shristi Jat

Action Inspirational Others

4.5  

shristi Jat

Action Inspirational Others

ಆಟ

ಆಟ

2 mins
333


ನಾವು ಚಿಕ್ಕವರಿದ್ದಾಗ ಆಟ ಆಡಿದ್ದೇವೆ ಅದು ಶಾಲೆಗಳಲ್ಲಾಗಿರಬಹುದು ಅಥವಾ ಮನೆಯಲ್ಲಾಗಿರಬಹುದು ಬಾಲ್ಯದ ಆಟಗಳಾಗಿರ್ತಕ್ಕಂತ ಕೋಕೋ, ಕಬ್ಬಡ್ಡಿ ,ಕುಂಟೆ ಬಿಲ್ಲೆ, ಕಳ್ಳ ಪೊಲೀಸ್, ಕ್ರಿಕೆಟ್, ಶಟಲ್ ಕಾಕ್ ಇತ್ಯಾದಿ ಒಂದು ರೀತಿಯಲ್ಲಿ ಹೇಳುವುದಾದರೆ ಆಟವೂ ವ್ಯಾಯಾಮ ಇದ್ದ ಹಾಗೆ ಆಟ ಮತ್ತು ವ್ಯಾಯಾಮ ಎರಡು ನಮ್ಮ ದೇಹಕ್ಕೆ ಕಸರತ್ತು ಮಾಡಿಸಿ ಉತ್ತಮ ಆರೋಗ್ಯ ಒದಗಿಸುತ್ತದೆ.ಆಟ ಆಡುವುದರಿಂದ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಮಾನಸಿಕ ಸಂತುಲನ ಚೆನ್ನಾಗಿರಿಸುತ್ತದೆ ಅಲ್ಲದೆ ಬುದ್ಧಿ ಚುರುಕುಗೊಳಿಸುತ್ತದೆ.ಹೀಗೆ ನಾವು ಅದೆಷ್ಟೋ ಆಟದ ಕೂಟದಲ್ಲಿ ಭಾಗಿಯಾಗಿರುತ್ತೇವೆ ಆಟದಲ್ಲಿ ಬಿಳುತ್ತಾ ಎಳುತ್ತಾ ಆಟದಲ್ಲಿ ಕೆಲವೋಮ್ಮೆ ಗೆಲ್ಲುತ್ತಾ ಕೆಲವೊಮ್ಮೆ ಸೋಲುತ್ತಾ ಬೆಳೆಯುತ್ತೇವೆ.ಅಂದಿನ ಆಟಗಳೆ ಇಂದಿನ ಕ್ರೀಡೆಗಳು ಇದೆ ರೀತಿ ಜೀವನವು ಒಂದು ಆಟ ಇದ್ದ ಹಾಗೆ ಕೆಲವೊಮ್ಮೆ ಸೋಲುತ್ತೇವೆ ಇನ್ನೋಮ್ಮೆ ಗೆಲ್ಲುತ್ತೇವೆ.ಕೆಲವು ಸೋಲು ನಮಗೆ ಇನ್ನೊಂದು ರೀತಿಯ ಗೆಲುವಾಗಿರುತ್ತದೆ ಹಾಗೆ ಕೆಲವು ಗೆಲುವು ನಮಗೆ ಇನ್ನೋಂದು ರೀತಿಯ ಸೋಲಾಗಿರುತ್ತದೆ ಜೀವನ ಒಂದು ತಾಳಮೆಳದ ತಕ್ಕಡಿ ಇದ್ದ ಹಾಗೆ ಅರ್ಥೈಸಿಕೊಂಡು ನಡೆದರೆ ಸುಮುದುರವಾಗಿರುತ್ತದೆ ಇನ್ನು ಕೆಲವರು ನಕಾರಾತ್ಮಕದ ಆಟಗಳಾಡುತ್ತಿರುತ್ತಾರೆ ಇನ್ನೋಬ್ಬರ ಜೀವನದ ಜೊತೆ ಹಾಗೂ ಅವರ ಭಾವನೆಗಳ ಜೊತೆ ಅವರ ಉದ್ದೇಶ ಇನ್ನೋಬರ ಜೀವನ ಹಾಳುಮಾಡುವದು.ಅವರ ಜೀವನ ಕಂಡು ಅರಗಿಸಿಕೊಳ್ಳಲು ಆಗದ ದುರ್ಬಲರು ಸಂಬಂಧ ಯಾವುದೇ ಆಗಲಿ ನಿಭಾಯಿಸಲು ಬಾರದ ನಿಶಕ್ತರು ಇವರದ್ದೊಂದು ಕಪಟ ಕೂಡಿದ ಆಟ.

ಇತ್ತೀಚಿಗಿನ ಆಟಗಳು ಮೈದಾನಕ್ಕಿಳಿದು ಆಡುವುದು ಕಡಿಮೆಯಾಗುತ್ತಿದೆ. ಕಂಪ್ಯೂಟರ್, ಮೋಬೈಲ್, ಟ್ಯಾಬ್ಸ್ ಗಳ ಬಳಕೆ ಹೆಚ್ಚುತ್ತಿದ್ದು ಅದರಲ್ಲಿ ಬರುವ ಆಟಗಳಿಗೆ ಮಕ್ಕಳು ಮನಸೋತಿದ್ದಾರೆ ಹೆಚ್ಚು ಸಮಯ ಅದರಲ್ಲಿ ಕಳೆಯುತ್ತಾರೆ ಅಂತಹ ಗೇಮ್ಸ್ ಗಳಿಂದ ಬುದ್ದಿ ಚುರುಕಾಗುತ್ತದೆ ಆದರೆ ದೇಹಕ್ಕೆ ಉತ್ತಮ ವ್ಯಾಯಾಮ ದೋರಕುವದಿಲ್ಲ ಮೈದಾನಕ್ಕಿಳಿದು ಆಡುವ ಆಟದಿಂದ ನಮ್ಮ ಅಂಗಾಂಗಳು ಆರೋಗ್ಯಕರವಾಗಿರುತ್ತವೆ.

ಆಟಗಳು ಕೆವಲ ಮಕ್ಕಳು ಆಡಬೇಕಂತ ಏನು ಇಲ್ಲ ದೊಡ್ಡವರು ಆಗಾಗ ಆಡುತ್ತಿರಬೇಕು ಬಿಡುವಿನ ಸ್ವಲ್ಪ ಸಮಯ ಆಟ ಆಡುವದಕ್ಕಾಗಿ ಮಿಸಲಿಡಬೇಕು. ಆರೋಗ್ಯ ವೃದ್ದಿಸುವದರ ಜೊತೆ ಕುಟುಂಬದ ಮತ್ತು ಸ್ನೇಹದ ಬಂಧ ಚೆನ್ನಾಗಿರುತ್ತದೆ ಅವರೋಡನೆ ಸ್ವಲ್ಪ ಸಮಯ ಕಳೆದಂತಾಗುತ್ತದೆ.

ಎಲ್ಲಾ ಮಕ್ಕಳಿಗೆ ಒಂದೆ ಕ್ಷೇತ್ರದ ಗುರಿ ಇರುವುದಿಲ್ಲ ಕೆಲವರಿಗೆ ಇಂಜಿನಿಯರಿಂಗ್ ಇದ್ದರೆ ಇನ್ನೂ ಕೆಲವರಿಗೆ ವೈದ್ಯಕೀಯ ಹಾಗೂ ಇನ್ನೂ ಕೆಲವರಿಗೆ  ಪ್ರಾಧ್ಯಪಕರಾಗಲೂ ಅದರ ಜೊತೆ ಕೆಲ ಮಕ್ಕಳಿಗೆ ಆಟದಲ್ಲಿ ಮುಂದೆ ಬರಬೇಕೆಂಬುದು ಗುರಿಯಾಗಿರುತ್ತದೆ.ಕೆಲವರು ಕಬ್ಬಡ್ಡಿ ಕೆಲವರು ಕ್ರಿಕೆಟ್ಟಿನಲ್ಲಿ ಹಾಗೂ ಕೆಲವರು ಓಟದಲ್ಲಿ ಮುಂದೆ ಇರುತ್ತಾರೆ ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರ ಪ್ರತಿಭೆಗೆ ಬೆಂಬಲ ಕೋಡಬೇಕು.ಅವರ ಇಂದಿನ ಆಟಗಳಲ್ಲಿರುವ ಆಸಕ್ತಿ ಕ್ರಿಡೆಯಾಗಿ ಮಾರ್ಪಡುತ್ತದೆ. ಮುಂದೆ ಒಂದು ದಿನ ದೊಡ್ಡ ದೊಡ್ಡ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸನ್ನು ಹೊಂದುತ್ತಾರೆ.

ರಾಜ್ಯ ಮಟ್ಟದ ಸ್ಪರ್ಧೆ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲುತ್ತಾರೆ ಒಲಿಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಿ ಯಶಸ್ವಿಯಾಗುತ್ತಾರೆ.

ಶಾಲಾಕಾಲೇಜುಗಳಲ್ಲಿ ಆಟಗಳಿಗೆ ಒತ್ತು ಕೊಟ್ಟು ಆಟದ ಅವಧಿಯನ್ನು ಸರಿಯಾಗಿ ಬಳಸಿಕೊಂಡು ವಾಲಿಬಾಲ್, ಫುಟ್ಬಾಲ್,ಕ್ಯಾರಂ, ಚದುರಂಗದ ಆಟ ಆಡಿಸಿ ವಿಜೇತರಿಗೆ ಬಹುಮಾನ ನೀಡಿ ಸಹಕರಿಸಬೇಕು ಮುಂದೆ ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆದರೆ ಅವರನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕು.

"ಜೀವನ ಒಂದು ಆಟ ಇದರಲ್ಲಿ ಸೋಲು ಗೆಲುವಿನ ನಿಯಮ ಅನುಸರಿಸಿ ನಡೆದರೆ ಬಾಳು ಸುಗಮ"


Rate this content
Log in

Similar kannada story from Action