ಅಪ್ಪಾಜಿಯ ಅಪ್ಪು
ಅಪ್ಪಾಜಿಯ ಅಪ್ಪು
ಅಪ್ಪಾಜಿಯ ಅಪ್ಪು
ಶತಾಯುಷಿ ಮಾಜಿ ಸೈನಿಕ
ಅಂದು ಪವನಪುರ ಜ್ಞಾನ ವರ್ಧಿನೀ ಪ್ರೌಢಶಾಲೆಯ ಸಭಾಂಗಣದಲ್ಲಿ ಆರನೇ ತರಗತಿಯ ಹನ್ನೆರಡು ವರ್ಷದ ಬಾಲಕನ ಭಾಷಣ ಕೇಳಿದ ವಿದ್ಯಾರ್ಥಿಗಳು ಮೇಲಿಂದ ಮೇಲೆ ಕರತಾಡನ ಮಾಡಿದರು. ಆ ಬಾಲಕ ಕೃಷ್ಣ ಅನಾಥ ನಿದ್ದು ಶತಾಯುಷಿ ರಾಮದಾಸ್ ಪಟವಾರಿ ಅವರು ಅವನನ್ನು ಅನಾಥಾಶ್ರಮದಿಂದ ಕರೆದುಕೊಂಡು ಬಂದರು. ಅವನು ಮೂರು ವರ್ಷದ ಮಗು ಇರುವಾಗ ತಂದೆ ಮಣಿಕಂಠ ಗಾರೆ ಕೆಲಸ ಮಾಡುವಾಗ ಹೃದಯಾಘಾತ ದಿಂದ ಮರಣ ಹೊಂದಿದ. ತಾಯಿ ಮುನಿಯಮ್ಮ ಕಟ್ಟಡ ಕೆಲಸದಲ್ಲಿ ಮೇಲಿನಿಂದ ಬಿದ್ದು ಪ್ರಾಣ ಕಳೆದುಕೊಂಡಳು. ಅನಾಥನಾದ ಕೃಷ್ಣನಿಗೆ ರಾಮನಾಥ್ ಅವರು ಅನಾಥಾಶ್ರಮವನ್ನು ಸೇರಿಸಿದರು. ಅವರೇ ಅವನಿಗೆ ಏಳನೆ ವರ್ಷ ಆದಮೇಲೆ ಶಾಲೆ ಸೇರಿಸಿದರು. ಅವನ ಪ್ರತಿಭೆಯನ್ನು ಗಮನಿಸಿದ ಶಾಲೆಯ ಆಡಳಿತ ಮಂಡಳಿ ಎಲ್ಲರೀತಿಯ ಪ್ರೋತ್ಸಾಹ ಕೊಟ್ಟರು.
ಜ್ಞಾನ ವರ್ಧಿನೀ ವಿಭಿನ್ನ ಶಾಲೆ ಎಂದರೆ ಅತಿಶಯೋಕ್ತಿ ಯೇನಲ್ಲ. ಈ ಸಂಸ್ಥೆಯವರು ವಿನೂತನ ಕೆಲಸಗಳನ್ನು ಮಾಡಿ ಇಡೀ ರಾಜ್ಯದ ಗಮನ ಸೆಳೆದಿರುವರು. ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಅನೇಕ ಸ್ಪರ್ಧೆ ಗಳಾದ ಸಂಗೀತ, ಕ್ರೀಡೆ,ಮನೋರಂಜನೆ, ಲಘು ಭಾಷಣ ಹಾಗೂ ಪ್ರಬಂಧ ಬರಹ ಹಮ್ಮಿಕೊಂಡಿದ್ದರು. ವಿವಿಧ ಸ್ಪರ್ಧೆಗಳನ್ನು ಆಯಾ ತರಗತಿಯ ಶಿಕ್ಷಕರು ನಿರ್ವಹಿಸುವದು ಹಾಗೂ ಭಾಗವಹಿಸುವ ವಿದ್ಯಾರ್ಥಿಗಳು, ಕೊನೆಯ ದಿನಾಂಕ ಇರುವ ವಿವರವಾದ ಸುತ್ತೋಲೆ ಹೊರಡಿಸಿದರು. ಇದರ ಪ್ರತಿಯನ್ನು ನೋಟಿಸ್ ಬೋರ್ಡಗೆ ಅಂಟಿಸಿದರು. ಇವೆಲ್ಲ ಪಠ್ಯೇತರ ಚಟುವಟಿಕೆಗಳು. ಪ್ರಬಂಧದ ಸ್ಪರ್ಧೆ ಹತ್ತನೇ ತರಗತಿಯ ಶಿಕ್ಷಕರಾದ ತಿರುಮಲೇಶ್ ಕುಲಕರ್ಣಿ ಅವರಿಗೆ ವಹಿಸಿದರು. ಮುಖ್ಯ ಅಧ್ಯಾಪಕರಾದ ಕಮಲಾಕರ ಜೋಯಿಸ್ ಅವರಿಗೆ ಒಟ್ಟಾರೆ ಮೇಲ್ವಿಚಾರಣೆ. ಸ್ಥಳೀಯ ಶಾಸಕ ಮುನಿರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಒಪ್ಪಿದರು. ಮುಖ್ಯ ಅತಿಥಿಯಾಗಿ ಪವನಪುರದ ಹಿರಿಯರು 100 ನೇ ವಸಂತಕ್ಕೆ ಕಾಲಿಟ್ಟ ವಯೋವೃದ್ಧ ಹಾಗೂ ನಿವೃತ್ತ ಸೈನಿಕ ಅಧಿಕಾರಿ ಶ್ರೀ ರಾಮದಾಸ್ ಪಟವಾರಿ (ಅಪ್ಪಾಜಿ) ಆಮಂತ್ರಣ ಕೊಡಲು ಹೋದರೆ ಅವರು ಒಪ್ಪಿಗೆ ಕೊಡದೇ ಇರುವದರಿಂದ ಸಮಸ್ಯೆ ಆಯಿತು. ಅವರ ಹೆಸರನ್ನು ಮೀಟಿಂಗ್ ನಲ್ಲಿ ಒಮ್ಮತದಿಂದ ನಿರ್ಧಾರ ಮಾಡಿದ್ದರು. ಅವರು ಒಪ್ಪಿಗೆ ಕೊಡಬಹುದು ಎನ್ನುವ ವಿಶ್ವಾಸದಿಂದ ಪತ್ರಿಕೆಯಲ್ಲಿ ಅವರ ಹೆಸರು ಮುದ್ರಣ ಮಾಡಿದ್ದರು. ಕಾರ್ಯಕ್ರಮ ಇನ್ನೂ ಒಂದು ವಾರ ಉಳಿದಿತ್ತು.
ಇದಾದ ಒಂದು ದಿವಸದ ನಂತರ ತಿರುಮಲೇಶ್ ಕುಲಕರ್ಣಿ ತಮಗೆ ನಿರ್ವಹಿಸಲು ಕೊಟ್ಟ ಪ್ರಬಂಧ ಸ್ಪರ್ಧೆ ಬಗ್ಗೆ ತಮ್ಮ ತರಗತಿಯಲ್ಲಿ ವಿವರಿಸಿದರು. ಪ್ರಬಂಧದ ವಿಷಯ ಆಯ್ಕೆ ಮಾಡುವವರು ವಿದ್ಯಾರ್ಥಿಗಳು. ಮೂರು ಪುಟಕ್ಕೆ ಮೀರದ ಬರಹ ಸಲ್ಲಿಸಬೇಕು. ಉತ್ತಮ ಪ್ರಬಂಧ ಬರೆದ ವಿಜೇತರಿಗೆ ಅಂದಿನ ಸಮಾರಂಭದಲ್ಲಿ ಮುಖ್ಯ ಅತಿಥಿಯಿಂದ ಬಹುಮಾನ ವಿತರಣೆ. ಇದನ್ನು ಆಗಲೇ ಸುತ್ತೋಲೆಯಲ್ಲಿ ವಿವರಿಸಿದ್ದರು. ಪ್ರಬಂಧಗಳನ್ನು ವಾರ್ಷಿಕೋತ್ಸವದ ಒಂದು ವಾರ ಮೊದಲು ಸಲ್ಲಿಸಬೇಕು. ಇಡೀ ಶಾಲೆಯಿಂದ ಐವತ್ತು ವಿದ್ಯಾರ್ಥಿಗಳು ಕೊಟ್ಟ ಗಡುವಿನ ಒಳಗೆ ಪ್ರಬಂಧ ಸಲ್ಲಿಸಿದರು. ಅವರೆಲ್ಲರು ಆಯ್ಕೆ ಮಾಡಿದ ವಿಷಯಗಳು ನಾನು ಕಂಡ ಸವಿಗನಸು, ಪರಿಸರವಾದಿ, ಜೀವನದಲ್ಲಿ ನನ್ನ ಗುರಿ, ಸಮಾಜಕ್ಕೆ ನನ್ನ ಕೊಡುಗೆ, ಹಾಗೂ ನನ್ನ ಜೀವನದ ಗುರಿ ಇತ್ಯಾದಿ. ಅವರಲ್ಲಿ ಬಹುಮಾನ ಸಿಗುವದು ಮೂವರಿಗೆ ಮಾತ್ರ. ಆದರೆ ಅವರಲ್ಲಿ ಒಬ್ಬ ವಿದ್ಯಾರ್ಥಿ ಆಯ್ದ ವಿಷಯ ಎಲ್ಲರ ಗಮನ ಸೆಳೆಯಿತು. ಅವನು ಆಯ್ದುಕೊಂಡ ವಿಷಯ 'ಆದರ್ಶಗಳನ್ನು ಅನುಸರಿಸಿದ ಶತಾಯುಷಿ ಅಪ್ಪಾಜಿ' ಅದೇ ವಿದ್ಯಾರ್ಥಿ ಮುಖ್ಯ ಅತಿಥಿ ಅಪ್ಪಾಜಿಯವರನ್ನು ಒಪ್ಪಿಸುವ ಜವಾಬ್ದಾರಿ ತೆಗೆದುಕೊಂಡು ಯಶಸ್ವಿ ಆಗಿದ್ದ. ಇದಲ್ಲದೆ ಸಂಗೀತ,ಕ್ರೀಡೆ ಹಾಗೂ ಲಘು ಭಾಷಣದಲ್ಲಿ ಭಾಗವಹಿಸಿದ.
ಆ ವಿದ್ಯಾರ್ಥಿ ಯಾರು?
ಪವನಪೂರ ನಗರದಲ್ಲಿ ಗಾರೆ ಕೆಲಸ ಮಾಡುವ ಧನಂಜಯನ ಹಾಗೂ ದಿನಗೂಲಿ ಕೆಲಸ ಮಾಡುವ ಪಾರ್ವತಿ ಇವರ ಮಗ ಅಪ್ಪು. ಎರಡು ವರ್ಷಗಳ ಹಿಂದೆ ಧನಂಜಯ ಅಪಘಾತದಲ್ಲಿ ಮರಣ ಹೊಂದಿದ. ಕಳೆದ ವರ್ಷ ತಾಯಿ ಪಾರ್ವತಿ ಕೆಲಸ ಮಾಡುವಾಗ ಕಟ್ಟಡದ ಮೇಲಿನಿಂದ ಬಿದ್ದು ಆಸು ನೀಗಿದಳು. ಅಪ್ಪು ಅನಾಥ ನಾದ. ಆಗ ಅವನ ವಯಸ್ಸು ಆರು ವರ್ಷ. ಅವನ ಬಾಲ್ಯ ತುಂಬಾ ಕಷ್ಟಕರ ಕಳೆದ. ಅಪ್ಪಾಜಿ ದೃಷ್ಟಿ ಅವನ ಮೇಲೆ ಬಿದ್ದು ಅವರಿಗೆ ಸೋಜಿಗ ವಾಯಿತು. ಇಬ್ಬರು ಯುವಕ ಭಿಕ್ಷುಕರಿಗೆ ಭಿಕ್ಷೆ ಮಾಡುವದನ್ನು ಬಿಟ್ಟು ದುಡಿದು ಹಣ ಸಂಪಾದನೆ ಮಾಡಿ ಎಂದ. ಇದನ್ನು ಗಮನಿಸಿದ ಅಪ್ಪಾಜಿ ಅವರೆಲ್ಲರನ್ನು ಕರೆದುಕೊಂಡು ಹೋಗಿ ತಮ್ಮ ತೋಟದಲ್ಲಿ ಕೆಲಸ ಕೊಟ್ಟರು. ಅವರಲ್ಲಿ ಅಪ್ಪುಒಬ್ಬನೇ ಶಾಲೆಗೆ ಸೇರಿ ಪ್ರತಿಭಾವಂತನಾದ. ಆರನೆ ತರಗತಿಯಲ್ಲಿ ಅವನು ಬರಿ ಪ್ರತಿಭಾವಂತ ಅಲ್ಲದೇ ಸರಳ ಸ್ವಭಾವದ ಹುಡುಗನಾದ. ಅಪ್ಪು ಬಗ್ಗೆ ಏನಾದರೂ ಪ್ರಸ್ತಾಪ ವಾದರೇ ಅದೇ ತರಗತಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ರಾಕೇಶ್ ಹಾಗೂ ಅವನ ಗುಂಪಿನ ಐದು ವಿದ್ಯಾರ್ಥಿಗಳು ಉದ್ಧಟತನ ಮಾಡುವದು ಅವರ ಸ್ವಭಾವ. ಒಂದು ದಿವಸ ತರಗತಿಯಲ್ಲಿ ರಾಕೇಶ್ ಜೋರಾಗಿ ನಕ್ಕು,
"ಅಪ್ಪು ಪ್ರಬಂಧ,ಸಂಗೀತ,ಕ್ರೀಡೆಯಲ್ಲಿ ಶೂನ್ಯ. ಅವನು ಬರಿ ಬಡಾಯಿ ಕೊಚ್ಚಿ ಕೊಳ್ಳುವನು. ಕೂಲಿ ಮಾಡುವವನ ಮಗ ಹೇಗೆ ಪ್ರಬಂಧ ಬರೆಯುವನು, ಹಾಡುವನು ಮತ್ತು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವನು? " ಎಂದ
ಆಮೇಲೆ ಅವನ ಮಿತ್ರರು ತಮ್ಮ ಮನಸ್ಸಿಗೆ ಬಂದ ಹಾಗೆ ಅಪ್ಪುನ ವಿರುದ್ಧ ಮಾತನಾಡಿದರು. ತರಗತಿ ಶಿಕ್ಷಕ
ತಿರುಮಲೇಶ್ ಅವರಿಗೆ ಸಿಟ್ಟು ಬಂದು ಅವರೆಲ್ಲರ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ಮುಖ್ಯ ಅಧ್ಯಾಪಕರಿಗೆ ದೂರು ಕೊಟ್ಟರು. ಆದರೇ ಅದರ ಪರಿಣಾಮ ಏನೂ ಆಗಲಿಲ್ಲ. ಕಾರಣ ರಾಕೇಶ್ ತಂದೆ ಘನಶ್ಯಾಮ ಪೋದ್ದಾರ ಅವರು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರು. ಉಳಿದವರ ಪಾಲಕರು ಪವನಪೂರ ನಗರದ ಪ್ರತಿಷ್ಟಿತ ವ್ಯಕ್ತಿಗಳು. ಮೊದಲಿನಿಂದಲೂ ಅವರೆಲ್ಲರಿಗೆ ಅಪ್ಪು ಕಂಡರೆ ತಾತ್ಸಾರ.
ಸ್ಪರ್ಧೆ ಗಳಲ್ಲಿ ವಿಜೇತರಾದವರ ಹೆಸರುಗಳನ್ನು ಕಾರ್ಯಕ್ರಮದ ಎರಡು ದಿವಸ ದಿವಸ ಮೊದಲು ಘೋಷಣೆ ಮಾಡುವರು. ಕಾರ್ಯಕ್ರಮಮದ ದಿವಸ ಬಹುಮಾನ ವಿತರಣೆ ಮಾಡುವ ಸಮಯದಲ್ಲಿ ಅವರೆಲ್ಲರನ್ನು ಕರೆದು ಬಹುಮಾನ ವಿತರಣೆ ಆಗುವದು. ವಾರ್ಷಿಕೋತ್ಸವದ ಕಾರ್ಯಕ್ರಮದ ಕಾರ್ಯಸೂಚಿಯಲ್ಲಿ ಅಪ್ಪುಗೆ ಮುಖ್ಯ ಅತಿಥಿ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಲು ತಿಳಿಸಿದರು. ರಾಕೇಶ್ ಗೆ ಶಾಸಕರ ಪರಿಚಯ ಮಾಡಲು ಹೇಳಿದರು. ಅದು ಅವನಿಗೆ ಖುಷಿ ಆಯಿತು.
ಕಾರ್ಯಕ್ರಮ ಸರಿಯಾಗಿ ಸಾಯಂಕಾಲ ಆರು ಗಂಟೆಗೆ ಪ್ರಾರಂಭವಾಯಿತು. ಸಾಯಂಕಾಲ ಆರು ಗಂಟೆಗೆ ಅತಿಥಿಗಳು ಆಗಮಿಸಿದ ನಂತರ ಕಲಾಪ ಶುರು ಆಯಿತು. ಕಾರ್ಯಕ್ರಮ ಪಟ್ಟಿಯಂತೆ ಸಾಯಂಕಾಲ ದೀಪ ಬೆಳಗುವ ಮತ್ತು ಪ್ರಾರ್ಥನೆಯಿಂದ ಪ್ರಾರಂಭ ವಾಯಿತು. ಅತಿಥಿಗಳಿಗೆ ಮಾಲಾರ್ಪಣೆ ಆದಮೇಲೆ ರಾಕೇಶ್ ವೇದಿಕೆಗೆ ಬಂದು ಶಾಸಕರ ಪರಿಚಯ ಮಾಡಿದ. ನಂತರ ಅಪ್ಪು ಬಂದು ಮುಖ್ಯ ಅತಿಥಿ ಬಗ್ಗೆ ಹೇಳುವಾಗ ಎಲ್ಲರೂ ಜೋರಾಗಿ ಕರತಾಡನ ಮಾಡಿದರು.
ಅಪ್ಪು ಹೇಳಿದ್ದಾದರೂ ಏನು?
"ಶತಾಯುಷಿ ರಾಮದಾಸ ಪಟವಾರಿ ಪವನಪುರದ ಅತ್ಯಂತ ಹಿರಿಯರು. ನಾನು ಪ್ರೀತಿಯಿಂದ ಅವರಿಗೆ ಅಪ್ಪಾಜಿ ಎಂದು ಕರೆಯುತ್ತೇನೆ. ಅವರ ಪರಿಚಯ ಇಲ್ಲದ ಜನರೇ ಇಲ್ಲ. ಮೂವತ್ತು ವರ್ಷ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿ ತಮ್ಮ ಊರು ಪವನಪುರ ಕ್ಕೆ ಬಂದು ಹತ್ತು ಎಕರೆ ಭೂಮಿ ಸ್ವತ: ಸಾಗುವಳಿ ಮಾಡಿ ಅದನ್ನು ಫಲವತ್ತಾಗಿ ಮಾಡಿದರು. ಈ ಇಳಿ ವಯಸ್ಸಿನಲ್ಲಿ ಆರೋಗ್ಯವಂತರಾಗಿರುವ ಗುಟ್ಟು ಬ್ರಹ್ಮಚರ್ಯ, ಯೋಗ, ಮಿತ ಆಹಾರ ಹಾಗೂ ನಿಯಮಿತ ವಾಯುವಿಹಾರ. ಅಪ್ಪಾಜಿ ಅವರ ಕುಟುಂಬ ಎಂದರೆ ಅನಾಥರು, ನಿರಾಶ್ರಿತರು, ಅಂಧರು ಹಾಗು ಭಿಕ್ಷುಕರು. ನಾನು ಅವರಲ್ಲಿ ಒಬ್ಬ. ಶಾಲೆಯ ವಾರ್ಷಿಕೋತ್ಸವಕ್ಕೆ ಬರಬೇಕು ಎಂದು ನಾನು ಅವರಿಗೆ ವಿನಂತಿ ಮಾಡಿದೆ. ನನ್ನ ಕೋರಿಕೆ ಮನ್ನಿಸಿ ಬರಲು ಒಪ್ಪಿದರು. ಅವರು ಇನ್ನೂ ಮೂರು ತಿಂಗಳು ಆದಮೇಲೆ ಶತಾಯುಷಿ ಆಗವರು. ಅವರ ಆಯುಷ್ಯ ವೃದ್ದಿ ಮಾಡಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ. 'ಜೈ ಜವಾನ್ ಜೈ ಕಿಸಾನ್' ಎನ್ನುವ ಘೋಷಣೆ ಅವರಿಗಾಗಿ ಮಾಡಿದ್ದು." 'ದೇಶ ಸೇವೆ ಈಶ ಸೇವೆ' ಮಾಡಿ ತೋರಿಸಿ ಆದರ್ಶ ಪುರುಷರಾದರು.
ಎಂದು ಹೇಳಿ ಮುಗಿಸಿದ.
ನಂತರ ಮತಾಡಿದ ರಾಮದಾಸ ಪಟವಾರಿ ಅವರು ಅಪ್ಪು ಅಪ್ಪಟ ಚಿನ್ನ ಎಂದು ಕೊಂಡಾಡಿದರು. ಈಗಾಗಲೇ ನಾನು ವಿಲ್ ಮಾಡಿರುವೆ. ಅದರಂತೆ ಇದರ ಉಪಯೋಗ ಸಮಾಜದಲ್ಲಿ ಇರುವ ಕಡು ಬಡವರಿಗೆ ಹೋಗಬೇಕು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಮಾಡಿರುವದಕ್ಕೆ ಧನ್ಯವಾದ ಎಂದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಅತಿಥಿಗಳಿಂದ ವಿತರಣೆ ಆಯಿತು. ಕೊನೆಗೆ ಶಾಸಕರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಕಾರ್ಯಕ್ರಮ ಸುಗಮವಾಗಿ ನಡೆಸಿರುವದಕ್ಕೆ ಸಂತೋಷ ವ್ಯಕ್ತ ಪಡಿಸಿದರು.
ಆಗ ರಾಕೇಶ್ ನ ಅನುಪಸ್ಥಿತಿಯನ್ನು ಗಮನಿಸಿದರು. ಅಪ್ಪು ಹೊಗಳಿಕೆ ನೋಡಿ ನಾಚಿಕೆ ಆಗಿ ಅವನು ಪಲಾಯನ ಮಾಡಿದ.
ವಂದನಾರ್ಪಣೆಯೊಂದಿಗೆ ವಾರ್ಷಿಕೋತ್ಸವದ ಕಾರ್ಯಕ್ರಮ ಮುಕ್ತಾಯವಾಯಿತು.
