ದೆವ್ವ
ದೆವ್ವ
ಒಂದು ಊರಿನಲ್ಲಿ ಕೆಲವು ದೆವ್ವಗಳು ಒಂದು ದೊಡ್ಫ ಮರದ ಕೆಳಗೆ ವಾಸವಾಗಿದ್ದವು. ಒಮ್ಮೆ ಒಂದು ಮರಿ ದೆವ್ವ ಓಡೋಡಿ ಬರುವುದನ್ನ ಕಂಡು ಉಳಿದ ದೆವ್ವಗಳು ಹೆದರಿದವು. ಏಕೆ ಏನಾಯಿತು ಅಂತ ಕೇಳಲು ಆ ಮರೀದೆವ್ವ ನೀವೆಲ್ಲ ಹಿರಿಯರು ಹೀಗೆ ಆರಾಮವಾಗಿ ಮಲಗಿದ್ದರೆ ಹೇಗೆ . ನಮ್ಮ ಗತಿಯೇನು ಅಂತ ಯೋಚಿಸಿದ್ದೀರಾ ನಮ್ಮ ವಂಶವೇ ನಾಶವಾಗುವ ಪರಿಸ್ಥಿತಿ ಬಂದಿದೆ ಅಂತ ಹೇಳಿ ಕೆಂಪು ಮುಖ ಮಾಡಿ ಕೊಂಡಿತು . ಏನಾಗಿದೆ ಅನಾಹುತ ಹೇಳದೆ ನಮ್ಮನ್ನ ಹೆದರಿಸಿ ನೀನು ಹೆದರಕ್ಕೆ ಕಾರಣ ಮೊದಲು ತಿಳಿಸು. ಆಮೇಲೆ ಪರಿಹಾರ ಹುಡುಕೋಣ ಅಂತ ಹಿರಿಯ ದೆವ್ವ ಹೇಳಿತು. ಈ ಊರಿನ ಮಹಾತ್ಮರೊಬ್ಬರಿಗೆ ಸತ್ಯ ದರ್ಶನವಾಗಿದೆಯಂತೆ. ಜನಗಳಿಗೆಲ್ಲ ಬುದ್ದಿ ಹೇಳುತ್ತಾರಂತೆ. ನಮ್ಮ ಮೂಲ ಬೇರು ಕಿತ್ತು ಹಾಕೋದರಲ್ಲಿ ಸಂಶಯ ಇಲ್ಲ. ನಾವೇನಾದರೂ ತಕ್ಷಣ ಮಾಡಲೇಬೇಕು ಎಂದು ತನ್ನ ಆತಂಕ ತೋಡಿಕೊಂಡಿತು. ಏ ಹುಚ್ಚ ನೀನಿನ್ನು ಎಳಸು ಇಷ್ಟಕ್ಕೆ ಗಾಭರಿಯಾಗಿದ್ದೀಯೆ . ನೀನು ಚಿಂತೆ ಮಾಡಬೇಡ. ನನಗೂ ಈ ಸತ್ಯದರ್ಷನದ ವಿಷಯ ಗೊತ್ತಾಯ್ತು. ಆಗಲೇ ನಮ್ಮವರನ್ನು ಕೆಲಸಕ್ಕೆ ಬಿಟ್ಟಿದ್ದೇನೆ. ಕೆಲಸ ಆರಂಭ ವಾಗಿದೆ. ಆ ಮಹಾತ್ಮ ಏನೂ ಮಾಡುವ ಹಾಗಿಲ್ಲ. ಸ್ವಲ್ಪ ದಿನದಲ್ಲಿ ಆ ಮಹಾತ್ಮನನ್ನ ಹುಚ್ಚ ಎಂದು ಬಿಡುತ್ತಾರೆ ಅಂತ ಅಭಿಮಾನದಿಂದ ಹೇಳಿತು. ನಮ್ಮ ಜನ ಕೆಲಸ ಮಾಡ್ತಿದ್ದಾರ ಯಾರು ಕಾಣಲಿಲ್ಲವಲ್ಲ ಆ ಮಹಾತ್ಮನ ಬಗ್ಗೆ ಬರೀ ಬುದ್ದಿ ಜೀವಿಗಳೇ ಮಾತನಾಡ್ತಿದಾರೆ ನಮ್ಮವರು ಯಾರೂ ಕಾಣಲಿಲ್ಲವಲ್ಲ ಅಂತು ಮರಿ ದೆವ್ವ. ಹಿರಿ ದೆವ್ವ ಜೋರಾಗಿ ನಕ್ಕು ಹೇಳ್ತು&nbs
p;ಅಯ್ಯೋ ದಡ್ಡ ಅವರೇ ನಮ್ಮೋರು. ಆ ಮಹಾತ್ಮ ಒಂದು ಹೇಳಿದರೆ ಇವರು ಅದಕ್ಕೆ ಹತ್ತು ಬೇರೆ ಹೇಳ್ತಾರೆ. ಹೇಳಿ ವಿರೋಧಿಸಿ ಜನಗಳಿಗೆ ಹುಚ್ಚು ಹಿಡಿಸುತ್ತಾರೆ.
ಎಷ್ಟು ಗದ್ದಲ ಮಾಡ್ತಾರೆ ಅಂದರೆ ಮಹಾತ್ಮ ಏನು ಹೇಳಿದ ಅನ್ನೋದೇ ಗೊತ್ತಾಗ್ದೇ ಮಾಡಿಬಿಡ್ತಾರೆ. ಹೀಗೆ ಹೇಳಿದ ಮೇಲೆ ಬೇರೆ ದೆವ್ವಗಳಿಗೆ ಸಮಾಧಾನ. ಈ ಬುದ್ದಿಜೀವಿಗಳು ಯಾರು ಅಷ್ಟೂ ಗೊತ್ತಿಲ್ವೆ ಸಸ್ಯಗಳನ್ನ ತಿಂದು ಬದುಕಿರೋರು ಸಸ್ಯಜೀವಿಗಳು, ಮಾಂಸ ತಿಂದು ಬದುಕಿರೋರು ಮಾಂಸಾಹಾರಿಗಳು , ಹಾಗೇ ಮತ್ತೊಬ್ಬರ ತಲೆ ತಿಂದು ಬದುಕಿರೋರು ಬುದ್ಧಿ ಜೀವಿಗಳು ಅಂತ ಹೇಳ್ತು. ಇವರಿಗೆ ಯಾವ ಸಂಸ್ಥೆ ಯನ್ನೂ ಕಟ್ಟದೆ ವ್ಯವಸ್ಥೆಯನ್ನ ಟೀಕೆ ಟಿಪ್ಪಣಿ ಮಾಡುತ್ತಾ ಅನುಮಾನದ ಸುಳಿಯಲ್ಲಿ ಸಿಕ್ಕಿಸಿ ಬೇರೆಯವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅವರ ಸಂಖ್ಯೆ ಹೆಚ್ಚಿಸಿಕೊಳ್ಳಲು ಸದಾ ಪ್ರಯತ್ನ ಮಾಡುತ್ತಲೇ ಇರ್ತಾರೆ. ಇವರು ಪ್ರಚಾರ ಪ್ರಿಯರು. ತರ್ಕ ವಿತರ್ಕವೇ ಇವರ ಅಸ್ತ್ರ. ಎಂದು ಹೇಳಿತು. ಮಹಾತ್ಮರಿಂದಲೂ ತಡೆಯಲಾಗದಿದ್ದರೆ ಏನು ಮಾಡುವುದು ಅಂತ ಕಿರಿ ದೆವ್ವ ಅನುಮಾನದಿಂದ ಕೇಳಿತು. ಚಿಂತೆ ಬೇಡ ಅದಕ್ಕೆ ಪಾದ್ರಿಗಳು ಮುಲ್ಲಾಗಳು ಪುರೋಹಿತರು ಎಲ್ಲಾ ಇದ್ದಾರೆ. ಅವರುಗಳು ಇನ್ನೂ ಬುದ್ಧಿ ಭ್ರಮಣೆಯಾಗಿ ಮುಂದೆ ಎಂದೂ ಚಿಂತಿಸದಂತೆ ನೋಡಿಕೊಳ್ಳುತ್ತಾರೆ. ಚಿಂತೆ ಬೇಡ ಅಂತ ಧೈರ್ಯ ಹೇಳಿತು.
ಇದು ಇಂದು ನಮ್ಮ ಸಮಾಜದಲ್ಲೂ ಸತ್ಯ ವೆನಿಸುವುದಿಲ್ಲವೇ ?