Vaman Acharya

Romance Classics Others

4  

Vaman Acharya

Romance Classics Others

ದುಡುಕಿನ ನಿರ್ಧಾರ

ದುಡುಕಿನ ನಿರ್ಧಾರ

5 mins
431


ಹೀಗೊಂದು ದುರಂತ ಪ್ರೇಮ ಕಥೆ

ಬೆಳಗ್ಗೆ ಆರು ಗಂಟೆ ಸಮಯ. ಮೊಬೈಲ್ ನಿಂದ ಆಗುತ್ತಿರುವ ರಿಂಗ್  ಶಬ್ದ ಕೇಳಿದ  ಸುಷ್ಮಿತಾಗೆ ನಿದ್ರೆಯಿಂದ ಎಚ್ಚರವಾಯಿತು. ಆಕೆಗೆ ಹಾಸಿಗೆಯಿಂದ ಏಳಲು ಮನಸ್ಸು ಇರದೇ ಇದ್ದರೂ ಏಳುವ ಅನಿವಾರ್ಯತೆ ಇದ್ದಿತು. 

"ಹಲೋ, ಸುಷ್ಮಿತಾ, ನಾನು ಪವಿತ್ರ. ಬೇಗ ರೆಡಿ ಆಗು."

"ಆಯಿತು" ಎಂದಳು ಸುಷ್ಮಿತಾ 

ಒಂದು ವಾರದ ಹಿಂದೆ ಪ್ಲಾನ್ ಮಾಡಿದ ಪ್ರಕಾರ ಅಂದು ರವಿವಾರ ಪವನಪುರ, ಪವಮಾನ ಬೆಟ್ಟ  ಪ್ರವಾಸಿ ತಾಣಕ್ಕೆ  ಹೋಗುವ ಸಿದ್ಧತೆ ಆಗಿತ್ತು.  ಬೆಂಗಳೂರಿನಿಂದ ಪವನಪುರ ಒಂದು ನೂರು ಕಿಲೊಮೀಟರ್ ದೂರ. ಸುಷ್ಮಿತಾ ಸರಿಯಾಗಿ 9 ಗಂಟೆಗೆ ರೆಡಿ ಆದಳು. ಮುಂದೆ  ಹತ್ತು ನಿಮಿಷದಲ್ಲಿ ಪವಿತ್ರ, ತೇಜಸ್ವಿನಿ ಹಾಗೂ ಮಂದಾಕಿನಿ ಆಗಮಿಸಿದರು. ತಡ ಮಾಡದೇ ಹೊರಟೇ ಬಿಟ್ಟರು. ಸುಷ್ಮಿತಾ ತನ್ನ ಕಾರ್ ಡ್ರೈವ್ ಮಾಡುತ್ತಿರುವಾಗ ಹುಷಾರಾಗಿ ನಡೆಸು ಎಂದು ಸ್ನೇಹಿತೆಯರು ಮೇಲಿಂದ ಮೇಲೆ  ಹೇಳಿದರು. ಪವನಪುರದ ಪವಮಾನ ಬೆಟ್ಟ ತಲುಪಲು ಮಧ್ಯಾಹ್ನ ಹನ್ನೆರಡು ಗಂಟೆ. ಅಲ್ಲಿಯ ಹವಾಮಾನ ಅಲ್ಹಾದಕರ ವಾಗಿರುವದು ಕಂಡು ಎಲ್ಲರಿಗೆ ಸಂತಸ ವಾಯಿತು. ಗಿಡ ಮರಗಳು, ತರ ತರಹದ ಪಕ್ಷಿಗಳು ಗೋಚರವಾಗಿ ಇದು ನಿಸರ್ಗದ ಸುಂದರವಾದ ತಾಣ ಎಂದು ತಿಳಿಯಿತು. ರಮಣೀಯವಾದ ಪ್ರಕೃತಿಯ ಸೌಂದರ್ಯ ಅವರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು. ಸ್ನೇಹಿತೆಯರು ಅಲ್ಲಿ ಕಂಡ  ಮನಮೋಹಕ ಸುಂದರವಾದ ಜಲಪಾತ, ಕೊಳ, ವರ್ಣರಂಜಿತ ಅರಳಿದ ಹೂವುಗಳ ವೈವಿಧ್ಯತೆಗಳನ್ನು ವೀಕ್ಷಿಸುತ್ತ ಇರುವಾಗ ತಂಪಾದ ಗಾಳಿ ಬೀಸುತ್ತಿತ್ತು. ಹಕ್ಕಿಗಳು ಹಾರುತ್ತಿದ್ದವು. ಆವುಗಳ ಇಂಪಾದ ಕಲರವ ಕೇಳಿಸಿತು. ಕೆಂಪು ಮುಖದ ಮಂಗಗಳು ಮರದಿಂದ ಮರಕ್ಕೆ ಜಿಗಿಯುವದು ಕಾಣಿಸಿತು.  ಕ್ಷೀರ ಜಲಪಾತದ ತಡೆ ರಹಿತ ಧ್ವನಿ ಭವ್ಯವಾದ ನೋಟವಾಗಿತ್ತು.  ಬೇಸಿಗೆ ಇದ್ದರೂ  ಎತ್ತರದ ಮರಗಳಿಂದಾಗಿ ನೆರಳು ಬೇಸಿಗೆಯ ತಾಪ ಆಗಲೇ ಇಲ್ಲ.  ಇವರೆಲ್ಲರೂ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ನಲ್ಲಿ ಇರುವರು. ಪವನಪುರದ ಪ್ರಸಿದ್ಧ ಪ್ರಕೃತಿ ತಾಣವಾದ ಪವಮಾನ ಬೆಟ್ಟಕ್ಕೆ ಪ್ರವಾಸವನ್ನು ಏರ್ಪಡಿಸಿದ್ದರು. ಸುಂದರ ಜಲಪಾತದ ಕೆಳಗೆ ನೀರು ಹರಿಯುವ ಕೊಳದಲ್ಲಿ ಈಜುವ ಬಯಕೆಯನ್ನು ವ್ಯಕ್ತಪಡಿಸಿದಳು.  ಇತರ ಸ್ನೇಹಿತೆಯರು ಅಪಾಯಕಾರಿ ಸಾಹಸಗಳನ್ನು ಮಾಡಬೇಡ ಎಂದು ಅಕೆಗೆ ಎಷ್ಟು ಹೇಳಿದರೂ ಕೇಳದೇ ಕೊಳದಲ್ಲಿ ಇಳಿದಳು. ಎಲ್ಲರಿಗೂ ತುಂಬಾ ಗಾಬರಿ. 

  ಪವಿತ್ರ ಮನೆಯ ಪಕ್ಕದಲ್ಲಿ ಇರುವ ಮಕರಂದ ಎಂಬ ಯುವಕ ಅನಿರೀಕ್ಷಿತವಾಗಿ ಆಗಮಿಸಿ ಇವರ ಗುಂಪಿಗೆ ಸೇರಿಕೊಂಡ. ಪವಿತ್ರ ಮನೆಗೆ ಸುಷ್ಮಿತ ಆಗಾಗ ಹೋಗುತ್ತಿರುವದರಿಂದ ಮಕರಂದನ ಪರಿಚಯ ಆಗಿತ್ತು. ಅದೇ ತಾನೆ ಬಿ ಇ ಮುಗಿಸಿ ಸಾಫ್ಟವೇರ್ ಇಂಜನಿಯರ್ ಅಂತಾ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಸುಷ್ಮಿತಾಳ ಸೌಂದರ್ಯ ಕಂಡು ಅವನಿಗೆ ಆಕೆಯ ಮೇಲೆ ಪ್ರೇಮ ಅಂಕುರಿಸಿತು.  ಒಂದು ದಿವಸ ಆಕೆ ಪವಿತ್ರ ಮನೆಗೆ ಬಂದಾಗ ಧೈರ್ಯ ಮಾಡಿ ಪ್ರೀತಿ ವ್ಯಕ್ತ ಪಡಿಸಿದ. ಆ ಸಮಯ ಸುಷ್ಮಿತಾಗೆ ಸಿಟ್ಟು ತಡೆಯಲು ಆಗದೇ  ಪವಿತ್ರ ಳ ಸಮ್ಮುಖದಲ್ಲಿ ಅವನನ್ನು  ಬೈದು ಕಳಿಸಿದಳು. ಅವನಿಗೆ ಏನೂ ಮಾಡಲು ತಿಳಿಯದೇ ಅವಮಾನ ಆದರೂ ಸುಮ್ಮನಾಗಿ ಅಲ್ಲಿಂದ ಹೊರಟ.

ಸುಷ್ಮಿತಾ  ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಅನೇಕ ಶೌರ್ಯ ಪ್ರಶಸ್ತಿಗಳನ್ನು ಪಡೆದಿದ್ದಳು. ಸ್ನೇಹಿತರ ಎಚ್ಚರಿಕೆಗೆ ಕಿವಿಗೊಡದೆ ಆಕೆ ಕೊಳದಲ್ಲಿ ಹೋಗಿಯೇ ಬಿಟ್ಟಳು. ಕೆಲವು ಸೆಕೆಂಡುಗಳ ಸಮಯ ಹೊರಗೆ ಆಕೆ ಬರಲೇ ಇಲ್ಲ.  ಶೀಘ್ರದಲ್ಲೇ,  ಆಕೆಯ ಸ್ನೇಹಿತೆಯರು ರಕ್ತ

ದೊಂದಿಗೆ ಇರುವ ನೀರನ್ನು ನೋಡಿ ತುಂಬಾ ಗಾಬರಿ ಆದರು. ಸುಷ್ಮಿತಾಳನ್ನು ಮೊಸಳೆ ತಿಂದು ಹಾಕಿತೇ ಎಂದು ಎಲ್ಲರು ಗಾಬರಿ ಆದರು.  ಪರಿಸ್ಥಿತಿಯನ್ನು ಹೇಗೆ ಎದುರಿಸುವುದು ಎಂದು ಅವರಿಗೆ ಚಿಂತೆ ಆಯಿತು.   ಆದರೆ ಅವರಿಗೆ ಆಶ್ಚರ್ಯವಾಗುವಂತೆ, ಸುಷ್ಮಿತ ಸುರಕ್ಷಿತವಾಗಿ ತನ್ನ ಕೈಗಳನ್ನು ಬೀಸುತ್ತಾ ಮತ್ತು ನೃತ್ಯ ಮಾಡುತ್ತಾ ಹೊರ ಬಂದಳು. ಮಕರಂದ ಸುಷ್ಮಿತಾ ಸಾಹಸದ ಕಾರ್ಯವನ್ನು ಗಮನಿಸಿ ಆಶ್ಚರ್ಯ ಚಕಿತನಾದ. ಅವನು ಆಕೆಯನ್ನು ಒಂದೇ ಸಮನೆ  ನೋಡುತ್ತಿದ್ದನು. ಕಾರಣ ಆಕೆ ಆ ಭಂಗಿಯಲ್ಲಿ ಅವನಿಗೆ ಸುಂದರವಾಗಿ ಕಾಣಿಸಿದಳು. ಆಗ ಸುಷ್ಮಿತ ಕೋಪ ಗೊಂಡು ಅವನ ನಡವಳಿಕೆಯನ್ನು ಸರಿಪಡಿಸಲು ವಾರ್ನಿಂಗ್ ಕೊಡಲು  ಮುಂದೆ ಹೋದವಳು ಸುಮ್ಮನಾದಳು. ಸುಷ್ಮಿತಾ ಜೊತೆಗೆ ಮಾತನಾಡುವ ತವಕದಿಂದ  ಮಕರಂದ  ಹಿಂದಿನ ಘಟನೆ ಮರೆತು ಎರಡು ಮೂರು ಬಾರಿ ಪ್ರಯತ್ನಿಸಿದ.

 ಅವನ ಬಗ್ಗೆ ಸುಷ್ಮಿತಾಗೆ ಕೆಟ್ಟ ಅಭಿಪ್ರಾಯ ಏಕೆ ಬಂದಿತು?

ಮಕರಂದ ಈಗಾಗಲೇ ಒಂದು ಹುಡುಗಿಯನ್ನು ತನ್ನ ಪ್ರೇಮ ಜಾಲದಲ್ಲಿ ಸಿಲುಕಿಸಿ ಮೋಸ ಮಾಡಿದ ಎನ್ನುವ ಸುದ್ದಿ ಹಬ್ಬಿತ್ತು. ಅದು ಸತ್ಯವೋ ಸುಳ್ಳೋ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗಲಿಲ್ಲ.   ಪ್ರತಿಯೊಬ್ಬರೂ  ಮನೆಯಲ್ಲಿ ತಯಾರಿಸಿದ ವಿವಿಧ ತರಹದ ಭಕ್ಷ್ಯಗಳನ್ನು ಹಂಚಿಕೊಂಡರು. ಆಹ್ವಾನಕೊಡದೇ ಆಗಮಿಸಿದ ಅತಿಥಿ ಮಕರಂದನಿಗೂ ಆಹಾರ ಕೊಟ್ಟರು. ಸುಷ್ಮಿತಾಗೆ ಸ್ನೇಹಿತೆಯರು  ಕೊಳದಲ್ಲಿ ಅವಳಿಗಾದ ಅನುಭವದ ಬಗ್ಗೆ ಕೇಳಿದರು. ಮಕರಂದ ಅವರ ಜೊತೆಗೆ ತಲೆ ಹಾಕಿದ

ಸುಷ್ಮಿತಾ ಹೀಗೆ ವಿವರಿಸಿದಳು. 

" ಇದು ನನ್ನ ಜೀವನದಲ್ಲಿ ಸ್ಮರಣೀಯ ಮತ್ತು ರೋಮಾಂಚಕಾರಿ ಅನುಭವ. ನನಗೆ ಆಗ  ಮೊಸಳೆಗಳಿಂದ ಅಥವಾ ಇತರ ಜೀವಿಗಳಿಂದ ಯಾವುದೇ ಭಯ ಆಗಲಿಲ್ಲ.   ನೀರು ಸ್ಫಟಿಕದಂತೆ  ಸ್ಪಷ್ಟವಾಗಿತ್ತು.  ಮುಂದೆ ಹೋಗದಂತೆ ನಾನು ಮುನ್ನೆಚ್ಚರಿಕೆ ತೆಗೆದುಕೊಂಡೆ. ಸ್ನಾನ ಮಾಡಿದ ಸ್ಥಳವು ತುಂಬಾ ಆಳವಾಗಿರಲಿಲ್ಲ.  ನನಗೆ ತುಂಬಾ ತಣ್ಣಗೆ ಇರುವ ನೀರು ಮೈ ಕೈ ಜುಮ್ ಎಂದು ಒಂದು  ನಿಮಿಷಕ್ಕಿಂತ ಹೆಚ್ಚು ಉಳಿಯಲು ಸಾಧ್ಯವಾಗದೇ ಇರುವದರಿಂದ ಹೊರಗೆ ಬಂದೆ."

  ಆಕೆಯ ಅನುಭವವನ್ನು ಕೇಳಿ ಎಲ್ಲರೂ ರೋಮಾಂಚನವಾಯಿತು.  ಮಕರಂದನಿಗೆ ಸಂತೋಷವಾಗಿ ಕುಣಿದಾಡಿದ. ಮತ್ತೆ ಆಕೆ ಜೊತೆಗೆ  ಅವನು ಮಾತನಾಡಿ ತನ್ನ ಬಗ್ಗೆ ಹರಡಿದ ಸುದ್ದಿ ಸುಳ್ಳು ಎಂದು ಹೇಳಲು ಬಯಸಿದ. ಆದರೆ ಅವನ ಪ್ರಯತ್ನ ವಿಫಲವಾಯಿತು. ವಾಸ್ತವವನ್ನು ತಿಳಿಯದೆ ಸುಷ್ಮಿತ ಅವನನ್ನು ಸಂಪೂರ್ಣವಾಗಿ ಕಡೆಗಣಿಸಿದಳು.  ಇದನ್ನು ಗಮನಿಸುತ್ತಿರವ ಪವಿತ್ರ ಗೆ  ತುಂಬಾ  ನಿರಾಸೆ ಆಯಿತು.   ಅವಳು ಸುಷ್ಮಿತಾ ಪರಿಸ್ಥಿತಿಯನ್ನು ಅರ್ಥಮಾಡಿ

ಕೊಂಡಳು.  ಸುಷ್ಮಿತಾ ಗೆ ಆಗಿರುವ  ಅನುಮಾನಗಳನ್ನು ಹೋಗಲಾಡಿಸಲು ಪವಿತ್ರ ಗೆ  ಸಾಧ್ಯವಾಗಲಿಲ್ಲ.  ಸಂಜೆ ನಾಲ್ಕು ಗಂಟೆಗೆ ಎಲ್ಲರೂ ಬೆಂಗಳೂರಿಗೆ ಮರಳಲು ರೆಡಿ ಆಗಿ ಕಾರ್ ಹತ್ತಿದರು. ಮಕರಂದ ತನ್ನ ಕಾರ್ ಮೂಲಕ ಪ್ರಯಾಣ ಬೆಳೆಸಿದ. ಅವನು ಸುಷ್ಮಿತಾ ಕಾರ್ ಫಾಲೋ ಮಾಡಿದ. ಸುಷ್ಮಿತಾ ಡ್ರೈವ್ ಮಾಡುತ್ತಾ ಮಕರಂದನ ಅನುಚಿತ ನಡವಳಿಕೆ ಬಗ್ಗೆ  ಚಿಂತೆ ಮಾಡಿದಳು. ಅವನ ಉದ್ದೇಶ ಸುಷ್ಮಿತಾಳ ಸಂಶಯ ನಿವಾರಿಸಿ ತನ್ನ ವಳಾಗಿ ಮಾಡಿಕೊಳ್ಳುವದು ಆಗಿತ್ತು. ಆತ ಇದನ್ನು  ವ್ಯಕ್ತ ಪಡಿಸುವದರಲ್ಲಿ ಸಂಪೂರ್ಣವಾಗಿ ಆಸಮರ್ಥನಾದ.

 ಮುಂದೆ ಒಂದು ತಿಂಗಳು ಆದಮೇಲೆ ಮಕರಂದ  ಪ್ರತಿದಿನ ಸಂಜೆ ಸುಮಾರು ಹದಿನೈದು ದಿನಗಳ ಕಾಲ ದಿನಾಲು ಸುಷ್ಮಿತಾಗೆ ಕರೆ ಮಾಡುತ್ತಿದ. ಅವನ ಮೇಲಿಂದ ಮೇಲೆ ಬರುವ ಕರೆ  ಗಳಿಂದಾಗಿ ಅವಳು ಬೇಸರ ಗೊಂಡಳು.  ಈ ಮಧ್ಯೆ ಪವಿತ್ರ  ಸುಷ್ಮಿತಾಗೆ ಕರೆ ಮಾಡಿ ಮಕರಂದನ  ಬಗ್ಗೆ ತಿಳಿಸಿದಳು. ಇದ್ದಕ್ಕಿದ್ದಂತೆ, ಮಕರಂದ ಸುಷ್ಮಿತಾಗೆ ಕರೆ ಮಾಡುವುದನ್ನು ನಿಲ್ಲಿಸಿದ.  ಅವನ ಕರೆಗಳನ್ನು ತೆಗೆದು ಕೊಳ್ಳದೆ ಇರುವ ತಪ್ಪನ್ನು ಸುಷ್ಮಿತಾ ಅರಿತು ಕೊಂಡಳು. ತನ್ನ ಅಸಭ್ಯ ವರ್ತನೆಗೆ ಅವಳು ತುಂಬಾ ಪರಿತಪಿಸಿದಳು ಆತನ ಕರೆಗೆ ಓಗೊಡುವ ಸೌಜನ್ಯ ತೋರಿಸಿದೇ ಇರುವದಕ್ಕೆ ನೊಂದು ಕೊಂಡಳು.

ಮೂರು ತಿಂಗಳು ಕಳೆಯಿತು.  ಸುಷ್ಮಿತಾ, ಪವಿತ್ರಗೆ ಕರೆ ಮಾಡಿ  ಆ ದಿನ ಸಂಜೆ 6 ಗಂಟೆಗೆ ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದಳು. ಪವಿತ್ರ ಬರಲು ಹೇಳಿದಳು.  ಸುಷ್ಮಿತಾ ಅವಳ ಮನೆಗೆ ತಲುಪಿದಾಗ, ಸಂಜೆ 6.30 ಆಗಿತ್ತು.  

"ಹೇಗಿದ್ದೀ  ಪವಿತ್ರ?" ಎಂದಳು.

"ನಾನು ಚೆನ್ನಾಗಿದ್ದೇನೆ" ಎಂದಳು.  ಆ ಸಮಯದಲ್ಲಿ ಪವಿತ್ರ ಪುಸ್ತಕ ಓದುವುದರಲ್ಲಿ ತೊಡಗಿದ್ದಳು.

ಮಕರಂದನನ್ನು  ಭೇಟಿ ಮಾಡುವ ಬಯಕೆಯನ್ನು ಸುಷ್ಮಿತಾ ವ್ಯಕ್ತಪಡಿಸಿದಳು. ಪವಿತ್ರ ಅವಳನ್ನು ಕರೆದುಕೊಂಡು ಮಕರಂದನ ಮನೆಯ ಪ್ರವೇಶ ಆಯಿತು.  ಮನೆಯಲ್ಲಿ ಯಾರೂ ಇರದೇ ಮೌನವಿತ್ತು.  ಒಬ್ಬ ಮುದುಕಿ ಮೂಲೆಯಲ್ಲಿ ಕುಳಿತಿದ್ದಳು.  ಇಬ್ಬರೂ ಮಕರಂದನ ಓದುವ ಕೋಣೆಗೆ ಹೋದರು.  ಬಾಗಿಲು ಮುಚ್ಚಿತ್ತು.  ಪವಿತ್ರ  ಎರಡು  ಬಾರಿ ಬಾಗಿಲು ತಟ್ಟಿದಳು.  ಯಾವುದೇ ಪ್ರತಿಕ್ರಿಯೆ ಬರಲಿಲ್ಲ.  ಅವಳು ಬಾಗಿಲನ್ನು ತಳ್ಳಲು ಪ್ರಯತ್ನಿಸಿದಳು. ಯಾವುದೇ ದೈಹಿಕ ಶಕ್ತಿಯಿಲ್ಲದೆ ಬಾಗಿಲು ತೆರೆಯಿತು.  ಮಕರಂದ ಒಂದು ಮೂಲೆಯಲ್ಲಿ ಕುಳಿತಿದ್ದ.  ಅವನ ಪರಿಸ್ಥಿತಿ  ಭಯಾನಕವಾಗಿತ್ತು. ತಲೆ ತುಂಬಾ ದಟ್ಟವಾದ ಕೂದಲು, ಒಂದು ಕೈಯಲ್ಲಿ ಸುಷ್ಮಿತಾಳ ಬ್ರಾಸಲೇಟ್ ಇನ್ನೊಂದು ಕೈಯಲ್ಲಿ ಏನೋ ಬರೆದ ಕಾಗದವಿತ್ತು.  ಅವನು ಸುಷ್ಮಿತಾಗೆ  ಓದಲು ಕೊಟ್ಟ.  ಅವಳು ಓದಲು ಆರಂಭಿಸಿದಳು.

 "ಪ್ರೀತಿಯ ಸುಷ್ಮಿತಾ, ಅಂದು ಪವನಪುರಕ್ಕೆ ನನ್ನ ಮೊದಲ ಸಲ ಲಾಂಗ್ ಡ್ರೈವ್. ನೀನು ಅಲ್ಲಿಗೆ ಹೋಗುವದು ತಿಳಿದು ಫಾಲೋ ಮಾಡಿದೆ. ನಿನಗಿರುವ ಸಂಶಯ ದೂರ ಮಾಡುವ ಇಚ್ಛೆ ಇದ್ದಿತು.  ನಿನ್ನ ಸ್ನೇಹಿತೆಯರನ್ನು ನೋಡಿದೆ. ಪವಿತ್ರ ನನ್ನ ಪಕ್ಕದ ಮನೆಯವಳು.  ನಾನು ಅವಳೊಂದಿಗೆ ಉತ್ತಮ ಸ್ನೇಹವನ್ನು ಉಳಿಸಿಕೊಂಡಿದ್ದೆನೆ.  ಸ್ನೇಹಿತೆಯರು ಕೊಳದಲ್ಲಿ ಹೋಗಬೇಡ ಎಂದರೂ ನೀನು ಕೊಳದಲ್ಲಿ ಹೋಗಿಯೇ ಬಿಟ್ಟೆ. ನಿನ್ನ ಧೈರ್ಯ ಹಾಗೂ ಶೌರ್ಯವನ್ನು ನೋಡಿದೆ. ಹೊರ ಬಂದು ಕುಣಿಯುತ್ತ ಇರುವಾಗ ನಿನ್ನ ಸೌಂದರ್ಯ ನನ್ನನ್ನು ಆಕರ್ಷಿಸಿತು. ಹೊರಡುವ ಅವಸರದಲ್ಲಿ ನಿನ್ನ ಬ್ರಾಸ್ಲೇಟ್ ರಸ್ತೆಯ ಮೇಲೆ ಬಿದ್ದಿರುವುದನ್ನು ನಾನು ನೋಡಿ ನಿನಗೆ ಕೊಡಲು ಓಡುತ್ತ  ಹಿಂಬಾಲಿಸಿದೆ. ಆದರೆ ನೀನು ಕಾರು ವೇಗವಾಗಿ ಓಡಿಸಿ ಹೋಗಿ ಬಿಟ್ಟೆ. ನೀನು ಸಿಗಲಿಲ್ಲ. ಬೆಂಗಳೂರನ್ನು ತಲುಪಿದ ನಂತರ ಪವಿತ್ರ ಗೆ ಬ್ರಾಸ್ಲೇಟ್ ಸಿಕ್ಕಿರುವದು ಹೇಳಿದೆ. ಅದಕ್ಕೆ ಅವಳು ನೀನೇ ಸುಷ್ಮಿತಾಗೆ ಕೊಡು ಎಂದಳು. ಬಹಳ ಸಲ ನಿನಗ ಕಾಲ್ ಮಾಡಿದೆ.  ನೀನು ಫೋನ್ ಎತ್ತಲೇ ಇಲ್ಲ. ಮನಸ್ಸಿನಗೆ ತುಂಬಾ ನೋವಾಯಿತು. ಊಟ ಮಾಡುವಾಗ ಮತ್ತು ಮಲಗುವಾಗ ನಾನು ಯಾವಾಗಲೂ ನನ್ನ ಜೊತೆಯಲ್ಲಿ ಬ್ರಾಸ್ಲೇಟ್  ಇಟ್ಟುಕೊಂಡಿದ್ದೆ. ನನ್ನ ಮೇಲೆ  ಇರುವ ಆರೋಪ ಶುದ್ಧ ಸುಳ್ಳು. ನನಗೆ ಆಗದೆ ಇರುವವರು ಮಾಡಿದ ಕುಹಕ. ನಿನ್ನ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲು ನಾನು ವಿಫಲನಾದೆ. ಬದುಕುವ ದರಲ್ಲಿ ಅರ್ಥ ವಿಲ್ಲ ಎಂದು ನಿನ್ನದೇ ಚಿಂತೆ ಮಾಡುತ್ತ ಊಟ ನೀರು ಬಿಟ್ಟು ಈ ದುರವಸ್ಥೆಗೆ ಬಂದೆ. ನಾನು ಇನ್ನೂ ಬದುಕುಳಿಯುವದು ಸ್ವಲ್ಪ ದಿವಸ ಮಾತ್ರ. ದೇವರು ನಿನಗೆ ಒಳ್ಳೆಯದು ಮಾಡಲಿ."

 ಸುಷ್ಮಿತಾ ಪತ್ರ ಓದಿ ಮುಗಿಸಿದ ನಂತರ, ಆಕೆಯ ಕಣ್ಣಲ್ಲಿ ಒಂದೇ ಸಮನೆ ಕಣ್ಣೀರು. ಅವನ ಉದ್ದನೆ  ಕಪ್ಪು ಗಡ್ಡ, ವಿಪರೀತ ಬೆಳೆದ ಮೀಸೆ ಅವನ ಮುಖವನ್ನು ಸಂಪೂರ್ಣವಾಗಿ ಆವರಿಸಿತ್ತು. ತಲೆಯಮೇಲೆ ದಟ್ಟವಾಗಿ ಬೆಳೆದ ಕೂದಲು ನೋಡಿ  ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಕಾಲ ಮಿಂಚಿ ಹೋಗಿತ್ತು. 

ಸುಷ್ಮಿತಾ ಮಾಡಿದ ದುಡುಕಿನ ಕ್ರಮ ಒಂದು ಜೀವದ ಬಲಿ ತೆಗೆದುಕೊಂಡಿತು. 


Rate this content
Log in

Similar kannada story from Romance