Vaman Acharya

Abstract Classics Others

4  

Vaman Acharya

Abstract Classics Others

ಆಗಬಾರದ್ದು ಆದಮೇಲೆ ಜ್ಞಾನೋದಯ

ಆಗಬಾರದ್ದು ಆದಮೇಲೆ ಜ್ಞಾನೋದಯ

4 mins
457


 ಕಿರು ಕಥೆ 


"ಇದೇನ್ರೀ, ಮೂವತ್ತು ಮೆಟ್ಟಿಲು ಹತ್ತಿ ಬಂದ ಮೇಲೆ ಇದೇನಾ ಬಾಡಿಗೆ ಮನೆ?  ನಿಮಗೆ ಬೇರೆ ಮನೆ ಸಿಗಲಿಲ್ವಾ?" ಎಂದಳು. ಅದೇ ತಾನೆ ಒಂದು ತಿಂಗಳು ಹಿಂದೆ ಮದುವೆ ಆಗಿರುವ ಸ್ನೇಹ ತನ್ನ ಪತಿಗೆ. ಯುವ ದಂಪತಿ  ಪವನಪುರದಲ್ಲಿ ಬಾಡಿಗೆ ಮನೆ ಪ್ರವೇಶ ಮಾಡುವಾಗ ಇಬ್ಬರ ಮಧ್ಯದಲ್ಲಿ ಮನಸ್ತಾಪ ಪ್ರಾರಂಭವಾಯಿತು.


"ಸ್ನೇಹ, ಆಗಿರುವದಾದರೂ ಏನು? ಈ ಮನೆ ಸಿಗಲು ನಾನು ತುಂಬಾ ಪರಿಶ್ರಮ ವಹಿಸಬೇಕಾಯಿತು."

ಎಂದ ಮಕರಂದ 


 ಇವರು ಪವನಪುರ ನಗರದ ಕಾವೇರಿ ಬಡಾವಣೆಯ ಮೊದಲನೇ ರಸ್ತೆಯಲ್ಲಿ ಇರುವ 'ಭಾರ್ಗವಿ' ಮನೆಯ ಮೂರನೆ ಮಹಡಿಯ ಮನೆಗೆ ಬಾಡಿಗೆಗೆ ಬಂದರು. ಮನೆ ನೋಡಲು ಚೆನ್ನಾಗಿ ಇದ್ದರೂ ವಾಸ್ತು ದೋಷ ಕೂಡಿರುವದರಿಂದ ಸ್ನೇಹಾಗೆ ತುಂಬಾ ಅಸಮಾಧಾನವಾಯಿತು. ಆಕೆ ವಾಸ್ತು ಶಾಸ್ತ್ರದ ಪರಿಣಿತೆ ಅಲ್ಲದಿದ್ದರೂ ಪುಸ್ತಕ ಓದಿದ್ದಳು. ಎಷ್ಟೋ ಜನರಿಗೆ ಸಲಹೆಗಳನ್ನು ಕೊಡುತ್ತಿದ್ದಳು. ಈ ಮನೆ ಮುಖ್ಯ ದ್ವಾರ ದಕ್ಷಿಣಾಭಿಮುಖವಾಗಿತ್ತು. ಅಡುಗೆ ಮನೆ ಅಗ್ನಿ ಮೂಲದಲ್ಲಿ ಇರದೇ ಬೇರೆ ಕಡೆಗೆ ಇದ್ದಿತು. ಮನೆಯಲ್ಲಿ ಗಾಳಿ ಬೆಳಕು ಇವುಗಳ ಅಭಾವ ಇರುವದರಿಂದ ವಾಸಿಸಲು ನಿರಪಯುಕ್ತವಾಗಿತ್ತು. ಇವರಿಬ್ಬರ ಜೋರಾದ ಸಂಭಾಷಣೆ ಕೇಳಿದ ಮನೆ ಯಜಮಾನ ಜಯರಾಜ್ ಬಂದು ಪರಿಸ್ಥಿತಿ ಶಾಂತವಾಗಲೂ ಪ್ರಯತ್ನ ಮಾಡಿದರು.


ಅವರು ಮಕರಂದನ ತಂದೆಯ ಬಾಲ್ಯ ಸ್ನೇಹಿತ ಇದ್ದು ಆಕೆಯ ಅನುಮಾನಗಳನ್ನು ನಿವಾರಿಸುವ ಪ್ರಯತ್ನದಲ್ಲಿ ವಿಫಲರಾಗಿ ಹೊರಟು ಹೋದರು. ಮದುವೆ ಆಗುವ ಮೊದಲು ಮಕರಂದ ಅದೇ ಮನೆಯಲ್ಲಿ ಇದ್ದ. ಪರಿಸ್ಥಿತಿ ಅರಿತ ಮಕರಂದ  ಬೇರೆ ಮನೆ ಹುಡುಕುವ ಪ್ರಯತ್ನ ಮಾಡುವದಾಗಿ ಸುಳ್ಳು ಹೇಳಿದ. ಕಾರಣ ಈ ಮನೆ ಬಾಡಿಗೆ ತುಂಬಾ ಕಡಿಮೆ. ಅದಲ್ಲದೆ ಬಾಲ್ಯ ಸ್ನೇಹಿತರ ನಡುವೆ ಏನಾದರೂ ಹಣದ ವ್ಯವಹಾರ ಇದ್ದಿತಾ?. ಯಾವುದೇ ಸಮಸ್ಯೆ ಉದ್ಭವ ಆದರೆ ತಕ್ಷಣ ಪರಿಹಾರ ಹುಡುಕುವುದು ಉತ್ತಮ. ಅದು ಬಿಟ್ಟು ಸಮಸ್ಯೆಯನ್ನು ವಿನಾಕಾರಣ ಮುಂದುವರೆಸಿ ತಾನು ಮಾಡಿದ್ದೇ ಸರಿ ಎನ್ನುವ ಹಠಮಾರಿತನ ಮಾಡಿದರೆ ಆಗುವದು ಸಮಸ್ಯ ಇನ್ನಷ್ಟು ಕಠಿಣ. ಮಕರಂದ ಹಾಗೆ ಮಾಡಿದ. ಇದರಿಂದ ಪತಿ ಪತ್ನಿ ಪರಸ್ಪರ ಸಂಭಂಧದಲ್ಲಿ ಬಿರುಕು ಆಗುವದಕ್ಕೆ ತಡ ವಾಗಲಿಲ್ಲ.  ಒಂದು ತಿಂಗಳಲ್ಲಿ ಇದು ವಿಕೋಪಕ್ಕೆ ಹೋಗಿ ಈ ಮನೆ ಬೇಗನೆ ಬಿಡದೇ ಇದ್ದರೇ ತವರು ಮನೆಗೆ ಹೋಗಿ ಬೇರೆ ಮನೆ ನೋಡುವವರಿಗೆ ವಾಪಸ್ ಬರುವದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದಳು.


ಮುಂದೆ ದಂಪತಿ ಮಧ್ಯ ಅನೇಕ ಸಲ ರಾದ್ದಾಂತಗಳು ಆಗಿ ಮನೆ ರಣರಂಗವಾಯಿತು.  ಈ ಮನೆ ಮೇಲೆ ಮಕರಂದನಿಗೆ ಎಲ್ಲಿಲ್ಲದ ವ್ಯಾಮೋಹ.  ಪತ್ನಿಗೆ  ವಾಸ್ತು ಶಾಸ್ತ್ರದ ಮೇಲೆ ನಂಬಿಕೆ ಇದ್ದರೆ ಪತಿಗೆ ಅದರ ಮೇಲೆ ಅವಿಶ್ವಾಸ. ಆಕೆಗೆ  ಸನಾತನ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿ ಯ ಮೇಲೆ ವಿಶ್ವಾಸ ಇದ್ದರೆ ಆತನಿಗೆ ಅವುಗಳ ಬಗ್ಗೆ ಅಷ್ಟಕ್ಕಷ್ಟೆ. ಅದೆಲ್ಲ ಮೂಢ ನಂಬಿಕೆ ಎನ್ನುವದು ಆತನ ವಾದ. ಹಾಗೆಯೇ ಅವರಿಬ್ಬರೂ ಈ ಮನೆಯಲ್ಲಿ ಒಂದು ತಿಂಗಳು ಕಳೆದರು. 

ಹೊಸ ಮನೆಗೆ ಬಂದ ಒಂದು ತಿಂಗಳು ಆದಮೇಲೆ ಒಂದು ದಿವಸ ಸ್ನೇಹ ಮೆಟ್ಟಲು ಇಳಿಯುವಾಗ ಆಯ ತಪ್ಪಿ ಕಾಲುಜಾರಿ ಬಿದ್ದು ಕೈ, ಕಾಲೂ ಪೆಟ್ಟಾಗಿ ಒಂದು ವಾರ ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಫಲಕಾರಿ ಆಗಿ ಗುಣಮುಖಳಾದಳು. ಇದಾದ ಹದಿನೈದು ದಿವಸದ ನಂತರ ಮಕರಂದ ಕೆಲಸ ಮಾಡುತ್ತಿರುವ ಆಫೀಸ್ನಲ್ಲಿ ಯಾರದೋ ಮಾಡಿದ  ಆಫೀಸ್ ಹಣದ ದುರುಪಯೋಗ ತಪ್ಪಿಗೆ ಮಕರಂದ ಬಲಿಪಶು ಆಗಿ ಅವನಿಗೆ ಸೇವೆಯಿಂದ ಅಮಾನತ್ನಲ್ಲಿ ಇಟ್ಟರು. ಒಂದು ದಿವಸ ಬೆಳಗ್ಗೆ ಮನೆಯಲ್ಲಿ ಕರಿ ಬೆಕ್ಕು ಬಿಳಿ ಬೆಕ್ಕು ಜಗಳವಾಡಿದವು. ಅವುಗಳನ್ನು ಹೊರಗೆ ಓಡಿಸುವದು ತುಂಬಾ ಕಷ್ಟವಾಯಿತು. 


ಇದು ಅಪಶಕುನ ಅಲ್ಲದೇ ಮತ್ತೇನು?

 ಅದಾದ ಸರಿಯಾಗಿ ಒಂದು ತಿಂಗಳು ಆದಮೇಲೆ ಅಕಸ್ಮಾತ್ ಒಂದು ದು:ಖದ ಸಮಾಚಾರ ಬಂದಿತು. ನರಸಪ್ಪನ ಹಳ್ಳಿಯಲ್ಲಿ ಸ್ನೇಹ ತಾಯಿ ಪಾರ್ವತಿ ಬೆಳಗ್ಗೆ ಐದು ಗಂಟೆಗೆ ಇಹ ಲೋಕ ತ್ಯಜಿಸಿದಳು.  ಆ ಸಮಯದಲ್ಲಿ ಸ್ನೇಹ ಗೆ ಅತೀವ ದು:ಖವಾಗಿ ತನ್ನ ಪತಿಗೆ,

"ಈ ಮನೆ ಬೇಡ ಎಂದು ವಿರೋಧ ಮಾಡಿದೆ. ಇದರಿಂದಾಗಿ ಈಗ ಒಂದು ಜೀವ ಹೋಯಿತು. ನಾನು ಇಳಿಯುವಾಗ ಕಾಲು ಜಾರಿ  ಮೆಟ್ಟಲು ಕೆಳಗೆ ಬಿದ್ದು  ವಿಪರೀತ ಕಾಲು ಬೇನೆ ಆಯಿತು. ನಿಮಗೆ ಸುಳ್ಳು ಅಪವಾದದಿಂದ ಸೇವೆಯಿಂದ ಅಮಾನತ್ತು ಮಾಡಿದರು.  ಅಂದು ಕರಿ ಹಾಗೂ ಬಿಳಿ ಬೆಕ್ಕು ಮನೆಯಲ್ಲಿ ಜಗಳವಾಡಿ ಅಪಶಕುನ ಮಾಡಿದವು.  ಇನ್ನೂ ಯಾವ ಅನಾಹುತ ಕಾದಿದೆಯೋ ಆ ಭಗವಂತನಿಗೆ ಗೊತ್ತು. ಈಗಲಾದರೂ ಬೇರೆ ಮನೆ ಹುಡುಕಿ."


"ಸ್ನೇಹ, ನೀನು ಮೆಟ್ಟಲುಗಳ ಮೇಲೆ  ಬೀಳುವದು, ನನಗೆ ಸೇವೆಯಿಂದ ಅಮಾನತ್ತು ಆಗುವದು, ಬೆಕ್ಕುಗಳು ಜಗಳವಾಡುವದು, ನಿನ್ನ ಅಮ್ಮನ ಮರಣಕ್ಕೂ ನಾವಿರುವ ಮನೆಗೂ ಯಾವ ಸಂಭಂಧ? ನಿನ್ನ ಅಮ್ಮ ಅವರು ವಯೋಮಾನ ಪ್ರಕಾರ ಇಹಲೋಕ ತ್ಯಜಿಸಿದರು."

ಇದನ್ನು ಕೇಳಿದ ಸ್ನೇಹಗೆ ಬಹಳ ಸಿಟ್ಟು ಬಂದು,


"ಅಲ್ರೀ, ನನ್ನ ಅಮ್ಮನ ಬಗ್ಗೆ ಇಂತಹ ಕೀಳು ಮಾತು? ನಾನು ಈಗ ತವರುಮನೆ ಹೋಗುವ ಪ್ರಸಂಗ ಬಂದಿದೆ. ತಿರುಗಿ ಬರುವದಿಲ್ಲ. ನೀವು ಬೇಕಾದರೆ ಒಬ್ಬರೇ ಈ ಮನೆಯಲ್ಲಿ ಇರಿ." ಎಂದು ಹೇಳಿ ಹೋಗಿಯೇ ಬಿಟ್ಟಳು.


ಮಕರಂದನಿಗೆ ಗಾಬರಿ ಆಯಿತು. ತಾನು ಮಾಡಿದ ತಪ್ಪು ಅರಿವು ಆಗಿ ಜ್ಞಾನೋದಯ ಆಯಿತು. ಆಕೆಯನ್ನು ಓಡುತ್ತ ಹೋಗಿ ನಿಲ್ಲಿಸಿ,

"ಸ್ನೇಹ, ನನಗೆ ಕ್ಷಮಿಸು. ವಾಸ್ತು ಬಗ್ಗೆ ನಾನು ನಿರ್ಲಕ್ಷ್ಯ ಮಾಡಿದೆ. ನಿನಗಿರುವ ಎಲ್ಲ ವಿಶ್ವಾಸಗಳು ನನಗೂ ಇವೆ. ನೀನು ಹೇಳಿದಂತೆ ಈ ಮನೆಗೆ ಬರದೇ ಇದ್ದರೆ ಇವೆಲ್ಲ ಅನಾಹುತಗಳು ಆಗುತ್ತಿರಲಿಲ್ಲ. ಸಧ್ಯ ಇಬ್ಬರೂ ನರಸಪ್ಪನ ಹಳ್ಳಿಗೆ ಹೋಗಿ ಅಮ್ಮನ ಅಂತ್ಯ ಸಂಸ್ಕಾರ ಮುಗಿಸಿ ಬಂದಕೂಡಲೇ ಬೇರೆ ಮನೆ ನೋಡುತ್ತೇನೆ. ಅಲ್ಲಿಯವರಿಗೆ ನೀನು ಅಲ್ಲಿಯೇ ಇರು."


ಸ್ನೇಹ ಳ ಕೋಪ ಶಮನವಾಗಿ ಇಬ್ಬರೂ ನರಸಪ್ಪನ ಹಳ್ಳಿಗೆ ಹೋದರು.

ಸ್ನೇಹ, ಪವನಪುರ ಪಕ್ಕದ ಏಳು ಕಿಲೋಮೀಟರ್ ದೂರ ಇರುವ ನರಸಪ್ಪನ ಹಳ್ಳಿಯ ಶಾನುಭೋಗರ ಮಗಳು. ಆಕೆ ಪವನಪೂರದಲ್ಲಿ  ಹೈಸ್ಕೂಲ್ ಮುಗಿಸಿ ಕಾಲೇಜ್ ಹೋಗಲು ಆಗಲಿಲ್ಲ. ಮಕರಂದ  ಹುಟ್ಟಿ ಬೆಳೆದದ್ದು ಮೈಸೂರು. ಅಲ್ಲಿಯೇ ವಿಜ್ಞಾನ ಪದವಿ ಮುಗಿಸಿದ. ಕಳೆದ ವರ್ಷ ಇಬ್ಬರೂ ಪವನಪುರ ತಹಸೀಲ್ದಾರ್ ಕಛೇರಿಯಲ್ಲಿ ಒಂದೇ ದಿವಸ ಕೆಲಸಕ್ಕೆ ಸೇರಿದರು. ಮಕರಂದ ಪ್ರಥಮ ದರ್ಜೆ ಗುಮಾಸ್ತ ಇದ್ದರೇ ಆಕೆ ದ್ವಿತೀಯ ದರ್ಜೆ ಗುಮಾಸ್ತೆ. ಒಂದೇ ಆಫೀಸ್ ನಲ್ಲಿ ಕೆಲಸ ಮಾಡುವದರಿಂದ ಸ್ನೇಹಗೆ ಮಕರಂದನ ಸ್ನೇಹ ಆಯಿತು. ಮುಂದೆ ಪ್ರೀತಿ, ಪ್ರೇಮ ಆಗಿ ಮದುವೆ ಆಗುವ ನಿರ್ಧಾರ ಮಾಡಿದರು. ಇದಕ್ಕೆ ಹಿರಿಯರ ವಿರೋಧ ಇದ್ದರೂ ಅದೆಲ್ಲವನ್ನು ಎದುರಿಸಿ ಬಾಳಸಂಗಾತಿ ಆದರು.


ನರಸಪ್ಫನ ಹಳ್ಳಿಯಲ್ಲಿ ಪಾರ್ವತಿಯ ಅಂತ್ಯಸಂಸ್ಕಾರದ ಕಾರ್ಯಕ್ರಮ ಮುಗಿಸಿ ಮಕರಂದ ಒಬ್ಬನೇ ಬಂದ. ಮುಂದೆ ಒಂದು ತಿಂಗಳು ಆದಮೇಲೆ ಮಕರಂದ ವಾಸ್ತು ಪ್ರಕಾರ ಇರುವ  ಒಂದು ಮನೆ ನೋಡಿ ಸ್ನೇಹ ಬಂದು ಓಕೆ ಅಂದ ಮೇಲೆ ಆ ಮನೆ ಬಾಡಿಗೆ ತೆಗೆದುಕೊಂಡರು.

ಹಿಂದಿನ ಕಹಿ ಅನುಭವಗಳನ್ನು ಮರೆತು ಸಂತೋಷದಿಂದ ಜೀವನ ಕಳೆದರು. 

ಒಂದು ದಿವಸ ಸಾಯಂಕಾಲ ಟೀ ಕುಡಿಯುತ್ತಾ ಪತ್ನಿಗೆ,

"ಸ್ನೇಹ, ನೀನು ತುಂಬಾ ಘಾಟಿ ಕಣೆ." ಎಂದ ನಗುತ್ತ 

"ಪತಿ ಮಹಾಶಯರೇ, ಯಾರು ಪವರ್ ಫುಲ್ ಎಂದು ಅರ್ಥವಾಯಿತೇ?"

"ಸರಿಯಾಗಿ ಆರ್ಥವಾಯಿತು. ನೀನು ಪವರ್ ಫುಲ್ ಎನ್ನುವದು ಸಾಬೀತು ಮಾಡಿದೆ. ಒಂದು ಮಾತು ಸತ್ಯ. ನನಗೆ ಆಗ ಬಾರದ್ದು ಆದಮೇಲೆ ಜ್ಞಾನೋದಯವಾಯಿತು. ತಡವಾಗಿ ಆದರೂ ಪರಫೆಕ್ಟ ಆಯಿತು."

ಇಬ್ಬರೂ ಒಟ್ಟಿಗೆ ಜೋರಾಗಿ ನಕ್ಕರು. 












Rate this content
Log in

Similar kannada story from Abstract