ತಾಳ
ತಾಳ
ಹೃದಯವ ಸೆಳೆಯುವ
ಕಣ್ಮಿಂಚಿನ ಕಲರವ
ನನ್ನಲ್ಲಿ ಸುಮ್ಮಗೆ ಒಂದು
ವಿದ್ಯುತ್ ಹರಿದಂಥಾ ಭಾವ
ಆಕರ್ಷಕ ಕಣ್ಣಿನ ಜಗವೆ
ಇದೇನಾ ಪ್ರೇಮ
ಎದೆಗೂಡಿನ ಮೂಲೆಯಲಿ
ಬಿಡಲೆ ಸ್ವಲ್ಪ ದಾರಿಯ
ಪ್ರತೀ ಜೀವಸ್ವರಳಿಂದ
ತೋರುವೆನು ನಾ ಸವಿನಯ
ಬಿಳಿಯ ಹಾಳೆಯ ಬದಿಯಲಿ
ನವಿಲೇ ಕೇಳು
ನೀನೆ ಹಿಡಿದ ಪರದೆಗೆ
ಬದುಕ ಬಣ್ಣವ ಬಳಿಯುವೆ
ಸನಿಹಕೆ ಕಾಯಲು ಕಾತರ
ನೋಡಿದಾ ಕೂಡಲೆ
ಹೃದಯದ ಬಾಗಿಲ ತೆರೆದು
ಮುತ್ತಿನ ಮಳೆ ಸುರಿಸಲೇ
ಏರು ಮೆಲ್ಲಗೆ ರುದಯದ
ಸೋಪಾನವ ಸೇರು
ಮೆಲ್ಲಗೆ ನಿನ್ನ ಹೆಜ್ಜೆಯ ಗೆಜ್ಜೆಗೆ
ತಾಳದೇ ನಾನು ತಾಳವಾಗಲು ಸಹಕರಿಸು
