ಉಸಾಬರಿ
ಉಸಾಬರಿ
ಅತಿಯಾಗುತ್ತಿದೆ ಈಗೀಗ
ರಿಯಾಲಿಟಿ ಶೋಗಳ
ರಿಯಾಲಿಟಿ ಇಲ್ಲದ ಸಂಚಿಕೆಗಳು!
ಅಬ್ಬರ, ಆಡಂಬರ
ಕಣ್ ಕುಕ್ಕುವ ಬೆಳಕಿನ ಸರಗಳು
ನಗುಬರದಿದ್ದರೂ
ಊರಗಲ ಬಾಯ್ತೆರೆದು ನಗುವ
ನಿರೂಪಕರು
ಕಾಟಾಚಾರಕ್ಕೆ ನಗುವ ಸ್ಪರ್ಧಿಗಳು
ಕಾರ್ಯಕ್ರಮಕ್ಕಿಂತ ಇಲ್ಲದ ಉಸಾಬರಿಯೇ ಹೆಚ್ಚು!
