Vaman Acharya

Romance Inspirational Others

2.3  

Vaman Acharya

Romance Inspirational Others

ಬೇಡ ವಿರಸ ಇರಲಿ ಸರಸ

ಬೇಡ ವಿರಸ ಇರಲಿ ಸರಸ

5 mins
339



      

ಪವನಪೂರ ನಗರದಲ್ಲಿ ಬೆಳಗಿನ ಆರು ಗಂಟೆ. ಮೋಡ ಕವಿದ ವಾತಾವರಣ. ಒಂದು ತಿಂಗಳು ಹಿಂದೆ ಮದುವೆ ಆದ ಪರಿಣಿತಾ ಇನ್ನೂ ಮಲಗಿದ್ದ ಪತಿ ಸುಮಂತ್ ಗೆ ಎಬ್ಬಿಸಿ ಬೆಡ್ ಟೀ ಕೊಟ್ಟಳು. ಸುಮಂತ್ನಿಗೆ ಆಶ್ಚರ್ಯವಾಗಿ,

"ಇದೇನು ಪರಿಣಿತಾ, ಇಷ್ಟೇಕೆ ನನ್ನ ಮೇಲೆ ಪ್ರೀತಿ? ನನಗೆ ಅರ್ಥ ವಾಯಿತು. ನಿನ್ನೆ ರಾತ್ರಿ ಆದ ಕಹಿ ಘಟನೆ ನಿನ್ನ ಮೇಲೆ ಪರಿಣಾಮ ಆಗಿದೆ."

ಆಕೆ ನಗುತ್ತ," ಹೌದು ಅದೊಂದು ಕೆಟ್ಟ ಘಳಿಗೆ ಮರೆತು ಬಿಡಿ. ಮೊದಲು ಟೀ ತೆಗೆದುಕೊಳ್ಳಿ. ನನ್ನ ಮೇಲೆ ಕೋಪ ಬಂದರೆ ಕ್ಷಮಿಸಿ,"ಎಂದಳು.

ಸುಮಂತ್ ಹಾಸಿಗೆಯಿಂದ ಎದ್ದು ಪತ್ನಿಯನ್ನು ಪಕ್ಕದಲ್ಲಿ ಕೂಡಿಸಿದ. ಹಾಸ್ಯ ಭರಿತವಾದ ಮಾತುಗಳಲ್ಲಿ ಇಬ್ಬರೂ ಟೀ ಕುಡಿದು ಮುಗಿಸಿರುವದು ಗೊತ್ತಾಗಲಿಲ್ಲ. 

"ಪರಿಣಿತಾ, ನಿನಗೆ ಮನಸಾರೆ ಪ್ರೀತಿಸಿ ಮದುವೆ ಆಗಿರುವೆ. ಜೀವನದಲ್ಲಿ ಸರಸ ವಿರಸ ಆಗುವದು ಸಾಮಾನ್ಯ,"ಎಂದ. 

"ಹೌದು ಸುಮಂತ್  ಮೊದಲ ಸಲ ನಮ್ಮ ಭೇಟಿ ಆದಾಗ ನೀನು ಹಾಡಿದ ಆ ಚಲನಚಿತ್ರದ ಹಾಡು, 'ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ' ನನಗೆ ತುಂಬಾ ಹಿಡಿಸಿತು. ಆಗ ನಾನು ಹಾಡ ಬೇಕು ಎಂದು ನೀನು ಕೇಳಿದೆ. ನನಗೆ ನಿನ್ನ ಹಾಗೆ ನನಗೆ ಸುಮಧುರ ಧ್ವನಿ ಇಲ್ಲ ಎಂದಾಗ ನೀನು ಏನು ಹೇಳಿದೆ ನೆನಪಿದೆಯಾ? ಕಂಠ ಮಾಧುರ್ಯ ಹಾಗೂ ಸೌಂದರ್ಯ ಎರಡೂ ಒಬ್ಬನಲ್ಲಿ ಇರುವದು ಅಪರೂಪ. ನಿನ್ನ ಸೌಂದರ್ಯ ನನ್ನ ಮಧುರ ಕಂಠ ಅತ್ಯುತ್ತಮ ಜೋಡಿ ಎಂದು ಹೇಳಿದೆ."


ಸುಮಂತ್ ಸೂರ್ಯಾಬ್ಯಾಂಕ್, ಪವನಪೂರ ಶಾಖೆ ಮ್ಯಾನೇಜರ್. ಪರಿಣಿತಾ ಇದೇ ಊರಿನ ಸ್ವಾಗತ ಮುದ್ರಣಾಲಯದ ಒಡತಿ. 

ಆಗ ಇಬ್ಬರೂ ನಗುತ್ತ ಬೇಗನೆ ರೆಡಿ ಆಗಿ ಬ್ಯಾಂಕ್  ಹಾಗೂ ಮುದ್ರಣಾಲಯಕ್ಕೆ ಹೋಗಲು ಸನ್ನದ್ಧರಾದರು. 

ಹಿಂದಿನ ದಿವಸ ರಾತ್ರಿ ಆಗಿರುವದಾದರೂ ಏನು?

 ಆಕಸ್ಮಿಕ ವಾಗಿ  ರಾತ್ರಿ ಎಂಟು ಗಂಟೆ ಗೆ ನಾಲ್ಕು ಜನ ನಗರದ ಗಣ್ಯ ವ್ಯಕ್ತಿಗಳು ಅವರ ಮನೆಗೆ ಆಗಮಿಸಿದರು. ರಾತ್ರಿ ಹತ್ತು ಗಂಟೆವರೆಗೆ ಮಾತನಾಡಿದರು. ಅವರೆಲ್ಲರೂ 

 ನಿರ್ಗಮಿಸಿದ ಮೇಲೆ ಪರಿಣಿತಾ ಸಿಟ್ಟಿನಿಂದ, 

"ಸುಮಂತ್, ಈಗ ರಾತ್ರಿ ಹತ್ತು ಗಂಟೆ. ಎಷ್ಟು ಹೊತ್ತು ನಿಮ್ಮ ಸ್ನೇಹಿತರ ಜೊತೆಗೆ ಹರಟೆ?  ಅವರಿಗೆ ಬೇರೆ ಕೆಲಸ ಇಲ್ಲವೇ?  ನಮ್ಮ  ಮನೆಗೆ ಅವರು ಯಾಕೆ ಬರಬೇಕು? ಊಟದ ಸಮಯದಲ್ಲಿ ರಾತ್ರಿ ಚಹಾ ಮಾಡಲು ನಿಮ್ಮ ಆರ್ಡರ್.  ಮನಸ್ಸು ಇಲ್ಲದೇ ಇದ್ದರೂ ಚಹಾ ಮಾಡಿದೆ. ನೀವೇನು ಬ್ಯಾಂಕ್ ಮ್ಯಾನೇಜರಾ? ಅಥವಾ  ಹರಟೆ ಕಟ್ಟೆಯ ಸಂಯೋಜಕರಾ? ಇಂತಹ ಮೀಟಿಂಗ್ ಬೇಡವೇ ಬೇಡ.  ಇದೇ ಮೊದಲು ಇದೇ ಕೊನೆ," ಎಂದು ಸಿಂಹ ಗರ್ಜನೆ ಮಾಡಿದ್ದಳು.


ಅದಕ್ಕೆ ಸುಮಂತ್ ಮನಸ್ಸಿನಲ್ಲಿ ಅಂದುಕೊಂಡ. ಮದುವೆ ಆಗಿ ಆಗತಾನೆ ಒಂದು ತಿಂಗಳು. ನವ ದಂಪತಿ ಪ್ರೀತಿ, ವಾತ್ಸಲ್ಯ ದಿಂದ ಇರಬೇಕು. ಆಕೆಯ ವಿರಸದ ಕಾರಣ ಆತನಿಗೆ ಅರ್ಥವಾಯಿತು. 

 "ಪರಿಣಿತಾ, ಅದು ಹರಟೆ ಅಲ್ಲ. ಅವರೆಲ್ಲರೂ ಪವನಪೂರ ನಗರದ ಗೌರವಾನ್ವಿತರು. ಬ್ಯಾಂಕ್ ವ್ಯವಹಾರದ ಬಗ್ಗೆ ಮಾತನಾಡಿದರು. ನಾನು ಅವರಿಗೆ ಕರೆಯಲಿಲ್ಲ. ತಾವಾಗಿಯೇ ಬಂದರು."

"ಸುಮಂತ್, ಅವರೆಲ್ಲರ ಜಾತಕ ನನ್ನ ಹತ್ತಿರ ಇದೆ. ನಾನು ಇದೇ ಊರಿನಲ್ಲಿ ಹುಟ್ಟಿ ಬೆಳೆದವಳು. ಅವರಲ್ಲಿ ಒಬ್ಬ ಗೌರವಾನ್ವಿತ ವ್ಯಕ್ತಿ. ಉಳಿದವರ ಚರಿತ್ರೆ ಸಮಯ ಸಿಕ್ಕಾಗ ಹೇಳುವೆ. ನಮ್ಮ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದು ಈ ಸಭ್ಯ  ಮಹಾಶಯರಿಂದಲೇ." 

ಸುಮಂತ್ ನಿಗೆ ಅಸಮಾಧಾನವಾದರೂ ಸುಮ್ಮನೆ ಇರಬೇಕಾಯಿತು. ಇಂತಹ ಮನಸ್ತಾಪ ಆಗಾಗ ನಡೆದಿತ್ತು. ಆಕೆಯ ನಡವಳಿಕೆಯಲ್ಲಿ ತುಂಬಾ ಬದಲಾವಣೆ ಆಗುತ್ತಿರುವದನ್ನು ಗಮನಿಸಿದ ಸುಮಂತ್ ಗೆ ಇದಕ್ಕೆ ಬ್ರೇಕ್ ಹಾಕುವ ಪ್ಲಾನ್ ಮಾಡಿದ. ಅಪ್ಪ ಅಮ್ಮ ಈ ಮದುವೆ ಬೇಡ ಎಂದರೂ ಅವರ ಮಾತು ಮೀರಿ ಪರಿಣಿತಾ ಜೊತೆಗೆ ಮದುವೆ ಮಾಡಿಕೊಂಡ. ಈಗ ಪರಿಣಿತಾಳಿಂದ ಪರಿತಪಿಸುವದಕ್ಕಿಂತ ಇಂತಹ ಪ್ರಸಂಗಗಳು ಆಗದೇ ಇರುವಂತೆ ಜಾಗೃತಿ ವಹಿಸುವದು ಸೂಕ್ತ ಎಂದುಕೊಂಡ.



********


ಸುಮಂತ್ ಆರು ತಿಂಗಳು ಹಿಂದೆ ಸೂರ್ಯಾ ಬ್ಯಾಂಕ್, ಪವನಪೂರ ಶಾಖೆಗೆ ಮ್ಯಾನೇಜರ್ ಎಂದು ಕೆಲಸಕ್ಕೆ ಸೇರಿದ. ಪವನಪೂರದವಳೇ ಆದ ಪರಿಣಿತಾ ಜೊತೆಗೆ ಪ್ರೇಮ ವಿವಾಹ ಆದ. ಜಯರಾಜ್ ಹಾಗೂ ಜಯಂತಿ ಅವರ ಏಕೈಕ ಪುತ್ರಿ ಪರಿಣಿತಾ. ಜಯರಾಜ್ ಅವರು ಮಾಡಿದ ವ್ಯಾಪಾರಗಳು ಒಂದೇ ಎರಡೇ. ದಿನಸಿ ಅಂಗಡಿ, ಬಟ್ಟೆ ಅಂಗಡಿ, ಸ್ಟೇಶನರಿ ಹಾಗೂ ಕೊನೆಗೆ ಮುದ್ರಣಾಲಯ. ವಂಶ ಪಾರಂಪರ್ಯವಾಗಿ ಬಂದ ದಿನಸಿ ವ್ಯಾಪಾರ ಬಿಟ್ಟು ಹೊಸ ವ್ಯಾಪಾರಗಳಲ್ಲಿ ಕೈ ಹಾಕಿ ಕೈ ಸುಟ್ಟುಕೊಂಡರು. ಪವನಪೂರ ಹೃದಯ ಭಾಗದಲ್ಲಿ ಅಂಟಿಕೊಂಡ ಎರಡು ದೊಡ್ಡ  ಸ್ವಂತ ಮನೆಗಳಲ್ಲಿ ಒಂದರಲ್ಲಿ ಮುದ್ರಣಾಲಯ ಹಾಗೂ ವಾಸದ ಮನೆ. ಇನ್ನೊಂದರಲ್ಲಿ  ಸೂರ್ಯಾ ಬ್ಯಾಂಕ್ ಗೆ ಬಾಡಿಗೆ ಕೂಟ್ಟರು. ಪ್ರಸ್ತುತ ಮುದ್ರಣಾಲಯದ ವ್ಯಾಪಾರ ಪರಿಣಿತಾ ನೋಡಿಕೊಂಡಳು. ಆಕೆ ಅದೇ ವರ್ಷ 

ಎಮ್ ಬಿ ಎ ಮುಗಿಸಿ ಬೆಂಗಳೂರುನಿಂದ ಬಂದಿದ್ದಳು. ಪರಿಣೀತಾ ಮೇಲಿಂದ ಮೇಲೆ ಬ್ಯಾಂಕ್ ಗೆ ಹೋಗುವದರಿಂದ ಸುಮಂತನ ಸ್ನೇಹವಾಯಿತು. ಮುಂದೆ ಸುಮಂತ ಕೊಟ್ಟ ಸಲಹೆಗಳು ಹಾಗೂ ಆರ್ಥಿಕ ಸಹಾಯ ಪರಿಣಿತಾಗೆ ವ್ಯಾಪಾರದಲ್ಲಿ ಚೇತರಿಸಿಕೊಳ್ಳುವ ಅವಕಾಶ ಸಿಕ್ಕಿತು. ಇದರಿಂದ ಇವರಿಬ್ಬರು ಸನಿಹಕ್ಕೆ ಬಂದರು. ಅದು ಹಾಗೆ ಮುಂದುವರೆದು  ಅವರಲ್ಲಿ ಪ್ರೇಮ ಅಂಕುರಿಸಿತು. 'ಝಟ್ ಮಂಗನಿ ಪಟ್ ಶಾದಿ' ಎನ್ನುವಂತೆ ಸುಮಂತ್ ಪರಿಣಿತಾ ದಂಪತಿ ಆಗುವದರಲ್ಲಿ ಬಹಳ ಸಮಯ ಆಗಲಿಲ್ಲ. ಪರಿಣಿತಾ ಅಮ್ಮ ಅಪ್ಪ ಗೆ ಖುಷಿ ಆದರೆ ಸುಮಂತನ ತಂದೆ ತಾಯಿಗೆ ಅಸಮಾಧಾನವಾಗಿ ನಿಶ್ಚಿತಾರ್ಥಕ್ಕೆ ಬರಲಿಲ್ಲ. ಮದುವೆಗೆ ಮಗನ ಒತ್ತಾಯದಿಂದ ಬಂದು ಆಶೀರ್ವಾದ ಮಾಡಿದರು.  ಆ ಸಮಯದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಿದವು.

 

ಮದುವೆ ಅಕ್ಷತಾ ದಿವಸ ಬೀಗರ ಪರಸ್ಪರ ಭೇಟಿ ಆದಾಗ ಆಶ್ಚರ್ಯ ಕಾದಿತ್ತು. ಸುಮಂತ್ ನ ತಂದೆ ಪ್ರಭಾಕರ್ ಹಾಗೂ ಜಯರಾಜ್ ಇಪ್ಪತ್ತು ವರ್ಷಗಳ ಹಿಂದಿನ ಪರಿಚಯ. ಆಗ ಪ್ರಭಾಕರ್ ಪವನಪೂರದಲ್ಲಿ ಪೋಲಿಸ್ ಇನಸ್ಪೆಕ್ಟರ. ಜಯರಾಜ್ ದವಸ ಧಾನ್ಯಗಳ ಸಗಟು ವ್ಯಾಪಾರಿ. ದವಸ ಧಾನ್ಯದಲ್ಲಿ ಕಲಬೆರಕೆ ಮಾಡುತ್ತಿರುವರು ಎಂದು ಯಾರೋ ಪೋಲಿಸ್ ಸ್ಟೇಷನ್ ಹೋಗಿ ದೂರು ಕೊಟ್ಟರು. ವಸ್ತು ಸ್ಥಿತಿ ತಿಳಿಯುವ ಗೋಜಿಗೆ ಹೋಗದೇ ಒಂದು ದಿವಸ ದೂರು ಆಧಾರದಮೇಲೆ ಇಬ್ಬರು ಕಾನ್ಸಟೇಬಲ್ ಜೊತಗೆ ಪ್ರಭಾಕರ್ ಅಂಗಡಿ ರೇಡ್ ಮಾಡಿದರು. ಕೆಲವು ಧಾನ್ಯಗಳನ್ನು ತಪಾಸಣಗೆ ಕಳಿಸಿದರು. ಅದರಿಂದ ಜಯರಾಜ್ ಅವರಿಗೆ ಹೆದರಿಕೆ ಆಗಿ ವ್ಯಾಪಾರದ ಮೇಲೆ ಪರಿಣಾಮ ಆಗಿ ನಷ್ಟದ ಜೊತೆಗೆ ಮರ್ಯಾದೆ    ಹೋಯಿತು. ಅಂದಿನಿಂದ ಅವರಿಬ್ಬರು ದ್ವೇಷಿಗಳು ಆದರು. ಜಯರಾಜ್ ತಮಗಿರುವ ವರ್ಚಸ್ಸು ದುರುಪಯೋಗ ಮಾಡಿಕೊಂಡು  ಪವನಪೂರದಿಂದ ಪ್ರಭಾಕರ್ ಅವರಿಗೆ  ನೀರು, ಸಾರಿಗೆ ಸಂಪರ್ಕ ಇರದ ದೂರದ ಊರಿಗೆ  ವರ್ಗಾವಣೆ  ಮಾಡಿಸುವದಲ್ಲದೇ ತಮಗೆ ಐವತ್ತು ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿರುವದು ಹಾಗೂ ಬೇರೆ ಬೇರೆ ಯವರ ಕಡೆಯಿಂದ ಲಂಚ ತೆಗೆದುಕೊಂಡ ಕೇಸ್ ಕೋರ್ಟ್ ನಲ್ಲಿ ದಾಖಲು ಮಾಡಿದರು. ಇದರಿಂದ ಪ್ರಭಾಕರ್ ಅವರು ಬಹಳ ಕಷ್ಟ ಪಡುವ ಗಂಭೀರ  ಪರಿಸ್ಥಿತಿ ನಿರ್ಮಾಣವಾಯಿತು. ಅವರಿಗೆ ಸೇವೆಯಿಂದ ಮೂರು ತಿಂಗಳು ಸಸ್ಪೆಂಡ್ ಮಾಡಿದರು. ನಂತರ ಪ್ರಭಾಕರ್ ಅವರು ಹಿರಿಯ ನ್ಯಾಯವಾದಿಗೆ ತಮ್ಮ ಕೇಸ್ ಕೂಟ್ಟು ಒಂದು ವರ್ಷ ಆದಮೇಲೆ ಎಲ್ಲ ದೂರುಗಳಿಂದ ಮುಕ್ತರಾಗಿ ಮತ್ತೆ ಪವನಪೂರದಲ್ಲಿ ಕೆಲಸಕ್ಕೆ ಹಾಜರು ಆದರು. ಇಬ್ಬರೂ ಪರಸ್ಪರ ನೋಡಿದಮೇಲೆ ಇವೆಲ್ಲ ಘಟನೆಗಳು ಅವರೀರ್ವರ  ಸ್ಮೃತಿ ಪಟಲದಮೇಲೆ ಹಾದು ಹೋದವು. ಅವರಿಬ್ಬರ ಕಣ್ಣುಗಳು ಕೆಂಪಾದವು. ವೈರಿ ಇದ್ದವರು ಪ್ರಸ್ತುತ ಬೀಗರಾಗುವ ಅನಿವಾರ್ಯತೆ. ಸಿಟ್ಟಿನಿಂದ ಇಬ್ಬರೂ ನೋಡುವದನ್ನು ಗಮನಿಸಿದ ಪರಿಣಿತಾ  ಪರಿಸ್ಥಿತಿ ಅರ್ಥ ಮಾಡಿಕೂಂಡು ಸುಖಾಂತ್ಯ ಮಾಡಲು ಮದುವೆ ವಿಧಿ ವಿಧಾನಗಳ ನಡುವೆ ಎದ್ದು ಆಕೆ ಜಯರಾಜ್ ಹಾಗೂ ಪ್ರಭಾಕರ್ ಅವರ ಆಲಿಂಗನ ಮಾಡಿಸಿ ಅವರಿಬ್ಬರಲ್ಲಿ ಇರುವ ಕಹಿ ನಿವಾರಿಸುವಲ್ಲಿ ಯಶಸ್ವಿ ಆದಳು. ಸುಮಂತ್ ಈ ದೃಶ್ಯ ನೋಡಿ ಆನಂದ ಪುಳಕಿತನಾದ. ಇನ್ನು ಜಯರಾಜ್ ಪತ್ನಿ ಜಯಂತಿ ಹಾಗೂ ಪ್ರಭಾಕರ್ ಪತ್ನಿ ಪ್ರತಿಭಾ ಇಬ್ಬರೂ ಉತ್ತರ ಧೃವ ದಕ್ಷಿಣ ಧೃವ. ಇಪ್ಪತ್ತು ವರ್ಷದ ಹಿಂದೆ  ಮಹಿಳಾ ಸಂಘ, ಗಣೇಶ ಚತುರ್ಥಿ, ಹಾಗೂ ಅಂಜನೇಯ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮ ಎಲ್ಲದರಲ್ಲೂ ಇಬ್ಬರ ಪೈಪೋಟಿ.ಇಬ್ಬರೂ ವಿದ್ಯಾವಂತ ಮಹಿಳೆಯರು.ಇಷ್ಟೆಲ್ಲಾ ಇದ್ದರೂ ಆ ಶುಭ ಕಾರ್ಯದಲ್ಲಿ ಹಿಂದಿನದನ್ನು ಮರೆತು ಒಂದಾದರು. ಪುರೋಹಿತರು ಮದುವೆ ವಿಧಿ ವಿಧಾನ ಮುಂದುವರೆಸಿದರು. ಅವರು ಅವಸರದಲ್ಲಿ ಉಚ್ಛಾರ ಮಾಡುವ ಸಂಸ್ಕೃತ ಶ್ಲೋಕಗಳು ಸುಮಂತ್ ನಿಗೆ ತಡೆಯಲು ಆಗದೇ ಅವರಿಗೆ ಅವಸರವೇಕೆ? ನಿಧಾನವಾಗಿ ಮಾಡಿ ಎಂದ. ಹಾಗೆ ಪುರೋಹಿತರ ಅವಮಾನ ಪರಿಣಿತಾಗೆ ಸಿಟ್ಟು ಬಂದು ಸುಮಂತ್ ಗೆ ಸುಮ್ಮನೆ ಇರಿ ಎಂದಳು. ಅದಕ್ಕೆ ಸುಮಂತ್ ಪ್ರತಿಭಟನೆ ಮಾಡಿದ. ಸ್ವಲ್ಪ ಸಮಯ ಅವರಿಬ್ಬರಲ್ಲಿ ಮಾತಿನ ಚಕಮಕಿ. ಐದು ನಿಮಿಷದಲ್ಲಿ ಪರಿಸ್ಥಿತಿ ಸರಿ ಆಯಿತು. ದಾಂಪತ್ಯದಲ್ಲಿ ಬೇಡ ವಿರಸ, ಅನುದಿನವೂ ಇರಲಿ ಸರಸ ಎಂದು ಅದೇ ಪುರೋಹಿತ ಹೇಳಿ ನಿಧಾನವಾಗಿ ಮಾಡಲು ಒಪ್ಪಿದರು. ಮಂತ್ರಘೋಷದೂಂದಿಗೆ ಪರಿಣಿತಾ-ಸುಮಂತ್  ಮದುವೆ ಸಮಾರಂಭ ಸರಳವಾಗಿ ನೆರವೇರೀತು.

 



Rate this content
Log in

Similar kannada story from Romance