ತ್ಯಾಗಮಯಿ
ತ್ಯಾಗಮಯಿ
ಕಣ್ಣಿದ್ದು ಅಂಧಕಾರದಲ್ಲಿ ಮುಳುಗಿ ಹೋಗಿದ್ದೆ
ಕಣ್ಣೆದುರು ನೀ ಬಂದಾಗಲೇ ನಾ ಕಣ್ಣು ಬಿಟ್ಟಿದ್ದು
ನಿನ್ನನು ಕಾಣದೆ ನಾನಂದು ಮೌನಿಯಾಗಿ ಬಿಟ್ಟಿದ್ದೆ
ನೀನೆದುರು ಬಂದು ನಿಂತಾಗಲೇ ಮಾತು ಆಡಿದ್ದು
ನನ್ನೆದೆಯ ಪ್ರೇಮ ಮಂದಿರದಲ್ಲಿ ನೀ ಹಸಿರಾಗಿದ್ದೆ
ಪ್ರೀತಿ ಎಂಬ ಜೀವಜಲ ಸದಾ ಧಾರೆ ಎರೆಯುತ್ತಿದ್ದೆ
ಸೃಷ್ಟಿಯು ನಾಚುತಿತ್ತಂದು ನಮ್ಮಯ ಪ್ರೇಮಕೆ
ದೃಷ್ಟಿಯಾಗಿ ಬಿಟ್ಟಿತೆ ಕೃಷ್ಣ ನಮ್ಮ ಅನುಬಂಧಕೆ
ಇಂದೇಕೋ ಕಂಡ ಕನಸ ಮಳೆಬಿಲ್ಲು ಕರಗಿತೆ
ಜೊತೆಯಾಗಿದ್ದ ಒಲವ ದೋಣಿಯು ಮುಳುಗಿತೆ
ಕ್ಷಣ ಮರೆಯಾದರೂ ನಿಲ್ಲುತಿತ್ತಂದು ನನ್ನ ಉಸಿರು
ಸನಿಹವಿದ್ದರೂ ಲಭಿಸಲಿಲ್ಲ ನನಗೆ ಸಂಗಾತಿ ಹೆಸರು
