Ashritha G

Classics Inspirational Others

4.5  

Ashritha G

Classics Inspirational Others

ಬಿಟ್ಟಿದ್ದರೆ ಸತ್ತು ಹೋಗುತ್ತಿದೆ..

ಬಿಟ್ಟಿದ್ದರೆ ಸತ್ತು ಹೋಗುತ್ತಿದೆ..

2 mins
461


   ಕೆಲವೊಮ್ಮೆ ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆಯಾಗುತ್ತದೆ..ಪೂರ್ವ ಜನ್ಮದ ಕರ್ಮ ಈ ಜನುಮದಲ್ಲಿ ಅನುಭವಿಸುತ್ತಾರೆ ಎನ್ನುತ್ತಾರೆ..ನನಗೆ ಪೂರ್ವ ಜನ್ಮದ ನೆನಪಿಲ್ಲ..ಆದರೆ ಈ ಜನುಮದಲ್ಲಿ ನಾನು ಅನುಭವಿಸುತ್ತಿರುವ ಕಷ್ಟಕ್ಕೆ ನನ್ನ ಹೆತ್ತವರು ಕಾರಣ.. ಹುಟ್ಟಿದ ದಿನವೇ ಕಾಡಿನ ಒಂದು ಮರದ ಬಳಿ ನನ್ನನು ಬಟ್ಟೆಯಲ್ಲಿ ಸುತ್ತಿ ಒಂಟಿಯಾಗಿ ಬಿಟ್ಟು ಹೋಗಿದ್ದರಂತೆ.. ಅಂದೆ ಬಿಟ್ಟಿದ್ದರೆ ಸತ್ತು ಹೋಗುತ್ತಿದೆ.. ಆದರೆ ಗಟ್ಟಿ ಜೀವ ಬದುಕಿಬಿಟ್ಟೆ..ಯಾರೋ ದನ ಕಾಯುವವ ಆ ದಾರಿಯಲಿ ಬಂದವನಿಗೆ ನನ್ನ ಅಳು ಕೇಳಿ ನನ್ನನು ಮನೆಗೆ ಕರೆದೊಯ್ದಾಗ ದುರಾದೃಷ್ಟದ ಮಗು..ಯಾವ ಕರ್ಮಕ್ಕೆ ಈ ಶಿಕ್ಷೆ ಸಿಕ್ಕಿತು ತಿಳಿಯದು..ನಾವು ಸಾಕಿದರೆ ನಮಗೂ ಮಗುವಿನ ದರಿದ್ರ ಮೆಟ್ಟ ಬಹುದು ಎಂಬ ಭಯದಲ್ಲಿ ಆಶ್ರಮಕ್ಕೆ ಸೇರಿಸಿದರಂತೆ.. ಆಶ್ರಮದವರು ಪ್ರೀತಿಯಿಂದ ನನ್ನ ಬೆಳೆಸತೊಡಗಿದರು..ನನಗೆ ಸಂಪತ್ ಎಂಬ ಹೆಸರನ್ನು ಇಟ್ಟು ಕರೆಯಾಲಾರಂಭಿಸಿದರು

   ದಿನಗಳು ಉರುಳಿದವು..ಶಾಲೆಗೆ ಸೇರಿಸಿದರು.. ಬದುಕು ಏನೆಂದು ಅರ್ಥವಾಗದಿದ್ದರು ಆಟವಾಡಿಕೊಂಡು ಖುಷಿಯಾಗಿದ್ದೆ..ಆಗಾಗ ಆಶ್ರಮಕ್ಕೆ ದತ್ತು ತೆಗೆದುಕೊಳ್ಳಲು ಯಾರಾದರು ಬರುತ್ತಿದ್ದರು...ಮಗುವಿಗಾಗಿ ಹಂಬಲಿಸುವವರಿಗೆ ನಮ್ಮಂತವರನ್ನು ಕೊಟ್ಟಿದ್ದರೆ ಬಹುಶಃ ಅನಾಥರು ಎಂಬ ಹೆಸರು ನಮಗೆ ಬರುತ್ತಿರಲ್ಲಿಲ್ಲವೇನೋ ಎನಿಸುತ್ತಿತ್ತು..ಹಣೆಬರಹ ತಪ್ಪಿಸಲು ಆಗದು.. ಬಂದಿದ್ದನ್ನು ಅನುಭವಿಸುವಬೇಕು..ಅಂತೆಯೇ ಬದುಕನ್ನು ಮುನ್ನೆಡೆಸುತ್ತಾ ಬಂದೆ...ಪಿ ಯು ವರೆಗೆ ಓದಿಸಿದರು..ಆಶ್ರಮದ ನಿಯಮದಂತೆ 18ರ ನಂತರ ಅಲ್ಲಿ ಇರುವಂತಿರಲಲ್ಲಿಲ್ಲ..ನಮ್ಮ ಬದುಕನ್ನು ನಾವು ನೋಡಿಕೊಳ್ಳಬೇಕಿತ್ತು..ಅದರಂತೆ ನಾನು ಆಶ್ರಮದಿಂದ ಹೊರಬಂದು ಮುಂದೇನು ಎಂದು ಯೋಚಿಸುತ್ತಾ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಬಸ್ ನಿಲ್ದಾಣದಲ್ಲಿ ಕುಳಿತ್ತಿದ್ದೆ. 

ವೃದ್ದ ದಂಪತಿಗಳಿಬ್ಬರು ಬಿಸಿಲಿನ ಬೇಗೆಗೆ ದಣಿದು ಇನ್ನೇನು ಬೀಳುತ್ತಿದ್ದವರನ್ನು ನೋಡಿ ಮುಂದೆ ಹೋಗಿ ಹಿಡಿದು ಅಲ್ಲಿಯೆ ಸಮೀಪದ ನೆರಳಿನಲಿ ಕೂರಿಸಿದೆ..ನೀರು ನೀರು ಎಂದು ಕನವರಿಸುತ್ತಾ ಇದ್ದರು..ನೀರಿನ ಬಾಟಲಿ ತರಲು ನನ್ನ ಬಳಿ ಹಣವಿರಲ್ಲಿಲ್ಲ.. ಜೇಬಿನಲ್ಲಿ ಹುಡುಕಾಡಿದೆ..ಏನು ಮಾಡುವುದೆಂದು ಯೋಚಿಸುವಷ್ಟರಲ್ಲಿ ತಮ್ಮ ಜೇಬಿನಿಂದ 100 ರೂ ನೋಟ್ ಕೈಗಿಟ್ಟು ಕಣ್ಸನ್ನೆ ಮಾಡಿದರು..ತಡಮಾಡದೆ ಬಾಟಲಿ ತಂದೆ..ನೀರು ಕುಡಿಸಿದೆ..ಇಬ್ಬರು ದಣಿವಾರಿಸಿಕೊಂಡರು..ಮನೆಯ ವಿಳಾಸ ಕೊಟ್ಟು ಮನೆಗೆ ತಲುಪಿಸುವಂತೆ ಕೋರಿದರು..ಆಟೋ ಹಿಡಿದೆ..ಅವರ ಮನೆಗೆ ಕರೆದೊಯ್ದೆ..

 ಮನೆಗೆ ಬಿಟ್ಟು ಹೊರಡಲು ಅನುವಾದೆ..ಹೋಗದಂತೆ ತಡೆದರು..ಅಪ್ಪಣೆ ಇದ್ದರೆ ಅವರೊಡನೆ ಇರುವಂತೆ ಹೇಳಿದರು..ಮೊದಲು ಮನಸು ಒಪ್ಪಲಿಲ್ಲ..ಆದರೆ ನನಗೂ ಬೇರೆ ದಾರಿ ಕಾಣಲಿಲ್ಲ.. ಅಲ್ಲಿಯೇ ಉಳಿದೆ..ಭಗವಂತ ದಾರಿ ತೋರಿಸಿದ್ದಾನೆ ಎಂದುಕೊಂಡೆ.. ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದೆ... ದಿನಗಳು ಉರುಳಿದವು..ತಂದೆ ತಾಯಿಯ ಪ್ರೀತಿಗೆ ಹಂಬಲಿಸುತ್ತಿದ್ದ ನನಗೆ ದೇವರು ವರ ಕೊಟ್ಟಂತೆ ಭಾಸವಾಗುತ್ತಿತ್ತು..ನಾನು ಅನಾಥ ಎಂಬುದನ್ನು ಮರೆತಿದ್ದೆ..ಅಷ್ಟು ಆತ್ಮೀಯತೆ ತೋರುತ್ತಿದ್ದರು..ಮನೆಯ ಮಗನಂತೆ ನೋಡಿಕೊಳ್ಳುತ್ತಿದ್ದರು..

      ವರುಷಗಳು ಉರುಳಿತು..ಇದಕ್ಕಿದ್ದ ಹಾಗೆ ಒಂದು ದಿನ ಆ ಮನೆಯ ನಿಜವಾದ ಮಗ ಬಾಗಿಲಲಿ ಹಾಜರಾದ..ನನ್ನನ್ನು ಬಾಯಿಗೆ ಬಂದಂತೆ ನಿಂದಿಸಿದ..ನನಗೂ ಸಹಿಸಲಾಗದೆ ಅಲ್ಲಿಂದ ಹೊರಡಲು ಮುಂದಾದೆ.. ಮತ್ತೆ ತಡೆದರು..ನಡು ದಾರಿಯಲಿ ಹೆತ್ತವರನ್ನು ಅವನ ಸ್ವಾರ್ಥ ಸಾಧನೆಗಾಗಿ ಬಿಟ್ಟು ಹೋದವನಿಗಾಗಿ ನಡು ದಾರಿಯಲಿ ನರಳುತ್ತಿದ್ದ ನಮಗೆ ಸಹಾಯ ಮಾಡಿ ಹೆಗಲಾಗಿ ನಿಂತು ನೋಡಿಕೊಂಡವನ್ನನ್ನು ಕಳೆದು ಕೊಳ್ಳಲು ನಾವು ತಯಾರಿಲ್ಲ..ನೀನು ಇಲ್ಲೇ ಇರು ಎಂದು ಬೇಡಿಕೊಂಡು ಹೆತ್ತ ಮಗನ್ನನ್ನು ಮನೆಯಿಂದ ಹೊರ ಕಳುಹಿಸಿದರು....

    ತಂದೆ ತಾಯಿಯ ಬೆಲೆ ಅರಿಯದೆ ಅವರೊಂದಿಗೆ ಒರಟಾಗಿ ನಡೆದುಕೊಳ್ಳುವ ಮಕ್ಕಳಿಗೆ ಜೊತೆಗಿದ್ದಾಗ ಅವರ ಬೆಲೆ ತಿಳಿಯುವುದಿಲ್ಲ..ನನ್ನಂತವರು ನಮ್ಮ ತಪ್ಪಿಲ್ಲದೆ ತಂದೆ ತಾಯಿಯಿಂದ ದೂರವಾಗಿ ನೋವು ಅವಮಾನ ಅನುಭವಿಸುತ್ತಾ ಬದುಕು ನೆಡೆಸುತ್ತೇವೆ..ನಾನಿಂದು ಉದ್ಯಮಿಯಾಗಿ ಗುರುತಿಸಿಕೊಂಡು ಹೆಸರು ಮಾಡಿದ್ದೇನೆ ಎಂದರೆ ನನಗೆ ಬದುಕಲು ಅವಕಾಶ ಕೊಟ್ಟ ಆಶ್ರಮ ಹಾಗು ಬದುಕು ರೂಪಿಸಿದ ತಂದೆ ತಾಯಿಯೇ ಕಾರಣ..ಎಂದು ಪತ್ರಕರ್ತರಿಗೆ ತನ್ನ ಸಂದರ್ಶನ ನೀಡಿದ ಸಂಪತ್ ಹೆತ್ತವರ ಬೆಲೆಯನ್ನು ತಿಳಿಸಿದ...

   ಮಕ್ಕಳು ಬೇಡವೆಂದು ಕಾಡು ಪಾಲಾಗುವಂತೆ ಮಾಡುವ ಬದಲು ಮಕ್ಕಳಿದ್ದವರಿಗೆ ನೆರವಾಗುವಂತೆ ಕೊಡುವುದು ಉತ್ತಮವಲ್ಲವೇ...?? ಬಾಲ್ಯದಲ್ಲಿ ಮಕ್ಕಳು ತಪ್ಪು ಮಾಡಿದಾಗ ತಂದೆ ತಾಯಿ ಕ್ಷಮಿಸಿ ಬೆಳೆಸುತ್ತಾರೆ..ಅದೇ ತಂದೆ ತಾಯಿ ತಮ್ಮ ಇಳಿ ವಯಸ್ಸಿನಲ್ಲಿ ಮಾತನಾಡಿದರೆ ಮಕ್ಕಳಿಗೆ ಅದು ತಪ್ಪೆಂದು ಅನಿಸಲು ಪ್ರಾರಂಭವಾಗುತ್ತದೆ..ಸಣ್ಣದೊಂದು ಹಠ ಬೆಳೆಸಿಕೊಂಡು ತಂದೆ ತಾಯಿಯಿಂದ ದೂರವಾಗಲು ಬಯಸುತ್ತಾರೆ.. ಹುಟ್ಟಿದ ಹಬ್ಬದಂದು ಅಥವಾ ಪೋಷಕರ ದಿನ ತಾಯಂದಿರ ದಿನದಂತಹ ಆಚರಣೆಯಂದು ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಟೋ ಹಾಕಿ ಶುಭ ಕೋರುವುದನ್ನು ನಿಲ್ಲಿಸಿ ಅವರೊಂದಿಗೆ ದಿನ ಕಳೆಯುವ ಮನಃಸ್ಥಿತಿಯನ್ನು ಬೆಳೆಸಿಕೊಂಡಾಗ ಮಕ್ಕಳಿದ್ದು ಅನಾಥ ಪ್ರಜ್ಞೆ ಕಾಡುವುದನ್ನು ತಪ್ಪಿಸಬಹುದ...ಯಾವ ಸಂಬಂಧವೂ ಇಲ್ಲದೆ ಅನಾಥರಾಗಿ ಬದುಕುವುದು ಒಂದು ರೀತಿಯ ಸಂಕಟವಾದರೆ ಎಲ್ಲಾ ಸಂಬಂಧಗಳಿಂದ ದೂರ ಉಳಿದು ಅನಾಥರಾಗಿ ಬದುಕುವುದು ಇನ್ನೊಂದು ರೀತಿಯ ಕಷ್ಟವಲ್ಲವೇ....??ಅನಾಥರನ್ನಾಗಿ ಮಾಡುವ ಮುನ್ನ ಕೊಂಚ ಯೋಚಿಸಿ.....!


Rate this content
Log in

Similar kannada story from Classics