STORYMIRROR

Pushpa Prasad

Romance Classics Inspirational

4  

Pushpa Prasad

Romance Classics Inspirational

ಒಲವಿನ ಸೆಳೆತ

ಒಲವಿನ ಸೆಳೆತ

1 min
9

ಮೋಡದಲಿ ಸೂರ್ಯ ಇದ್ದರು

ಬೆಳಕು ಬಾರದೆ ಇರದು 

ಕಣ್ಣುಗಳು ಮುಚ್ಚಿಯೆ ಇದ್ದರು

ನಿನ್ನ ಬಿಂಬ ಕಾಣದೆ ಬಿಡದು!!

 

ಮಳೆಯ ಹನಿಗಳು

ತುಟಿಯ ಮೇಲೆ ಹರಡಿವೆ 

ಮೊದಲ ಚುಂಬನದ

ಕಥೆಯ ನೆನಪಿಸಿದೆ!!

 

ನೀರಿಲ್ಲದ ಮೀನಿನ ಹಾಗೆ

ಮನವು ಒದ್ದಾಡಿದೆ 

ನಿನ್ನ ಭೇಟಿಗೆ ಪ್ರೀತಿಯ

ಬಾಯಾರಿಕೆ ಮೂಡಿದೆ!!


ನಿನ್ನ ಪ್ರೀತಿ ಸಿಕ್ಕ ಮೇಲೆ

ಬಾಯಾರಿಕೆ ದೂರ ಓಡಿದೆ 

ಒಲವಿನ ಸೆಳೆತಕೆ ಮುತ್ತೊಂದು

ಕಪ್ಪೆಚಿಪ್ಪಲಿ ಮೂಡಿದೆ!!


Rate this content
Log in

Similar kannada poem from Romance