗೆ ಹೊಳೆದದ್ದೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಮಾಡೋದು ಎಂದು.

ಎಲ್ಲರಿಗೂ ಗೊತ್ತಿರುವಂತೆ ನಮ್ಮ ಬೆಂಗಳೂರಿನಲ್ಲಿ ಮಗುವಿನ ನಾಮಕರಣವಾಗಲಿ, ಸೀಮಂತವಾಗಲಿ, ಮದುವೆ,ಮುಂಜಿ ಯಾವುದೇ ಕಾರ್ಯಕ್ರಮವನ್ನು ತುಂಬಾ ದುಡ್ಡು ಇದ್ದೋರು ಹುಡುಕೋದೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು. ಸ್ವಲ್ಪ ಜಾಸ್ತಿ ದುಡ್ಡ್ ಸುರುದ್ರೆ ಆಯ್ತು ಇಡೀ ಕಾರ್ಯಕ್ರಮಕ್ಕೆ ಒಂದು ಸಣ್ಣ ಕೊರತೆ ಇಲ್ಲದ ಹಾಗೆ ಈ ಕಂಪನಿಗಳು ನೆರವೇರಿಸಿಕೊಡುತ್ತವೆ. ಮದುವೆ ಮನೆಯವರೂ ಅತಿಥಿಗಳಂತೆಯೆ ಒಂದು ದಿನ ಮುಂಚೆ ಹೋಗಿಬಂದ್ರೆ ಸಾಕು.

ಆಲಾಪ್ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಅನ್ನು ಸ್ಥಾಪಿಸಿದ. ಮೊದಲಿಗೆ ಕ್ಲೈಂಟ್ ಗಳನ್ನೂ ಹುಡುಕಿ ತರೋದು ಸ್ವಲ್ಪ ಕಷ್ಟವಾದರೂ ಸಮಯ ಕಳೆದಂತೆ ಈ ಕ್ಷೇತ್ರಕ್ಕೆ ಹೊಂದಿಕೊಂಡ. ಕಾಲಕ್ಕೆ ತಕ್ಕಂತೆ ಮದುವೆಯು ಆದ. ಕುವೆಂಪುರವರ ಮಂತ್ರ ಮಾಂಗಲ್ಯ ಪದ್ದತಿಯಂತೆ ಪ್ರೀತಿಸಿದವಳನ್ನೇ ವಿವಾಹವಾದ. ಸೌಮ್ಯ ಹೆಸರಿನಂತೆ ಸೌಮ್ಯ ಸ್ವಭಾವದವಳು. ಸೌಮ್ಯ ಆಲಾಪನಿಗೆ ಕಂಪನಿಯ ಕೆಲಸದಲ್ಲಿ ತುಂಬಾ ಸಹಾಯ ಮಾಡುತಿದ್ದಳು.ಆದೊಂದು ದಿನ ಬಂದೆ ಬಿಟ್ಟಿತ್ತು. ಆಲಾಪ್ ಕಷ್ಟ ಪಟ್ಟು ಇಲ್ಲಿವರೆಗೂ ಯಶಸ್ವಿಯಾಗಿ 99 ಕಾರ್ಯಕ್ರಮಗಳನ್ನು ಮುಗಿಸಿದ್ದ. ಈಗ 1೦೦ನೆ ಕಾರ್ಯಕ್ರಮದ ಸರದಿ. ಕನಸು ನನಸಾದ ದಿನ. ಈ ಕಾರ್ಯಕ್ರಮಕ್ಕೆ ಒಂದಿಷ್ಟು ಕುಂದು ಕೊರತೆಗಳಿಲ್ಲದೆ ಮುಗಿಸಿ ಈ 1೦೦ ಕಾರ್ಯಕಮಗಳನ್ನು ಮುಗಿಸಿದ ಇವೆಂಟ್ ಕಂಪನಿ ಎಂದು ಮಾರ್ಕೆಟಿಂಗ್ ಟ್ರಿಕ್ ಆಗಿ ಉಪಯೋಗಿಸಬೇಕು ಎನ್ನೋ ಆಲೋಚನೆ.


"ಸಂಗೀತ ವೆಡ್ಸ್ ಶ್ಯಾಂಸುಂದರ", ಸಂಗೀತ ಆಗರ್ಭ ಶ್ರೀಮಂತನ ಮಗಳು, ಅವಳದ್ದೇ ಒಂದು ಸಾಫ್ಟ್ವೇರ್ ಕಂಪನಿ. ಶ್ಯಾಂಸುಂದರ MBA ಅಮೇರಿಕಾದಲ್ಲಿ ಮುಗಿಸಿದ್ದ. ಸಂಗೀತಾಳ ತಂದೆ ಶ್ಯಾಂಸುಂದರ ಸಂಗೀತಾಗೆ ತಕ್ಕ ವರ ಎಂದು ಈ ಮದುವೆ ಸಿದ್ಧತೆ ಮಾಡಿದ್ದರು.ನಿಶ್ಚಿತಾರ್ಥದ ನಂತರ ಸಂಗೀತಾಳಿಗೂ ಶ್ಯಾಮ್ ಮೇಲೆ ಸ್ವಲ್ಪ ಜಾಸ್ತಿನೇ ಪ್ರೀತಿ ಹುಟ್ಟಿತ್ತು. ಸಂಗೀತ ತಂದೆಯ ಕಡೆಯಿಂದ ಆಲಾಪ್ ಕಂಪನಿಗೆ ಈ ಮದುವೆ ಬಂದಿತ್ತು.ಮದುವೆ ಒಟ್ಟು 7 ದಿನದ ಕಾರ್ಯಕ್ರಮ.ಮೊದಲನೇ ದಿನ ಗಂಡು ಹೆಣ್ಣಿನ ಕಡೆಯವರು ಹೋಟೆಲ್ ಚೆಕ್-ಇನ್ ಆಗೋದು. 2ನೆ ದಿನ ಮೆಹೆಂದಿ, 3ನೆ ದಿನ ಸಂಗೀತ ಕಾರ್ಯಕ್ರಮ,4 ನೇ ದಿನ ರಿಸೆಪ್ಶನ್ ಅಂತ ಇತರ ಒಟ್ಟು 7 ದಿನಗಳ ವೇಳಾಪಟ್ಟಿ.


ಮೊದಲನೇ ದಿನ ಮೊದಲು ಸಂಗೀತ ಕಡೆಯವರು ಬಂದು ಚೆಕ್-ಇನ್ ಆದರು. ಅವತ್ತು ಎಲ್ಲವನ್ನು ಮುಂದೆ ನಿಂತುಕೊಂಡು ಉಸ್ತುವಾರಿ ವಹಿಸಿದವಳು ಸೌಮ್ಯಾ. ಗಂಡಿನ ಕಡೆ ಇಂದ ಬರ್ತಾ ಇದಾರೆ ಎಂದು ವಾಕಿ ಟಾಕಿಯಲ್ಲಿ ಗೇಟ್ ಹತ್ರ ನಿಂತು ಬರುವವರಿಗೆ ಮಾರ್ಗವನ್ನು ತೋರಿಸುತಿದ್ದವ ಹೋಟೆಲಿನಲ್ಲಿ ಇದ್ದ ಸೌಮ್ಯಗೆ ಹೇಳಿದ. ಮದುಮಗ ಕಾರಿನಿಂದ ಇಳಿಯುತ್ತಿದ್ದಂತೆ ಆರತಿ ಎತ್ತಬೇಕು. ಸೌಮ್ಯ ಮುತ್ತೈದೆ ಆಗಿದ್ದರು ಆರತಿ ಎತ್ತೊಕೆ ಮಾತ್ರ ಹಿಂದೆ ಜರೆಯುತ್ತಿದ್ದವಳು. ಅವಳ ಜೊತೆ ಇದ್ದ ಇತರರನ್ನು ಆರತಿ ಎತ್ತಲು ಆಚೆ ಕಳಿಸಿದಳು. ತಾನು ಹೋಟೆಲ್ ಒಳಗಡೆ ಬಂದವರಿಗೆ ರೂಮ್ ನಂಬರ್ ಹಂಚಿಕೆ ಮಾಡುವತ್ತ ಗಮನ ಹರಿಸಿದಳು. ಮದುಮಗನಿಗೆ ಆರತಿ ಎತ್ತಿ ಎಲ್ರು ಒಳಗಡೆ ಮದುಮಗನ ಜೊತೆ ಬಂದ್ರು. ಸೌಮ್ಯ ಬಂದವರಿಗೆ ಮೊದಲೇ ನಿಶ್ಚಯ ಮಾಡಿದಂತೆ 3 ಜನ ಸೇರಿ ಒಂದು ರೂಮ್ ಕೀ ಕೊಡ್ತಾ ಇದ್ಲು. ಮದುಮಗ ಮದುಮಗಳ ಹತ್ರ ಹೋಟೆಲ್ನ ಒಂದು ಬದಿಯಲ್ಲಿ ಪ್ರಯಾಣದ ಬಗ್ಗೆ ಹೇಳುತ್ತಾ ಇದ್ದ. ಬಂದ ಮದುಮಗನ ನೆಂಟರಿಷ್ಟರಿಗೆಲ್ಲ ಕೀ ಕೊಟ್ಟಾದ ಮೇಲೆ ಸೌಮ್ಯಾ ಶ್ಯಾಮನ ತಂದೆ ತಾಯಿಗೆ ಒಂದು ಕೀ ಮತ್ತೆ ಶ್ಯಾಮ್ ಗೆ ಒಂದು ರೂಮಿನ ಕೀ ಕೋಡೋಕೆ ಬಂದಾಗ ಅವಳು ಶ್ಯಾಮನ ಮುಖ ಮೊದಲ ನೋಡಿದಳು.ಅವಳು ನಿಂತ ಭೂಮಿ ಕಂಪಿಸಿದ ಅನುಭವ.ಪ್ರಶಾಂತವಾದ ಸಾಗರದಲ್ಲಿ ಸುನಾಮಿಯಾದ ಅನುಭವ. ಇಷ್ಟೊತ್ತು ಶಾಂತವಾಗಿ ಇದ್ದ ಸೌಮ್ಯ ಶ್ಯಾಮ್ ನೋಡಿ ಕಸಿವಿಸಿ ಆದಂತಾದಳು. ಶ್ಯಾಮ್ ಮಾತ್ರ ಅವಳನ್ನು ಇದೆ ಮೊದಲ ಬಾರಿ ನೋಡಿದವನಂತೆ ಕೀ ತಗೊಂಡು "ಥಾಂಕ್ ಯು" ಎಂದು ಹೇಳಿ ಸಂಗೀತ ಜೊತೆ ಮಾತಾಡುತ್ತ ತನ್ನ ರೂಮ್ ಗೆ ಹೋದ.


ಆಲಾಪ್ ಹೊಟೆಲಿಗೆ ಬಂದು ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಹೋದ್ಯೋಗಿಗಳ ಜೊತೆ ವಿಚಾರಿಸುವಾಗ ಸೌಮ್ಯಳ ಕಳೆಗೂಂದಿದ ಮುಖ ಕಂಡು ಅವಳನ್ನು ಗುಂಪಿನಿಂದ ಪಕ್ಕಕ್ಕೆ ಕರೆದು ಏನೆಂದು ವಿಚಾರಿಸಿದ. ಅವಳು ಮೌನವಾಗೆ ಇದ್ದಳು. ಅಷ್ಟೊತ್ತಿಗೆ ಯಾರಿಗೋ ಒಂದೆ ರೂಮ್ ಅಲ್ಲಿ ಇರೂಕೆ ಆಗಲ್ಲ ನಮಗೆ ಬೆರೆ ರೂಮ್ ಬೇಕೆಂದು ರಿಸೆಪ್ಷನ್ ಡೆಸ್ಕ್ ಹತ್ರ ವಿಚಾರಿಸುತ್ತಿದ್ದು ಅದಕ್ಕೆ ಅಲ್ಲಿದ್ದ ಇವರ ಕಂಪನಿಯವರು ಸದ್ಯಕ್ಕೆ ಯಾವುದೇ ರೂಮ್ ಖಾಲಿ ಇಲ್ಲಾ ಅವರಿಗೆ ಆದಷ್ಟು ಬೇಗ ಬೇರೆ ರೂಮ್ ಸಿದ್ಧತೆ ಮಾಡಿಕೊಡುತ್ತೇವೆ ಎಂದು ಹೇಳಿದರು ಕೆಳದ ಆ ವ್ಯಕ್ತಿ ಈಗಲೆ ಬೇಕು ಎಂದಾಗ ಸ್ವಲ್ಪ ಜೋರಾಗಿಯೆ ವಾದವಾಗುತ್ತಿರುವಂತೆ ಕಂಡು ಬಂದಂತಾದರಿಂದ ಆಲಾಪ್ ಸೌಮ್ಯಳ ವಿಚಾರ ಅಲ್ಲೆ ಬಿಟ್ಟು ಈ ಸಮಸ್ಯೆಯನ್ನು ಬಗೆಹರಿಸಲೆಂದು ಕಾಲುಕಿತ್ತಿದ‌.


ಮೊದಲನೆ ದಿನ ಎಲ್ರು ಹೋಟೆಲ್ ಬಂದು ಸೇರಿದರು.ಇನ್ನು ಎರಡನೆ ದಿನ ಮೆಹೆಂದಿ ಕಾರ್ಯಕ್ರಮದ ಸಿದ್ಧತೆಗಳನ್ನು ನೋಡಿ ಆಲಾಪ್ ತನ್ನ ಸಿಬ್ಬಂದಿಗಳಿಗೆ ಯಾವುದೆ ಕೊರತೆ ರಾತ್ರಿ ವೇಳೆ ಆಗದಂತೆ ನೋಡಿಕೊಂಡಿರಿ ಎಂದು ಹೇಳಿ ಸೌಮ್ಯಳನ್ನು ಕರೆದುಕೊಂಡು ಕಾರಿನಲ್ಲಿ ಮನೆಕಡೆ ಹೊರಟ.ಬೆಳಿಗ್ಗೆಯಿಂದಾನು ಏನೋ ಯೋಚನೆಯಲ್ಲಿ ಇದ್ದಿದ್ದ ಸೌಮ್ಯಳನ್ನು ವಿಚಾರಿಸದೆ ಇದ್ದ ಆಲಾಪ್ ತನ್ನ ಮೇಲೆ ತನಗೆ ಬೇಜಾರಾಯಿತು. ಆದ್ರು ಕೆಲಸದ ಒತ್ತಡದಲ್ಲಿದ್ದ ತನ್ನನ್ನು ಅವಳು ಅರ್ಥಮಾಡಿಕೊಂಡಾಳು ಅನ್ನೊ ಹಂಬಲದಲ್ಲಿದ್ದ. "ಏನಾಯಿತೇ ನಿನಗೆ,ಬೆಳಿಗ್ಗೆ ಇಂದಾನು ಒಂತರ ಇದಿಯಾ" ಎಂದ. ಅದಕ್ಕೆ ಅವಳಿಂದ ಏನು ಉತ್ತರವೆ ಬರಲಿಲ್ಲ."ನಾನು ನಿನ್ನ ಜೊತೆ ಬೆಳಿಗ್ಗೆ ಮಾತಾಡಿಲ್ಲ ಅಂತ ಬೇಜಾರಾ?, ಸಾರಿ ಚಿನ್ನಾ ನಿನಗೆ ಗೊತ್ತಲ್ಲಾ ಬೆಳಿಗ್ಗೆ ಅಲ್ಲಿ ಅಷ್ಟೊಂದು ಹೊತ್ತು ಜಗಳ ನಡಿತಾ ಇದ್ರೆ ನಾ ಹೇಗೆ ಸುಮ್ನೆ ಅದನ್ನ ಬಿಟ್ಟು ಇರೋಕೆ ಆಗದೆ ಇರೋದಕ್ಕೆ ತಾನೆ ಅಲ್ಲಿ ಹೊಗಿದ್ದು. ನಿನಗೆ ಗೊತ್ತಲ್ಲಾ "This company is our baby" ಇಷ್ಟೆಲ್ಲಾ ಹೇಳಿದರೂ ಅವಳಿಂದ ಏನೂ ಪ್ರತಿಕ್ರಿಯೆ ಬರಲೆ ಇಲ್ಲಾ.ಅಷ್ಟೊತ್ತಿಗಾಗಲೆ ಅವರ ಕಾರಿನ ದೀಪ ಅವರ ಮನೆಯ ಕಾಂಪೌಂಡ್ ಅನ್ನು ತೋರಿಸ್ತಾ ಇತ್ತು.


ಸೌಮ್ಯ ಮನೆಯಲ್ಲೂ ಮೌನವಾಗೆ ಇದ್ದಳು.ಆಲಾಪನಿಗೆ ಇದು ಒಂತರ ಹೊಸದು. ಯಾವತ್ತು ತಮ್ಮ ಜಗಳ ಮರುಕ್ಷಣಕ್ಕೆ ಮುಗಿದು ಹೋಗೊದು ಆದ್ರು ಇವಳು ಯಾಕೆ ಇಷ್ಟೊಂದು ಹಟಮಾಡುತಿದ್ದಾಳೆ ಎಂಬುದೆ ಅವನಿಗೆ ತಿಳಿಯದಾಯಿತು. ಸ್ವಲ್ಪ ಸಮಯ ಕಳೆಯುತ್ತಿದ್ದಂತೆ ಇಷ್ಟೊತ್ತು ಗಾಳಿಯ ನೆಪಕ್ಕೆ ಸುಮ್ಮನಿದ್ದ ಕಾರ್ಮೋಡ ಒಮ್ಮೆಗೇ ಸ್ಫೋಟಗೊಂಡತೆ ಸೌಮ್ಯ ಅಳೋಕೆ ಶುರುಮಾಡಿದಳು. ಆಲಾಪ ದಿಗ್ಭ್ರಮೆಗೆ ಒಳಗಾದ. "ಏನು ಆಯಿತು ಕಣೆ ಪಾಪು, please ಹೇಳು ನೊಂದುಕೊ ಬೇಡ" ಆಲಾಪ ತಾನು ಮಧ್ಯಾಹ್ನ ಅವಳನ್ನು ಮಾತಾಡಿಸಬೇಕಿತ್ತು ನನ್ನ ಬಿಟ್ಟು ಬೇರೆ ಯಾರೂ ಇಲ್ಲಾ ಅವಳಿಗೆ. ನನ್ನಿಂದ ತಪ್ಪಾಯಿತು ಎಂದು ಸಂಕಟಪಟ್ಟ.ಅದನ್ನೇ ಅವಳನ್ನು ತಬ್ಬಿಕೊಂಡು ಹೇಳಿದ. ಸೌಮ್ಯ ಮಾತ್ರ ಕಣ್ಣೀರು ಹಾಕೋದು ನಿಲ್ಲಿಸಲಿಲ್ಲ. ಎಷ್ಟೋತ್ತೋ ಆದ್ಮೇಲೆ ಅವಳೇ "ಆಲಾಪ ಮದುವೆ ಮುಂಚೆ ನನ್ನ ಜೀವನದಲ್ಲಿ ನಡೆದದ್ದು ನಿಂಗೆ ಎಲ್ಲಾ ಗೊತ್ತು ಅದೆಲ್ಲ ತಿಳಿದೂ ನನ್ನಂತ ಅನಾಥೆಗೆ ನೀ ಬಾಳನ್ನು ಕೊಟ್ಟೆ" ಆಲಾಪ ಅದಕ್ಕೆ "please ಕಣೆ ಅದೆಲ್ಲಾ ಈಗ ತಗಿಬೇಡ". ಮದುವೆಗೂ ಮುಂಚೆ ಸೌಮ್ಯಳನ್ನ ಒಂದು ರಾತ್ರಿ ಯಾವುದೋ ಒಬ್ಬ ಕಾಮಿಷ್ಟ ಬಲತ್ಕಾರ ಮಾಡಿದ್ದ.ಇದನ್ನ ಸೌಮ್ಯ ಆಚೆ ಯಾರಿಗೂ ತಿಳಿಸದೆ ಬಂದು ಆಲಾಪ ಹತ್ರ ಹೇಳಿದ್ಲು ನನ್ನ ನಿ ಮದುವೆ ಆಗ್ಬೇಡ ನಾನು ಹೀಗೆ ಇದ್ಬಿಡ್ತಿನಿ ಅಂದಿದ್ಲು.ಆಲಾಪ ಯಾವನೋ ಮಾಡಿದ ತಪ್ಪಿಗೆ ನಿ ಯಾಕೆ ಶಿಕ್ಷೆ ಅನುಭವಿಸಬೇಕು ನಡೆದದ್ದೆಲ್ಲಾ ಒಂದು ಕೆಟ್ಟ ಕನಸು ಎಂದು ಮರೆತು ಬಿಡು ಎಂದು ಕಾಡಿ ಬೇಡಿ ಅವಳನ್ನ ಒಪ್ಪಿಸಿದ್ದ. ಮದುವೆ ಆದಾಗಿನಿಂದಳು ಸೌಮ್ಯ ಮಾತ್ರ ತಾನು ಕೀಳು ಅನ್ನೋ ಸ್ವಭಾವದಲ್ಲೆ ಇದ್ದಳು. ಬದುಕಲ್ಲಿ ಆಶ್ರಮದಲ್ಲಿ ಬದುಕುವ,ಯೌವನದಲ್ಲಿ ಕಾಮಿಷ್ಟ ಒಬ್ಬನಿಗೆ ತುತ್ತಾಗುವ ಹಣೆಬರಹ ಬರೆದ ದೇವ್ರು ಇಷ್ಟೊಂದು ಒಳ್ಳೆ ಮನಸಿನ ಗಂಡನನ್ನು ಕರುಣಿಸಿದವನಿಗೆ ಬಯ್ಯುವುದೋ, ಹೋಗಳುವುದೋ ಎಂದು ತಿಳಿಯದವಳಾದಳು.


"ಇಲ್ಲಾ ಆಲಾಪ, ನಾ ಹೇಳಲೇ ಬೇಕು, ಆ ಕಾಮಿಷ್ಟ ಬೇರೆ ಯಾರೋ ಅಲ್ಲಾ ಈಗ ಮದುವೆ ಮಾಡಿಕೊಳ್ಳುತ್ತಿರುವ ಶ್ಯಾಮಸುಂದರ್".ಈ ಹೆಸರು ಕೇಳ್ತಿದ್ದಂತೆ ಆಲಾಪಗೆ ದಿಕ್ಕೇತೋಚದಾಯಿತು."ನಿಜಾ ಏನೇ ನೀ ಹೇಳ್ತಿರೋದು..!" ಅದಕ್ಕೆ ಸೌಮ್ಯ ಕಣ್ಣೀರಲ್ಲೆ ಹೌದು ಅನ್ನೋ ಸೂಚನೆ ಇಟ್ಟಳು.ಆಲಾಪ ತನ್ನ ಹೆಂಡತಿಯನ್ನು ಬಲಾತ್ಕಾರ ಮಾಡಿದವನ ಮದುವೆ ತಾನೇ ನಿಂತು ಮಾಡಿಸುವಂತೆ ಮಾಡಿದ ದುರ್ವಿಧಿಯು ತಂದಿಟ್ಟ ಪರಿಸ್ಥಿತಿಗೆ ಮಾತೇ ಬರದವನಾದ.ಆದ್ರೂ ಏನು ಮಾಡೋದು ಎಂದು ಇವನು ಯೋಚಿಸುತ್ತಿರುವಾಗಲೇ ಅವಳು "ನಾನು ಈ ಮದುವೆ ನಡಿಯೋಕೆ ಬಿಡಲ್ಲ. ಅವನ ಮೇಲೆ ಪೊಲೀಸ್ ಕೇಸು ಹಾಕೋಣ ಆದ್ರೂ ಅದನ್ನ ಪೊಲೀಸ್ ಅವರು ಪರಿಗಣಿಸದೆ ಇದ್ರು ಇರಬಹುದು. ಇದು ನಡೆದದ್ದು 3 ವರ್ಷದ ಹಿಂದೆ, ನನ್ನ ಹತ್ರ ಅವನ ಮುಖದ ನೆನಪು ಬಿಟ್ರೆ ಬೇರೊಂದು ಸಾಕ್ಷಿಗಳಿಲ್ಲಾ. ಹಾಗಂತ ಈಗ ಸುಮ್ನೆ ಇದ್ರೆ ಈಗ ಮದುವೆ ಆಗ್ತೀರೋ ಹುಡುಗಿಗೆ ಈ ವಿಷಯ ತಿಳಿಸದೆ ಇದ್ರೆ ದೊಡ್ಡ ಪಾಪ ಮಾಡಿದ ಹಾಗೆ.please ಏನಾದ್ರೂ ಮಾಡು ಆಲಾಪ ಎಂದು ಗೋಗರೆದಳು" ಆಗ ಆಲಾಪ "ಪೊಲೀಸ್ ಕಂಪ್ಲೈಂಟ್ ಅಂತ ಹೋದ್ರೆ ನಮ್ಮ ಗುಟ್ಟನ್ನೆ ರಟ್ಟು ಮಾಡಿದಂಗೆ.ಮೊದ್ಲು ಈ ಮದುವೆ ನಿಲ್ಸೋಣ ಆಮೇಲೆ ಅವನ ಬಗ್ಗೆ ಯೋಚನೆ ಮಾಡೋಣ" ಎಂದ. ಆ ರಾತ್ರಿ ಇಬ್ಬರೂ ಮದುವೆ ಹೇಗೆ ನಿಲ್ಲಿಸೋದು ಎಂದು ಯೋಚಿಸುತ್ತಾ ಹಿಂದಿನ ದಿನವೇ ಈ ಮದುವೆಯನ್ನು ಎಷ್ಟೊಂದು ವಿಜೃಂಭಣೆಯಿಂದ ಆಚರಿಸಬೇಕು ಎಂದು ಯೋಚಿಸುತ್ತಿದ್ದ ತಮಗೆ ಇಂದು ಈ ತರ ಯೋಚಿಸುವ ಪರಿಸ್ಥಿತಿಗೆ ಮನಸು ಮರಗಿತು.


ಮರುದಿನ ಆಲಾಪ ಒಂದು ಉಪಾಯ ಮಾಡಿದ್ದ. ಈ ವರವನ್ನು ಮೊದಲು ನೋಡಿದ್ದು ಸಂಗೀತಾಳ ಅಪ್ಪ.ಇಳಿ ವಯ್ಯಸ್ಸು ವರನ ಆಯ್ಕೆಯಲ್ಲಿ ತಪ್ಪು ಮಾಡಿದ್ದಾನೆ ಎಂದು ಸಂಗೀತಾಳಿಗೆ ಹೇಗಾದ್ರೂ ಮಾಡಿ ತೋರಿಸಿ ಕೊಟ್ಟರೆ ಸಂಗೀತಾ ಶ್ಯಾಮ್ನ ಮೇಲೆ ಅನುಮಾನ ಬಂದು ಈ ಮದುವೆನಾ ನಿಲ್ಲಿಸಬಹುದು ಎಂದು. ಅದರಂತೆ ಇವನು ತಾನಾಗಿಯೇ ಅವತ್ತು ಸಂಗೀತಾಳ ರೂಮ್ ಹೋಗಿ "ಮೇಡಂ ಈ ಮದುವೆ ಮುಂಚೆ ನಿಮಗೊಂದು ವಿಷಯ ತಿಳಿಸಬೇಕು.ನಮ್ಮ ಮ್ಯಾನೇಜ್ಮೆಂಟ್ ಕಂಪನಿ ಇಂದ ಯಾವುದೇ ಮದುವೆಗೂ ಮುನ್ನ ನಾವು ವಧು ವರರ ಬ್ಯಾಗ್ರೌಂಡ್ ಚೆಕ್ ಮಾಡಿಸ್ತೀವಿ.ನಾವು ನಡೆಸಿದ ಮದುವೆ ಮುಂದೆ ಡೈವೋರ್ಸ್ ಆಗಿ ಅದು ಇನ್ಯಾವುದೋ ರೀತೀಲಿ ನಮ್ಮ ಹೆಸರಿಗೆ ಧಕ್ಕೆ ತರಬಾರದು ಅನ್ನೋ ಒಂದು ಸಣ್ಣ ಕಾಳಜಿ ಅಷ್ಟೆ.ಹಾಗೆ ನಾವು ಶ್ಯಾಮ್ ಬಗ್ಗೆ ವಿವರಣೆ ಸಂಪಾದಿಸಿದ ನಮಗೆ ಪೊಲೀಸ್ ಸ್ಟೇಷನ್ ಅಲ್ಲಿ ಅವರ ಮೇಲೆ ಯಾವುದೇ ಕೇಸು ಇಲ್ಲಾ ಅಂತ ದೃಢಪಟ್ಟಿದೆ ಅದನ್ನೇ ಹೇಳೋಣ ಅಂತ ಬಂದೆ ಮೇಡಂ"."ಥಾಂಕ್ ಯೂ ವೇರಿ ಮಚ್" ಎಂದು ಸಂಗೀತ ಹೇಳಿದಳು. ಆಗ ಆಲಾಪ " ಆದ್ರೆ ನಾವು ಒಂದಷ್ಟು ಜನರಲ್ಲಿ ವಿಚಾರಿಸಿದಾಗ ಇದು ನಿಜಾನಾ ಸುಳ್ಳೋ ಗೊತ್ತಿಲ್ಲಾ,ಅವರು ಹೇಳಿದ್ದು ಶ್ಯಾಮ್ ಒಂದು ಹುಡುಗಿ ಮೇಲೆ ಬಲವಂತ ಮಾಡಿದ್ದಾರೆ ಎಂದು ಗೊತ್ತಾಗಿದೆ" ಇದನ್ನು ಕೇಳುತ್ತಿದ್ದಂತೆ ಅವಳು "ಯೇ..ಏನೋ ಹೇಳ್ತಿದಿಯಾ?ಅವನನ್ನ ಮನಸಾರೆ ಪ್ರೀತಿಸಿದಿನಿ.ಇಷ್ಟು ದಿನದಿಂದ ನನ್ನನ್ನೇ ಒಂದ್ ಕ್ಷಣ ಕೆಟ್ಟದಾಗಿ ನೋಡಿಲ್ಲಾ ಅವನು.ಅವನು ಬಂಗಾರ ಕಣೋ ಮತ್ತೆ ನಿನಗೆ ಯಾರು ಹೇಳಿದ್ದಾರೆ ಅವ್ರು ಅವನ ಹಾಗೆ ಇರೋಕೆ ಆಗ್ದೆ ಹೊಟ್ಟೆ ಕಿಚ್ಚಿನಲ್ಲಿ ಹೇಳಿದ್ದಾರೆ,ನನಗ್ ಗೊತ್ತು ಅವ್ನು ಯಾವತರ ಅಂತ.ನನಗೆ ಹೇಳಿದಂಗೆ ಮತ್ತೆ ಯಾರಮುಂದಾದ್ರು ಹೇಳಿದ್ರೆ ನಿನ್ನ ಸಿಗ್ದೆ ಹಾಕಿರೋರು"ಎಂದು ಹೇಳಿದಾಗ ಆಲಾಪ "ಸಾರಿ ಮೇಡಂ,ಬಟ್ ಹೆಳ್ಬೇಕಾಗಿದ್ದು ನನ್ನ ಕರ್ತವ್ಯ.ಅವರ ಮೇಲಿನ ಈ ನಿಮ್ಮ ನಂಬಿಕೆ ನೋಡಿ ತುಂಬಾ ಖುಷಿಯಾಯಿತು"ಅಂತ ಹೇಳಿ ರೂಮ್ ಇಂದ ಆಚೆ ಬಂದು ಅಯ್ಯೋ ಈ ಹುಡುಗಿ ಕೇಳ್ತಾನೆ ಇಲ್ಲಾ ಅಲ್ಲಾ ಹೇಳಿದ್ರೆ.ಏನ್ ಮಾಡೋದು ಈವಾಗ ಎಂದು ಗೊತ್ತಾಗದೆ ಮನೆಗೆ ಹೋದ ಅಲ್ಲಿರುವ ಸಹೋದ್ಯೋಗಿಗಳಿಗೆ ಅವರವರ ಕೆಲಸ ಹೇಳಿ.


ಸೌಮ್ಯ ಮನೆಯಲ್ಲಿ ಒಬ್ಳೇ ಕುಂತಿದ್ಲು ಆಲಾಪ ಬಂದ ಅರಿವೇ ಇಲ್ಲದವಳಂತೆ.ಇವನಿಗೂ ಅವಳ ಮನಸ್ಥಿತಿ ಅರ್ಥವಾಗಿ ಏನನ್ನೂ ಹೇಳದವನಾದ.ಆಗ ಇವನು ಟಿವಿ ಹಾಕಿದ ಈ ಮೌನವ ಸಹಿಸಲಾಗದೆ ಇರೋದಕ್ಕೆ.ಅವಳು ಪಕ್ಕದಲ್ಲೇ ಕುಂತಿದ್ಲು ದುರಾದೃಷ್ಟವಶಾತ್.. ಟಿವಿ ಅಲ್ಲಿ ಆ ಸಮಯಕ್ಕೆ ಯಾವುದೋ ಹುಡುಗಿಯ ಅತ್ಯಾಚಾರ ನಡೆದಿರುವ ಸುದ್ದಿ ಪ್ರಸಾರವಾಗುತ್ತಿತ್ತು .ಇದನ್ನ ನೋಡುತ್ತಿದ್ದಂತೆ ಸೌಮ್ಯ ಇನ್ನಷ್ಟು ಬೇಜಾರಾಗಿ "ಇದಕ್ಕೆಲ್ಲ ಕೊನೇನೆ ಇಲ್ವಾ? ಹೊರಗಡೆ ಆಧುನಿಕ ಆದಂತೆ ಮನುಷ್ಯನ ಮನಸ್ಸು ಮತ್ತಷ್ಟು ಪ್ರಾಣಿಮಯವಾಗ್ತಿದೆ ಅನಿಸ್ತಿದೆ".ಇವಳ ಇಷ್ಟೊಂದು ದೊಡ್ಡ ಮಾತುಗಳಿಗೆ ಅವನ ಹತ್ರ ಉತ್ತರ ಇರಲಿಲ್ಲ. "ನೀನು ಏನೋ ಮಾಡ್ಕೋ ನಾ ಮಾತ್ರ ಅವನನ್ನ ಬಿಡಲ್ಲ"."ಸೌಮ್ಯ ನೀನು ಕೋಪದಲ್ಲಿ ದುಡುಕ ಬೇಡ, ನಾವು ಕಾನೂನಾತ್ಮಕ ಹೋರಾಟ ಮಾಡೋಣ"."ಕಾನೂನಾತ್ಮಕ ಹೋರಾಟ ಮಾಡೋವಷ್ಟು ನಮ್ಮ ಹತ್ರ ಸಮಯ ಎಲ್ಲಿದೆ ಆಲಾಪ" ಎಂದಳು. ಈ ಯೋಚನೆಗಳಲ್ಲೆ ಬೆಳಿಗ್ಗೆ ಆಗಿತ್ತು. ಆಲಾಪ ಬೆಳಿಗ್ಗೆ ಹೋಟೆಲ್ಗೆ ಹೋದ. ದೇವರೆ ನನ್ನ ಇಂತ ಪರಿಸ್ಥಿತಿಗೆ ನೂಕಿ ಯಾಕೆ ತಮಾಷೆ ನೋಡ್ತಿದಿ ಎಂದು ಚಡಪಡಿಸಿದ.


ಆಲಾಪ ಹೋಟೆಲಿಗೆ ಬಂದು ಮತ್ತೆ ಅವತ್ತಿನ ಕಾರ್ಯಕ್ರಮಗಳ ಪಟ್ಟಿ ನೋಡ್ತಾ ಇದ್ದ.ಆಗ ಹಠಾತ್ ಆಗಿ ಬಂದ ಸೌಮ್ಯಳನ್ನ ನೋಡಿ ಇವಳು ಏನು ಮಾಡುವಳೋ ಈಗ ತಿಳಿಯದೆ ವಿಚಲಿತನಾದ.ಸೌಮ್ಯ ನಗು ನಗುತ್ತಾ ಎಲ್ಲರ ಜೋತೆ ಸೇರಿ ಮಾತಾಡುತ್ತಾ ಇದ್ದಾಗ ಸ್ವಲ್ಪ ನಿರಾಳನಾದ.ಆಲಾಪ ಯಾವುದೋ ಒಂದು ಕಾರ್ಯಕ್ರಮದ ಸಿದ್ಧತೆ ವಿಚಾರಿಸುತ್ತ ನಿಂತಿದ್ದ ಆಗ ಸೌಮ್ಯ ಅವನ ಕಣ್ಣು ತಪ್ಪಿಸಿ ಅವಳು ಮದುಮಗ ಶ್ಯಾಮ್ ಕೋಣೆ ಕಡೆ ನಡೆದಳು.


ಆಲಾಪ ಸಹೋದ್ಯೋಗಿಗಳ ಜೊತೆ ಮಾತಾಡುತ್ತಾ ಅಲ್ಲೇ ಎದುರಿಗೆ ಇದ್ದ ಟಿವಿ ಮೇಲೆ ವಾರ್ತೆ ವೀಕ್ಷಿಸುತ್ತಾ ಇದ್ದಾಗ ಅದರಲ್ಲಿ ನೆನ್ನೆ ಅತ್ಯಾಚಾರ ಪ್ರಕರಣದ ಅತ್ಯಾಚಾರಿಯನ್ನು ಪೊಲೀಸರು ಬಂಧಿಸಿದ್ದರು. ಅವನ ಫೋಟೋ ಟಿವಿಯಲ್ಲಿ ತೋರಿಸ್ತಾ ಇದ್ದರು. ಆ ಫೋಟೋ ನೋಡಿ ಆಲಾಪ ಬೆಚ್ಚಿಬಿದ್ದ ಆ ವ್ಯಕ್ತಿಯ ಫೋಟೋ ಡಿಟ್ಟೋ ಶ್ಯಾಮ್ ತರ ಇತ್ತು. ಇದನ್ನ ನೋಡುತ್ತಿದ್ದಂತೆ ಅವನಿಗೆ ಎಲ್ಲಾ ಅರ್ಥವಾಯಿತು. ಸಾಮ್ಯ ಈ ಕಾಮಪಿಸಾಚಿಯನ್ನೆ ಶ್ಯಾಮ್ ನೆಂದು ತಿಳಿದಿದ್ದಾಳೆ ನಿಜಾ ಅಂದ್ರೆ ಇವ್ನು ಅವಳನ್ನ ಬಲವಂತ ಮಾಡಿದ್ದು ಎಂದು ಅನಿಸಿತು ಅವನು ಹಾಗೆ ತಿಳಿಯಲು ಕಾರಣಗಳುಂಟು ನಿನ್ನೆ ಸಂಗೀತಾ ಶ್ಯಾಮ್ ಬಗ್ಗೆ ಅಷ್ಟೊಂದು ವಿಶ್ವಾಸದಲ್ಲಿ ಮಾತಾಡಿದ್ದು.ಆದ್ರೆ ಸಾಮ್ಯ ಈ ಸುದ್ದಿಯನ್ನು ನೋಡುವ ಮುಂಚೆನೇ ಶ್ಯಾಮ್ ನನ್ನ ಕೊಳ್ಳದೆ ಈ ಮದುವೆ ನಿಲ್ಲೋದಿಲ್ಲ ಅನ್ನೋ ನಂಬಿಕೆಗೆ ಬಂದು ಅವರ ಮನೆಯಲ್ಲಿದ್ದ ಗನ್ ತಗೊಂಡು ಶ್ಯಾಮ್ ಕೊಣೆಯ ಕಡೆ ನಡೆಸಿದ್ದಳು.ಇತ್ತ ಆಲಾಪ ಈ ಸುದ್ದಿ ಕೇಳಿ ಸೌಮ್ಯಾ ನೆಮ್ಮದಿಯಾಗಿರುತ್ತಳೇ ಎಂದು ಅವನು ಸೌಮ್ಯ ಎಂದು ತಿರುಗಿ ನೋಡುತ್ತಿದ್ದಂತೆ ಸೌಮ್ಯ ಅಲ್ಲಿ ಇರಲಿಲ್ಲ.ಅವಳಿಗೆ ಫೋನ್ ಮಾಡಿದ್ರು ಕಾಲ್ ಸ್ವೀಕರಿಸುತ್ತಿಲ್ಲ .ಅಲ್ಲೇ ಪಕ್ಕದಲ್ಲೇ ಇದ್ದ ಸಹೋದ್ಯೋಗಿಗಳಲ್ಲಿ ವಿಚಾರಿಸಿದಾಗ ಅವಳು ಶ್ಯಾಮ್ ಕೋಣೆಗೆ ಏನೋ ಮಾತಾಡೋದು ಇದೆ ಎಂದು ಹೋದಳು ಎಂದು ತಿಳಿಸಿದರು.ಆಲಾಪ ಒಮ್ಮೆಲೇ ಶ್ಯಾಮ್ ಕೋಣೆಕಡೆ ಓಡಿದ.ಆದ್ರೆ ಶ್ಯಾಮ್ ರೂಮಿನಿಂದ ಡಮ್, ಡಮ್ ಎಂದು ಶಬ್ದ ಬಂದಿತು.ಆಲಾಪನ ಕಣ್ಣಿಗೆ ಬಿದ್ದದ್ದು ಸೌಮ್ಯ ಶೂಟ್ ಮಾಡಿದ ಗುಂಡು ಶ್ಯಾಮನ ಏದೆ ಸೀಳಿ ಅವನು ನೆಲದ ಮೇಲೆ ಬಿದ್ದದ್ದು.


Rate this content
Log in

Similar kannada story from Tragedy