STORYMIRROR

Shridevi Patil

Classics Inspirational Others

3  

Shridevi Patil

Classics Inspirational Others

ಅವಳೂ ತಾಯಿಯೇ.

ಅವಳೂ ತಾಯಿಯೇ.

2 mins
190


ಅವಳು ತಾಯಿ ..... ಹೌದು ಅವಳೊಬ್ಬ ಜವಾಬ್ದಾರಿಯುತ ತಾಯಿ .... ಹೆಣ್ಣು ಜನಿಸಿದ ಕ್ಷಣವೇ ಅವಳಲ್ಲಿ ಸುಪ್ತವಾದ ಹೆಣ್ತನ , ತಾಯ್ತನ ಜನಿಸಿರುತ್ತದೆ. ಅದು ಸಮಯಾನುಸಾರ ತನ್ನ ಕರ್ತವ್ಯ ಮಾಡುತ್ತದೆ. ತಾಯ್ತನ ಎನ್ನುವುದನ್ನು ಕರ್ತವ್ಯ ಎಂದರೆ ಬಹುಶಃ ತಪ್ಪಾಗಬಹುದು. ಯಾಕೆಂದರೆ ಯಾವುದೇ ಹೆಣ್ಣು ಮಗಳಾಗಲಿ , ಅವಳು ತಾಯಿಯಾದಾಗ ಕರ್ತವ್ಯ ಅಂತ ತನ್ನ ತಾಯ್ತನದ ಧಾರೆಯನ್ನು ಮಕ್ಕಳಿಗೆ ಎರೆಯುದಿಲ್ಲ , ಬದಲಾಗಿ ಮಮತಾಮಯಿಯಾಗಿ , ಕರುಣಾಮಯಿಯಾಗಿ , ತ್ಯಾಗಮಯಿಯಾಗಿ , ಸ್ನೇಹಮಯಿಯಾಗಿ , ಪ್ರೇಮಮಯಿಯಾಗಿ , ತನ್ನ ಪ್ರೀತಿ , ಮಮತೆ , ವಾತ್ಸಲ್ಯವನ್ನು ಧಾರಾಕಾರವಾಗಿ ಹರಿಸುತ್ತಾಳೆ. ತಾನು ನೀಡುವ ಪ್ರೀತಿ ಮಮತೆಗೆ ವಾಪಸ್ಸು ಏನನ್ನು ನಿರೀಕ್ಷಿಸದೇ ನಿಸ್ವಾರ್ಥವಾಗಿ ಸೇವೆ ಮಾಡುವ ಅವಳು ನಿಜವಾಗಿಯೂ ನಿಸ್ವಾರ್ಥ ತಾಯಿಯೇ ....


ಹೆಣ್ಣು ತಾನು ಹೆತ್ತ ಮಕ್ಕಳಿಗಷ್ಟೇ ತಾಯಿಯಾಗಿರದೆ, ಎಷ್ಟೋ ಅನಾಥ ಮಕ್ಕಳಿಗೂ ತಾಯಿಯಾಗಿ ಮಮತೆ ,ಪ್ರೀತಿ , ವಾತ್ಸಲ್ಯವನ್ನು ಹಂಚಿದ ಅದೆಷ್ಟೋ ಉದಾಹರಣೆಗಳಿವೆ.. ಈಗ ನಮ್ಮ ನಿಮ್ಮೆಲ್ಲರ ಮನಸ್ಸಿನಲ್ಲಿ ಬರುವ ಮೊದಲ ಹೆಸರೇ "ಮದರ್ ತೆರೆಸಾ" ಅಲ್ಲವೇ.. ?


ನಾವೂ ಕೂಡ ಎಷ್ಟೋ ಸಲ ಅಂತಹ ತಾಯಂದಿರನ್ನು ಕಂಡಿರುತ್ತೇವೆ , ಬಹುಶಃ ಈಗ ಅದನ್ನು ನೆನಪು ಮಾಡಿಕೊಳ್ಳುತ್ತಿರಬಹುದು. ಅಮ್ಮ ಅನ್ನುವ ಆ ಒಂದು ಪದದಲ್ಲಿ ಅದೇನು ಪವಾಡವಿದೆಯೋ , ಶಕ್ತಿ ಸಾಮರ್ಥ್ಯ ಇದೆಯೋ ,ಆ ಪದ ನಮ್ಮ ಬಾಯಲ್ಲಿ ಉಚ್ಚರಿಸಿದರೆ ಸಾಕು ಅದೆಂತಹ ನೆಮ್ಮದಿ , ನಿಟ್ಟುಸಿರು, ಸಾರ್ಥಕತೆಯ ಭಾವ ಬರುತ್ತದೆಯಲ್ಲವೇ.?

ಹೌದು ಅಮ್ಮ ,ಅವ್ವ ಎನ್ನುವ ಆ ಪದಕ್ಕಿರುವ ಶಕ್ತಿಯೇ ಅಂತದ್ದು... ಬಿದ್ದಾಗ , ಎದ್ದಾಗ , ನಗುವಲ್ಲಿ ಅಳುವಲ್ಲಿ , ದುಃಖದಲ್ಲಿ , ಸಂತೋಷದಲ್ಲಿ ,ಎಲ್ಲ ಕಡೆಯೂ ಅಮ್ಮ ಎನ್ನುವ ಪದವೇ ಮೊದಲಿರುತ್ತದೆ. ಹೀಗಾಗಿ ಈ ಜಗತ್ತಿನಲ್ಲಿ ಮೊಟ್ಟ ಮೊದಲ ಸ್ಥಾನವನ್ನು ತಾಯಿಯೇ ಅಲಂಕರಿಸಿದ್ದಾಳೆ ಅಲ್ಲವೇ.


ಹೀಗೆ ತಾಯಿಯು ನಿಸ್ವಾರ್ಥ ಸೇವೆಯನ್ನು ಮಾಡುತ್ತ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುವ ತಾಯಿಯು , ತನ್ನ ಬಡತನ , ಸಿರಿತನ ನೋಡವುದಿಲ್ಲ. ಕೇವಲ ಒಬ್ಬ ತಾಯಿಯಾಗಿ ಮಾತ್ರ ನೋಡುವ ಆಕೆ ಎಂತಹ ಕಷ್ಟದಲ್ಲಿಯೂ ತನ್ನ ಮಕ್ಕಳಿಗೆ ತನ್ನ ಬಡತನ ಗೊತ್ತಾಗದಂತೆ ಇರಲು ಪ್ರಯತ್ನಿಸುತ್ತಾಳೆ.


ಇಲ್ಲಿ ನಾನು ಕೂಡ ಅಂತಹ ಮಹಾನ್ ತಾಯಿಯೊಬ್ಬಳ ಕುರಿತು ಹೇಳಬೇಕೆಂದಿದ್ದೇನೆ. ಆ ತಾಯಿ ಜೀವವು ತನ್ನ ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿ ಯಾವ ತರ ಕೆಳಗಿನಿಂದ ಮೇಲೆರಲು ಕಷ್ಟ ಪಟ್ಟಿತು , ತನ್ನ ಮಕ್ಕಳನ್ನು ಅದ್ಯಾವ ರೀತಿಯಾಗಿ ಸಾಕಿ ಸಲುಹಿತು , ಒಂದು ಹೊತ್ತಿನ ಊಟಕ್ಕೆ ಅದೆಷ್ಟು ಕಷ್ಟ ಪಟ್ಟಿತು , ಅಂದಿನಿಂದ ಇಂದಿನವರೆಗೆ ಪರಿಸ್ಥಿತಿ ಹಾಗೆ ಇದೆಯಾ ? ಅಥವಾ ಏನಾದರೂ ಅಲ್ಪ ಬದಲಾವಣೆ ಆಗಿದೆಯಾ ? ಮಕ್ಕಳನ್ನು ಸರಿಯಾದ ದಾರಿಗೆ ತರಲು ಅವಳು ಅದೆಷ್ಟು ಕಷ್ಟ ಪಟ್ಟಳು ಎನ್ನುವುದನ್ನು ಹಂತ ಹಂತವಾಗಿ ನೋಡೋಣ.


ಅವಳು ತಾಯಿಯೇ.


ಹೌದು ಕಲಾವತಿ ಅವಳ ಅಪ್ಪ ಅಮ್ಮನಿಗೆ ಎರಡನೆಯ ಮಗಳು. ಕಲಾವತಿಗೆ ಒಬ್ಬಳು ಅಕ್ಕ ಇರುವಳು. ಅಕ್ಕ ತಂಗಿ ಇಬ್ಬರು ಕೂಡ ಶಾಲೆಯ ಕಡೆ ಮುಖ ಮಾಡಿದವರಲ್ಲ , ಅಪ್ಪ ಅಮ್ಮನೊಂದಿಗೆ ಕೆಲಸ ಮಾಡುತ್ತಾ ಇರುತ್ತಿದ್ದರು.


ಮುಂದಿನ ಭಾಗದಲ್ಲಿ ಕಲಾವತಿಯ ಬಾಲ್ಯ ಜೀವನದ ಕುರಿತು ನೋಡೋಣ .


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics