STORYMIRROR

shristi Jat

Classics Inspirational Others

3  

shristi Jat

Classics Inspirational Others

ಹೀರೋ

ಹೀರೋ

1 min
123

ಹೀರೋ ಅಂದರೆ ಅವರು ನಮಗೆ ಮಾದರಿಯಾಗಿರುವಂತಹ ವ್ಯಕ್ತಿ ಅವರನ್ನು ನಾವು ಅನುಸರಿಸುತ್ತೇವೆ.ನಮ್ಮ ಜೀವನದ ಮೊದಲ ಹೀರೋ ಅಂದರೆ ಅದು ನಮ್ಮ ತಂದೆ ನಮ್ಮ ಬೇಕು ಬೇಡಗಳನ್ನು ಅರಿತುಕೊಂಡು ನಮ್ಮನ್ನು ಖುಷಿಯಿಂದ ಸಲಹುವವನು ಸಂಸಾರದ ಭಾರವನ್ನು ಹೊತ್ತು ಭವಿಷ್ಯದ ಬಗ್ಗೆ ಚಿಂತಿಸುವವನು ನಮ್ಮ ಉತ್ತಮ ಭವಿಷ್ಯಕ್ಕಾಗಿ ಮೊದಲೇ ಅದರ ತಯಾರಿಮಾಡುವವನು.ಉದಾಹರಣೆಗೆ ನಮಗೆ ವಾಸಿಸಲು ಸ್ವಂತ ಮನೆ ಅಲ್ಲದೆ ನಮ್ಮನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಿ ನಮ್ಮ ಕಾಲ್ಮೇಲೆ ನಾವು ನಿಲ್ಲುವ ಹಾಗೆ ಮಾಡುವನು.ಎರಡನೆಯದ್ದಾಗಿ ನಮ್ಮ ಪ್ರೀತಿ ವಾತ್ಸಲ್ಯವನ್ನು ತುಂಬಿ ನಮಗೆ ನಯ ವಿನಯ ಹೇಳಿಕೊಟ್ಟು ಸಂಸ್ಕಾರವನ್ನು ಕಲಿಸುವವಳು.ಮೂರನೆಯದ್ದಾಗಿ ಹೀರೋ ಎಂದು ಹೇಳುವುದಾದರೆ ಅದು ನಮ್ಮ ಗುರುಗಳು ನಮಗೆ ಅಕ್ಷರಗಳನ್ನು ಕಲಿಸಿ ಜ್ಞಾನದ ಬೀಜವನ್ನು ಬಿತ್ತುವವನು.ನಮ್ಮ ಗುರಿಗಳನ್ನು ಮುಟ್ಟಲು ಉತ್ತಮ ಮಾರ್ಗದರ್ಶನ ಮಾಡುವವನು.ನಾಲ್ಕನೆಯದ್ದಾಗಿ ಹೀರೋಗಳೆಂದರೆ ಅದು ಸಾಧಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರು.ಸ್ವಾರ್ಥವನ್ನು ತ್ಯಜಿಸಿ ಯಾರು ಸಮಾಜಕ್ಕಾಗಿ ದೇಶದ ಅಭಿವೃದ್ಧಿಗಾಗಿ ಕೋಡುಗೆಗಳನ್ನು ನೀಡಿದರು.ಉದಾಹರಣೆಗೆ ಸರ್.ಎಂ.ವಿಶ್ವೇಶ್ವರಯ್ಯನವರು,ಮದರ್ ತೆರೆಸಾರವರು,ಡಾ.ಬಿ.ಆರ್.ಅಂಬೇಡ್ಕರ್ ಅವರು ಇತ್ಯಾದಿ.ಹಾಗೂ ನಮ್ಮ ವೀರರು ಮತ್ತು ವೀರ ವನಿತೆಯರಾದಂತಹ ಭಗತ್ ಸಿಂಗ್ ಸುಭಾಶ್ಚಂದ್ರ ಬೋಸ್, ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮಹಾತ್ಮ ಗಾಂಧೀಜಿಯವರು ಜನರ ಸ್ವಾತಂತ್ರ್ಯಕ್ಕಾಗಿ ಅವರ ಹಕ್ಕುಗಳಿಗಾಗಿ ಅನ್ಯಾಯಗಳ ವಿರುದ್ಧ ಹೊರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯದ ಕೋಡುಗೆ ಕೋಟ್ಟವರು.

"ಹೀರೋ ಎಂದರೆ ವ್ಯಕ್ತಿತ್ವ ಅವರ ಆದರ್ಶಗಳನ್ನು ಅನುಸರಿಸುತ್ತಾರೆ"


Rate this content
Log in

Similar kannada story from Classics