Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

PRASANNA KUMAR

Romance Classics Others

4  

PRASANNA KUMAR

Romance Classics Others

ಪ್ರೇಮ ಪಲ್ಲವಿ

ಪ್ರೇಮ ಪಲ್ಲವಿ

1 min
362


ಕಣ್ಣಂಚಿನಲ್ಲಿ ಇರುವಂಥ ಮಾತ ಅರಿತಂಥ ಜಾಣ ನೀನು

ನಿನ್ನೆದೆಯ ಪ್ರೇಮ ಮಿಡಿದಿರಲು ವೀಣೆ ಪಲ್ಲವಿಗೆ ಸೋತೆ ನಾನು |

ಕಣ್ಣಂಚಿನಲ್ಲಿ ಇರುವಂಥ ಮಾತ ಅರಿತಂಥ ಜಾಣೆ ನೀನು

ನಿನ್ನೆದೆಯ ಪ್ರೇಮ ಮಿಡಿದಿರಲು ವೀಣೆ ಪಲ್ಲವಿಗೆ ಸೋತೆ ನಾನು || ಪ ||


ಈ ಪ್ರೇಮ ತೋಟದಲ್ಲಿ ರಾಗ ಕುಸುಮವರಳಿ

ಭಾವ ಗಂಧ ಚೆಲ್ಲಿ ಸಂಗೀತದಲ್ಲಿ ತೇಲಿ 

ನಿನ್ನೊಲವು ತಂದ ಅನುಬಂಧದಿಂದ 

ಹೊಸ ಲೋಕವನ್ನೇ ಕಂಡೆ

ನೀ ಜೊತೆಯಲಿರಲು ನನ್ನನ್ನೇ ಮರೆತು

ನಿನ್ನಲ್ಲೇ ಲೀನಗೊಂಡೆ || ೧||


ಕನಸಲ್ಲಿ ನೀನು ಬಂದೆ ಮನಸನ್ನು ಸೂರೆಗೊಂಡೆ 

ಎದುರಲ್ಲಿ ಬಂದು ನಿಂದೆ ಸಂತಸವ ನೀನು ತಂದೆ

ಕಂಡ ಕನಸ ನನಸಾಗಿ ಮಾಡಿದ 

ಆತನೆಲ್ಲೋ ಕಾಣೆ

ನುಡಿಯಲೆಂತು ಬೆರೆತಾಯ್ತು ಮನಗಳು

ಅವನ ಬಿಟ್ಟು ಮಾಣೆ    || ೨||


Rate this content
Log in

Similar kannada poem from Romance