ಸ್ನೇಹ
ಸ್ನೇಹ
....... ಸ್ನೇಹ.......
ಸ್ನೇಹ ಬೆಳೆಯಲು ಅಡಿಪಾಯ ನಂಬಿಕೆ,
ಒಲವೆಂಬುವ ಇಟ್ಟಿಗೆ ಬೇಕು ಆ ಕಟ್ಟಡಕೆ!
ಜೊತೆಯಲಿ ಅನುಕ್ಷಣ ಬೆರೆವ ಸಂತಸಕೆ
ಅಡ್ಡಿಯಾಗದು ಜಾತಿ ಧರ್ಮದ ಸಡಿಲಿಕೆ!
ಮರುಭೂಮಿಯಲಿ ಓಯಸಿಸ್ ಇರುವಿಕೆ,
ಜಂಜಾಟದ ಬದುಕಿಗೆ ಗೆಳೆತನದ ಕಾಣಿಕೆ!
ವಯೋಮಾನ ಹಂಗಿಲ್ಲದ ಗುಂಪುಗಾರಿಕೆ
ಹೃನ್ಮನವ ತಣಿಸುವ ಸಂಭ್ರಮದ ವೇದಿಕೆ!
ವಿಶ್ವಾಸವಿಡಿ ನಿಮ್ಮ ಹಿತಚಿಂತಕರ ಮನಕೆ
ಕೈಬಿಡದ ಅನುಬಂಧವಾಗಲಿ ಕೊನೆಗಳಿಕೆ!
ಬಾಡದಿರಲಿ ಸ್ನೇಹ ಪುಷ್ಪ ಮುಂಗೋಪಕೆ,
ತಾಳ್ಮೆ ನೇಮದ ಜೊತೆಗಿರಲಿ ಹೊಂದಾಣಿಕೆ!
ರಕ್ತಸಂಬಂಧವನು ಮೀರಿನಿಂತಾ ಬಂಧಕೆ
ಕೋಟಿಜನ್ಮ ಪುಣ್ಯಬೇಕು ತಾ ಪಡೆಯಲಿಕೆ!
ಒಡನಾಟ ಒಳಿತಾದರೆ ಗೆಲುವು ಜೀವನಕೆ,
ಕಾರಣವೂ ಹೌದದು ಲೋಕದ ಕಲ್ಯಾಣಕೆ!!
