ತೆರೆಮರೆ
ತೆರೆಮರೆ
ಅಣು ಅಣುವಿನ ತೃಣಕಾಷ್ಟದಲಿ
ಬಿಂದುವಿರುವ ಬಿಂದಿಯ ಸಿಂಧುವಿನಲಿ
ತೆರೆಯಲು ಅಲ್ಲಿ ಮರೆಯ ಸೃಷ್ಟಿಯಲಿ
ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು!!
ಸೂಜಿಯ ಮೊನೆಯಲಿ ಅನಂತ ಆಗಸದಲಿ
ಪರ್ವತದ ತುತ್ತ ತುದಿಯಲಿ ಅರಳುವ
ಹೂಗಳ ಶೃಂಗಾರ ರಸಕಾವ್ಯದಲಿ
ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು!!
ಒಳಿತಿರಲಿ ಇಲ್ಲಾ ಕೆಡುಕಿರಲಿ
ನೋವಿರಲಿ ಅಥವಾ ನಲಿವಿರಲಿ
ಆತ್ಮೀಯತೆಯಲಿ ಇಲ್ಲಾ ಅನಂತತೆಯಲಿ
ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು!!
