ಹೆಣ್ಣಿನ ನೋವು ಅರಿವಾವರಾರು?
ಹೆಣ್ಣಿನ ನೋವು ಅರಿವಾವರಾರು?
ಮದುವೆ ಅದ್ ಮೇಲೆ ಹೆಣ್ಣಿನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿದೆ.
ಹುಟ್ಟಿದ ತವರು ತನ್ನದಾದರು ನನ್ನದಲ್ಲ! ಎಂಬಂತೆ ಸಾಗಬೇಕು.
ಎಲ್ಲರನ್ನೂ ಎಲ್ಲವನ್ನೂ ಅರಿತು ಸಾಗುವುದು ಒಂದು ರೀತಿಯಲ್ಲಿ ತಪ್ಪೇ!
ತವರಲ್ಲಿ ಇರುವ ಬಯಕೆ ಇದ್ದರು,
ಗಂಡನ ಮನೆಯಲ್ಲಿ ಯಾಕೆ ಒಂದು ತಿಂಗಳು
ಅವಳು ಹೊಗಬೇಕಾ ಎಂದು ಕೆಳುವವರ ಭಯ.
ಇಬ್ಬಿಬ್ಬರು ಗಂಡು ಮಕ್ಕಳು ಇದ್ದರು
ಅರಿತು ಅರಿವವಳ ಯಾರು ಅರಿಯಲಾರರು ಇಲ್ಲಿ
ಅಲ್ಲಿ ಇಬ್ಬರು ಹೆಣ್ಣು ಮಕ್ಕಳು ಇರುವವರೂ ವರ್ಷದಲ್ಲಿ ಒಮ್ಮೆಯಾದರೂ ಒಂದು ತಿಂಗಳಾದರೂ ಮಕ್ಕಳು ನಮ್ಮೊಂದಿಗೆ ನಮ್ಮ ಮನೆಯಲ್ಲಿ ಇರಬೇಕು ಎಂದು ಆಸೆ ಪಡುವ ಹೊತ್ತು,ಸಾಕಿ,ಸಲುಗಿದ ಹೆತ್ತವರು.
ಇಲ್ಲಿ ಇರುವುದು ಜವಾಬ್ದಾರಿ
ಅಲ್ಲಿ ಹೋಗಿ ಬರುವುದು ಮಗಳಾಗಿ ನನ್ನ ಕರ್ತವ್ಯ ಎಂದು ಯಾಕೆ ಯಾರಿಗೂ ಅರಿವಗುತಿಲ್ಲ.
ಎಲ್ಲರು ಸ್ವಾರ್ಥಿಗಳೇ ಆದರೆ ನಿಷ್ಕಲ್ಮಶ ಪ್ರೀತಿ ತೋರಲು ಹಂಬಲಿಸುವ ನನ್ನ ತಾಯಿಗೆ ನಾನು ನೋವುಂಟು ಮಾಡುವ ಹಾಗೆ ಮಾಡುವುದು ನನ್ನವರು ಎಂದು ನಾನು ನಿಭಾಯಿಸುತ್ತಿರುವ ನನ್ನ ಜವಾಬ್ದಾರಿ.
ಹೆಣ್ಣಿನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ ಇಲ್ಲಿ.
ಜವಾಬ್ದಾರಿ ಹೊತ್ತ ನನಗೆ ಸಿಕ್ಕ ಪಟ್ಟ
"ಆಗುವ ಎಲ್ಲ ಜಗಳಕ್ಕೆ ನೀನೇ ಹೊಣೆ"
ಯಾಕೆ ಇಷ್ಟು ದಿನ ಹೋಗಬೇಕು ನೀನು ಇಷ್ಟು ದಿನ ಹೋಗಿದ್ದಕ್ಕೆ ಒಬ್ಬರ ಒಂದೊಂದು ಪ್ರಶ್ನೆಗೆ ನಾನು ಉತ್ತರಿಸುವಂತಾಗಿದೆ ಎಂದು ಆರೋಪ.
ನನಗು ಒಂದು ಮನಸಿದೆ ಎಂದು ಯಾಕೆ ಯಾರಿಗೂ ಅರಿವಗುತಿಲ್ಲ.
ನಾನೇಕೆ ಮಾಡಬೇಕು ಎಂದು ಜವಾಬ್ದಾರಿ ಮರೆತು ಹೋದರೆ ತಪ್ಪು, ಆದರೆ ಊರಿಗೆ ಹೋದರು ಇಲ್ಲಿನ ಬೇಕು ಬೇಡಗಳನ್ನು ಅರಿತು ಪುರೈಸಿದರೂ ಇಂತಹ ಮಾತುಗಳು ಬಂದರೆ ಹೇಗೆ?
ಹೆಣ್ಣಿನ ನೋವು ಅರಿವಾವರಾರು
ಅರಿತವರು ಅರಿಯದಂತಾದರೆ ಬದುಕುವುದಾದರೂ ಹೇಗೆ?
✍️ಜೀವಿತ ಶಿವರಾಜ್.
