Gireesh pm Giree

Inspirational

4.0  

Gireesh pm Giree

Inspirational

ಚೆನ್ನ

ಚೆನ್ನ

1 min
157


ಒಂದು ಊರಿನಲ್ಲಿ ಚೆನ್ನ ಎಂಬ ಯುವಕನಿದ್ದನು. ಅವನು ಬಹಳ ಬುದ್ದಿವಂತನಾಗಿದ್ದನು. ಅವನಿಗೆ ರಾಮು ಎಂಬ ಗೆಳೆಯನಿದ್ದನು. ಅವನು ಬಹಳ ಸೋಮಾರಿ, ಅವರಿಬ್ಬರೂ ಕಡು ಬಡವರು, ಚಿಕ್ಕಂದಿನಲ್ಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡಿದ್ದನು. ಅವನಿಗೆ ಅವನ ಅಜ್ಜಿಯೇ ಸರ್ವಸ್ವವಾಗಿದ್ದಳು. ತನ್ನ ಮುದಿ ವಯಸ್ಸಿನಲ್ಲೂ ಮೊಮ್ಮಗ   ಅಜ್ಜಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಬುದ್ಧಿವಂತ ಚೆನ್ನ ಕಂಡರೆ ರಾಮುವಿಗೆ ಹೊಟ್ಟೆ ಉರಿ, ಅವನ ಮನಸ್ಸಿನಲ್ಲಿ ಪ್ರತಿದಿನವೂ ಚೋಮುವಿಗೆ ಏನಾದರೊಂದು ಕೇಡಾಗಬೇಕೆಂದು ಬಯಸುತ್ತಿದ್ದನು. ಇದಾವುದನ್ನೂ ತಿಳಿಯದ ಚೆನ್ನ ಪ್ರಾಣಸ್ನೇಹಿತನೆಂದು ತಿಳಿದುಕೊಂಡಿದ್ದನು.

ಒಂದು ದಿನ ಚೆನ್ಪ ಪರಿಶ್ರಮದ ಫಲವಾಗಿ ಅವನ ನೆಚ್ಚಿನ ಕೆಲಸ ಸಿಕ್ಕಿತು. ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇನ್ನುಮುಂದೆ ನಾನು ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಮ್ಮ ಮುರುಕಲು ಮನೆ ತೆಗೆದು ಹೊಸ ಮನೆ ಕಟ್ಟಿಸಿ ಗೌರವ ದಿ೦ದ ಬದುಕಬೇಕೆಂದು ಕನಸು ಕಟ್ಟಿದನು. ಅಲ್ಲದೆ ರಾಮುವಿಗೂ ತನ್ನ ಯಜಮಾನನಲ್ಲಿ ವಿಚಾರಿಸಿ ಒಂದು ಕೆಲಸ ಕೊಡಿಸಿದನು


ಸೋಮಾರಿ ರಾಮುವಿಗೆ, ಚೆನ್ನ ದೊರೆತ ದೊಡ್ಡ ಹುದ್ದೆ ನೋ! ಸಹಿಸಲಾಗಲಿಲ್ಲ. ಅವನು ಚೆನ್ನನ ಬಗ್ಗೆ ಯಜಮಾನನಲ್ಲಿ ದೂರು ಹೇಳಿದನ್ನು ಇವನ ಮಾತನ್ನು ನಂಬಿದ ಯಜಮಾನನು ಚೋಮುವನ್ನು ಕೆಲಸದಿಂದ ತೆಗೆದ ಹಾಕಿದನು. ಚೆಣನಿಗೆ ತಲೆಮೇಲೆ ಬಿದ್ದಂತಾಯಿತು. ತಾನು ಮಾಡು ತಪ್ಪಿಗೆ ತನ್ನ ಕೆಲಸ ಕಳೆದುಕೊಂಡೆನೆಂದು ಮರುಗಿದನು. ಆದರೆ ಅವನು ಧೈರ್ಯಗೆಡಲಿಲ್ಲ ಅಜ್ಜಿಯನ್ನು ಸಮಾಧಾನಿಸಿ ಇನ್ನೂ ಒಳ್ಳೆಯ ಕೆಲಸಕ್ಕಾಗಿ ಹುಡುಕಾಡಿದನು. ರಾಮುವಿಗೆ ಸಂತೋಷವೇ ಸಂತೋಷ, ಯಜಮಾನರು ಅವನಿಗೆ ಖಾಲಿಯಿದ್ದ ರಾಮುವ ದೊಡ್ಡ ಹುದ್ದೆಯನ್ನು ನೀಡಿದ್ದರು. ಕೈತುಂಬಾ ಸಂಬಳ. ಎದುರಿಗೆ ಸಿಕ್ಕಿದರೂ ರಾಮ ಚೆನ್ನಣ್ಣ ನ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ರಾಮು ಇದಾವುದನ್ನೂ ತಲೆಗೆ ಹಾಕಿಕೊಳ್ಳಲಿಲ್ಲ. ಗೆಳೆಯನಿಗಾದರೂ ಒಳ್ಳೆ ಕೆಲಸ ಸಿಕ್ಕಿತೆಂದು ಸಂತೋಷಪಟ್ಟನು ಕೆಲವೇ ದಿನಗಳಲ್ಲಿ ಚೆನನಿಗೆ ಬೆಂಗಳೂರಿನಲ್ಲಿರುವ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿತು. ಒಳ್ಳೆ ಸಂಬಳ, ಚೆನನ್ನ ಅದೃಷ್ಟ ಬದಲಾಯಿತು. ಜಯ ದೊರಕಿತ್ತು ನೆಮ್ಮದಿಯಿಂದ ಅಜ್ಜಿಯೊಂದಿಗೆ ಬದುಕಿದನು. ಇತ್ತ ರಾಮುವಿನ ಸೋಮಾರಿತನವನ್ನು ತಿಳಿದ ಯಜಮಾನನು ನಾಲ್ವೇ ದಿನಗಳಲ್ಲಿ ಅವನನ್ನು ಕೆಲಸದಿಂದ ಹೊರಹಾಕಿದನು ಸೋಮಾರಿತನದಿಂದ ಸಿಕ್ಕಿದ್ದ ಕೆಲಸವನ್ನೂ ಕಳೆದುಕೊಂಡನು.


Rate this content
Log in

Similar kannada story from Inspirational