STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ರಣಕಹಳೆ

ರಣಕಹಳೆ

1 min
211

ಮೊಳಗಿತು ಆ ರಣಕಹಳೆ

ಸುಳಿದಾಡಿತು ಅಕ್ಷೋಹಿಣಿ

ಎಳೆದಾಡಿತು ಭೀಕರ ಸಮರ

ಇಳೆಯೆಲ್ಲಾ ನಡುಗಿತು ಭಯದಿ


ನಿಲ್ಲಲಿಲ್ಲ ಮಹಾಸಮರ

ಎಲ್ಲೆಯ ಗಡಿಯಲ್ಲಿ ರಕುತ

ಚೆಲ್ಲಾಡಿ ಹರಿದು ಹೋಯಿತು

ಬೆಲೆಕಟ್ಟಲಾಗದ ಯೋಧರ ತ್ಯಾಗ


ಅಶ್ವಗಳ ಕೆನೆತದ ಧ್ವನಿ ಎಲ್ಲೆಲ್ಲೂ 

ದಶ ದಿಕ್ಕುಗಳಲಿ ಪ್ರತಿಧ್ವನಿಸಿತು

ಅಶಾಂತಿಯ ರುದ್ರ ನರ್ತನದಲಿ

ದಿಶೆಗೆಟ್ಟಿತು ಸಾಮಾನ್ಯರ ಬಾಳು 


ಮಹಾಸಮರ ಸಮಾಪ್ತಿಗಾಗಿ

ಮಹಾ ಸಂಧಾನಗಳು ನಡೆದು

ಮಹಿಯ ಶಾಂತಿಯ ಉಳಿವಿಗಾಗಿ

ಮಹಾಮಹಿಮರ ಶ್ರಮ ಫಲಿಸಿತು


Rate this content
Log in

Similar kannada poem from Abstract