STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಹೊಂಗಿರಣ ಬೀರಿದ ಕಿರಣ್

ಹೊಂಗಿರಣ ಬೀರಿದ ಕಿರಣ್

2 mins
597

ನಾನ್ ಸ್ಟಾಪ್ ನವೆಂಬರ್ ಎಡಿಷನ್ - ಆರಂಭಿಕ ಹಂತ

೩ ಹೊಂಗಿರಣ


ಮದುವೆ ಎನ್ನುವುದು ಎಷ್ಟೋ ಜನರ ಬದುಕಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿ ಬಿಡುತ್ತದೆ. ಕೆಲವರ ಬದುಕಲ್ಲಿ ಸುಖ , ನೆಮ್ಮದಿಯ ತಂಪು ಗಾಳಿಬೀಸಿದರೆ , ಇನ್ನು ಕೆಲವರ ಬದುಕಲ್ಲಿ ದುಃಖ , ಜಗಳ , ಸಂಸಾರದಲ್ಲಿ ಸಂಶಯದ ಅಪಶ್ರುತಿಯ ಬಿರುಗಾಳಿ ಬೀಸುತ್ತದೆ. ಆದರೆ ಸಮಾಧಾನದಿಂದ ನಡೆದರೆ ಬದುಕು ಹಾಲು ಜೇನಾಗುತ್ತದೆ.


ಹೀಗೆ ರಮೇಶ , ಸಾತ್ವಿಕಳನ್ನು ಮದುವೆ ಆದಮೇಲೆ ತುಂಬಾ ಸಂತೋಷವಾಗಿದ್ದನು. ಸಾತ್ವಿಕಾ ಗಂಡನಿಗೆ ತಕ್ಕ ಸತಿಯವಳು. ಅತ್ತೆ ಮಾವನೊಂದಿಗೆ , ನಾದಿನಿ ರಜನಿಯೊಂದಿಗೆ ಹೊಂದಾಣಿಕೆಯೊಂದಿಗೆ , ಪ್ರೀತಿ ಮಮತೆಯೊಂದಿಗೆ ಚೆಂದದ ಜೀವನ ಮಾಡುತ್ತಿದ್ದಳು ಎಲ್ಲರೂ ಸಾತ್ವಿಕಳನ್ನು ತಮ್ಮ ಮನೆಯಲ್ಲಿ ಯಾರಿಗಾದರೂ ಮಾದರಿಯಾಗಿ ಉದಾಹರಣೆ ಕೊಡಲು ಸಾತ್ವಿಕಾ ಹೆಸರನ್ನು ಬಳಸುತ್ತಿದ್ದರು. ಹೀಗೆ ರಮೇಶ್ , ಸಾತ್ವಿಕಾ ಜೀವನ ಸಾಗುತ್ತಿರಲು , ಸಂತೋಷದಲ್ಲಿ ವರುಷಗಳು ಕಳೆದಿದ್ದೇ ತಿಳಿಯಲಿಲ್ಲ. ಒಂಬತ್ತು ವರುಷಗಳು ಕಳೆದವು. ಮನೆಯಲ್ಲಿ ಆಡಲು , ಓಡಾಡಲು ಪುಟ್ಟ ಕಂದನ ಆಗಮನವೇ ಆಗಲಿಲ್ಲ. ಎಷ್ಟೇ ವೈದ್ಯರನ್ನು ಸಂಪರ್ಕ ಮಾಡಿದರೂ , ಎಲ್ಲ ಟೆಸ್ಟ್ ಗಳನ್ನು ಮುಗಿಸಿದರೂ ಫಲ ಮಾತ್ರ ದೊರಕಲಿಲ್ಲ. ದೇವರ ಸೇವೆಗಳೂ ಮುಗಿದವೂ. ಆದರೆ ದೇವರ ಫಲವೂ ಶೂನ್ಯವಾಗಿತ್ತು.


ಕೊನೆಗೆ ಅವರ ಬಾಳಲ್ಲಿ ಹೊಂಗಿರಣದ ರೂಪದಲ್ಲಿ ಕಿರಣ್ ಬಂದ.


ಕಿರಣ್ ಅನಾಥ ಮಗು. ಸುಮಾರು ಒಂದು ವರ್ಷದ ಮಗು ಇದ್ದಿರಬಹುದು. ರಮೇಶ್ , ಸಾತ್ವಿಕಾ ಟ್ರಿಪ್ಪಿಗೆಂದು ಹೋದಾಗ ಸಮುದ್ರದ ದಡದಲ್ಲಿ ಅಮ್ಮನ ಶವದ ಮುಂದೆ ಅಳುತ್ತಿದ್ದ ಪುಟ್ಟ ಕಂದನನ್ನ ಕಂಡು ಸಾತ್ವಿಕಾ ಮರುಗಿದ್ದಳು. ಆ ಮಗುವಿನ ತಾಯಿ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡಿದ್ದಳು.ಎಲ್ಲರೂ ನೋಡುತ್ತ ಸುಮ್ಮನೆ ನಿಂತಿದ್ದನ್ನು ಕಂಡು ರಮೇಶ್ , ಎಲ್ಲರನ್ನು ವಿಚಾರಿಸಿದನು. ಟ್ರಿಪ್ಪಿಗೆಂದು ಬಂದ ಎಲ್ಲರೂ ಗೊತ್ತಿಲ್ಲ ಎಂದರು. ಆದರೆ ನಾಲ್ಕೈದು ಜನ ಅಲ್ಲಿನ ಸ್ಥಳೀಯರಿದ್ದರು.ಅವರು , ಆಕೆ ಬೇರೆ ಊರಿಂದ ಬಂದು ಇಲ್ಲಿದ್ದಳು. ಒಬ್ಬಂಟಿ ಹೆಂಗಸು. ಇಲ್ಲಿ ಬಂದಾಗ ಗರ್ಭಿಣಿ ಆಗಿದ್ದಳು . ಅಲ್ಲಿಂದ ಇಲ್ಲಿಯವರೆಗೆ ಆಕೆಯನ್ನು ಒಬ್ಬರೂ ನೋಡಲು ಬಂದಿಲ್ಲ. ಮಗು ಹುಟ್ಟಿ ವರುಷವಾದರೂ ಆಕೆ ತನ್ನೂರು , ತನ್ನ ಜನದ ಬಗ್ಗೆ ಹೇಳಿಕೊಂಡಿಲ್ಲ. ಪಾಪ ಇವತ್ತು ಸತ್ತೇ ಹೋಗಿದ್ದಾಳೆ. ಮಗು ಅನಾಥವಾಯಿತು ಎಂದು ಹೇಳಿದರು. ಆಗ ಸಾತ್ವಿಕಾ ಅತ್ತೆ ಮಾವನಿಗೆ ಫೋನು ಮಾಡಿ ವಿಷಯ ತಿಳಿಸಿ , ಮಗು ಬಗ್ಗೆ ಹೇಳಿದಳು. ಆಗ ವಿಶಾಲ ಮನಸ್ಸಿನ ಅತ್ತೆ ಮಾವ ಆ ಮಗುವನ್ನು ಪೊಲೀಸ್ ಠಾಣೆಗೆ ಕರೆದೊಯ್ದು , ಪೊಲೀಸರ ಅನುಮತಿಯ ಮೇರೆಗೆ ಪಾಪುವನ್ನು ತಮ್ಮ ಮನೆಗೆ ತರಲು ಹೇಳಿದರು. 


ಆಗ ಖುಷಿಯಿಂದ ತನ್ನ ಗಂಡನಿಗೆ , ಅತ್ತೆ ಮಾವ ಹೇಳಿದ್ದನ್ನು ಹೇಳಿದಳು. ರಮೇಶ ಸ್ಥಳೀಕರೊಡನೆ ಮಾತಾಡಿ , ಅವರ ಒಪ್ಪಿಗೆ ಪಡೆದು , ಮಗುವನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ , ಅಲ್ಲಿ ನಡೆದಿದ್ದೆಲ್ಲವನ್ನು ಹೇಳಿದನು. ತಮಗೆ ಮಕ್ಕಳಾಗಲ್ಲ. ಈ ಮಗುವನ್ನು ತಾವೇ ಸಾಕುವುದಾಗಿ ಹೇಳಿ , ಆ ಮಗು ಸಮೇತ ಊರಿಗೆ ಮರಳಿದರು. 


ನಂತರ ಕಾನೂನಿನ ಮೂಲಕ ಆ ಮಗುವನ್ನು ದತ್ತು ಪಡೆದುಕೊಂಡರು. 


ಅಂದಿನಿಂದ ಆ ಮಗುವನ್ನು ಕಿರಣ್ ಎಂದು ಕರೆದರು. ಮನೆಯವರೆಲ್ಲರೂ ಕಿರಣ್ ನಮ್ಮ ಮನೆಗೆ ಹೊಂಗಿರಣದ ರೂಪದಲ್ಲಿ ಬಂದು , ಬರಿದಾದ ಮಡಿಲಿಗೆ ಖುಷಿಯನ್ನು ತುಂಬಿದನು. ಖಾಲಿ ಖಾಲಿ ಮನೆಯಲ್ಲಿ ನಗು ಹರಡಿದನು ಎಂದು ಎಲ್ಲರೂ ಸಂಭ್ರಮಿಸಿದರು.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics