ಸ ರಿ ಗ ಮ ಪ ದ ನಿ
ಸ ರಿ ಗ ಮ ಪ ದ ನಿ
ಸಕಲ ವ್ಯಾಕುಲತೆಗಳನ್ನು
ರಿಪುವಿನಂತೆ ದೂರಕ್ಕಿರಿಸಿ
ಗಮ್ಯ ಸ್ವರವದು ಕಿವಿಗೆ ಬೀಳಲು
ಮನವಿದು ತಂಪಾಗುವುದು
ಪದವಿರದೆಯೂ ಸ್ವರ-ತಾಳಗಳ
ದನಿಯನು ಹಿಂಬಾಲಿಸುತ
ನಿನಾದಕ್ಕೆ ಮನಸೋಲುವುದು.
ಸಂಗೀತದ ಶಕ್ತಿಯಿದು
ಸಕಲ ವ್ಯಾಕುಲತೆಗಳನ್ನು
ರಿಪುವಿನಂತೆ ದೂರಕ್ಕಿರಿಸಿ
ಗಮ್ಯ ಸ್ವರವದು ಕಿವಿಗೆ ಬೀಳಲು
ಮನವಿದು ತಂಪಾಗುವುದು
ಪದವಿರದೆಯೂ ಸ್ವರ-ತಾಳಗಳ
ದನಿಯನು ಹಿಂಬಾಲಿಸುತ
ನಿನಾದಕ್ಕೆ ಮನಸೋಲುವುದು.
ಸಂಗೀತದ ಶಕ್ತಿಯಿದು