ಬೆಳಕಾಗಿ ಬಂದ ಸಾರ್ಥಕ್
ಬೆಳಕಾಗಿ ಬಂದ ಸಾರ್ಥಕ್
ನಾನ್ ಸ್ಟಾಪ್ ನವಂಬರ್ ಎಡಿಷನ್. ಆರಂಭಿಕ ಹಂತ.
ದೀಪಾವಳಿ ಹಬ್ಬ.
ದೀಪಗಳ ಹಬ್ಬ ದೀಪಾವಳಿ. ಎಲ್ಲರ ಬದುಕಲ್ಲಿ ಕತ್ತಲೆಯನ್ನು ಸರಿಸಿ , ಬೆಳಕಿನೆಡೆಗೆ ಸಾಗುವಂತೆ ಮಾಡುತ್ತದೆ. ಎಲ್ಲರ ಮುಖದಲ್ಲಿ ನಗು ಮೂಡಿಸಿ , ದೀಪಗಳ ಬೆಳಕಿನಲ್ಲಿ ಎಲ್ಲರನ್ನು ಒಟ್ಟುಗೂಡಿಸಿ, ಸಂತೋಷವನ್ನು ಇಮ್ಮಡಿ ಮಾಡುತ್ತದೆ.
ದೀಪಾ ಅಪ್ಪನ ಮುದ್ದಿನ ಮಗಳು. ಅಮ್ಮ ಕೌಸಲ್ಯಾ ಎಷ್ಟೇ ಸ್ಟ್ರಿಕ್ಟ್ ಮಾಡಿದರೂ ಅಪ್ಪನ ಮೂಲಕ ದೀಪಾ ಅಮ್ಮನಿಂದ ತಪ್ಪಿಸಿಕೊಂಡು , ಕಾಲೇಜು ಫ್ರೆಂಡ್ಸು ಅಂತಾ ಸುತ್ತುತ್ತಿದ್ದಳು. ಅವಳ ಅಪ್ಪ ದೊಡ್ಡ ಬ್ಯುಸಿನೆಸ್ ಮ್ಯಾನ್. ಹೀಗಿದ್ದಾಗ ಯಾವುದೇ ಹಣಕಾಸಿನ ಕೊರತೆ ಆಗಲಿ , ಬೇಕಾದ್ದನ್ನು ಕೊಂಡುಕೊಳ್ಳುವಾಗ ಹಿಂಜರಿಕೆ ಆಗಲಿ ಇರಲಿಲ್ಲ. ಇದರಿಂದ ದೀಪಾ ಕಷ್ಟವೆನ್ನುವುದು ಗೊತ್ತೇ ಆಗದಂತೆ ಬೆಳೆದಿದ್ದಳು. ಆದರೆ ಅವಳ ಅಮ್ಮ ಪ್ರತಿಯೊಂದರಲ್ಲಿ ಹಿಡಿತ ಇಟ್ಟುಕೊಂಡು ಮನೆ ನಿಭಾಯಿಸುತ್ತಿದ್ದಳು. ಗಂಡನಿಗೆ ಗೊತ್ತಿಲ್ಲದಂತೆ ಸ್ವಲ್ಪ ಹಣವನ್ನು ಕೂಡಿಟ್ಟುತ್ತಿದ್ದಳು.
ಬ್ಯುಸಿನೆಸ್ ಎನ್ನುವುದು ಮೇಲೆ ಕೆಳಗೆ ಆಗುವುದು ಸಹಜ. ಹೀಗೆಯೇ ದೀಪಾಳ ಅಪ್ಪನಿಗೆ ಬ್ಯುಸಿನೆಸ್ ಲಾಸ್ ಆಗಿ ಬೀದಿಗೆ ಬೀಳುವಂತಾಯಿತು. ಆಗ ಕೈ ಹಿಡಿದಿದ್ದು ಕೌಸಲ್ಯಾ ಕೂಡಿಟ್ಟ ಹಣ. ಆದರೆ ಅದೆಷ್ಟು ದಿನ ಆದೀತು. ಮತ್ತೆ ತೊಂದರೆಗೆ ಸಿಲುಕಿದರು. ಮುಂದೆ ಸ್ವಲ್ಪ ದಿನದಲ್ಲಿ ದೀಪಾವಳಿ ಹಬ್ಬ ಬೇರೆ ಬರುವುದಿತ್ತು. ಮುದ್ದಿನ ಮಗಳಿಗೆ ಏನನ್ನಾದರೂ ಕೊಡಿಸುವ ಆಸೆ. ಆದರೆ , ಪರಿಸ್ಥಿತಿ ಹಾಗಿರಲಿಲ್ಲ. ಹಬ್ಬ ಅವರ ಬಾಳಲ್ಲಿ ಈ ವರ್ಷ ಕರಿಛಾಯೆ ಬೀರಿತ್ತು .
ಇನ್ನೇನು ಎಲ್ಲ ಮುಗಿದೆ ಹೋಯಿತು ಎನ್ನುವಷ್ಟರಲ್ಲಿ ದೇವರ ಹಾಗೆ ಬಂದವನೇ ಸಾರ್ಥಕ್. ಸಾರ್ಥಕ್ ಅನಾಥ ಹುಡುಗ. ದೀಪಾಳ ಅಪ್ಪ ಆತನನ್ನು ಸಾಕಿ ಬೆಳೆಸಿದ್ದ. ಈಗ ಓದು ಮುಗಿದು ಕೆಲಸ ಸಿಕ್ಕು ಬೇರೆ ಊರಿಗೆ ಹೋಗಿದ್ದ. ಈ ಬಾರಿ ಟ್ರಾನ್ಸಪರ್ ಆಗಿ ಮತ್ತೆ ಅದೇ ಊರಿಗೆ ಮರಳಿದ್ದ. ಬಂದ ತಕ್ಷಣ ಅಂಕಲ್ ನನ್ನು ಭೇಟಿಯಾಗಲು ಬಂದಾಗ ವಿಷಯ ತಿಳಿದು ಬಹು ನೊಂದುಕೊಂಡನು. ದೀಪಾಳ ಅಪ್ಪನನ್ನು ಹುಡುಕಿ , ಅವರಿಗೆ ನೆರವಾದನು. ಮತ್ತೆ ಸುಧಾರಿಸಿಕೊಳ್ಳಲು ಆರ್ಥಿಕವಾಗಿ ಕೈ ಜೋಡಿಸಿದನು. ದೀಪಾವಳಿ ಹಬ್ಬಕ್ಕೆ ದೀಪಾಳ ಕುಟುಂಬಕ್ಕೆ ಸಾರ್ಥಕ್ ಬೆಳಕಾಗಿ ಬಂದನು. ದೀಪಗಳ ಬೆಳಕಿನಂತೆ ಅವರ ಮುಖದಲ್ಲೂ ನಗು ಮೂಡಿಸಿದನು.
