ತೀರ ಸೇರಬೇಕಿದ್ದ ಪ್ರೀತಿ ತೀರಾ ಸೇರಲ
ತೀರ ಸೇರಬೇಕಿದ್ದ ಪ್ರೀತಿ ತೀರಾ ಸೇರಲ
ಆರತಿ ನೀ ನನ್ನ ಪ್ರೀತಿಯ ದೀಪ
ಆ ದೇವ ನನಗೆ ಯಾಕೆ ಕೊಟ್ಟನು ಈ ಶಾಪ
ನಿನ್ನ ಮರೆತು ಹೇಗೆ ಬಾಳಲಿ ನನ್ನರಸಿ
ಹೋದೆ ನೀ ಈ ಭೂಮಿಯ ಋಣ ಮುಗಿಸಿ
ನೀ ಎಂದರೆ ಹೊಳೆವ ಬೆಳದಿಂಗಳು
ನೀ ಇಲ್ಲದೆ ಬೆಳಗದ ನನ್ನ ಮನದಂಗಳು
ಕಣ್ಣಿಗೆ ಕಣ್ಣ್ಣದೆ ನಗುವಿಗೆ ನಗುವಾದೆ
ಆದರೆ ಏಕೆ ನನ್ನ ಬಿಟ್ಟು ನೀ ದೂರ ಹೋದೆ
ಪ್ರೀತಿಯೆಂಬ ಜ್ಯೋತಿಯ ಬೆಳಗಿಸಿದವಳೆ
ತನುವ ನಗುವಿನಲ್ಲಿ ಕುಣಿಸಿದವಳೇ
ನೀನಿದ್ದ ಬಾಳೆ ಹೊಂಬಾಳೆ
ಬತ್ತಿದೆ ಆರಿದೆ ನೀನಿಲ್ಲದೆ ಜೀವದ ಸೆಳೆ ಕಳೆ

