ವಿಧಿಯಾಟ
ವಿಧಿಯಾಟ
ಕ್ರೂರ ವಿಧಿಯೇ ನೀ ತಂದೊಡ್ಡಿದ ಕಷ್ಟಗಳೆಷ್ಟೇ..?
ಚೆಂದದ ಸುಖ ಸಂಸಾರಕ್ಕೆ ನಿನ್ನ ಕರಿ ನೆರಳೇಕೆ ತಟ್ಟಿಸಿದೆ..!
ಸಂತೋಷದ ಸಾಗರಕ್ಕೆ ನಿನ್ನ ರೌದ್ರ ಅಲೆಗಳ ನರ್ತನವನ್ನೇಕೆ ತೋರಿಸಿದೆ..!
ಸೌಮ್ಯ ಜೀವಿಗಳನ್ನು ನಿನ್ನ ಕಬಂಧ ಬಾಹುಗಳಿಂದೇಕೆ ಬಂಧಿಸಿದೆ..?
ಗೊತ್ತೋ ಗೊತ್ತಿಲ್ಲದೆಯೋ ಮಾಡಿದ ತಪ್ಪಿಗೆ, ಇಂತಹ ದಾರುಣ ಸ್ಥಿತಿಗೇಕೆ ಎಲ್ಲರನ್ನು ತಳ್ಳುತ್ತೀಯೇ..!
ಅಮಾಯಕರ ಮೇಲೂ ನಿನ್ನ ವಕ್ರ ದೃಷ್ಟಿಯನ್ನೇಕೆ ಬೀರುತ್ತೀಯೇ..?
ಕಾರಣವೇ ತಿಳಿಸಿದೆ, ಏನೋ ನೆಪ ಮಾಡಿ, ಏಕೆ ಕಂದಕಕ್ಕೆ ತಳ್ಳುತ್ತೀಯೇ..!
ಎಲ್ಲವೂ ಆದ ಮೇಲೆ ಏನೂ ಆಗಿಯೇ ಇಲ್ಲದವಳಂತೆ "ವಿಧಿಯ ಆಟವೆಂದು" ಎಲ್ಲರೂ ಹೇಳುವಂತೆ ಮಾಡುತ್ತೀಯಲ್ಲೇ..?
ಪಾಪ ಪುಣ್ಯಗಳ ಲೆಕ್ಕ ಹಾಕುವುದರಲ್ಲಿ ಏಕೆ ಕೆಲವೊಮ್ಮೆ ಎಡುವುತ್ತೀಯಲ್ಲೇ..!
ನಿನಗದು ಚಿಕ್ಕ ತಪ್ಪು ಎನಿಸಿದರೂ, ಅದರಿಂದ ಹೊರ ಬರುವ ಫಲಿತಾಂಶ ಭೀಕರವೆಂದು ಏಕೆ ಮರೆತು ಬಿಡುತ್ತೀಯೇ..?
ಮರೆತು ನಮ್ಮವರನ್ನೂ ಏಕೆ ಮರೆಯಾಗಿಸುತ್ತೀಯೇ..?!
