STORYMIRROR

Pushpa Prasad

Classics Inspirational Others

4  

Pushpa Prasad

Classics Inspirational Others

ರಂಗುರಂಗೋಲಿ

ರಂಗುರಂಗೋಲಿ

1 min
10


ಅಂಗಳದಲ್ಲೆಲ್ಲಾ ರಂಗುರಂಗಿನ ರಂಗೋಲಿ

ಎಲ್ಲೆಲ್ಲೂ ಬಣ್ಣಗಳದೇ ಹಾವಳಿ ಬಾಗಿಲಲ್ಲಿ

ತಳಿರು ತೋರಣಗಳ ಶೃಂಗಾರ


ಸುತ್ತೆಲ್ಲಾ ಜಗಮಗಿಸುವ ಬೆಳಕು!!

ಅಲ್ಲಲ್ಲಿ ಕಾಣುವ ಅವಳ ಹೆಜ್ಜೆಗಳ ಗುರುತು

ಮೌನ ಮಾತುಗಳ ಮೆರವಣಿಗೆ

ಮೊಳಗಿದೆ ಮನೆಮಂದಿಯ ಮನಗಳಲ್ಲಿ

ಭರವಸೆಯ ಹೊಸ ಚಿತ್ತಾರ!!

ಬದುಕ ಬಂಧಿಸುವ ಉತ್ತುಂಗದ ಕಾಳಜಿ


ಮೌನದಲ್ಲಿ ಕಾಣುವ ನಿರೀಕ್ಷೆ

ಸಾಕು ಬಿಡು ಊಟ ಉಪಚಾರಗಳ ಸಂತೆ


ಸ್ವಲ್ಪವೂ ಜಾಗವೇ ಇಲ್ಲ ಬಿಡು!!

ಹಣೆಯ ಮೇಲಿನ ಅರಿಶಿಣ ಕುಂಕುಮವು

ತಲೆ ತುಂಬಾ ಹೂವಿನ ದಿಂಡು

ರೇಷ್ಮೆ ಸೀರೆ, ಘಲ್ ಘಲ್ ಕೈಬಳೆಗಳ ನಾದವು

ತಯಾರಿಯಾದಳು ಮದುಮಗಳು!!

ಹೂ ನಗು ನಾಚಿದಂತೆ ಮುತ್ತೈದೆಯು

ಹೊಸಿಲ ತುಳಿದು ಬಂದಳು

ಅವಳೇ ಈ ಅರಮನೆಯ ಮಾಲೀಕಳು

ಮುದ್ದು ರಾಜಕುಮಾರಿಯು!!


Rate this content
Log in

Similar kannada poem from Classics