STORYMIRROR

Shridevi Patil

Abstract Crime Others

4  

Shridevi Patil

Abstract Crime Others

ಈ ಸಾಮ್ರಾಜ್ಯದ ಅಧಿಪತಿ ನಾನೇ.

ಈ ಸಾಮ್ರಾಜ್ಯದ ಅಧಿಪತಿ ನಾನೇ.

1 min
518

ನಾನ್ ಸ್ಟಾಪ್ ನವಂಬರ್ ಎಡಿಷನ್- ಆರಂಭಿಕ ಹಂತ 

ಸಾಮ್ರಾಜ್ಯ.


ಈ ನನ್ನ ಸಾಮ್ರಾಜ್ಯದಲ್ಲಿ ನನ್ನ ಮಾತೇ ವೇದ ವಾಕ್ಯ. ನಾನು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎಂದು ಅಂಡರ್ವಲ್ಡ್ ಕಿಂಗ್ ನಾಗಾ ಉರುಫ್ ನಾಶೀರ್ ಯಾವಾಗಲೂ ಹೇಳುತ್ತಿದ್ದನು. ಯಾವಾಗಲೂ ಹೊಡೆದಾಟ , ಕಳ್ಳತನ , ಕೊಲೆ , ಸುಲಿಗೆ ಮಾಡುತ್ತಾ ಇರುತ್ತಿದ್ದನು. ಕೈಯ್ಯಲ್ಲಿ ಒಂದಿಷ್ಟು ಪುಡಿ ರೌಡಿಗಳನ್ನು ಇಟ್ಟುಕೊಂಡು ತಾನೇ ಸರ್ವಾಧಿಕಾರಿ ಎನ್ನುವಂತೆ ನಡೆದುಕೊಳ್ಳುತ್ತಿದ್ದನು.


ನನ್ನ ಸಾಮ್ರಾಜ್ಯ , ನನ್ನ ಸಾಮ್ರಾಜ್ಯ , ಎಂದು ಗುಡುಗುತ್ತಿದ್ದ ನಾಗ ಯಾವಾಗಲೂ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದನು. ರಾಜಕಾರಣಿಗಳ ಶಿಫಾರಸ್ಸು ಪಡೆದುಕೊಂಡು ನಾನೇ ಕಿಂಗ್ ಎಂದು ಹೇಳಿಕೊಳ್ಳುತ್ತ , ತನ್ನ ಆ ಕೊಲೆ ಸುಲಿಗೆ ಮಾಡಿ ಕಟ್ಟಿಕೊಂಡಿದ್ದ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆಯುತ್ತಿದ್ದವನಿಗೆ ಮುಂದೆ ತಾನು ಪೊಲೀಸರ ಎನ್ಕೌಂಟರ್ ಗೆ ಬಲಿಯಾಗುತ್ತೇನೆ ಎನ್ನುವ ಅರಿವು ಇಲ್ಲದ ಆತ ಒಂದು ದಿನ ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿರುವ ಸಮಯದಲ್ಲಿ ಪೊಲೀಸರ ಎನ್ಕೌಂಟಗೆ ಬಲಿಯಾಗಿ ತನ್ನ ಜೀವವನ್ನು ಬಿಡಬೇಕಾಯಿತು.


Rate this content
Log in

Similar kannada story from Abstract