ಇಷ್ಟ ದೇವತೆ ಭಾಗ 13
ಇಷ್ಟ ದೇವತೆ ಭಾಗ 13
ಅವಳು ತುಂಬು ಗರ್ಭಿಣಿ, ಹೆರಿಗೆ ನೋವು ಶುರುವಾದಾಗ ಎಲ್ಲ ತಯಾರಿಯನ್ನು ತಾನೇ ಮಾಡಿಕೊಂಡು ಧೈರ್ಯದಿಂದ ಮದ್ಯಾಹ್ನದವರೆಗೂ ಕೆಲಸಗಳೆಲ್ಲವನ್ನು ಮುಗಿಸಿದಳು. ಕೆಲಸದ ಒತ್ತಡದಲ್ಲಿ ಯಾವ ನೋವು ಅನುಭವಕ್ಕೆ ಬಂದಿರಲಿಲ್ಲ. ಮಧ್ಯಾಹ್ನ ಹಾಗೆ ಹೆರಿಗೆಯ ನೋವು ಕಾಣಿಸಿಕೊಂಡಿತು. ಎಷ್ಟೇ ಒದ್ದಾಡಿದರೂ , ಅರಚಿದರೂ , ಕಿರುಚಿದರೂ ಸಹ ಹೆಣ್ಣಾದ ಆ ಅತ್ತೆಗೆ ಅವಳ ಕೂಗು ಕೇಳಲೇ ಇಲ್ಲ. ದೇವರು ಎಲ್ಲವನ್ನು ನೋಡುತ್ತಿರುತ್ತಾನೆ. ಆತನಿಗೆ ಅವಳ ಆರ್ತನಾದ ಕೇಳಿಸಿ ಅವಳ ಸಹಾಯಕ್ಕೆ ಚಿಕ್ಕ ಓರಗಿತ್ತಿಯನ್ನು ಕಳಿಸುತ್ತಾನೆ.
ಚಿಕ್ಕ ಮೈದುನನ ಹೆಂಡತಿಗೆ ಗಿರಿಜೆಯ ಮೇಲೆ ಅಲ್ಪ ಸ್ವಲ್ಪ ಕಾಳಜಿ ಇದ್ದ ಕಾರಣ, ಅವ್ಸ್ಳು ಹೆರಿಗೆ ನೋವೆಂದು ಕೂಗುತ್ತಿರುವಾಗ ಅವಳ ಓರಗಿತ್ತಿಯು ಹೋಗಿ ಸ್ವಲ್ಪ ಸಹಾಯ ಮಾಡಿದಳು. ಒಟ್ಟಿನಲ್ಲಿ ಮತ್ತೆ ಬಾಣಂತನ ಆಗಿ ಅವಳ ಹಣೆಬರಹಕ್ಕೆ ಅದೂ ಕೂಡ ಹೆಣ್ಣಾಯಿತು. ತಾನೇ ಕರುಳ ಬಳ್ಳಿಯನ್ನು ಕೊಯ್ದು, ತನ್ನ ಮೈದುನನ ಹೆಂಡತಿಯ ಸಹಾಯದಿಂದ ಸ್ನಾನ ಮುಗಿಸಿ, ಮಗಳ ಪಕ್ಕದಲ್ಲಿ ಮಲಗಿದಳು...
ಹೆಣ್ಣಾದರೇನಾಯಿತು ಮುದ್ದಾದ ಗೊಂಬೆಯಂತ ಮಗಳಿಗೆ ಜನ್ಮ ಕೊಟ್ಟಿದ್ದಳು. ಈ ಭಾರಿ ಅತ್ತೆಯಂತೂ ಹೆಣ್ಣೆಂದ ತಕ್ಷಣ ಮಗು ಮುಖವನ್ನು ಸಹ ನೋಡದಾಗಿದ್ದಳು.
ಶಂಭು ಅಂತೂ ಮೂರು ದಿನವಾದರೂ ಮನೆ ಕಡೆ ತಲೆ ಹಾಕಲೇ ಇಲ್ಲ. ಆತನಿಗೂ ಗಂಡು ಮಗು ಬೇಕಾಗಿತ್ತು. ಅವಳು ದುಃಖವಾದರೂ ಸಹ ನುಂಗಿಕೊಂಡು ಗಂಡನ ದಾರಿ ಕಾಯುತ್ತಿದ್ದಳು.
ಶಂಭು ನಾಲ್ಕು ದಿನದ ನಂತರ ಮನೆಗೆ ಬಂದು, ಹೆಂಡತಿ ಹತ್ತಿರ ಹೋಗಿ ಅದೇನು ಬುದ್ಧಿ ತಿಳಿಯಾಗಿತ್ತೋ ಗೊತ್ತಿಲ್ಲ, ಅವಳ ಕೈ ಹಿಡಿದು ಹೇಗಿದಿಯಾ,ಊಟ ಮಾಡಿದೆಯ ಅಂತ ಮಾತನಾಡಿಸಿದಾಗ ಅವಳ ದುಃಖವೆಲ್ಲ ಕರಗಿ ನೀರಾಗಿ ಹರಿದು ಹೋಗಿತ್ತು. ( ಹೊಲದಲ್ಲಿ ಆತನ ಗೆಳೆಯನ ಜೊತೆಗಿನ ದೀರ್ಘ ಕಾಲದ ಮಾತುಕತೆಯ ನಂತರ ಆತನಿಗೆ ಅವಳು, ಹಾಗೂ ಅವಳ ಬೆಲೆ ತಿಳಿದಿತ್ತು ಈ ಶಂಭುವಿಗೆ) ತನ್ನನ್ನೇ ನಂಬಿಕೊಂಡು ಬಂದ ಆ ಹೆಣ್ಣಿಗೆ ತನ್ನಿಂದ ಹಾಗೂ ತನ್ನ ಮನೆಯವರಿಂದ ಯಾವುದೇ ತೊಂದರೆ ಆಗಬಾರದು ಎಣ್ಣುಕ ಅರಿವು ಈಗ ಶಂಭುವಿನ ಮನಸ್ಸಿನ ಒಳಗೆ ಮನೆ ಮಾಡಿತ್ತು.
ತನ್ನವರಾದ ಎಲ್ಲರನ್ನೂ ಬಿಟ್ಟು , ನಾನು ಕಟ್ಟಿದ ಆ ಮಂಗಳ ಸೂತ್ರಕ್ಕೆ ಬೆಲೆ ಕೊಟ್ಟು , ನನ್ನನ್ನೇ ತನ್ನ ಜೀವವೆಂದು ನಂಬಿಕೊಂಡು ಬಂದ ಆ ಸೂಕ್ಷ್ಮ ಮನಸ್ಸಿನ , ಒಳ್ಳೆಯ ಹೃದಯದ ಸಂಗಾತಿಯನ್ನು ನಾನೆಷ್ಟು ನೋಯಿಸಿದೆನೆಂದು ಅವಳ ಕೈ ಹಿಡಿದುಕೊಂಡು ತನ್ನ ತಪ್ಪನ್ನು ಮನ್ನಿಸು ಎಂದೂ ತುಂಬಾ ಸಂಕಟದಿಂದ ಕೇಳಿಕೊಳ್ಳುತ್ತಿರುವಾಗ ಅವಳು, ತನ್ನೆಲ್ಲ ನೋವುಗಳನ್ನು ಪಕ್ಕಕ್ಕಿಟ್ಟು, ಗಂಡನ ಮನಸ್ಸಿನ ಬೇಸರವನ್ನು ತನ್ನ ಸಿಹಿ ಸಿಹಿ ಮಾತುಗಳಿಂದ ಹೋಗಲಾಡಿಸುವ ಪ್ರಯತ್ನ ಮಾಡಿದ್ದಳು. ಆಗ ಅವರಿಬ್ಬರ ನಡುವೆ ಪ್ರೀಟಿ ಎಂಬುದು ಮತ್ತಷ್ಟು ಗಟ್ಟಿಯಾಗತೊಡಗಿತ್ತು.
ಅವರಿಬ್ಬರ ಈ ಪ್ರೀತಿಯ ಮಾತುಗಳನ್ನು ಕೋಣೆಯಾಚೆ ನಿಂತು ಕೇಳಿಸಿಕೊಂಡ ಅವಳ ಅತ್ತೆ ಸಹಿಸದಾದಳು. ಮಗ ತನ್ನಿಂದ ದೂರವಾಗುತ್ತಿದ್ದಾನೆ ಎನ್ನುವ ಕೆಟ್ಟ ಯೋಚನೆ ತಲೆ ತುಂಬಾ ಸುತ್ತತೊಡಗಿತು. ಬರ್ರನೆ ಕೋಣೆಯೊಳಗೆ ಬಂದವಳೇ, ಶಂಭುವಿಗೆ ಬೈಯಲು ಶುರುಮಾಡಿದಳು. ಹೆಣ್ಣು ಹೇರುತ್ತ ಕೂತರೆ ನಿನ್ನ ವಂಶ ಬೆಳೆಸುವರಾರು, ನೋಡು ನಿನ್ನ ತಮ್ಮನ ಹೆಂಡತಿ ಗಂಡು ಹೆತ್ತು, ಈ ಮನೆಗೆ ವಾರಸುದಾರನನ್ನು ಕೊಟ್ಟಿದ್ದಾಳೆ. ಇವಳು ಇದ್ದಾಳೆ ಮನೆ ತುಂಬಾ ಪುತು ಪುತು ಅಂತ ಕುರಿ ಹಿಕ್ಕಿ ಹಾಕಿದಂಗೆ ಹೆಣ್ಣು ಮಕ್ಕಳನ್ನು ಹೆತ್ತು ಹೆತ್ತು ಮನೆ ತುಂಬಿಸಿದ್ದಾಳೆ ಅಂತೆಲ್ಲ ಬೈಯ್ಯುತ್ತಿದ್ದಳು.
ಆಗ ಶಂಭು,ಅವ್ವ ನೀನು ಕೂಡ ಹೆಣ್ಣು ಅಲ್ಲವೇ... ನೀನೇ ಹೇಗೆಂದರೆ ಹೇಗೆ ಅವ್ವ ಅನ್ನುವುದೇ ತಡ ಮನೆಯಲ್ಲಿ ರಾದ್ಧಾಂತ ಚಾಲುವಾಯಿತು. ಮಾತಿಗೆ ಮಾತು ಬೆಳೆದು ಸಣ್ಣ ಜಗಳ ಸ್ವಲ್ಪ ದೊಡ್ಡದೆ ಆಯ್ತು.
ಈಗ ಶಂಭುವಿನ ಮುಂದಿನ ಹೆಜ್ಜೆ ಏನೆಂಬುದನ್ನು ಮುಂದಿನ ಭಾಗದಲ್ಲಿ ನೋಡೋಣ.
