ಯಶಸ್ಸು
ಯಶಸ್ಸು
ಶ್ರದ್ಧೆ ಪ್ರಯತ್ನಗಳು
ಜೊತೆ ಸೇರದಿದ್ದಾಗ
ಯಶಸ್ಸು ಮರೀಚಿಕೆ
ಅವೆರಡೂ ಸೇರಿದಾಗ
ವಿಫಲತೆಯು ಮಾಯ॥
ಆತ್ಮವಿಶ್ವಾಸದ ರೆಕ್ಕೆ ಬಡಿದು
ಪ್ರಯತ್ನದ ಬೆನ್ನು ಹಿಡಿಯೆ
ಜೀವನದ ಸಾಧನೆಯ
ಗುರಿ ಸೇರುವುದು
ಬಹುಸುಲಭ॥
ನೂರು ಬಾರಿ ಸೋತರೂ
ಮುಂದೊಂದು ಬಾರಿ
ಸಿಗುವ ಯಶಸ್ಸಿಗೆ
ತೇನ್ ಸಿಂಗ್ ನಂತವರು
ಮಾದರಿಯಲ್ಲವೇ ........ ॥
ಆಗೊಮ್ಮೆ ಈಗೊಮ್ಮೆ
ನಡೆಯುವ ಪ್ರಯತ್ನಕ್ಕೆ
ಯಶದ ಮೆಟ್ಟಿಲು ನಿಲುಕದು
ಇದನ್ನೇ ಸೋಲೆಂದು
ಬಗೆದು ಸುಮ್ಮನಿರದೆ
ಮುಂದೆ ಸಾಗಿದರೆ
ಯಶಸ್ಸು ಸಿಗುವುದು॥
